ಬೆಳ್ತಂಗಡಿ: ಕೊನೆಯ ದಿನ ನಾಮಪತ್ರ ಸಲ್ಲಿಕೆ
Team Udayavani, Apr 25, 2018, 8:25 AM IST
ಜಗನ್ನಾಥ್ ಎಂ. ನಾಮಪತ್ರ ಸಲ್ಲಿಸಿದರು.
ಪ್ರಸಾದ್ ಕುಮಾರ್ ಯು. ನಾಮಪತ್ರ ಸಲ್ಲಿಸಿದರು.
ಬೆಳ್ತಂಗಡಿ : ನಾಮಪತ್ರ ಸಲ್ಲಿಕೆಗೆ ಎ. 24 ಕೊನೆಯ ದಿನವಾಗಿದ್ದು, ಮೂರು ಮಂದಿ ಅಭ್ಯರ್ಥಿಗಳು ಸಹಿತ ಜೆ.ಡಿ.ಎಸ್.ನಿಂದ ಒಬ್ಬ ಅಭ್ಯರ್ಥಿ ನಾಮಪತ್ರ ಸಲ್ಲಿಸಿದರು.
ಜೆ.ಡಿ.ಎಸ್.ನಿಂದ ನಾಮಪತ್ರ
ಈಗಾಗಲೇ ಜೆ.ಡಿ.ಎಸ್. ಅಭ್ಯರ್ಥಿಯಾಗಿ ಸುಮತಿ ಎಸ್. ಹೆಗ್ಡೆ ಎ. 20ರಂದು ನಾಮಪತ್ರ ಸಲ್ಲಿಸಿದ್ದು, ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾದ ಎ. 24ರಂದು ಜೆ.ಡಿ.ಎಸ್.ನ ಜಗನ್ನಾಥ್ ಅವರೂ ನಾಮಪತ್ರ ಸಲ್ಲಿಸಿದರು.
ಪಕ್ಷೇತರ ಅಭ್ಯರ್ಥಿ
ಕಳೆದ ಬಾರಿಯ ವಿಧಾನಸಭಾ ಚುನಾವಣೆಗೆ ಸಂಯುಕ್ತ ಜನಾತಾ ದಳದಿಂದ ಸ್ಫರ್ಧಿಸಿದ್ದ ವೆಂಕಟೇಶ ಬೆಂಡೆ ಅವರು ಈ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಬೆಳ್ತಂಗಡಿಯ ಮಿನಿ ವಿಧಾನಸೌಧದಲ್ಲಿ ಎ. 24ರಂದು ಬೆಳಗ್ಗೆ ಚುನಾವಣಾಧಿಕಾರಿ ಎಚ್.ಆರ್. ನಾಯ್ಕ ಅವರಿಗೆ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆ ವೇಳೆ ಸಂಜೀವಿ ಪ್ರಭು, ರೂಪಲತಾ ಬೆಂಡೆ ಇದ್ದರು. ಕುಕ್ಕೇಡಿಯ ಯು.ಎಂ. ಸೈಯದ್ ಹಸನ್ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಎಂ.ಇ.ಪಿ
ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಸ್ಫರ್ಧಿಸುತ್ತಿರುವ ಎಂ.ಇ.ಪಿ. ಪಕ್ಷದಿಂದ ತೋಟತ್ತಾಡಿಯ ಉದ್ಯಮಿ ಜಗನ್ನಾಥ್ ಎಂ. ಅವರು ನಾಮಪತ್ರ ಸಲ್ಲಿಸಿದರು. ಈ ವೇಳೆ ಎಂ.ಇ.ಪಿ. ಸದಸ್ಯ ಹಾಲೇಶ್ ಬಾಬು, ಗಿರಿಜಾ, ಸಂಜೀವ ಶೆಟ್ಟಿ, ಕೃಷ್ಣ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಶಿವಸೇನೆ
ಶಿವಸೇನೆಯಿಂದ ಜಿಲ್ಲೆಯಲ್ಲಿ ಮೊದಲ ನಾಮಪತ್ರ ಸಲ್ಲಿಸಲಾಗಿದೆ. ಪ್ರಸಾದ್ ಕುಮಾರ್ ಯು. ಅವರು ಚುನಾವಣಾಧಿಕಾರಿ ಎಚ್.ಆರ್. ನಾಯ್ಕ ಅವರಿಗೆ ನಾಮಪತ್ರ ಸಲ್ಲಿಸಿದರು. ಶಿವಸೇನೆ ದಕ್ಷಿಣ ಪ್ರಾಂತ ಪ್ರಧಾನ ಕಾರ್ಯದರ್ಶಿ ಆನಂದ ಶೆಟ್ಟಿ, ಶಿವಸೇನೆ ತಾಲೂಕು ಪ್ರಚಾರ ಸಮಿತಿ ಅಧ್ಯಕ್ಷ ಅಸುತೋಷ್, ಶಿವಸೇನೆಯ ಶಿವಪ್ರಸಾದ್ ಅರುವಾ, ವಿನೋದ್ ಧರ್ಮಸ್ಥಳ, ಹರೀಶ್ ಗರ್ಡಾಡಿ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್‌ಗಳಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.