ಬೆಳ್ತಂಗಡಿ ತಾ| ಕೆಎಸ್‌ಆರ್‌ಟಿಸಿ ಹೊಸ ಡಿಪೋಗೆ ಸಿಗುತ್ತಿಲ್ಲ ಜಾಗ
Team Udayavani, Jun 14, 2018, 1:00 PM IST
ಬೆಳ್ತಂಗಡಿ : ಮೂವತ್ತೈದು ವರ್ಷಗಳಷ್ಟು ಹಳೆಯ ಕಟ್ಟಡ, ಹಳೆಯದಾದ ಡೀಸೆಲ್ ತುಂಬಿಸುವ ಯಂತ್ರ. ವಾಹನ ಚಾಲಕರು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ. ಇದು ಕೆಎಸ್ ಆರ್‌ಟಿಸಿ ಧರ್ಮಸ್ಥಳ ಡಿಪೋದಲ್ಲಿರುವ ಅವ್ಯವಸ್ಥೆ. ಈ ಪರಿಸ್ಥಿತಿಯಿಂದ ರೋಸಿ ಹೋದ ಸಿಬಂದಿಯೊಬ್ಬರು ರೆಕಾರ್ಡ್ ಮಾಡಿ ಹಾಕಿರುವ ವಿಡಿಯೋ ಫೇಸ್‌ಬುಕ್, ವಾಟ್ಸಾಪ್‌ಗ್ಳಲ್ಲಿ ಭಾರೀ ಸದ್ದು ಮಾಡಿತ್ತು. ಆದರೆ ಡಿಪೋ ನಿರ್ವಹಣೆ ಸಮರ್ಪಕವಾಗಿ ನಡೆಯಲು ವಿಸ್ತ ರಣೆ ಕಾಮಗಾರಿ ಸಮರ್ಪಕವಾಗಿ ನಡೆಯ ಬೇಕಾದ ಆವಶ್ಯಕತೆಯಿದೆ.
ಬಸ್‌ನ ಕೆಲವು ಸಿಬಂದಿ ತಿಳಿಸುವಂತೆ ಡಿಪೋ ವಿಸ್ತರಣೆ ಕಾಮಗಾರಿ ವರ್ಷಗಳು ಉರುಳುತ್ತಿದ್ದರೂ ನಡೆಯುತ್ತಿಲ್ಲ. ಇದರಿಂದ ಸಮಸ್ಯೆಯಾಗಿದೆ. ಹೊಸ ಯಂತ್ರಗಳು, ಹೊಸ ಘಟಕ ಆರಂಭವಾದಲ್ಲಿ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂಬ ಮಾತು ಕೇಳಿ ಬಂದಿದೆ.
ಸಮರ್ಪಕ ವ್ಯವಸ್ಥೆ ಬೇಕಿದೆ
ಡಿಪೋದಲ್ಲಿ ಸೂಕ್ತ ಕ್ಯಾಂಟಿನ್ ವ್ಯವಸ್ಥೆ ಇಲ್ಲದೆ ಊಟ ಉಪಹಾರ, ಟೀ ಕುಡಿಯಲು ಇತರೆಡೆಗೆ ತೆರಳುವಂತಾಗಿದೆ ಎಂದು ಸಿಬಂದಿ ಅಳಲು ತೋಡಿಕೊಂಡಿದ್ದಾರೆ. ಡೀಸೆಲ್ ಹಾಕುವ ಯಂತ್ರದಿಂದ ಸಮಸ್ಯೆಯಾಗುತ್ತಿದ್ದು, ಸಂಜೆ ಕೆಲಸ ಮುಗಿಸಿ ಆಗಮಿಸಿ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿಯನ್ನೂ ತಿಳಿಸಿದ್ದಾರೆ. ಈ ಬಗ್ಗೆ ಅಧಿಕಾರಿಗಳಲ್ಲಿ ವಿಚಾರಿಸಿದಾಗ ಡಿಪೋ ವಿಸ್ತರಣೆ ಕಾಮಗಾರಿ ನಡೆಯುತ್ತಿದೆ. 1 ತಿಂಗಳಲ್ಲಿ ಸಿದ್ಧವಾಗಿ ಸೇವೆಗೆ ಲಭ್ಯವಾಗಲಿದೆ ಎಂಬ ಮಾಹಿತಿ ನೀಡಿದ್ದಾರೆ. ಆದ್ದರಿಂದ ಸಮರ್ಪಕ ವ್ಯವಸ್ಥೆ ಬೇಕಿದೆ.
ಬೇಕಿದೆ ಪರಿಹಾರ
ಮುಖ್ಯವಾಗಿ ಡಿಪೋ ಮುಖ್ಯ ದ್ವಾರದ ಮುಂದೆಯೇ ಕಸದ ರಾಶಿ ಕಂಡುಬರುತ್ತಿದೆ. ಕಸವನ್ನು ಸರಿಯಾಗಿ ವಿಲೇವಾರಿ ಮಾಡದೆ, ಡಿಪೋ ಮುಂಭಾಗದಲ್ಲಿ ಎಸೆಯಲಾಗುತ್ತಿದೆ. ರಾಶಿಯಾದ ಬಳಿಕ ಸುಡಲಾಗುತ್ತದೆ. ಸಮರ್ಪಕ ವಿಲೇವಾರಿಗೆ ಕ್ರಮ ಕೈಗೊಂಡಿಲ್ಲ ಎಂಬ ಮಾತುಗಳೂ ಕೇಳಿ ಬಂದಿವೆ ಆದರೆ ವಾರ ಕಳೆದರೂ ಸಮರ್ಪಕ ಕಸ ವಿಲೇವಾರಿಗೆ ಕ್ರಮ ಕೈಗೊಂಡಿಲ್ಲ.
ಸಮಸ್ಯೆ ಬಯಲು?
ಡಿಪೋದಲ್ಲಿ ಸಮರ್ಪಕ ವ್ಯವಸ್ಥೆಯಿಲ್ಲ. ಎಲ್ಲ ಸಮಸ್ಯೆಗಳ ನಡುವೆ ಹೊಂದಾಣಿಕೆ ಮಾಡಿಕೊಂಡು ಕಾಲ ಕಳೆಯಬೇಕಿದೆ. ಪ್ರಯಾಣಿಕರನ್ನು ಸುಕ್ಷಿತವಾಗಿ ಕರೆದೊಯ್ಯಬೇಕು. ಆದರೆ ಡಿಪೋದಲ್ಲಿ ಕನಿಷ್ಠ ಮೂಲ ಸೌಲಭ್ಯವೂ ಇಲ್ಲ ಎಂದು ಧರ್ಮಸ್ಥಳ ಡಿಪೋದ ಚಾಲಕರೊಬ್ಬರು ಮಾಡಿದ ವಿಡಿಯೋ ವೈರಲ್ ಆಗಿದ್ದು, ರಾಜ್ಯಮಟ್ಟದ ಅಧಿಕಾರಿಗಳು ಧರ್ಮಸ್ಥಳ ಡಿಪೋಗೆ ಆಗಮಿಸಿ ಪರಿಶೀಲಿಸಿದ್ದರು. ಡಿಪೋದಲ್ಲಿ ಬಸ್‌ಗಳಿಗೆ ಡೀಸೆಲ್ ಹಾಕಲು ತಡವಾಗುತ್ತಿದೆ. ಇದರಿಂದ ಚಾಲಕರು ನಿಲ್ಲಬೇಕಾಗಿದೆ. ಅನಾವಶ್ಯಕವಾಗಿ ಸಮಯ ಪೋಲಾಗುತ್ತಿದೆ. ಹೊಸ ಡೀಸೆಲ್ ಹಾಕುವ ಯಂತ್ರಗಳು ಬಂದಿದ್ದರೂ ಜೋಡಣೆ ಕಾರ್ಯ ಮುಗಿದಿಲ್ಲ. ಬಿಸಿಲು, ಮಳೆಗೆ ಯಂತ್ರಗಳು ತುಕ್ಕು ಹಿಡಿಯುತ್ತಿವೆ ಆದರೂ ಕ್ರಮ ಕೈಗೊಂಡಿಲ್ಲ. ಕ್ಷಣದಲ್ಲಿ ಮುಗಿಯುವ ಕಾರ್ಯಕ್ಕೆ ಗಂಟೆಗಟ್ಟಲೆ ಕಾಯಬೇಕಾಗಿದೆ. ಇದರಿಂದ ಮನೆಗೆ ತೆರಳುವುದೂ ತಡವಾಗುತ್ತಿದೆ ಎಂದು ವಿಡಿಯೋದಲ್ಲಿ ಚಾಲಕರು ತಿಳಿಸಿದ್ದರು. ಚಾಲಕರು ಹಾಗೂ ನಿರ್ವಾಹಕರು ಮುಖ ತೊಳೆಯಲು ಸಮರ್ಪಕ ನೀರಿನ ವ್ಯವಸ್ಥೆಯಿಲ್ಲ, ಬೇಸಿನ್‌ನಲ್ಲಿ ಜಿರಳೆಗಳು ತುಂಬಿ ಹೋಗಿವೆ. ನಿರ್ವಹಣೆಯಿಲ್ಲದೆ ಶೌಚಾಲಯ ಗಬ್ಬು ನಾರುತ್ತಿದೆ ಎಂದೂ ದೂರಲಾಗಿತ್ತು.
ಬಿಡುಗಡೆ ಮಾಡದೆ ಆಕ್ರೋಶ?
ಡಿಪೋದಿಂದ ಹಲವರಿಗೆ ವರ್ಗಾವಣೆ ಮಂಜೂರಾಗಿದೆ. ಆದರೆ ಸೂಕ್ತ ಪೂರಕ ಸಿಬಂದಿಯನ್ನು ನಿಯೋಜಿಸಿ, ವರ್ಗಾವಣೆಗೊಂಡವರನ್ನು ಬಿಡುಗಡೆ ಮಾಡಬೇಕಿದೆ. ಆದ್ದರಿಂದ ವಿಡಿಯೋ ಮಾಡಿರುವ ಸಿಬಂದಿಯೂ ಇಲ್ಲಸಲ್ಲದ ಆರೋಪ ಮಾಡಿದ್ದಾರೆ. 35 ವರ್ಷಗಳಷ್ಟು ಕಟ್ಟಡ ಹಳತಾಗಿದ್ದು, ಡೀಸೆಲ್ ಹಾಕುವ ಯಂತ್ರವೂ ಹಳತಾಗಿದೆ. ಆದ್ದರಿಂದ ನಿಧಾನಗತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಬಸ್‌ಗಳೂ ಎಲ್ಲವೂ ಜತೆಯಾಗಿ ಆಗಮಿಸುವುದರಿಂದ ಡೀಸೆಲ್ ಹಾಕಲು ತಡ ವಾಗುತ್ತಿದೆ. ತಿಂಗಳೊಳಗೆ ಡೀಸೆಲ್ ಯಂತ್ರ ಆಳವಡಿಸುವ ಕಾಮಗಾರಿ ಮುಗಿಯಲಿದೆ. ಟ್ಯಾಂಕ್‌ನ ಪರಿಶೀಲನೆ ಮುಗಿದಿದೆ. ಅಳವಡಿಕೆಯೊಂದೇ ಬಾಕಿ ಎಂದು ತಿಳಿಸಿದ್ದಾರೆ. ಇದಾದಲ್ಲಿಸಮಸ್ಯೆ ಬಗೆಹರಿಯಲಿದೆ. ಬಸ್ ಸ್ವಚ್ಛತೆಗೆ ಯಾವುದೇ ಕೊರತೆ ಇಲ್ಲ. ಸಿಬಂದಿ ಇದ್ದಾರೆ. ಅವರಿಗೆ ಪ್ರತಿ ಬಸ್‌ಗೆ 20 ರೂ. ನಂತೆ ಸ್ವಚ್ಛತೆಗೆ ಹಣವನ್ನೂ ನೀಡಲಾಗುತ್ತಿದೆ ಎಂದಿದ್ದಾರೆ ಡಿಪೋ ಮ್ಯಾನೇಜರ್ ಪಾಪಾ ನಾಯಕ್.
ಚಾಲಕನಿಗೆ ವಜಾ ಭೀತಿ?
ವಿಡಿಯೋ ಮಾಡಿದ ಚಾಲಕನಿಗೆ ವಜಾ ಭೀತಿ ಎದುರಾಗಿದೆ ಎಂಬ ಮಾತುಗಳೂ ಕೇಳಿಬಂದಿವೆ. ಸಂಸ್ಥೆ ವಿರುದ್ಧ ಮಾತನಾಡಿದ ವಿಚಾರವಾಗಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ ಎನ್ನಲಾಗಿದೆ.
ಬೇಕಿದೆ 5 ಎಕ್ರೆ ಜಾಗ
ಧರ್ಮಸ್ಥಳ ಡಿಪೋದಲ್ಲಿ 160ಕ್ಕೂ ಹೆಚ್ಚು ಬಸ್‌ಗಳು ಆಗಮಿಸುತ್ತಿರುವುದರಿಂದ ಹೊರೆ ಹೆಚ್ಚಾಗಿದೆ. ಕಡಿಮೆ ಮಾಡುವ ದೃಷ್ಟಿಯಿಂದ ಸುಳ್ಯ ಡಿಪೋಗೆ ಹಲವು ಬಸ್‌ಗಳನ್ನು ವರ್ಗಾಯಿಸಲಾಗಿದೆ. ಡಿಪೋ ಹಳತಾಗಿದ್ದು, ವಿಸ್ತರಣೆ ಕಾಮಗಾರಿಯೂ ನಡೆಯುತ್ತಿದೆ. ಬಿಪಿಸಿಎಲ್‌ಗೆ ಡೀಸೆಲ್ ಹಾಕಲು ನಿರ್ವಹಣ ಕಾಮಗಾರಿ ನೀಡಲಾಗಿದೆ. ಯಂತ್ರ ಅಳವಡಿಕೆ ನಡೆದಲ್ಲಿ ಸಮಸ್ಯೆ ಬಗೆಹರಿಯಲಿದೆ. ಹೊಸ ಡಿಪೋ ಮಾಡಲು ಸುಮಾರು 5 ಎಕ್ರೆ ಜಾಗವನ್ನು ಬೆಳ್ತಂಗಡಿ ತಾಲೂಕಿನ ವಿವಿಧೆಡೆ ಹುಡುಕಲಾಗುತ್ತಿದೆ. ಆದರೆ ಜಾಗದ ಕೊರತೆ ಎದುರಾಗಿದೆ. ಜಾಗ ಸಿಕ್ಕಲ್ಲಿ ಸುಸಜ್ಜಿತ ಡಿಪೋ ನಿರ್ಮಾಣ ಕಾರ್ಯ ನಡೆದು ಸಮಸ್ಯೆ ಪರಿಹಾರವಾಗಲಿದೆ ಎಂದು ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜ ಶಿರಾಲಿ ತಿಳಿಸಿದ್ದಾರೆ .
ತನಿಖೆ ನಡೆಯುತ್ತಿದೆ
ವಿಡಿಯೋ ಚಿತ್ರೀಕರಣ ಕುರಿತು ತನಿಖೆ ನಡೆಯುತ್ತಿದೆ. ಸಂಸ್ಥೆ ವಿರುದ್ಧವಾಗಿ ನಡೆದುಕೊಳ್ಳುವುದು ಸರಿಯಾದ ವಿಧಾನವಲ್ಲ. ಅಧಿಕಾರಿಗಳ ಗಮನಕ್ಕೆ ಸಮಸ್ಯೆ ತಂದಲ್ಲಿ ಪರಿಹಾರ ಕಂಡುಕೊಳ್ಳಬಹುದಿತ್ತು. ಜತೆಗೆ ಸಂಸ್ಥೆಯ ಒಳಗೆ ಅನುಮತಿ ಪಡೆಯದೆ ವಿಡಿಯೋ ಚಿತ್ರೀಕರಣ ಮಾಡಿರುವುದೂ ಸರಿಯಲ್ಲ. ತನಿಖೆ ಮುಗಿದ ಬಳಿಕ ಸಂಬಂಧಪಟ್ಟವರ ವಿರುದ್ಧ ಶಿಸ್ತುಕ್ರಮ ಜರಗಿಸಲಾಗುತ್ತದೆ.
- ನಾಗರಾಜ ಶಿರಾಲಿ
ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿ, ಕೆಎಸ್‌ಆರ್‌ಟಿಸಿ
ಹರ್ಷಿತ್ ಪಿಂಡಿವನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.