ಬೆಳ್ತಂಗಡಿ ತಾ| ಗ್ರಂಥಾಲಯಕ್ಕಿಲ್ಲ ಸುಸಜ್ಜಿತ ಕಟ್ಟಡ
ನೂತನ ಕಟ್ಟಡ ನಿರ್ಮಾಣಕ್ಕೆ ನಿವೇಶನದ ಕೊರತೆ ;ಪುಸ್ತಕ ಪ್ರೇಮಿಗಳಲ್ಲಿ ಬೇಸರ
Team Udayavani, Oct 6, 2019, 6:46 AM IST
ಬೆಳ್ತಂಗಡಿ : ಹಲವಾರು ದಶಕಗ ಳಿಂದ ಓದುಗರನ್ನು ತನ್ನತ್ತ ಸೆಳೆಯುತ್ತಿದ್ದ ತಾಲೂಕು ಸಾರ್ವಜನಿಕ ಗ್ರಂಥಾಲಯ ಕಟ್ಟಡ ಅಪಾಯಕಾರಿ ಹಂತ ತಲುಪಿರುವುದ ರಿಂದ ಓದುಗರು ಆತಂಕದಲ್ಲಿ ಸಮಯ ಕಳೆಯುವಂತಾಗಿದೆ.
ಓದುಗರು ಪ್ರತಿನಿತ್ಯ ಜ್ಞಾನ ಭಂಡಾರದ ಆಸರೆ ಪಡೆದಿದ್ದಾರೆ. ಇತ್ತ ಕಟ್ಟಡದ ಛಾವಣಿ ಹಾಗೂ ಗೋಡೆ ಬಿರುಕು ಬಿಟ್ಟಿದ್ದು, 50 ವರ್ಷಗಳಿಗೂ ಹೆಚ್ಚು ಹಳೆಯದಾದ ಕಟ್ಟಡ ದಲ್ಲಿ ಕುಳಿತು ಓದಲು ಆತಂಕ ಸ್ಥಿತಿ ನಿರ್ಮಾಣ ವಾಗಿದೆ. 40 ಸಾವಿರಕ್ಕೂ ಹೆಚ್ಚು ಬೆಲೆ ಬಾಳುವ ಪುಸ್ತಕಗಳಿದ್ದು, 2,500 ಮಂದಿ ಸದಸ್ಯತ್ವ ಹೊಂದಿರುವ ಹೆಗ್ಗಳಿಗೆ ತಾಲೂಕು ಗ್ರಂಥಾಲಯದ್ದಾಗಿದೆ.
57 ಸಾವಿರ ರೂ.
ಮೌಲ್ಯದ ಪುಸ್ತಕ ಸಂಗ್ರಹ
ನಿತ್ಯ ಓದುಗರು ಆಸಕ್ತಿಯಿಂದ ಬರುತ್ತಿದ್ದಾರೆ. ಅನೇಕ ಖ್ಯಾತ ಲೇಖಕರ ಸುಮಾರು 40 ಸಾವಿರ ಪುಸ್ತಕಗಳಿದ್ದು, ತಿಂಗಳಿಗೆ 37 ಮ್ಯಾಗಜಿನ್‌ಗಳು, ಪ್ರತಿದಿನ 10ಕ್ಕೂ ಹೆಚ್ಚು ಪತ್ರಿಕೆಗಳು ಬರುತ್ತಿವೆ. ಆದರೆ ಇಲ್ಲಿನ ಸ್ಥಿತಿಗತಿಯಿಂದಾಗಿ ಬರುವ ಓದುಗರ ಸಂಖ್ಯೆ ಕಡಿಮೆಯಾಗಿದೆ.
ಬಿರುಕು ಬಿಟ್ಟ ಕಟ್ಟಡ
ಹಲವಾರು ದಶಕಗಳನ್ನು ಕಂಡ ಗ್ರಂಥಾಲಯದ ಕಟ್ಟಡ ಛಾವಣಿ ಸೋರದಂತೆ ಟರ್ಪಾಲು ಹಾಸಲಾಗಿದೆ. ಮಳೆ ಪ್ರಮಾಣ ಹೆಚ್ಚಾದಲ್ಲಿ ಗ್ರಂಥಾಲಯ ಪುಸಕ್ತಗಳು ಒದ್ದೆಯಾಗುತ್ತಿವೆ. ಕಟ್ಟಡ ಹಿಂಬದಿ ಬಿರುಕು ಬಿಟ್ಟು ಅಪಾಯಕಾರಿ ಯಾಗಿದ್ದು, ಕುಸಿಯುವ ಮುನ್ನ ಹೊಸ ಕಟ್ಟಡಕ್ಕೆ ಸ್ಥಳಾಂತರ ಇಲ್ಲವೇ ನೂತನ ಕಟ್ಟಡ ರಚನೆಗೆ ನಿವೇಶನ ಒದಗಿಸುವಲ್ಲಿ ಸಂಬಂಧಪಟ್ಟವರು ಗಮನ ಹರಿಸಬೇಕಿದೆ.
ಕಟ್ಟಡದ ಸುತ್ತಮುತ್ತ ಗಿಡಗಂಟಿ
ಕಟ್ಟಡದ ಹಿಂಬದಿ ಗಿಡಗಂಟಿ, ಛಾವಣಿ ಮಧ್ಯ ಬಳ್ಳಿಗಳು ಆವರಿಸಿವೆ. ಕಸಕಡ್ಡಿಗಳು ಸುತ್ತಮುತ್ತ ತುಂಬಿದ್ದು, ಇದರ ಬದಿಯಲ್ಲೇ ಇರುವ ಪಾಳುಬಾವಿಯಲ್ಲಿ ಮದ್ಯದ ಬಾಟಲಿಗಳು ತುಂಬಿದ್ದು, ಓದುಗರಿಗೆ ಮುಜುಗರ ಉಂಟುಮಾಡುವಂತಿದೆ.
ಪೀಠೊಪಕರಣ
ಬದಲಾವಣೆ ಕೂಗು
40 ಸಾವಿರದಷ್ಟು ಪುಸ್ತಕಗಳ ಹೊರೆ ಹೊತ್ತ ಪೀಠೊಪಕರಣಗಳು ಮಳೆ ನೀರು ಬಿದ್ದು ತುಕ್ಕು ಹಿಡಿದಿವೆ. ಹೊಸ ರ್ಯಾಕ್ ನಿರ್ಮಿಸುವಂತೆ ಓದುಗರು ಪ್ರತಿನಿತ್ಯ ವಿನಂತಿಸಿದರೂ ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ತಲೆಕೆಡಿಸಿಕೊಂಡಿಲ್ಲ.
ಕಟ್ಟಡ ಹಿಂಬದಿ ಬೃಹತ್ ಮರಗಳಿವೆ. ಮಂಗಗಳ ಹಾವಳಿಯಿಂದ ಹೆಂಚು ಹಾಳಾಗಿವೆ. ಮರದ ಕೊಂಬೆ ಕಡಿಯದೆ ಮಳೆ-ಗಾಳಿಗೆ ಬಿದ್ದರೆ ಗ್ರಂಥಾಲಯ ಕಟ್ಟಡ ನೆಲಸಮವಾಗುವ ಭೀತಿಯಿದೆ.
ಮಂಜೂರಾದ 50 ಲಕ್ಷ ರೂ. ಮಾಯ
ಗ್ರಂಥಾಲಯಕ್ಕೆ ನ.ಪಂ. ಬಳಿ ನಿವೇಶನ ಕಾದಿರಿಸಿದ್ದು, ಸರಕಾರವು ಸುಸಜಿತ ಕಟ್ಟಡಕ್ಕಾಗಿ 50 ಲಕ್ಷ ರೂ. ಮಂಜೂರುಗೊಳಿಸಿದ್ದು ಶೀಘ್ರ ಕಟ್ಟಡ ನಿರ್ಮಿಸಲಾಗುತ್ತದೆ ಎಂದು ಕಳೆದ 3 ವರ್ಷಗಳ ಹಿಂದೆ ಗ್ರಂಥಾಲಯ ಸಪ್ತಾಹ ಅಭಿಯಾನ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು ಭರವಸೆ ನೀಡಿದ್ದರು. ಆದರೆ ಮಂಜೂರುಗೊಂಡ 50 ಲಕ್ಷ ರೂ. ಎಲ್ಲಿ ವಿನಿಯೋಗವಾಗಿದೆ ಎಂಬುದೇ ಪ್ರಶ್ನೆಯಾಗಿದೆ.
ಶಾಸಕರ ಭರವಸೆ
ಗ್ರಂಥಾಲಯ ಕಟ್ಟಡಕ್ಕಾಗಿ ನಿವೇಶನ ನೀಡುವಂತೆ ಈಗಾಗಲೇ ಶಾಸಕರಲ್ಲಿ ಮನವಿ ಮಾಡಲಾಗಿದೆ. ನಿವೇಶನ ಗುರುತಿಸುವುದಾಗಿ ಭರವಸೆ ನೀಡಿದ್ದಾರೆ. ಬಳಿಕ ಅನುದಾನಕ್ಕೆ ಅಂದಾಜು ಪಟ್ಟಿ ಕಳುಹಿಸಲು ಅನುಕೂಲವಾಗಲಿದೆ. ಗ್ರಂಥಾಲಯ ದಿಂದ ಆದಾಯ ಇಲ್ಲದಿರುವುದರಿಂದ ಸರಕಾರಿ ಕಟ್ಟದಲ್ಲೂ ಸ್ಥಳಾವಕಾಶ ನೀಡಲು ಹಿಂಜರಿಯುತ್ತಿರುವುದು ಸಮಸ್ಯೆಯಾಗಿದೆ. ಪುಸ್ತಕ ರಕ್ಷಣೆಗೆ ಹೊಸ ಪಿಠೊಪಕರಣ ಒದಗಿಸಲಾಗುವುದು.
– ಮಮತಾ ರೈ ಪ್ರಭಾರ ಗ್ರಂಥಾಲಯ ಅಧಿಕಾರಿ, ಮಂಗಳೂರು
ಮಂಜೂರಿಗೆ ಪ್ರಯತ್ನ
ಓದುಗರ ಅನುಕೂಲಕ್ಕಾಗಿ ಹೊಸ
ಕಟ್ಟಡ ನಿರ್ಮಾಣ ಮಾಡಲು ಈಗಾಗಲೇ ಸಂಬಂಧಪಟ್ಟವರಿಗೆ ಪ್ರಸ್ತಾವನೆ ಕಳುಹಿಸಲಾಗಿದೆ. ಸಂಬಂಧಪಟ್ಟ ಸಚಿವರನ್ನು ಒತ್ತಾಯಿಸಿ ಅನುದಾನ ಹಾಗೂ ನಿವೇಶನ ಮಂಜೂರಿಗೆ ಪ್ರಯತ್ನಿಸಲಾಗುತ್ತಿದೆ.
– ಹರೀಶ್ ಪೂಂಜ ಶಾಸಕರು
- ಚೈತ್ರೇಶ್ ಇಳಂತಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kannappa Movie: ವಿಷ್ಣು ಮಂಚು ʼಕಣ್ಣಪ್ಪʼ ರಿಲೀಸ್‌ಗೆ ಡೇಟ್ ಫಿಕ್ಸ್
BGT 2024: ಪರ್ತ್ ನಲ್ಲಿ ಪಲ್ಟಿ ಹೊಡೆದ ಆಸೀಸ್: ಬುಮ್ರಾ ಪಡೆಗೆ ಮೊದಲ ಪಂದ್ಯದಲ್ಲಿ ಜಯ
IFFI 2024: ಅಜ್ಜನ ಸಿನಿಮಾಗಳು ಡಿಸೆಂಬರ್ ನಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆ: ರಣಬೀರ್ ಕಪೂರ್
ಕಡಬ, ಬೆಳ್ತಂಗಡಿ ಸೇರಿದಂತೆ ಹಲವೆಡೆ ಮಾದಕವಸ್ತು, ಅಕ್ರಮ ಮದ್ಯ ಮಾರಾಟ ವಿರುದ್ಧ ಕಾರ್ಯಾಚರಣೆ
IPL Mega Auction: ಮೊದಲ ದಿನದ ಹರಾಜಿನ ಬಳಿಕ ಎಲ್ಲಾ 10 ತಂಡಗಳು ಹೀಗಿವೆ ನೋಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.