ಈ ರಸ್ತೆಯಲ್ಲಿ ವಾಹನ ಸಂಚಾರ ಬಿಡಿ, ನಡೆದಾಡುವುದೂ ಕಷ್ಟ
Team Udayavani, Jul 30, 2017, 12:21 AM IST
ಕಾಮಗಾರಿಗೆ ಕಾಯುತ್ತಿದೆ ಬೆಳಂದೂರು – ಪೆರುವಾಜೆ ರಸ್ತೆ
ಸವಣೂರು: ರಸ್ತೆ ಈಗಲೂ ಅಭಿವೃದ್ಧಿ ಕಂಡಿಲ್ಲ. ಡಾಮರು ಕಾಮಗಾರಿಗಾಗಿ ಜನಪ್ರತಿನಿಧಿಗಳಲ್ಲಿ ಗೋಗರೆದು ಸುಸ್ತಾಗಿದ್ದಾರೆ ನಾಗರಿಕರು. ಇದು ಬೆಳಂದೂರು-ಪೆರುವಾಜೆ ರಸ್ತೆಯ ಸ್ಥಿತಿ. ಈ ರಸ್ತೆಯಲ್ಲಿ ವಾಹನ ಸಂಚರಿಸುವುದು ಬಿಡಿ, ನಡೆದಾಡುವುದೂ ಕಷ್ಟಕರ. ಮಳೆಗಾಲದಲ್ಲಿ ಹೊಂಡಗಳಲ್ಲಿ ನೀರು ನಿಂತರೆ, ಬೇಸಗೆಯಲ್ಲಿ ಧೂಳಿನದ್ದೆ ಚಿಂತೆ. ಇದರಿಂದ ಪರಿಸರದ ನೂರಾರು ಮನೆಗಳಿಗೆ, ಅಂಗನವಾಡಿ, ದೇವಸ್ಥಾನ, ಮಸೀದಿಗಳಿಗೆ ತೆರಳುವವರ ಪಾಡು ಹೇಳತೀರದು. ತೀರಾ ಹದೆಗೆಟ್ಟಿರುವ ಈ ರಸ್ತೆಯ ಮೂಲಕ ಕಂಪ, ಪಾತಾಜೆ, ಪೆರುವಾಜೆ, ಪೆರುವೋಡಿ ಮೊದಲಾದೆಡೆ ಹೋಗಬಹುದಾಗಿದ್ದು, ಈ ರಸ್ತೆಯಲ್ಲಿ ಬೆಳಂದೂರುನಿಂದ ಬೆಳ್ಳಾರೆಗೆ ಇರುವ ದೂರ ಕೇವಲ 9 ಕಿ.ಮೀ. ಆದರೆ ಈ ರಸ್ತೆಯ ದುರವಸ್ಥೆಯಿಂದ ಜನತೆ ಸುತ್ತುಬಳಸಿ ಪ್ರಯಾಣಿಸುವಂತಾಗಿದೆ.
ಗ್ರಾಮಸಭೆಯಲ್ಲಿ ಬಿಸಿಬಿಸಿ ಚರ್ಚೆ
ಈ ರಸ್ತೆಯ ಡಾಮರು ಕಾಮಗಾರಿ ಕುರಿತು ಕುದ್ಮಾರಿನಲ್ಲಿ ನಡೆದ ಬೆಳಂದೂರು ಗ್ರಾಮಸಭೆಯಲ್ಲಿ ನಡೆದ ಚರ್ಚೆ ರಾಜಕೀಯ ತಿರುವು ಪಡೆದಿತ್ತು. ಗರಿಷ್ಠ ಅನುದಾನವಿಲ್ಲದೆ ಈ ರಸ್ತೆಯನ್ನು ಅಭಿವೃದ್ಧಿ ನಡೆಸುವುದು ಅಸಾಧ್ಯ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಕೆಲವೆಡೆ ರಸ್ತೆಯಲ್ಲಿ ಡಾಮರಿನ ಯಾವುದೇ ಕುರುಹು ಕೂಡ ಕಾಣಸಿಗದು. ಕಚ್ಚಾ ರಸ್ತೆಯ ರೀತಿಯಲ್ಲಿ ಇದೆ.
ಸುತ್ತು ಬಳಸಿ ಪ್ರಯಾಣ
ಗುಂಡಿನಾರಿನಿಂದ ಬೆಳಂದೂರು ತಲುಪಲು ಕೇವಲ 2 ಕಿ.ಮೀ. ಅಂತರ, ಆದರೆ ರಸ್ತೆಯ ದುಃಸ್ಥಿತಿಯಿಂದ ಗುಂಡಿ ನಾರು ಪರಿಸರದ ಜನರು ಬೆಳಂದೂರು ಬರಬೇಕಾದರೆ ಕಾಣಿಯೂರು ಮೂಲಕ 6.ಕಿ.ಮೀ. ಪ್ರಯಾಣಿಸಿ ಬೆಳಂದೂರು ತಲುಪಬೇಕಾಗಿದೆ. ಅದೇ ರೀತಿ ಬೆಳಂದೂರು ಸಮೀಪದ ಪಳ್ಳತ್ತಾರಿಗೆ ಹೋಗಲು ಬರೆಪ್ಪಾಡಿ ಮೂಲಕ ಪಳ್ಳತ್ತಾರುಗೆ ತಲುಪುತ್ತಾರೆ. ಬೆಳಂದೂರಿನಿಂದ ಪೆರುವಾಜೆಗೆ ಹೋಗಲು ಯಾವ ಆಟೋ ಚಾಲಕರು ಮುಂದೆ ಬರುತ್ತಿಲ್ಲ. ಈ ರಸ್ತೆಯಲ್ಲಿ ಸಿಗುವ ಬಾಡಿಗೆಗಿಂತ ಹೆಚ್ಚು ಹಣ ವಾಹನ ರಿಪೇರಿಗೆ ಬೇಕಾಗುತ್ತದೆ ಎಂಬುದು ಅವರ ಅಭಿಪ್ರಾಯ.
ಲೋಕೋಪಯೋಗಿ ಇಲಾಖೆಗೆ ನೀಡಲು ಮನವಿ
ರಸ್ತೆಯನ್ನು ಲೋಕೋಪಯೋಗಿ ಇಲಾಖೆಗೆ ಸೇರ್ಪಡೆಗೊಳಿಸಿ ಅಭಿವೃದ್ಧಿಪಡಿಸುವಂತೆ ಈಗಾಗಲೇ ಜಿಲ್ಲಾಧಿಕಾರಿ, ಶಾಸಕರಿಗೆ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರು ಮಂಗಳೂರು ಇವರಿಗೆ ಮನವಿ ಸಲ್ಲಿಸಲಾಗಿದೆ. ಇದರ ಕಾಮಗಾರಿಗೆ 3 ಲಕ್ಷ ರೂ.ಗಳನ್ನು ಮಂಜೂರುಗೊಳಿಸಿ ಕಾಮಗಾರಿ ನಡೆಸಲಾಗಿದೆ. ದೊಡ್ಡ ಮೊತ್ತದ ಹಣ ಬೇಕಾಗಿರುವುದರಿಂದ ಶಾಸಕ, ಸಂಸದರಿಗೂ ಅನುದಾನ ನೀಡುವಂತೆ ಕೇಳಿಕೊಳ್ಳಲಾಗಿದೆ ಎಂದು ಜಿ.ಪಂ. ಸದಸ್ಯೆ ಪ್ರಮೀಳಾ ಜನಾರ್ದನ್ ತಿಳಿಸಿದ್ದಾರೆ.
ಫಲಿಸದ ಮನವಿಗಳು
ಈ ರಸ್ತೆಗೆ ಡಾಮರು ಹಾಕಲು ಹಲವು ವರ್ಷಗಳಿಂದ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಗುತ್ತಿದೆ. ಪ್ಯಾಚ್ ವರ್ಕ್ ಮಾಡುವುದರ ಬದಲು ಸಂಪೂರ್ಣ ಡಾಮರು ಕಾಮಗಾರಿಗೆ ಜನಪ್ರತಿನಿಧಿಗಳು ಮುತುವರ್ಜಿ ವಹಿಸಬೇಕು ಎಂದು ರಸ್ತೆಯ ಬಳಕೆದಾರ ಶರೀಫ್ ಪೆರುವಾಜೆ ಅವರ ಅಭಿಪ್ರಾಯ.
ನಬಾರ್ಡ್‌ಗೆ ಪ್ರಸ್ತಾವನೆ
ಬೆಳಂದೂರು – ಪೆರುವಾಜೆ ರಸ್ತೆಯ ಅಭಿವೃದ್ಧಿಗಾಗಿ ನಬಾರ್ಡ್ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಗ್ರಾಮ ಸಡಕ್ ಯೋಜನೆಯಲ್ಲಿ ಈ ರಸ್ತೆಗೆ ಅನುದಾನ ಒದಗಿಸಿಕೊಡುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತಿದೆ.
– ಎಸ್.ಅಂಗಾರ, ಶಾಸಕ, ಸುಳ್ಯ
– ಪ್ರವೀಣ್ ಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಕರಾವಳಿಯಲ್ಲಿ “ಕರ್ನಾಟಕ ಕೂಟ’: ಜ. 17-23ರ ವರೆಗೆ ಮಂಗಳೂರು, ಉಡುಪಿಯಲ್ಲಿ
Uppinangady; ಕಾಡಾನೆ ಸಂಚಾರದಿಂದ ಹಿರೇಬಂಡಾಡಿ ಗ್ರಾಮಸ್ಥರು ಭಯಭೀತ
Vijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿ
Udupi- Mangaluru; ವರ್ಷಾಂತ್ಯಕ್ಕೆ ಹೆಚ್ಚಿದ ಪ್ರವಾಸಿಗರು: ಟ್ರಾಫಿಕ್ ಜಾಮ್
Pro Kabaddi League: ಗುಜರಾತ್ ಜೈಂಟ್ಸ್ ವಿರುದ್ಧದಬಾಂಗ್ ಡೆಲ್ಲಿಗೆ ಗೆಲುವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.