ಬೆಳ್ತಂಗಡಿ: ಸುಟ್ಟ ಸ್ಥಿತಿಯಲ್ಲಿ ಸಿಕ್ಕ ಮೃತದೇಹ ಮಹಿಳೆಯದ್ದು; ತಜ್ಞರು
Team Udayavani, Dec 14, 2022, 7:25 AM IST
ಬೆಳ್ತಂಗಡಿ : ತಾಲೂಕು ನಡ ಗ್ರಾ.ಪಂ. ವ್ಯಾಪ್ತಿಯ ಕನ್ಯಾಡಿ-1 ಗ್ರಾಮದ ಸೊರಕೆ ಸಮೀಪ ರಬ್ಬರ್ ತೊಟದ ಅಂಚಿನಲ್ಲಿ ಸೋಮವಾರ ಸುಟ್ಟ ಸ್ಥಿತಿಯಲ್ಲಿ ಸಿಕ್ಕ ಮೃತದೇಹ ಮಹಿಳೆದ್ದೇ ಎಂದು ತಜ್ಞರು ಖಚಿತ ಪಡಿಸಿದ್ದಾರೆ.
ಸುಟ್ಟ ಸ್ಥಳದಲ್ಲಿ ಮಹಿಳೆಯರು ಧರಿಸುವ ಅನೇಕ ವಸ್ತುಗಳು ಪತ್ತೆಯಾಗಿವೆ. ಮಂಗಳವಾರ ಪ್ರಾದೇಶಿಕ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞ ವೈದ್ಯರು, ದೇರಳಕಟ್ಟೆ ಆಸ್ಪತ್ರೆಯ ವೈದ್ಯಕೀಯ ತಂಡ ಪರಿಶೀಲಿಸಿ ಸುಮಾರು 30ರಿಂದ 40 ವರ್ಷದ ಮಹಿಳೆಯ ಮೃತದೇಹ ಎಂಬುದನ್ನು ಖಚಿತಪಡಿಸಿದ್ದಾರೆ. ಶವದ ಸ್ಥಳದಲ್ಲಿ ಎರಡು ಕಾಲು ಉಂಗುರ, ಕೈಯಲ್ಲಿ ಉಂಗುರ, ಬಳೆಗಳು, ಸುಟ್ಟ ರೀತಿಯಲ್ಲಿ ಚೈನ್ ಮಾದರಿ ವಾಚ್, ಕೊರಳಿಗೆ ಧರಿಸುವ ಶಿವಲಿಂಗ ಧಾರಣೆ ಸಹಿತ ಇತರ ಸೊತ್ತುಗಳು ಪತ್ತೆಯಾಗಿವೆ.
ತಜ್ಞ ವೈದ್ಯರಿಂದ ಪರಿಶೀಲನೆ
ಘಟನೆ ನಡೆದ ಸ್ಥಳದಲ್ಲಿಯೇ ದೇರಳಕಟ್ಟೆ ಆಸ್ಪತ್ರೆಯ ಡಾ| ಮಹಾಬಲ ಶೆಟ್ಟಿ, ಡಾ| ಸೂರಜ್ ತಂಡ, ಮಂಗಳೂರು ಪ್ರಾದೇಶಿಕ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞೆ ವೀಣಾ ಮತ್ತು ತಂಡ ಬೆರಳಚ್ಚುಗಾರರು, ಶ್ವಾನ ದಳ ತಜ್ಞರು ಶವ ಪರೀಕ್ಷೆಗೆ ಸಹಕರಿಸಿದರು. ಬಳಿಕ ನಡ ಗ್ರಾ.ಪಂ. ವ್ಯಾಪ್ತಿಯ ಮಂಚಕಲ್ಲಿನಲ್ಲಿರುವ ರುದ್ರ ಭೂಮಿಯಲ್ಲಿ ದಫನ ಮಾಡಲಾಗಿದೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ಆಯುಕ್ತ ಹೃಷಿಕೇಶ್ ಭಗವಾನ್ ಸೋನಾವಣೆ, ಹೆಚ್ಚುವರಿ ಪೊಲೀಸ್ ಆಯುಕ್ತ ಕುಮಾರ್ ಚಂದ್ರ, ಬೆಳ್ತಂಗಡಿ ವೃತ್ತ ನಿರೀಕ್ಷಕ ಶಿವಕುಮಾರ್, ಉಪನಿರೀಕ್ಷಕ ನಂದಕುಮಾರ್ ಎಂ.ಎಂ., ಎಎಸ್‌ಐ ತಿಲಕ್ ರಾಜ್, ಪೊಲೀಸ್ ತಂಡ ಭೇಟಿ ನೀಡಿದ್ದಾರೆ.
ಮಳೆ ಸುರಿದಿದ್ದರಿಂದ ಘಟನೆ ಬೆಳಕಿಗೆ
ಮಹಿಳೆಯ ಮೃತದೇಹವು ಶೇ.90ರಷ್ಟು ಸುಟ್ಟು ಹೋಗಿದ್ದರಿಂದ ಗುರುತು ಪತ್ತೆ ಸಾಧ್ಯವಾಗಿರಲಿಲ್ಲ. ಘಟನೆ ಸ್ಥಳ ಗುಡ್ಡ ಪ್ರದೇಶವಾದ್ದರಿಂದ ಜನರ ಓಡಾಟವಿಲ್ಲ. ಬೇರೆ ಜಿಲ್ಲೆಯವರಾಗಿದ್ದು, ಈ ಸ್ಥಳದಲ್ಲಿ ಕೊಲೆ ಮಾಡಿ ಸುಟ್ಟು ಹಾಕಿರುವ ಸಾಧ್ಯತೆ ಮೇಲ್ನೋಟಕ್ಕೆ ಕಂಡುಬಂದಿದೆ. ಮಳೆ ಸುರಿದಿದ್ದರಿಂದ ಭಾಗಶಃ ಸುಟ್ಟ ದೇಹ ಕೊಳೆತು ದುರ್ವಾಸನೆ ಹೆಚ್ಚಾಗಿದೆ. ಇದರಿಂದ ಸ್ಥಳ ದ ಮಾಲಕರು ತೆರಳಿದಾಗ ಘಟನೆ ಬೆಳಕಿಗೆ ಬರಲು ಕಾರಣವಾಗಿದೆ. ಈ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Pharma Company ಮೂಲಕ 4500 ಕೋಟಿ ಅಕ್ರಮ: ಇ.ಡಿ.
Mumbai ದೋಣಿ ದುರಂತ: ಮತ್ತೂಂದು ಮೃತದೇಹ ಪತ್ತೆ
ಮಂಗಳೂರು ಏರ್‌ಪೋರ್ಟ್‌ಗೆ ಪಾಯಿಂಟ್ ಆಫ್ ಕಾಲ್ ಸ್ಟೇಟಸ್ ಮಾನ್ಯತೆ ನೀಡಿ: ಕ್ಯಾ.ಚೌಟ ಮನವಿ
Missile Development: ಕ್ಷಿಪಣಿ ನಿರ್ಮಾಣ ಆರೋಪ: ಪಾಕ್‌ಗೆ ಅಮೆರಿಕ ನಿರ್ಬಂಧ
Coconut Oil Controversy: 20 ವರ್ಷಗಳ ಕೊಬ್ಬರಿ ಎಣ್ಣೆ ವಿವಾದಕ್ಕೆ ಸುಪ್ರೀಂ ಬ್ರೇಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.