ಬೆಳ್ತಂಗಡಿ ತಾ| ಮಟ್ಟದ ಪರಿಸರ ಸ್ಪರ್ಧೆ
Team Udayavani, Aug 10, 2017, 7:20 AM IST
ಬೆಳ್ತಂಗಡಿ: ಶಿಕ್ಷಣ ಇಲಾಖೆ, ನಾಗರಿಕ ಸೇವಾ ಟ್ರಸ್ಟ್ ಮತ್ತು ದ. ಕ. ಪರಿಸರಾಸಕ್ತರ ಒಕ್ಕೂಟವನ್ನೊಳಗೊಂಡ ಶಾಲಾ ಮಕ್ಕಳ ಪರಿಸರ ಸ್ಪರ್ಧಾ ಸಮಿತಿಯ ಆಶ್ರಯದಲ್ಲಿ ಗುರುವಾಯನಕೆರೆ ಪಿಲಿಚಂಡಿಕಲ್ಲು ಹಿರಿಯ ಪ್ರಾಥಮಿಕ ಶಾಲೆಯಲ್ಲಿ 21ನೇ ವರ್ಷದ ಆರ್.ಎನ್. ಭಿಡೆ ಸಂಸ್ಮರಣಾರ್ಥ ಬೆಳ್ತಂಗಡಿ ತಾಲೂಕು ಮಟ್ಟದ ಪರಿಸರ ಸ್ಪರ್ಧೆ ಜರಗಿತು.
ಪರಿಸರಕ್ಕೆ ಸಂಬಂಧಿಸಿದ 4 ಸ್ಪರ್ಧೆಗಳಾದ ಹಾಡು, ಭಾಷಣ, ಚಿತ್ರಕಲೆ, ಸಸ್ಯ ಗುರುತಿಸುವಿಕೆ ಇವುಗಳಲ್ಲಿ ಪ್ರಥಮ, ದ್ವಿತೀಯ, ತƒತೀಯ ಸ್ಥಾನ ಪಡೆದವರಿಗೆ ಹಾಗೂ ಪ್ರೋತ್ಸಾಹ ರೂಪದಲ್ಲಿ ಇತರ ಮೂರು ಮಂದಿಗೆ ಪ್ರಶಸ್ತಿ ಪತ್ರವನ್ನು ಬೆಳ್ತಂಗಡಿ ತಾ. ಪಂ. ಅಧ್ಯಕ್ಷೆ ದಿವ್ಯಜ್ಯೋತಿ ವಿತರಿಸಿದರು.
ನಾಗರಿಕ ಸೇವಾ ಟ್ರಸ್ಟ್ ಅಧ್ಯಕ್ಷ ಕೆ. ಸೋಮನಾಥ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕುವೆಟ್ಟು ಗ್ರಾ.ಪಂ.ಅಧ್ಯಕ್ಷ ಅಶೋಕ್ ಕೋಟ್ಯಾನ್, ಜಿ.ಪಂ. ಸದಸ್ಯೆ ಮಮತಾ ಎಂ.ಶೆಟ್ಟಿ, ತಾ.ಪಂ.ಸದಸ್ಯ ಗೋಪಿನಾಥ ನಾಯಕ್, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಶಿಕ್ಷಣ ಸಂಯೋಜಕ ಸುಭಾಸ್ ಜಾಧವ, ಆರ್.ಎನ್. ಭಿಡೆಯವರ ಪುತ್ರ ಹೇಮಂತ ಭಿಡೆ, ಶಾಲಾ ಮುಖ್ಯೋಪಾಧ್ಯಾಯ ಫಿಲಿಫ್ ರೊನಾಲ್ಡ್ ಡಿ’ಮೆಲ್ಲೊ, ಗುರುವಾಯನಕೆರೆ ಭಾಗವಹಿಸಿದ್ದರು.
ಬದನಾಜೆ ಸ.ಹಿ. ಪ್ರಾ.ಶಾಲಾ ಮುಖ್ಯೋಪಾಧ್ಯಾಯ ಲಕ್ಷ್ಮಣ ಪೂಜಾರಿ ತೀರ್ಪುಗಾರರ ಪರ ಮಾತನಾಡಿದರು.
ಟ್ರಸ್ಟ್ ಕಾರ್ಯದರ್ಶಿ ಜಯಪ್ರಕಾಶ್ ಭಟ್ ಸಿ.ಎಚ್. ಸ್ವಾಗತಿಸಿ, ಇಲಾಖೆಯ ದೆ„ಹಿಕ ಶಿಕ್ಷಣ ಶಿಕ್ಷಕ ಅಜಿತ್ ಕುಮಾರ್ ವಂದಿಸಿದರು. ಅಧ್ಯಾಪಕ ದೇವುದಾಸ ನಾಯಕ್ ಮತ್ತು ಟ್ರಸ್ಟ್ ಉಪಾಧ್ಯಕ್ಷೆ ವಿದ್ಯಾ ನಾಯಕ್ ನಿರ್ವಹಿಸಿದರು.
ಇದೇ ಸಂದರ್ಭದಲ್ಲಿ ಆರ್.ಎನ್.ಭಿಡೆ ಅವರ ಜನ್ಮಶತಾಬ್ದದ ಅಂಗವಾಗಿ ಬೆಳ್ತಂಗಡಿ ತಾಲೂಕಿನ 36 ಸರಕಾರಿ ಪ್ರೌಢಶಾಲೆಗಳಲ್ಲಿ 2016-17ರಲ್ಲಿ ಎಸೆಸೆಲ್ಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಾಗರಿಕ ಸೇವಾ ಟ್ರಸ್ಟ್ ಹಾಗೂ ಸುಶೀಲಾ ಮತ್ತು ಆರ್.ಎನ್. ಭಿಡೆ ಟ್ರಸ್ಟ್ ವತಿಯಿಂದ ತಲಾ 1,000 ರೂ.ದಂತೆ ಪ್ರೋತ್ಸಾಹಕ ಬಹುಮಾನ ಮತ್ತು ಅಭಿನಂದನ ಪತ್ರ ನೀಡಲಾಯಿತು. 40 ಹಿ. ಪ್ರಾ. ಶಾಲೆಗಳು ಮತ್ತು 36 ಪ್ರೌಢಶಾಲೆಗಳಿಂದ 430 ಸ್ಪರ್ಧಿಗಳು ಭಾಗವಹಿಸಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.