ಬೆಳ್ತಂಗಡಿ: ಕಡಿರುದ್ಯಾವರದಲ್ಲಿ ಮತ್ತೆ ಆನೆ ದಾಳಿ
Team Udayavani, Dec 18, 2022, 5:30 AM IST
ಬೆಳ್ತಂಗಡಿ: ಕಡಿರುದ್ಯಾವರ ಗ್ರಾಮದ ಭಂಡಾಜೆ ಕಿನ್ಯಡ್ಕ ಶಶಿಧರ ಪರಾಂಜಪೆ ಅವರ ತೋಟಕ್ಕೆ ಶುಕ್ರವಾರ ರಾತ್ರಿ ಒಂಟಿ ಸಲಗ ದಾಳಿ ನಡೆಸಿದ್ದು ಅಡಿಕೆ, ತೆಂಗು ಹಾಗೂ ಬಾಳೆ ಕೃಷಿಗೆ ಹಾನಿ ಉಂಟು ಮಾಡಿದೆ.
ಆನೆ ದಾಳಿ ನಡೆಸಿರುವುದು ಮನೆಯವರ ಗಮನಕ್ಕೆ ಬಂದಿದ್ದು, ಆನೆಯನ್ನು ಓಡಿಸಿದ ಕಾರಣ ಹೆಚ್ಚಿನ ಹಾನಿಯಾಗುವುದು ತಪ್ಪಿದೆ. ಪರಿಸರದ ಮನೆ ಸಮೀಪ ಸಂಚರಿಸಿರುವ ಕಾಡಾನೆ ಬಳಿಕ ತೋಟಕ್ಕೆ ಪ್ರವೇಶಿಸಿದ್ದು ಇಲ್ಲಿಂದ ಹಳ್ಳದ ಮೂಲಕ ವಳಂಬ್ರದ ಕಡೆ ತೆರಳಿದೆ.
ಚಿಬಿದ್ರೆ, ತೋಟತ್ತಾಡಿ ಪ್ರದೇಶದಲ್ಲಿ ಕಳೆದ ಒಂದು ವಾರದಿಂದ ಕಾಡಾನೆಯನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆ ನಡೆಯುತ್ತಿದ್ದು ಈ ವೇಳೆ ಅಲ್ಲಿ ಒಂಟಿ ಸಲಗ ತಂಡಕ್ಕೆ ಎದುರಾಗಿತ್ತು. ರಾಷ್ಟ್ರೀಯ ಹೆದ್ದಾರಿ, ಮೃತ್ಯುಂಜಯ ನದಿ ದಾಟಿ ನಳೀಲು ಕಡೆ ಹೋಗಿರುವ ಕುರುಹು ಪತ್ತೆಯಾಗಿತ್ತು. ಶುಕ್ರವಾರ ಹಾಗೂ ಶನಿವಾರ ಸಂಜೆ ತನಕ ಕಾರ್ಯಚರಣೆ ತಂಡಕ್ಕೆ ಒಂಟಿ ಸಲಗ ಕಂಡು ಬಂದಿಲ್ಲ. ಮಲವಂತಿಗೆ ಪ್ರದೇಶದ ಮಲ್ಲ ಭಾಗದಲ್ಲಿ ಕಾಡಾನೆಗಳ ಹಿಂಡು ಇರುವ ಸಾಧ್ಯತೆ ಕಂಡುಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.