ಬೆಳ್ಳಾರೆ: ವರ್ತಕರೊಂದಿಗೆ ಮಾತುಕತೆಗೆ ಬಾರದ ಮೆಸ್ಕಾಂ
Team Udayavani, Apr 30, 2018, 12:36 PM IST
ಬೆಳ್ಳಾರೆ: ಬೆಳ್ಳಾರೆ ಪೇಟೆಯಲ್ಲಿ ನೆಲದಡಿಯಲ್ಲಿ ಕೇಬಲ್ ಅಳವಡಿಸಿ ಗುತ್ತಿಗಾರಿಗೆ ವಿದ್ಯುತ್ ಸರಬರಾಜು ಮಾಡುವ ಕಾಮಗಾರಿಗೆ ಬೆಳ್ಳಾರೆ ವರ್ತಕರ ಸಂಘ ವಿರೋಧ ವ್ಯಕ್ತಡಿಸಿದ ಹಿನ್ನೆಲೆಯಲ್ಲಿ ಕಾಮಗಾರಿ ರದ್ದುಗೊಂಡಿದ್ದು, ಈ ಹಿನ್ನೆಲೆಯಲ್ಲಿ ವರ್ತಕರೊಂದಿಗೆ ಮಾತುಕತೆ ನಡೆಸಲು ಮೆಸ್ಕಾಂ ಅಧಿಕಾರಿಗಳು ಶನಿವಾರ ಬೆಳ್ಳಾರೆ ಬರುವುದಾಗಿ ಹೇಳಿ ಗೈರುಹಾಜರಾಗಿದ್ದಾರೆ ಎಂದು ವರ್ತಕ ಸಂಘದ ಗೌರವಾಧ್ಯಕ್ಷ ಬಿ. ಸುಬ್ರಹ್ಮಣ್ಯ ಜೋಶಿ ತಿಳಿಸಿದ್ದಾರೆ.
ಭೂಮಿಯ ಅಡಿಯಲ್ಲಿ ಕೇಬಲ್ ಅಳವಡಿಸುವುದರಿಂದ ಅನೇಕ ಸಮಸ್ಯೆಗಳಿವೆ. ಇದು ಹೆಚ್ಚು ಅಪಾಯಕಾರಿಯಾಗಿದೆ. ಪೇಟೆಯಲ್ಲಿಯೇ ಸ್ಥಿರ ದೂರವಾಣಿ ಕೇಬಲ್, ಖಾಸಗಿ ದೂರವಾಣಿ ಕೇಬಲ್, ಕುಡಿಯುವ ನೀರಿನ ಪೈಪ್ ಹಾದು ಹೋಗುತ್ತಿದ್ದು ಕಾಮಗಾರಿ ನಡೆಸುವ ಸಂದರ್ಭ ಸಮಸ್ಯೆಯಾಗಿದೆ ಎಂದು ವರ್ತಕರು ಮತ್ತು ಬಳಕೆದಾರರು ಸ್ಥಳೀಯ ಗ್ರಾಮ ಪಂಚಾಯತ್ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು.
ಈ ಕಾರಣದಿಂದ ತಾ| ಪಂ. ಕಾರ್ಯ ನಿರ್ವಾಹಣಾಧಿಕಾರಿ ಮಧುಕುಮಾರ್ ಕಾಮಗಾರಿ ನಡೆಸುವ ಸ್ಥಳಕ್ಕೆ ತೆರಳಿ ಕಾಮಗಾರಿ ನಿಲ್ಲಿಸಿದ್ದರು. ವರ್ತಕರೊಂದಿಗೆ ಮೆಸ್ಕಂ ಮಾತುಕತೆಗೆ ಬರುವುದಾಗಿ ತಿಳಿಸಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.