ಬೆಳಂದೂರು: ಉದ್ಯೋಗ ಖಾತರಿಯಿಂದ ಕಿಂಡಿ ಅಣೆಕಟ್ಟು
Team Udayavani, Dec 8, 2017, 4:09 PM IST
ಬೆಳಂದೂರು: ಇಲ್ಲಿಯ ಗ್ರಾಮ ಪಂಚಾಯತ್ ವತಿಯಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಮೂಲಕ ಗ್ರಾ.ಪಂ. ವ್ಯಾಪ್ತಿಯ ಕೂಂಕ್ಯ ಎಂಬಲ್ಲಿ ಕಿಂಡಿ ಅಣೆಕಟ್ಟು ನಿರ್ಮಿಸುವ ಮೂಲಕ ಜಲ ಸಂರಕ್ಷಣೆಯ ಜತೆಗೆ, ನೀರಿನ ಅಭಾವ ದಿಂದ ಕೃಷಿಗೆ ಹಾನಿಯಾಗುವ ಆತಂಕವನ್ನು ದೂರ ಮಾಡಿದ್ದಾರೆ.
ತೀವ್ರ ಬಿಸಿಲಿನ ಕಾರಣಕ್ಕೆ ಕೆರೆಗಳಲ್ಲಿ ನೀರು ಬತ್ತಿಹೋಗಿ ಕೃಷಿಗೆ ನೀರುಣಿಸಲು ಕಷ್ಟಕರವಾಗುತ್ತದೆ. ಹೀಗಾಗಿ, ಸುಮ್ಮನೆ ಹರಿದು ವ್ಯರ್ಥವಾಗುತ್ತಿರುವ ನೀರನ್ನು ಒಂದೆಡೆ ಶೇಖರಿಸಿಕೊಂಡು ಕೃಷಿಗೆ ಬಳಸುವ ಜತೆಗೆ ಮಣ್ಣಿನಲ್ಲಿ ನೀರು ಇಂಗಿ ಸುತ್ತಲಿನ ತೋಟವನ್ನು ಸದಾ ತಂಪಾಗಿ ಮಾಡುತ್ತಿದೆ.
ಬೆಳಂದೂರು ಗ್ರಾಮದ ಕೂಂಕ್ಯ ಎಂಬಲ್ಲಿನ ಕುಕ್ಕಪ್ಪ ಗೌಡರ ಮನೆ ಸಮೀಪ ಈ ಕಿಂಡಿ ಅಣೆಕಟ್ಟನ್ನು ನಿರ್ಮಿಸಲಾಗಿದೆ. ಸುಮಾರು 4.75 ಲಕ್ಷ ರೂ. ವೆಚ್ಚದಲ್ಲಿ ಉದ್ಯೋ ಖಾತರಿ ಯೋಜನೆಯ ಮೂಲಕ ಕಿಂಡಿ ಅಣೆಕಟ್ಟಿನ ನಿರ್ಮಾಣ ಮಾಡಲಾಗಿದೆ. ಸಾಮಗ್ರಿ ವೆಚ್ಚವಾಗಿ 3,39,728 ರೂ. ಹಾಗೂ ಕೂಲಿ ಮೊತ್ತವಾಗಿ 1,23,835 ರೂ. ಖರ್ಚು ಮಾಡಲಾಗಿದೆ. ಕಾಮಗಾರಿಗೆ 524 ಮಾನವ ದಿನಗಳನ್ನು ಬಳಸಿಕೊಳ್ಳಲಾಗಿದೆ.
ಜಲ ಸಂರಕ್ಷಣೆಯ ಮೂಲ
ಒಂದು ಕಡೆ ಕಿಂಡಿ ಅಣೆಕಟ್ಟನ್ನು ನಿರ್ಮಿಸಿದರೆ ಆ ಪ್ರದೇಶದ ಕೆರೆ, ಬಾವಿಗಳಲ್ಲಿ ನೀರಿನ ಮಟ್ಟ ಹೆಚ್ಚಳವಾಗುತ್ತದೆ. ಅನೇಕ ಕಡೆಗಳಲ್ಲಿ ಕಿಂಡಿ ಅಣೆಕಟ್ಟು ಇದ್ದರೂ ಹಲಗೆ ಅಳವಡಿಸದೆ ಹಾಗೇ ಇಡಲಾಗುತ್ತದೆ. ಇವುಗಳ ಬಳಕೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕಿದೆ. ಜತೆಗೆ ಸ್ಥಳೀಯಾಡಳಿತಗಳು ಇವುಗಳ ಅಭಿವೃದ್ಧಿ ಕುರಿತು ಗಮನ ಹರಿಸುವುದು ಆವಶ್ಯಕ.
15 ಮನೆಯವರಿಗೆ ಉಪಯೋಗ
ಉದ್ಯೋಗ ಖಾತರಿ ಯೋಜನೆಯಿಂದ ಕಿಂಡಿ ಅಣೆಕಟ್ಟು ನಿರ್ಮಿಸಬೇಕೆಂಬ ನಿರ್ದೇಶನದ ಪ್ರಕಾರ ನಾವು ಗ್ರಾ.ಪಂ.ನಿಂದ ಉದ್ಯೋಗ ಖಾತರಿ ಯೋಜನೆ ಮೂಲಕ ಕಿಂಡಿ ಅಣೆಕಟ್ಟು ನಿರ್ಮಿಸಿದ್ದೇವೆ. ಇದರಿಂದ ಸ್ಥಳೀಯ 15 ಮನೆಯವರಿಗೆ ಉಪಯೋಗವಾಗಲಿದೆ. ನೀರಿನ ಸಂರಕ್ಷಣೆಯೂ ಆಗುತ್ತದೆ.
– ಉಮೇಶ್ವರಿ ಅಗಳಿ,
ಅಧ್ಯಕ್ಷೆ, ಬೆಳಂದೂರು ಗ್ರಾ.ಪಂ.
ಪ್ರವೀಣ್ ಚೆನ್ನಾವರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.