“ಪೊಲೀಸರೊಂದಿಗೆ ಸೌಜನ್ಯದಿಂದ ವರ್ತಿಸಿ’
Team Udayavani, Jul 31, 2017, 7:15 AM IST
ವೇಣೂರು: ಪ್ರತಿಯೊಂದು ಇಲಾಖೆಯಲ್ಲಿ ವರ್ಗಾವಣೆ, ಪದೋನ್ನತಿ, ಸೇವಾನಿವೃತ್ತಿ ಸಾಮಾನ್ಯ. ಜನತೆಯ, ಸಮಾಜದ ಸ್ವಾಸ್ಥ್ಯ ಕಾಪಾಡುವ ಪೊಲೀಸರೊಂದಿಗೆ ಸಾರ್ವಜನಿಕರು ಸೌಜನ್ಯದಿಂದ ವರ್ತಿಸುವಂತಾಗಬೇಕು. ಸುಮಾರು 35 ವರ್ಷ ಕಾಲ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿಗೊಂಡಿರುವ ಶೀನಪ್ಪ ಗೌಡರ ನಿವೃತ್ತಿ ಜೀವನ ಸುಖಕರವಾಗಲಿ ಎಂದು ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ ಹೇಳಿದರು.
ಅವರು ವೇಣೂರು ಗಾರ್ಡನ್ ವ್ಯೂ ಸಭಾಭವನದಲ್ಲಿ ಶನಿವಾರ ಜರಗಿದ ವೇಣೂರು ಸಹಾಯಕ ಪೊಲೀಸ್ ಉಪನಿರೀಕ್ಷಕ ಶೀನಪ್ಪ ಗೌಡ ಅವರ ಸೇವಾ ನಿವೃತ್ತಿ, ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ವೇಣೂರು ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ಸುಂದರ ಹೆಗ್ಡೆ ಮಾತನಾಡಿ, ಶೀನಪ್ಪ ಗೌಡರು ಸೇವಾವಧಿಯನ್ನು ಇಲಾಖೆಗೆ ಕಳಂಕ ಬಾರದಂತೆ, ಸಾರ್ವಜನಿಕರಿಗೆ ತೊಂದರೆ ಆಗದ ರೀತಿಯಲ್ಲಿ ನಿಭಾಯಿಸಿದವರು ಎಂದರು.
ಡಾ| ಎಂ.ಕೆ. ಗರ್ಡಾಡಿ , ಆಪತ್ಕಾಲದಲ್ಲಿ ಜನತೆಯ ರಕ್ಷಣೆಗೆ ಬರುವವರು ಪೊಲೀಸರು. ಪ್ರಾಣ, ಮಾನ, ಆಸ್ತಿ ಕಾಪಾಡುವ ಪೊಲೀಸರದ್ದು ನಿಜವಾದ ದೇಶ ಸೇವೆ ಎಂದರು. ವೇಣೂರಿನಿಂದ ವರ್ಗಾವಣೆಗೊಂಡಿರುವ ಪೊಲೀಸ್ ಉಪನಿರೀಕ್ಷಕ ಲೋಲಾಕ್ಷ ಕೆ. ಶೀನಪ್ಪ ಗೌಡರು ನಮ್ಮ ಮನಸ್ಸಿನಿಂದ ನಿವೃತ್ತಿ ಆಗಿಲ್ಲ ಎಂದರು.
ವೇಣೂರಿನ ನೂತನ ಪೊಲೀಸ್ ಉಪ ನಿರೀಕ್ಷಕ ಚಂದ್ರಶೇಖರ ಕೆ. ಅಧ್ಯಕ್ಷತೆ ವಹಿಸಿದ್ದರು. ಶೀನಪ್ಪ ಗೌಡರನ್ನು ಸಮ್ಮಾನಿಸಿ ಬೀಳ್ಕೊಡಲಾಯಿತು. ಪೊಲೀಸ್ ಸಿಬಂದಿಗಳಾದ ಹರೀಶ್, ಉದಯ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಶೀನಪ್ಪ ಗೌಡರ ಪತ್ನಿ ನಳಿನಿ ಶೀನಪ್ಪ ಗೌಡ, ಹೊಸಂಗಡಿ ತಾ.ಪಂ. ಸದಸ್ಯ ಓಬಯ್ಯ ಆರಂಬೋಡಿ, ಆರಂಬೋಡಿ ಗ್ರಾ.ಪಂ. ಅಧ್ಯಕ್ಷ ಪ್ರಭಾಕರ ಎಚ್., ವೇಣೂರು ಶ್ರೀ ಗುರುಚೆ„ತನ್ಯ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಹೊನ್ನಯ್ಯ ಕಾಟಿಪಳ್ಳ ಮತ್ತಿತರರು ಉಪಸ್ಥಿತರಿದ್ದರು.
ವೇಣೂರಿನ ವಿವಿಧ ಸಂಘ ಸಂಸ್ಥೆಗಳ ಮುಖಂಡರು, ನಾಗರಿಕರು ಉಪಸ್ಥಿತರಿದ್ದರು. ವೇಣೂರು ಪೊಲೀಸ್ ಠಾಣಾ ಎಎಸ್‌ಐ ಓಡಿಯಪ್ಪ ಗೌಡ ಸ್ವಾಗತಿಸಿ ಸಿಬಂದಿ ರೋಹಿನಾಥ್ ವಂದಿಸಿದರು. ಸಿಬಂದಿ ವಿಜಯ್ ಕಾರ್ಯಕ್ರಮ ನಿರ್ವಹಿಸಿ, ಸಿಬಂದಿ ವರ್ಗ ಸಹಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Rohit, Pant, Jaiswal, Gill: ರಣಜಿ ಪುನರಾಗಮನದಲ್ಲಿ ವೈಫಲ್ಯ ಕಂಡ ಟೀಂ ಇಂಡಿಯಾ ಸ್ಟಾರ್ಸ್
UV Fusion: ಸ್ವಾಮಿ ವಿವೇಕಾನಂದರ ಕನಸಿನ ರಾಷ್ಟ್ರನಿರ್ಮಾಣದಲ್ಲಿ ಯುವಜನತೆಯ ಪಾತ್ರ
Tumkur: ತುಮುಲ್ ಅಧ್ಯಕರಾಗಿ ಕೈ ಬೆಂಬಲಿತ ಅಭ್ಯರ್ಥಿ ಗೆಲುವು
Tollywood: ಹಾಲಿವುಡ್‌ಗೆ ಜೂ. ಎನ್‌ಟಿಆರ್ ಎಂಟ್ರಿ? ಖ್ಯಾತ ನಿರ್ದೇಶಕ ಹೇಳಿದ್ದೇನು?
Shiva Rajkumar: ಜ.26ಕ್ಕೆ ಶಿವಣ್ಣ ವಾಪಸ್: ಸ್ವಾಗತಕ್ಕೆ ಅದ್ಧೂರಿ ತಯಾರಿ