ಬೆಳ್ತಂಗಡಿ: ವಿವಾಹಿತೆ ನೇಣುಬಿಗಿದು ಆತ್ಮಹತ್ಯೆ
Team Udayavani, Aug 4, 2022, 7:26 PM IST
ಬೆಳ್ತಂಗಡಿ: ವಿವಾಹಿತೆಯೊಬ್ಬರು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಧಾರುಣ ಘಟನೆ ತಾಲೂಕಿನ ಧರ್ಮಸ್ಥಳ ಗ್ರಾಮದ ಮುಂಡ್ರುಪ್ಪಾಡಿ ಎಂಬಲ್ಲಿ ಗುರುವಾರ ನಡೆದಿದೆ.
ಮೃತ ಮಹಿಳೆ ಮುಂಡ್ರುಪ್ಪಾಡಿ ನಿವಾಸಿ ದೀಪಕ್ ಎಂಬವರ ಪತ್ನಿ ಚೈತ್ರಾ ಅಡಿಗ (25) ಎಂಬವರಾಗಿದ್ದಾರೆ.
ಉಜಿರೆ ಖಾಸಗಿ ಶಾಲೆಯ ಶಿಕ್ಷಕಿಯಾಗಿ ಕೆಲ ಕಾಲ ಕೆಲಸ ಮಾಡಿದ್ದರು. 2 ವರ್ಷದಿಂದ ಮನೆಯಲ್ಲಿಯೇ ಇದ್ದರು ಎನ್ನಲಾಗಿದೆ. ಮೂರು ವರ್ಷದ ಹಿಂದೆ ಇವರ ವಿವಾಹವಾಗಿದ್ದು ಇವರಿಗೆ ಒಂದು ಮಗುವೂ ಇದೆ. ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಈಕೆ ಸಕ್ರಿಯರಾಗಿದ್ದರು. ಎಂ.ಎ.ಪೂರೈಸಿದ್ದ ಇವರು ಬಿ.ಎಡ್ ವಿದ್ಯಾಭ್ಯಾಸ ಮಾಡುವ ಇಂಗಿತವನ್ನು ಹೊಂದಿದ್ದು, ಪತಿ ಮನೆಯವರು ಮುಂದಿನ ವರ್ಷ ತರಗತಿಗೆ ಸೇರುವಂತೆ ತಿಳಿಸಿದ್ದರು ಎಂದು ಹೇಳಲಾಗಿದೆ.
ಇದನ್ನೂ ಓದಿ: ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನೆ: ಕಠಿಣ ಕ್ರಮವೆಂದ ಉಡುಪಿ ಎಸ್ಪಿ
ಘಟನೆ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಬೆಳ್ತಂಗಡಿ ತಹಶೀಲ್ದಾರ್ ಹಾಗೂ ಪೊಲೀಸರು ಭೇಟಿ ನೀಡಿ ತನಿಖೆ ನಡೆಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.