ನಂಬಿಕೆ, ಬದ್ಧತೆಯಿಂದ ವೃತ್ತಿಯಲ್ಲಿ ಯಶಸ್ಸು : ವಿವೇಕ್ ಆಳ್ವ
Team Udayavani, May 20, 2019, 6:00 AM IST
ಮೂಡುಬಿದಿರೆ: ನಂಬಿಕೆಯೊಂದಿಗೆ ಬದ್ಧತೆಯೂ ಇದ್ದರೆ ಮಾತ್ರ ವೃತ್ತಿಯಲ್ಲಿ ಯಶಸ್ಸು ಲಭಿಸುವುದು ಎಂದು ಆಳ್ವಾಸ್ ಎಜ್ಯುಕೇಶನ್ ಫೌಂಡೇಶನ್‌ನ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು.
ಆಳ್ವಾಸ್ ಹೋಮಿಯೋಪಥಿ ಮೆಡಿಕಲ್ ಕಾಲೇಜು ಮತ್ತು ಭಾರತೀಯ ಹೋಮಿಯೋಪಥಿ ವೈದ್ಯ ಸಂಘ ಇವುಗಳ ಜಂಟಿ ಆಶ್ರಯದಲ್ಲಿ ವಿದ್ಯಾಗಿರಿಯ
ಡಾ| ವಿ.ಎಸ್. ಆಚಾರ್ಯ ಸಭಾಭವನದಲ್ಲಿ ರವಿವಾರ ನಡೆದ “ಡಿಕೋಡ್- 2019′ ರಾಷ್ಟ್ರೀಯ ಹೋಮಿಯೋಪಥಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಭಾರತೀಯ ಹೋಮಿಯೋಪಥಿ ವೈದ್ಯ ಸಂಘದ ಅಧ್ಯಕ್ಷ ಡಾ| ಅಜಿತ್ ಕುಮಾರ್ ವಿ.ಕೆ. ಅಧ್ಯಕ್ಷತೆ ವಹಿಸಿದ್ದರು. ವಿವಿಧ ಗೋಷ್ಠಿಗಳಲ್ಲಿ ಡಾ| ಅನಿತಾ ಎಸ್. ಸಾಲುಂಕೆ ಮತ್ತು ಡಾ|ಸಿನ್‌ಸೆನ್ ಜೋಸೆಫ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.
ಪದಾಧಿಕಾರಿಗಳ ಆಯ್ಕೆ
ಭಾರತೀಯ ಹೋಮಿಯೋಪಥಿ ವೈದ್ಯ ಸಂಘದ 8ನೇ ರಾಷ್ಟ್ರೀಯ ಸಮಾವೇಶದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಹರೀಂದ್ರನಾಥ್, ಪ್ರಧಾನ ಕಾರ್ಯದರ್ಶಿಯಾಗಿ ಡಾ| ಬಿ. ಆನಂದ ರಾಮನ್ ಆಯ್ಕೆಯಾದರು. ಡಾ| ಸಿನ್‌ಸೆನ್ ಜೋಸೆಫ್ ಚುನಾವಣಾಧಿಕಾರಿಯಾಗಿ ಭಾಗವಹಿಸಿದರು.
ಹೋಮಿಯೋಪಥಿ ಸಂಘದ ಕರ್ನಾಟಕ ಶಾಖೆಯ ಅಧ್ಯಕ್ಷ ಡಾ| ಪ್ರವೀಣ್ ರೈ, ಆಳ್ವಾಸ್ ಹೋಮಿಯೋಪಥಿ ಮೆಡಿಕಲ್ ಕಾಲೇಜಿನ ಉಪ ಪ್ರಾಂಶುಪಾಲ ಡಾ| ರೋಶನ್ ಪಿಂಟೋ, ಆಡಳಿತಾಧಿಕಾರಿ ಡಾ| ಪ್ರಜ್ಞಾ ಆಳ್ವ ಉಪಸ್ಥಿತರಿದ್ದರು.
ಆಳ್ವಾಸ್ ಹೊಮಿಯೋಪಥಿ ಕಾಲೇಜಿನ ಪ್ರಾಂಶುಪಾಲ, ಸಮ್ಮೇಳನದ ಅಧ್ಯಕ್ಷ ಡಾ|ಪ್ರವೀಣ್ ರಾಜ್ ಪಿ. ಸ್ವಾಗತಿಸಿದರು. ಭಾರತೀಯ ಹೋಮಿಯೋಪತಿ ಮೆಡಿಕಲ್ ಸಂಘದ ಪ್ರಧಾನ ಕಾರ್ಯದರ್ಶಿ ಡಾ| ಅರುಳ್‌ವನನ್ ಪ್ರಸ್ತಾವನೆಗೈದು ವರದಿ ಮಂಡಿಸಿದರು. ಕೋಶಾಧಿಕಾರಿ ಡಾ| ಚಂದ್ರನ್ ಆರ್ಥಿಕ ವರದಿ ವಾಚಿಸಿದರು. ಡಾ| ಅರ್ಚನಾ ಸಿ. ಇಂಗೋಲೆ ನಿರೂಪಿಸಿದರು. ಡಾ| ಅವಿನಾಶ್ ವಂದಿಸಿದರು. ಡಾ| ವೈ.ಎಂ ಖಾದ್ರಿ ಹಾಗೂ ಡಾ| ಅರ್ಚನಾ ಅವರನ್ನು ಗೌರವಿಸಲಾಯಿತು. ದುಬಾಯಿ, ರಾಜ ಸ್ತಾನ, ತಮಿಳುನಾಡು, ಕೇರಳ ಸಹಿತ ವಿವಿಧ ಕಡೆಗಳಿಂದ ಪ್ರತಿನಿಧಿಗಳು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru ಕಂಬಳ ಸಮಯ ನಿರ್ವಹಣೆಗೆ 2 ದಿನ ಪ್ರತ್ಯೇಕ ಸ್ಪರ್ಧೆ!
Temperature: ಕರಾವಳಿಯಲ್ಲಿ ಹೆಚ್ಚಿದ ಚಳಿಯ ತೀವ್ರತೆ: ಗ್ರಾಮೀಣ ಭಾಗದಲ್ಲಿ ಹೆಚ್ಚು ಕಚಗುಳಿ
ವಿದ್ಯುತ್ ದರ ಏರಿಕೆಯ ಸುಳಿವು ನೀಡಿದ ಮೆಸ್ಕಾಂ;ಯೂನಿಟ್‌ಗೆ 0.70 ರೂ. ದರ ಏರಿಕೆ ಪ್ರಸ್ತಾವನೆ
Kambala ಜ. 11: ಉಳ್ಳಾಲ ನರಿಂಗಾನ ಕಂಬಳ್ಳೋತ್ಸವ
Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!
MUST WATCH
ಹೊಸ ಸೇರ್ಪಡೆ
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.