ಬೆಳ್ತಂಗಡಿ: ಮೊಗೆದಷ್ಟು ಬೇಡಿಕೆಗಳು ನಮ್ಮವು
Team Udayavani, Apr 21, 2018, 8:00 AM IST
ಕೃಷಿ, ಕೈಗಾರಿಕೆಗಳು, ಧಾರ್ಮಿಕ ಸ್ಥಳಗಳು, ಪ್ರವಾಸೀ ತಾಣಗಳು ಇರುವ ಬೆಳ್ತಂಗಡಿ ದಕ್ಷಿಣ ಕನ್ನಡದ ಗ್ರಾಮಾಂತರ ವಿಧಾನಸಭಾ ಕ್ಷೇತ್ರಗಳಲ್ಲಿ ಮುಖ್ಯವಾದದ್ದು. ಬೆಳ್ತಂಗಡಿ ತಾಲೂಕು ವ್ಯಾಪ್ತಿಯನ್ನೇ ಹೊಂದಿದೆ. ಹಳ್ಳಿ ಮತ್ತು ಅರೆಪಟ್ಟಣ ಪ್ರದೇಶಗಳನ್ನು ಹೆಚ್ಚು ಪ್ರಮಾಣದಲ್ಲಿ ಹೊಂದಿರುವ ಬೆಳ್ತಂಗಡಿ ಕ್ಷೇತ್ರ ನಕ್ಸಲ್ ಬಾಧಿತ ಪ್ರದೇಶಗಳನ್ನೂ ಒಳಗೊಂಡಿದೆ. ಇಲ್ಲಿಯ ಜನರ ಬೇಡಿಕೆಗಳು ಹತ್ತು ಹಲವು.
1. ಎಳನೀರು- ಸಂಸೆ ರಸ್ತೆ
ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿನ ನಿವಾಸಿಗಳು ತಾಲೂಕು ಕೇಂದ್ರಕ್ಕೆ ಬರಬೇಕಾದರೆ ಸುತ್ತಿಬಳಸಿ ಬರಬೇಕಿದೆ. ದಿಡುಪೆ- ಎಳನೀರು- ಸಂಸೆ ರಸ್ತೆ ಸಂಪರ್ಕ ಸಾಧ್ಯವಾದಲ್ಲಿ ಈ ಪರದಾಟ ತಪ್ಪಲಿದೆ.
2. ಎಂಡೋ – ಶಾಶ್ವತ ಪರಿಹಾರ
ಎಂಡೋಸಲ್ಫಾನ್ ಪೀಡಿತರಿಗೆ ಸಮರ್ಪಕ ಸೌಲಭ್ಯ ಕಲ್ಪಿಸುವ ಪ್ರಕ್ರಿಯೆ ನಡೆದಿಲ್ಲ. ವಿಶೇಷ ಆಸ್ಪತ್ರೆ ಕೈಗೂಡಿಲ್ಲ. ಕೇರಳ ಮಾದರಿ ಅಥವಾ ವಿಶೇಷ ಪ್ಯಾಕೇಜ್ ನಿಜವಾದ ಎಂಡೋ ಪೀಡಿತರಿಗೆ ಒದಗಿಸಬೇಕಿದೆ.
3. ನಕ್ಸಲ್ ಬಾಧಿತ ಪ್ರದೇಶಗಳ ಅಭಿವೃದ್ಧಿ
ಕುತ್ಲೂರು, ನಾರಾವಿ, ನಾವರ, ಸುಲ್ಕೇರಿ, ಸುಲ್ಕೇರಿ ಮೊಗ್ರು, ಶಿರ್ಲಾಲು, ಸವಣಾಲು, ನಡ, ಮಲವಂತಿಗೆ, ನಾವೂರು, ಮಿತ್ತಬಾಗಿಲು ಮೊದಲಾದ ನಕ್ಸಲ್ ಪೀಡಿತ ಪ್ರದೇಶಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕಾಗಿದೆ.
4. ರಸ್ತೆ ಅಭಿವೃದ್ಧಿ
ಸೀಟು- ಕಾಯರ್ತೋಡಿ, ಉಜಿರೆ- ಬೆಳಾಲು, ಪರಪ್ಪು- ಕೊಯ್ಯೂರು, ಬಳ್ಳ ಮಂಜ – ಕಲ್ಲೇರಿ, ಕುತ್ರೊಟ್ಟು- ಚಂದ್ಕೂರು, ಸೋಮಂತಡ್ಕ- ಗುಂಡಿರಸ್ತೆ, ರೇಷ್ಮೆರೋಡ್ -ಕಿನ್ನಿ ಗೋಳಿ- ಮದ್ದಡ್ಕ ರಸ್ತೆ ಅಭಿವೃದ್ಧಿಗೆ ಒತ್ತು ಬೇಕಿದೆ.
5. ರಾಷ್ಟ್ರೀಯ ಹೆದ್ದಾರಿ
ಬಂಟ್ವಾಳ ವಿಲ್ಲುಪುರಂ ರಾ. ಹೆ.ತಾಲೂಕಿ ನಲ್ಲಿ ಹಾದು ಹೋಗುತ್ತದೆ. ರಸ್ತೆ ಅಗಲ ಕಿರಿದಾಗಿದ್ದು, ಅಪಘಾತಗಳು ಸಂಭವಿಸುತ್ತಿವೆ. ಬಂಟ್ವಾಳ ಹಾಗೂ ತಾಲೂಕಿನ ರಸ್ತೆ ದ್ವಿಪಥಗೊಳಿಸಲು ಸಂಬಂಧಪಟ್ಟವರಿಗೆ ಒತ್ತಾಯ ಹೇರಬೇಕಿದೆ.
6. ಸರಕಾರಿ ಆಸ್ಪತ್ರೆಗಳ ಅಭಿವೃದ್ಧಿ
ತಾಲೂಕು ಆಸ್ಪತ್ರೆ ಆಧುನೀಕರಣಗೊಳಿಸುವ ಜತೆಗೆ ಸಮರ್ಪಕ ಸಿಬಂದಿ ನಿಯೋಜಿಸಿ ಇಲ್ಲಿಯೇ ಜನರಿಗೆ ಸೌಲಭ್ಯ ದೊರೆಯುವಂತೆ ಮಾಡಬೇಕಿದೆ. ವೇಣೂರು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಬೇಕಿದೆ.
7. ಕ್ರೀಡಾಂಗಣ, ಹಾಸ್ಟೆಲ್
ತಾಲೂಕು ಕ್ರೀಡಾಂಗಣ ಹದಗೆಟ್ಟಿದ್ದು ತಾಲೂಕಿನ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಸಮರ್ಪಕ ಅಭಿವೃದ್ಧಿ ಮಾಡುವ ಜತೆಗೆ ಕ್ರೀಡಾ ಹಾಸ್ಟೆಲ್ ತೆರೆದು ತಾಲೂಕಿನ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಬೇಕಿದೆ.
8. ಪ್ರವಾಸೋದ್ಯಮ
ಗಡಾಯಿಕಲ್ಲು, ವೇಣೂರು, ಎರ್ಮಾಯಿ ಜಲಪಾತ, ಆನಡ್ಕ, ಬಂಡಾಜೆ ಜಲಪಾತ, ಶಿಶಿಲ, ಶ್ರೀಕ್ಷೇತ್ರ ಧರ್ಮಸ್ಥಳ, ಸುರ್ಯ, ಸೌತಡ್ಕ ದೇವಸ್ಥಾನ ಮೊದಲಾದ ಪ್ರೇಕ್ಷಣೀಯ ಸ್ಥಳಗಳಿದ್ದು, ಪ್ರವಾಸೋದ್ಯಮ ಕೇಂದ್ರವಾಗಿ ರೂಪಿಸಬೇಕಿದೆ.
9. ನೀರಾವರಿ
ತಾಲೂಕಿನಲ್ಲಿ ಬೇಸಗೆ ವೇಳೆಗೆ ನದಿ ತೊರೆಗಳು ಬತ್ತುತ್ತಿದ್ದು, ಕಿಂಡಿ ಅಣೆಕಟ್ಟು ಗಳನ್ನು ಎಲ್ಲೆಡೆ ನಿರ್ಮಿಸಿ, ತಾಲೂಕಿನಲ್ಲಿ ಅಂತರ್ಜಲ ವೃದ್ಧಿಗೆ ಕ್ರಮಕೈಗೊಳ್ಳಬೇಕಿದೆ.
10. ಮೆಡಿಕಲ್, ನರ್ಸಿಂಗ್ ಕಾಲೇಜು
ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಸರಕಾರಿ ಮೆಡಿಕಲ್ ಹಾಗೂ ನರ್ಸಿಂಗ್ ಕಾಲೇಜುಗಳ ಆವಶ್ಯಕತೆ ಇದೆ. ತಾಲೂಕಿನ ವಿದ್ಯಾರ್ಥಿಗಳು ಮಂಗಳೂರು ಮೊದಲಾದೆಡೆ ತೆರಳಿ ಅಭ್ಯಾಸ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
11. ಕೈಗಾರಿಕೆಗಳ ಸ್ಥಾಪನೆ
ಸಣ್ಣ ಹಾಗೂ ಗುಡಿ ಕೈಗಾರಿಕೆಗಳ ಸ್ಥಾಪನೆ ಮಾಡಬೇಕಿದೆ. ಸರಕಾರಿ ಜಾಗ ನಿಯೋಜನೆಯಾಗಿದ್ದರೂ ಬೆಳವಣಿಗೆ ಕಂಡುಬಂದಿಲ್ಲ. ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಂಡಲ್ಲಿ ಜನತೆಗೂ ಅನುಕೂಲವಾಗಲಿದೆ.
12. ಚರಂಡಿ ವ್ಯವಸ್ಥೆ
ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಮಾಡಬೇಕಿದೆ. ಮಳೆ ಬಂದಾಗ ತಾಲೂಕಿನ ವಿವಿಧೆಡೆ ನೀರು ನಿಲ್ಲುತ್ತಿದ್ದು, ಸಮರ್ಪಕವಾಗಿ ಹರಿಯಲು ಕ್ರಮ ಕೈಗೊಳ್ಳಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ullala: ಸಮುದ್ರ ವಿಹಾರಕ್ಕೆ ಆಗಮಿಸಿದ ವ್ಯಕ್ತಿ ಅಲೆಗಳಿಗೆ ಸಿಲುಕಿ ಮೃತ್ಯು!
ಹೊಸ ವರ್ಷದ ಶುಭಾಶಯ ನೆಪದಲ್ಲಿ ವಂಚನೆ ಸಾಧ್ಯತೆ “ಎಪಿಕೆ ಫೈಲ್’ ತೆರೆಯದಂತೆ ಪೊಲೀಸರ ಸೂಚನೆ
Vitla; ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ: ದಂಪತಿಗೆ ಗಾಯ, ಬಾಲಕ ಮೃ*ತ್ಯು
Surathkal-ಗಣೇಶಪುರ ರಸ್ತೆಯಲ್ಲಿ ಟ್ಯಾಂಕರ್ ರಾಜ್ಯಭಾರ!
Mangaluru: ಕರಾವಳಿ ಉತ್ಸವ; ಮತ್ಸ್ಯ ಲೋಕದೊಳಗೆ ನಾವು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Pro Kabaddi-2024: ಹರಿಯಾಣಕ್ಕೆ ಮೊದಲ ಕಿರೀಟ
Army Vehicle Tragedy:ಕೊಡಗಿನ ಗಾಯಾಳು ಯೋಧ ಚಿಕಿತ್ಸೆ ಫಲಕಾರಿಯಾಗದೆ ಸಾ*ವು
Ullala: ಸಮುದ್ರ ವಿಹಾರಕ್ಕೆ ಆಗಮಿಸಿದ ವ್ಯಕ್ತಿ ಅಲೆಗಳಿಗೆ ಸಿಲುಕಿ ಮೃತ್ಯು!
ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಮತ್ತೆ ಎಡವಟ್ಟು: ಒಎಂಆರ್ ಶೀಟ್-ನೋಂದಣಿ ಸಂಖ್ಯೆ ಅದಲು-ಬದಲು
ಹೊಸ ವರ್ಷದ ಶುಭಾಶಯ ನೆಪದಲ್ಲಿ ವಂಚನೆ ಸಾಧ್ಯತೆ “ಎಪಿಕೆ ಫೈಲ್’ ತೆರೆಯದಂತೆ ಪೊಲೀಸರ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.