ಬೆಳ್ತಂಗಡಿ ಜಂಕ್ಷನ್‌: ಅಭಿವೃದ್ಧಿಯಾದರೆ ಇಡೀ ತಾಲೂಕಿಗೆ ಅನುಕೂಲ


Team Udayavani, Aug 11, 2018, 1:25 AM IST

bel-junction-9-8.jpg

ತಾ|ನ ಪ್ರಮುಖ ಜಂಕ್ಷನ್‌ ನಲ್ಲಿ ಅಭಿವೃದ್ಧಿಯ ಅಧ್ಯಾಯ ಶೀಘ್ರ ಆರಂಭವಾಗದಿದ್ದರೆ ಪರಿಣಾಮ ಇಡೀ ತಾ|ನ ಮೇಲೆ ಬೀಳುವುದು ಖಚಿತ. ಅದಕ್ಕೆ ಸ್ಥಳೀಯಾಡಳಿತ ಸಿದ್ಧವಾಗಬೇಕು.

ಬೆಳ್ತಂಗಡಿ: ತಾಲೂಕಿನ ಬಸ್ಸುನಿಲ್ದಾಣದ ಜಂಕ್ಷನ್‌ ಪ್ರದೇಶ ಇಡೀ ತಾಲೂಕಿನ ಜನರಿಗೆ ಸಂಪರ್ಕ ಕಲ್ಪಿಸುವ ಕೇಂದ್ರಬಿಂದು. ಹತ್ತಿರಕ್ಕೆ ಹೋಗುವ ಎಲ್ಲ ಊರಿನ ಬಸ್ಸುಗಳೂ ಈ ಜಂಕ್ಷನ್‌ನ್ನು ಹಾದು ಹೋಗಲೇಬೇಕು. ಹಾಗಾಗಿ ದಿನವಿಡೀ (ರಾತ್ರಿ ಹೊರತು ಪಡಿಸಿ) ಸದಾ ಜನಜಂಗುಳಿಯಿಂದ ಕೂಡಿರುತ್ತದೆ. ಸುತ್ತಲಿನ ಆರ್ಥಿಕ ಚಟುವಟಿಕೆಗೂ ಬಹಳ ಪ್ರಮುಖವಾಗಿರುವ ಈ ಜಂಕ್ಷನ್‌ ನ ಅಭಿವೃದ್ಧಿ ಕುರಿತು ನಾಲ್ಕು ಮಾತು ಹೇಳಲೇಬೇಕು. ಇಲ್ಲಿರುವ ಸೌಲಭ್ಯಗಳನ್ನು ಪಟ್ಟಿ ಮಾಡಿ ಹೇಳುವುದಕ್ಕಿಂತ ಇರುವಷ್ಟೂ ಸೌಲಭ್ಯಗಳನ್ನು ಒತ್ತಟ್ಟಿನಲ್ಲಿ ಚೆಂದಗೊಳಿಸಲು ಸಾಧ್ಯವೇ ಎಂಬುದು ಸಾರ್ವಜನಿಕರ ಪ್ರಶ್ನೆ.

ತಾಲೂಕಿನ ಕೇಂದ್ರ ಪ್ರದೇಶವಾದ ಕಾರಣ, ಸನಿಹದಲ್ಲೇ ತಾಲೂಕು ಕಚೇರಿ, ನಗರಸಭಾ ಕಾರ್ಯಾಲಯ, ನ್ಯಾಯಾಲಯ, ತಾಲೂಕು ಪಂಚಾಯತ್‌, ಪೊಲೀಸ್‌ ಠಾಣೆ ಸೇರಿದಂತೆ ಬಹುತೇಕ ಸರಕಾರಿ ಕಚೇರಿಗಳು ಇವೆ. ಆದ ಕಾರಣ ಜನದಟ್ಟಣೆ ಹಾಗೂ ವಾಹನ ಸಂಚಾರ ತುಸು ಹೆಚ್ಚು.

ಬಸ್ಸು ನಿಲ್ದಾಣ ಹೀಗಿದೆ
ಬಸ್ಸು ನಿಲ್ದಾಣ ಜಂಕ್ಷನ್‌ ಆದ ಕಾರಣ ಈಗಾಗಲೇ ಹೇಳಿದಂತೆ ಪ್ರಯಾಣಿಕರ ಸಂಖ್ಯೆ ಜಾಸ್ತಿ. ಆದರೆ ಈ ಪ್ರದೇಶ ಕಿರಿದಾಗಿರುವುದರಿಂದ ಸಾಕಷ್ಟು ಬಾರಿ ಅವ್ಯವಸ್ಥೆ ಎನಿಸುವುದುಂಟು. ಜನರಿಗೆ, ವಾಹನ ಸವಾರರಿಗೆ ಗೊಂದಲ ಉಂಟಾಗುವುದೂ ಉಂಟು. ಇಲ್ಲಿ ಪ್ರಯಾಣಿಕರಿಗೆ ನಿಲ್ಲುವ ವ್ಯವಸ್ಥೆಯಾಗಲಿ, ಬಸ್ಸುಗಳಿಗೆ ನಿಲ್ಲುವ ವ್ಯವಸ್ಥೆಯಾಗಲಿ ಸಮರ್ಪಕವಾಗಿರದಿದ್ದುದು ಈ ಗೊಂದಲವನ್ನು ಮತ್ತಷ್ಟು ಹೆಚ್ಚಿಸುತ್ತಿದೆ.

ಶೌಚಾಲಯ ವ್ಯವಸ್ಥೆ ಇದೆ ಎಂಬುದು ಸಣ್ಣದೊಂದು ಸಮಾಧಾನ. ಆದರೆ ಕುಡಿಯುವ ನೀರಿನ ವ್ಯವಸ್ಥೆ ಸರಿಯಿಲ್ಲ. ಸ್ವತ್ಛತೆಗೆ ಬಸ್‌ ನಿಲ್ದಾಣದಲ್ಲಿ ಇನ್ನಷ್ಟು ಪ್ರಾಮುಖ್ಯ ನೀಡಬೇಕಿದೆ. ಪ್ರಯಾಣಿಕರಿಗೆ ಕುಳಿತುಕೊಳ್ಳುವ ವ್ಯವಸ್ಥೆಯಿಲ್ಲ. ಹಾಗಾಗಿ ಮಳೆ ಬಿಸಿಲಿಗೆ ನಿಲ್ದಾಣದ ಬದಿಯಲ್ಲೇ ನಿಲ್ಲಬೇಕು. ಸರಕಾರಿ ಆಸ್ಪತ್ರೆಗೆ ಸಂತೆಕಟ್ಟೆಯಲ್ಲಿರುವ ತಾಲೂಕು ಆಸ್ಪತ್ರೆಯನ್ನೇ ಆಶ್ರಯಿಸಬೇಕಿದೆ.

ಬಿ.ಸಿ.ರೋಡ್‌, ಮಂಗಳೂರು, ಉಡುಪಿ, ಕುಂದಾಪುರ, ಪುತ್ತೂರು, ಸುಳ್ಯ, ಮಡಿಕೇರಿ, ಮೈಸೂರು, ಚಿಕ್ಕಮಗಳೂರು, ಶಿವಮೊಗ್ಗ, ಬೆಂಗಳೂರು ಮೊದಲಾದ ಪ್ರದೇಶಕ್ಕೆ ತೆರಳುವ ಬಸ್ಸುಗಳೂ ಈ ನಿಲ್ದಾಣಕ್ಕೆ ಆಗಮಿಸುತ್ತವೆ. ಬಿ.ಸಿ.ರೋಡ್‌-ಕಡೂರು ರಾಷ್ಟ್ರೀಯ ಹೆದ್ದಾರಿ ಇದೇ ಭಾಗದಲ್ಲಿ ಹಾದುಹೋಗುತ್ತಿದ್ದು, ಅಲ್ಲೇ ಪಕ್ಕದಲ್ಲಿ ಆಟೋ ರಿಕ್ಷಾ ನಿಲ್ದಾಣ, ಟೆಂಪೋಗಳು, ಜೀಪ್‌ಗ್ಳು, ಇತರ ವಾಹನಗಳೂ ನಿಲ್ಲುತ್ತಿವೆ. ಇದರಿಂದ ಸ್ಥಳಾವಕಾಶದ ಕೊರತೆ ಇದೆ. ಪಾರ್ಕಿಂಗ್‌ ಸಮಸ್ಯೆಯೂ ಕಾಡುತ್ತಿದ್ದು, ಬೆಳಗ್ಗೆ ಹಾಗೂ ಸಂಜೆ ಟ್ರಾಫಿಕ್‌ ಜಾಮ್‌ ಸಮಸ್ಯೆಯೂ ಇದೆ. ಇದಲ್ಲದೇ ಸರಕಾರಿ, ಖಾಸಗಿ ಬಸ್ಸುಗಳು ಒಂದೇ ಕಡೆ ನಿಲ್ಲುವಷ್ಟು ಜಾಗವಿಲ್ಲ, ಆದರೂ ನಿಲ್ಲಿಸಲಾಗುತ್ತಿರುವುದೂ ತೊಂದರೆಯಾಗುತ್ತಿದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯ.

ನೂರಾರು ವಿದ್ಯಾರ್ಥಿಗಳ ಓಡಾಟ
ಬೆಳ್ತಂಗಡಿ ಬಸ್‌ ನಿಲ್ದಾಣವನ್ನೇ ಬಳಸಿ ನೂರಾರು ಮಂದಿ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ತೆರಳುತ್ತಾರೆ. ಗ್ರಾಮೀಣ ಭಾಗಗಳಿಂದ ಬರುವ ವಿದ್ಯಾರ್ಥಿಗಳು ಉಜಿರೆ, ಪುತ್ತೂರು, ಮಂಗಳೂರು, ಮಡಂತ್ಯಾರು ಇತರ ಪ್ರದೇಶಗಳಿಗೆ ತೆರಳಲು ಇದೇ ಜಂಕ್ಷನ್‌ ನಲ್ಲಿ ಬಸ್ಸು ಬದಲಿಸಬೇಕು. ಪ್ರಯಾಣಿಕರ ಜತೆ ವಿದ್ಯಾರ್ಥಿಗಳೂ ಸೇರಿದರೆ ದಿನಕ್ಕೆ ಸಾವಿರಾರು ಮಂದಿ ಸಂಚರಿಸುತ್ತಿರುತ್ತಾರೆ. ಹಾಗಾಗಿ ಕಿಷ್ಕಿಂಧೆಯ ಸ್ವರೂಪಕ್ಕೆ ಹೊಸ ರೂಪ ನೀಡಬೇಕಿದೆ.

ಬಸ್‌ ನಿಲ್ದಾಣದಲ್ಲಿ ಬದಲಾವಣೆ
ಬಸ್ಸು ನಿಲ್ದಾಣದಲ್ಲಿ ಖಾಸಗಿ ಹಾಗೂ ಸರಕಾರಿ ಬಸ್ಸಿಗೆ ಪ್ರತ್ಯೇಕ ನಿಲ್ದಾಣದ ವ್ಯವಸ್ಥೆಯಾಗಬೇಕು. ಜತೆಗೆ ಬಸ್ಸನ್ನು ಬಿಟ್ಟು ಇತರ ವಾಹನ ಪ್ರವೇಶಕ್ಕೆ ಅವಕಾಶ ನೀಡಬಾರದು. ರಿಕ್ಷಾಗಳನ್ನು ಉದ್ದಕ್ಕೆ ನಿಲ್ಲಿಸುವ ಬದಲು ಕ್ಯು ಸಿಸ್ಟಂ ಜಾರಿಗೆ ತರಬೇಕು. ಇದರ ಲಘು ವಾಹನಕ್ಕೆ ಕೊಂಚ ದೂರಕ್ಕೆ ವ್ಯವಸ್ಥೆ ಮಾಡಿದರೆ ಉತ್ತಮ. 
– ಓಡಿಯಪ್ಪ ಗೌಡ, ಸಬ್‌ ಇನ್ಸ್‌ಪೆಕ್ಟರ್‌, ಸಂಚಾರಿ ಪೊಲೀಸ್‌ ಠಾಣೆ, ಬೆಳ್ತಂಗಡಿ

— ಕಿರಣ್‌ ಸರಪಾಡಿ

ಟಾಪ್ ನ್ಯೂಸ್

Happy New Year 2025: ಹೊಸ ಕ್ಯಾಲೆಂಡರ್‌ನೊಂದಿಗೆ ಹೊಸ ವರ್ಷದ ಆರಂಭ

Happy New Year 2025: ಹೊಸ ಕ್ಯಾಲೆಂಡರ್‌ನೊಂದಿಗೆ ಹೊಸ ವರ್ಷದ ಆರಂಭ

Namma Metro; Metro services till 2 am on December 31

Namma Metro; ಡಿಸೆಂಬರ್‌ 31ರಂದು ಮಧ್ಯರಾತ್ರಿ 2 ಗಂಟೆಯವರೆಗೆ ಮೆಟ್ರೋ ಸಂಚಾರ

Borewell Tragedy: ಹೇಗಾದರು ಮಾಡಿ ನನ್ನ 3ವರ್ಷದ ಮಗಳನ್ನು ರಕ್ಷಣೆ ಮಾಡಿ ಕೊಡಿ.. ತಾಯಿ ಅಳಲು

Borewell Tragedy: ಹೇಗಾದರು ಮಾಡಿ ನನ್ನ 3ವರ್ಷದ ಮಗಳನ್ನು ರಕ್ಷಣೆ ಮಾಡಿ ಕೊಡಿ.. ತಾಯಿ ಅಳಲು

Robbery: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ “ಮೊಟ್ಟೆ ಗ್ಯಾಂಗ್‌”

Robbery: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ “ಮೊಟ್ಟೆ ಗ್ಯಾಂಗ್‌”

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

Agarwal

Vijay Hazare Trophy; ಮಯಾಂಕ್‌ ಅಗರ್ವಾಲ್‌ ಭರ್ಜರಿ ಶತಕ; ಸುಲಭ ಜಯ ಸಾಧಿಸಿದ ಕರ್ನಾಟಕ

Video: ಜನವರಿಯಲ್ಲಿ ಮದುವೆ ನಿಶ್ಚಯವಾಗಿದ್ದ ಯುವತಿ 70 ಅಡಿ ಎತ್ತರದ ಸೇತುವೆಯಿಂದ ಜಿಗಿದಳು

Video: 2 ವಾರದಲ್ಲಿ ಮದುವೆಯಾಗಬೇಕಿದ್ದ ಯುವತಿ 70 ಅಡಿ ಎತ್ತರದ ಸೇತುವೆಯಿಂದ ನದಿಗೆ ಜಿಗಿದಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-2

Belthangady: ಶಾಲೆಯ ಮಕ್ಕಳು ನೆಟ್ಟಿದ್ದ ಹೂ ಗಿಡಗಳ ಕುಂಡಗಳನ್ನು ಪುಡಿಗೈದ ಕಿಡಿಗೇಡಿಗಳು

4

Bantwal: ಸಾಹಿತ್ಯವನ್ನು ಮಕ್ಕಳ ಮನ ಮುಟ್ಟುವಂತೆ ಬೋಧಿಸುವ ಶಿಕ್ಷಕರು ಬೇಕು

3

Bantwal ತಾಲೂಕು ಕಚೇರಿ: ಪಾಳು ಬಿದ್ದಿದೆ ಜನರೇಟರ್‌!

2

Uppinangady: ಕಾಟಾಚಾರದ ಕಾಮಗಾರಿಗೆ ಸ್ಥಳೀಯರ ತರಾಟೆ

1(1

Sullia: ಪ್ಲಾಟ್‌ಫಾರ್ಮ್ ಎತ್ತರಿಸುವ ಕಾರ್ಯ ಪೂರ್ಣ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಕೊಪ್ಪಳದಲ್ಲಿ ಕ್ಯಾನ್ಸರ್‌ ಖಾಯಿಲೆಗಿಲ್ಲ ಚಿಕಿತ್ಸೆ -114 ಜನರಲ್ಲಿ ಕ್ಯಾನ್ಸರ್‌ ಪತ್ತೆ!

ಬೆಳಗಾವಿ: ಎರಡೂ ಅಧಿವೇಶನಗಳಿಗೆ ಕಾಡಿದ ಶೋಕ

ಬೆಳಗಾವಿ: ಎರಡೂ ಅಧಿವೇಶನಗಳಿಗೆ ಕಾಡಿದ ಶೋಕ

Happy New Year 2025: ಹೊಸ ಕ್ಯಾಲೆಂಡರ್‌ನೊಂದಿಗೆ ಹೊಸ ವರ್ಷದ ಆರಂಭ

Happy New Year 2025: ಹೊಸ ಕ್ಯಾಲೆಂಡರ್‌ನೊಂದಿಗೆ ಹೊಸ ವರ್ಷದ ಆರಂಭ

Namma Metro; Metro services till 2 am on December 31

Namma Metro; ಡಿಸೆಂಬರ್‌ 31ರಂದು ಮಧ್ಯರಾತ್ರಿ 2 ಗಂಟೆಯವರೆಗೆ ಮೆಟ್ರೋ ಸಂಚಾರ

14

Padubidri: ವೃದ್ಧ ದಂಪತಿಗೆ ಸುರಕ್ಷಿತ ಕಾಲು ಸಂಕದ ಭರವಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.