ಬೆಳಂದೂರು ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಮುಹೂರ್ತ
Team Udayavani, Apr 1, 2018, 12:29 PM IST
ಸವಣೂರು: ಗ್ರಾಮೀಣ ಜನತೆಗೆ ಶುದ್ಧ ಕುಡಿಯುವ ನೀರು ಒದಗಿಸುವ ಮಹತ್ತರ ಉದ್ದೇಶದಿಂದ ಆರಂಭಗೊಂಡ ಬೆಳಂದೂರು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ಹಲವು ವರ್ಷಗಳ ಬಳಿಕ ಈಗ ಸಮಯ ಕೂಡಿಬಂದಿದೆ.
ಯೋಜನೆಗೆ ಒಳಪಡುವ ಗ್ರಾಮಗಳಲ್ಲಿ ಮತ್ತು ನದಿ ತಟದಲ್ಲಿ 2013ರ ಫೆಬ್ರವರಿ 26ರಂದು ಸರ್ವೆ ಕಾರ್ಯ ನಡೆಸಲಾಗಿತು. ಬಳಿಕ ಮೂರು ತಿಂಗಳಲ್ಲಿ ಈ ಯೋಜನೆ ಅನುಷ್ಠಾನಗೊಂಡು ಜನತೆಗೆ ನೀರು ಪೂರೈಕೆ ಮಾಡಲಾಗುವುದು ಎಂಬ ಭರವಸೆಯನ್ನೂ ನೀಡಲಾಗಿತ್ತು. ಆದರೆ ಮೂರು ತಿಂಗಳು ಬಿಡಿ, ಐದು ವರ್ಷಗಳೇ ಸರಿದರೂ ಯೋಜನೆಯ ಅನುಷ್ಠಾನದ ಕುರಿತು ಯಾವುದೇ ಮಾಹಿತಿ ಇರಲಿಲ್ಲ.
ಈ ಯೋಜನೆಯ ರೂಪುರೇಷೆಯೇನೋ ಚೆನ್ನಾಗಿತ್ತು. ಇದರ ಬಗ್ಗೆ ಈ ಭಾಗದ ಜನರೂ ತುಂಬ ನಿರೀಕ್ಷೆ ಹೊತ್ತು, ಕನಸು ಕಂಡಿದ್ದರು. ಆದರೆ, ಯೋಜನೆ ಕಡತಗಳಲ್ಲೇ ಉಳಿದು, ಕಾರ್ಯಗತ ಆಗಿರಲೇ ಇಲ್ಲ.
ಅಧಿಕೃತ ಚಾಲನೆ
ಈಗ ಈ ಯೋಜನೆಗಾಗಿ 16.50 ಕೋಟಿ ರೂ.ಗಳ ಅಂದಾಜು ಪಟ್ಟಿ ತಯಾರಿಸಲಾಗಿದೆ. ಮಾ. 24ರಂದು ಶಾಸಕ ಎಸ್. ಅಂಗಾರ ಶಂಕುಸ್ಥಾಪನೆ ಮಾಡುವ ಮೂಲಕ ಅಧಿಕೃತವಾಗಿ ಚಾಲನೆಯೂ ದೊರೆತಿದೆ. ಈ ಯೋಜನೆಯ ಕಡತಗಳು ಮೈಸೂರಿನ ಅಧೀಕ್ಷಕ ಎಂಜಿನಿಯರ್ ಕಚೇರಿಯಲ್ಲಿದ್ದು, ಅಲ್ಲಿಂದ ಮಂಜೂರುಗೊಂಡು ಬೆಂಗಳೂರಿನ ಮುಖ್ಯ ಎಂಜಿನಿಯರ್ ಕಚೇರಿಗೆ ವರ್ಗಾವಣೆ ಆಗಬೇಕಿದೆ. ಇದರ ಕ್ರಿಯಾ ಯೋಜನೆ 2017-18ನೇ ಸಾಲಿನಲ್ಲಿ ಅಂತಿಮಗೊಂಡಿದ್ದರಿಂದ ಶೀಘ್ರವಾಗಿ ಅನುಷ್ಠಾನವಾಗಲಿದೆ.
ಸವಣೂರು, ಬೆಳಂದೂರು ಗ್ರಾ.ಪಂ. ವ್ಯಾಪ್ತಿಯ ಪರಿಸರದಲ್ಲಿ ಹರಿಯುತ್ತಿರುವ ಜೀವನದಿ ಕುಮಾರಧಾರಾ ನೀರನ್ನು ಬಳಸಿಕೊಂಡು ಸವಣೂರು, ಪಾಲ್ತಾಡಿ, ಪುಣcಪ್ಪಾಡಿ, ಬೆಳಂದೂರು, ಕುದ್ಮಾರು, ಕಾಯಿಮಣ, ದೋಳ್ಪಾಡಿ, ಚಾರ್ವಾಕ, ಕಾಣಿಯೂರು ಗ್ರಾಮಗಳಿಗೆ ಶುದ್ಧ ಕುಡಿಯುವ ನೀರನ್ನು ಪೂರೈಸುವ ನಿಟ್ಟಿನಲ್ಲಿ ಈ ಯೋಜನೆಯನ್ನು ರೂಪಿಸಲಾಗಿತ್ತು. ಇದರಿಂದ ಬೇಸಗೆಯಲ್ಲಿ ತಲೆದೋರಬಹುದಾದ ನೀರಿನ ಬವಣೆ ತಪ್ಪಿಸುವ ಉದ್ದೇಶವಿದೆ.
ಏನಿದು ಯೋಜನೆ?
ಸವಣೂರು-ಕುದ್ಮಾರು ಗ್ರಾಮದಲ್ಲಿ ಹರಿಯುತ್ತಿರುವ ಕುಮಾರಧಾರಾ ನದಿಯಲ್ಲಿ ಜಾಕ್ ವೆಲ್ ನಿರ್ಮಿಸಿ, ಪಕ್ಕದಲ್ಲೇ ಪಂಪ್ ಹೌಸ್ ನಿರ್ಮಾಣ ಮಾಡಿ, ಕಬ್ಬಿಣದ ಕೊಳವೆಯ ಮೂಲಕ ಬೃಹತ್ ಟ್ಯಾಂಕ್‌ಗೆ ಹಾಯಿಸಿ, ಅದನ್ನು ಈ ಗ್ರಾಮಗಳಿಗೆ ಪೂರೈಸುವ ಉದ್ದೇಶ ಈ ಯೋಜನೆಯಲ್ಲಿತ್ತು. ಯೋಜನೆ ಶೀಘ್ರ ಅನುಷ್ಠಾನಕ್ಕೆ ಹಲವು ವರ್ಷಗಳ ಹಿಂದೆಯೇ ಸವಣೂರು, ಬೆಳಂದೂರು, ಕಾಣಿಯೂರು ಗ್ರಾ.ಪಂ.ಗಳಲ್ಲಿ ನಿರ್ಣಯ ಕೈಗೊಂಡು ಜಿ.ಪಂ. ಹಾಗೂ ಸರಕಾರಕ್ಕೆ ಸಲ್ಲಿಸಲಾಗಿತ್ತು. ಈ ಮನವಿಗಳಿಗೆ ಮನ್ನಣೆ ನೀಡಿ, 8 ಗ್ರಾಮಗಳಿಗೆ ನೀರು ಒದಗಿಸುವ ಬೆಳಂದೂರು ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಚಾಲನೆ ನೀಡಲಾಗಿದೆ.
8 ಗ್ರಾಮಗಳಿಗೆ ನೀರು
ಪ್ರಸ್ತುತ ರೂಪಿಸಲಾಗಿರುವ ಯೋಜನೆಗೆ ಕುಮಾರಧಾರಾ ನದಿಯನ್ನೇ ಮೂಲವಾಗಿ ಗುರುತಿಸಲಾಗಿದೆ. ಬೆಳಂದೂರು ಯೋಜನೆ 8 ಗ್ರಾಮಗಳಿಗೆ ನೀರು ಒದಗಿಸಲಿದ್ದು, ಎಪ್ರಿಲ್‌ನಲ್ಲಿ ಟೆಂಡರ್ ಪ್ರಕ್ರಿಯೆ ಆರಂಭಗೊಳ್ಳಬಹುದು. ನಂತರ ಕಾಮಗಾರಿ ಆರಂಭವಾಗಲಿದೆ.
– ರೋಹಿದಾಸ್,
ಎಂಜಿನಿಯರ್, ಜಿ.ಪಂ. ಎಂಜಿನಿಯರಿಂಗ್
ಪುತ್ತೂರು ವಿಭಾಗ
ಪ್ರವೀಣ್ ಚೆನ್ನಾವರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
PAK Vs SA: ಸರಣಿ ಕ್ಲೀನ್ ಸ್ವೀಪ್ ಗೈದ ಪಾಕಿಸ್ಥಾನ
Eshwara Khandre; ಕುಕ್ಕೆ, ಧರ್ಮಸ್ಥಳದಲ್ಲಿ: ಕಸ್ತೂರಿ ರಂಗನ್ ವರದಿ ಸಂಪೂರ್ಣ ತಿರಸ್ಕಾರ
BCCI: ಇನ್ನೆರಡು ಟೆಸ್ಟ್ ನಿಂದ ಮೊಹಮ್ಮದ್ ಶಮಿ ಹೊರಕ್ಕೆ
Dakshina Kannada; ಜಿಲ್ಲಾ ಕೆಡಿಪಿ ಸಭೆ: ಕರಾವಳಿ ನಿರ್ಲಕ್ಷ್ಯ ಆರೋಪಿಸಿ ಬಿಜೆಪಿ ಸಭಾತ್ಯಾಗ
Khel Ratna ನಾಮನಿರ್ದೇಶಿತರ ಪಟ್ಟಿಯಲ್ಲಿ ಭಾಕರ್ ಹೆಸರಿಲ್ಲ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.