ಬೆಳ್ತಂಗಡಿ ಬರಪೀಡಿತ ಘೋಷಣೆಗೆ ತಾ.ಪಂ. ನಿರ್ಣಯ


Team Udayavani, Feb 24, 2017, 10:37 AM IST

zax.jpg

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕನ್ನು ಬರಪೀಡಿತ ತಾಲೂಕಾಗಿ ಘೋಷಣೆ ಮಾಡಬೇಕೆಂದು ಇಲ್ಲಿನ ತಾಲೂಕು ಪಂಚಾಯತ್‌ ಗುರುವಾರ ಸರ್ವಾನುಮತದ ನಿರ್ಣಯ ಮಾಡಿದೆ.

ದಿಡುಪೆಯಲ್ಲಿ ಕೃಷಿಕ ಕುಟುಂಬಗಳು ಗದ್ದೆಗೆ ನೀರಿಲ್ಲದೇ ಭತ್ತದ ಕೃಷಿಯನ್ನು ಸ್ವಯಂ ನಾಶ ಮಾಡುತ್ತಿರುವ ಕುರಿತು ಉದಯವಾಣಿ ಫೆ. 23ರಂದು ವರದಿ ಮಾಡಿತ್ತು. ಇದರ ಗಂಭೀರತೆ ಅರಿತ ತಾ.ಪಂ. ಸದಸ್ಯರಾದ ಗೋಪಿನಾಥ ನಾಯಕ್‌, ಜಯರಾಮ್‌, ಕೇಶವತಿ,ವಿಜಯ ಗೌಡ, ಶಶಿಧರ್‌, ಸುಧಾಕರ್‌, ಸೆಬಾಸ್ಟಿಯನ್‌, ಜಾಯೆಲ್‌, ನೆರಿಯ ಪಂಚಾಯತ್‌ ಅಧ್ಯಕ್ಷ ಮಹಮ್ಮದ್‌, ಮಾಲಾಡಿ ಪಂಚಾಯತ್‌ ಅಧ್ಯಕ್ಷ ಬೇಬಿ ಸುವರ್ಣ ಮೊದಲಾದವರು ನಿರ್ಣಯಕ್ಕೆ ಆಗ್ರಹಿಸಿದರು. 

ಪಶ್ಚಿಮಘಟ್ಟದ ತಪ್ಪಲಿನಲ್ಲಿಯೇ ಇಂತಹ ಸ್ಥಿತಿಯಾದರೆ ಇತರೆಡೆ ಹೇಗೆ ಇರಬಹುದು ಎಂದು ಸದಸ್ಯರು ಆತಂಕ ವ್ಯಕ್ತಪಡಿಸಿದರು. ತಹಶೀಲ್ದಾರ್‌ ತಿಪ್ಪೆಸ್ವಾಮಿ ಕೂಡ ನಿರ್ಣಯ ಮಾಡಿ ಸರಕಾರಕ್ಕೆ ಕಳುಹಿಸಿಕೊಡಬಹುದು ಎಂದು ಸಹಮತ ವ್ಯಕ್ತಪಡಿಸಿದರು. ಇದರಂತೆ ನಿರ್ಣಯ ಮಂಡಿಸಲಾಯಿತು.

ಪರಿಹಾರ ಭರವಸೆ
ನೀರಿಲ್ಲದೇ ದಿಡುಪೆಯಲ್ಲಿ ಭತ್ತದ ಬೆಳೆ ನಾಶ ಮಾಡುತ್ತಿರುವ ಕುರಿತು ಉದಯವಾಣಿ ವರದಿ ಗಮನಿಸಿದ್ದು, ಅವರಿಗೆ ಪರಿಹಾರ ಪಡೆಯಲು ಅವಕಾಶ ಇದೆ ಎಂದು ತಹಶೀಲ್ದಾರ್‌ ತಿಪ್ಪೆಸ್ವಾಮಿ ಉದಯವಾಣಿಗೆ ಪ್ರತಿಕ್ರಿಯಿಸಿದ್ದಾರೆ. ಬೆಳೆ ನಾಶ ಮಾಡಬೇಡಿ. ಬದಲಾಗಿ ಬೆಳೆ ಬಂದಿಲ್ಲ ಎಂದು ಕೃಷಿ ಇಲಾಖೆ ಗಮನಕ್ಕೆ ತಂದು ಅವರಿಂದ ಸೂಕ್ತ ಮೌಲ್ಯಮಾಪನ ಮಾಡಿಸಿ ಕಂದಾಯ ಇಲಾಖೆಗೆ ನೀಡಿದರೆ ಅದಕ್ಕೆ ಸರಕಾರದಿಂದ ಪರಿಹಾರಧನ ಒದಗಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಬರಪೀಡಿತ ತಾಲೂಕು ಎಂದು ಏಕಾಏಕಿ ಘೋಷಣೆ ಸಾಧ್ಯವಿಲ್ಲ. ಎಲ್ಲ ಪಂಚಾಯತ್‌ನವರು ನಿರ್ಣಯ ಮಾಡಿ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಕುಡಿಯುವ ನೀರಿನ ಎಂಜಿನಿಯರಿಂಗ್‌ ಇಲಾಖೆಯವರು ವರದಿ ಸಿದ್ಧಪಡಿಸಿ ಶಾಸಕರು, ಸಂಸದರ ಮೂಲಕ ಸರಕಾರಕ್ಕೆ ನೀಡಿದರೆ ಸರಕಾರ ಪರಿಶೀಲಿಸಬಹುದು ಎಂದು ತಹಶೀಲ್ದಾರ್‌ ಹೇಳಿದ್ದಾರೆ.

ಭತ್ತದ ಕೊರತೆ: ಈ ಮಧ್ಯೆ ರಾಜ್ಯದಲ್ಲಿ ಭತ್ತದ ಕೊರತೆ ಉಂಟಾಗಿದೆ. ಕೇರಳದ ಅಕ್ಕಿಮಿಲ್ಲಿನವರು ಒಡಿಶಾ ಹಾಗೂ ಗುಜರಾತ್‌ ಕಡೆಗೆ ಮುಖ ಮಾಡಿದ್ದರೆ ಕರ್ನಾಟಕದ ಅಕ್ಕಿಮಿಲ್ಲಿನವರು ಒಡಿಶಾ, ಉತ್ತರಪ್ರದೇಶ, ಮಧ್ಯಪ್ರದೇಶಕ್ಕೆ ಜನ ಕಳುಹಿಸಿ ಭತ್ತ ತರಿಸುತ್ತಿದ್ದಾರೆ ಎಂದು ರೈತಬಂಧು ಆಹಾರೋದ್ಯಮ್‌ ಸಂಸ್ಥೆ ಪಾಲುದಾರ ಶಿವಶಂಕರ ನಾಯಕ್‌ ಹೇಳಿದ್ದಾರೆ. ಈ ಮಧ್ಯೆ ಅಕ್ಕಿ ಬೆಲೆ ಗಗನಕ್ಕೆ ಏರುತ್ತಿದ್ದು, ಕರ್ನಾಟಕ ಹಾಗೂ ಮಧ್ಯಪ್ರದೇಶ ಸರಕಾರದ ಬಳಿ ಅಕ್ಕಿ, ಭತ್ತದ ದಾಸ್ತಾನೇ ಇಲ್ಲ ಎಂಬ ಆಘಾತಕಾರಿ ಮಾಹಿತಿ ಕೂಡ ಮೂಲಗಳಿಂದ ತಿಳಿದುಬಂದಿದೆ. ಹೀಗೊಂದು ವೇಳೆ ಆಗಿದ್ದಲ್ಲಿ ಅಕ್ಕಿಯ ದರದ ನಿಯಂತ್ರಣ ಕಾಳಸಂತೆಕೋರರಿಂದ ನಡೆಯುವ ಸಂಭವವಿದೆ. ಸರಕಾರದ ಬಳಿ ದಾಸ್ತಾನಿಲ್ಲದೇ ನಿಯಂತ್ರಣವೂ ಕಷ್ಟ.

ಬಂಗೇರ ಆಗ್ರಹ 
ಶಾಸಕ, ರಾಜ್ಯ ಸಣ್ಣ ಕೈಗಾರಿಕಾ ನಿಗಮ ಅಧ್ಯಕ್ಷ ಕೆ. ವಸಂತ ಬಂಗೇರ ಅವರು ಪ್ರತಿಕ್ರಿಯೆ ನೀಡಿದ್ದು, ಈಗಾಗಲೇ ಬೆಳ್ತಂಗಡಿಯನ್ನು ಬರಪೀಡಿತ ಘೋಷಣೆಗೆ ಪತ್ರ ಬರೆದಿದ್ದೇನೆ. ಸರಕಾರ ಸ್ಪಂದಿಸಿಲ್ಲ. ಈಗ ಪತ್ರಿಕಾ ವರದಿ ತುಣುಕು, ತಾ.ಪಂ. ನಿರ್ಣಯ ಸಹಿತ ಇನ್ನೊಮ್ಮೆ ಸರಕಾರಕ್ಕೆ ಪತ್ರ ಬರೆದು ಬರಪೀಡಿತ ಘೋಷಣೆಗೆ ಆಗ್ರಹಿಸುತ್ತೇನೆ. ರೈತರು ಆತಂಕಕ್ಕೆ ಒಳಗಾಗಬೇಡಿ. ಬೆಳೆ ನಾಶ ಮಾಡಬೇಡಿ. ತಹಶೀಲ್ದಾರ್‌ ಮೂಲಕ ಪರಿಹಾರ ಪಡೆಯಿರಿ ಎಂದಿದ್ದಾರೆ.

ಟಾಪ್ ನ್ಯೂಸ್

Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ

Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ

Junior Doctor: ಹಾಸ್ಟೆಲ್ ಗೆ ಕರೆದು ಕಿರಿಯ ವೈದ್ಯೆಯ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…

Junior Doctor: ಮಾತನಾಡಲು ಕರೆಸಿ ಕಿರಿಯ ವೈದ್ಯೆ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…

Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ

Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ

Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…

Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…

Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾವು: ಪ್ರಾಣಿಗಳಿಗೆ ಕ್ವಾರಂಟೈನ್‌

Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್‌

1

540 ಅಡಿ ಆಳದ ಬೋರ್​ವೆಲ್​ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?

Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ಮಧ್ಯಾಹ್ನ ದಿನಾಂಕ ನಿಗದಿ

Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಳಂತೂರಿನಲ್ಲಿ ಮನೆ ದೋಚಿದ ಪ್ರಕರಣ: ಶೀಘ್ರದಲ್ಲೇ ಆರೋಪಿಗಳ ಬಂಧನ?

ಬೋಳಂತೂರಿನಲ್ಲಿ ಮನೆ ದೋಚಿದ ಪ್ರಕರಣ: ಶೀಘ್ರದಲ್ಲೇ ಆರೋಪಿಗಳ ಬಂಧನ?

ಇಂದು ಉಪರಾಷ್ಟ್ರಪತಿ ಧನ್ಕರ್‌ ಧರ್ಮಸ್ಥಳಕ್ಕೆ

ಇಂದು ಉಪರಾಷ್ಟ್ರಪತಿ ಧನ್ಕರ್‌ ಧರ್ಮಸ್ಥಳಕ್ಕೆ

Belthangady ಶಾರ್ಟ್ ಸರ್ಕ್ಯೂಟ್: ಮನೆ ಬೆಂಕಿಗಾಹುತಿ

Belthangady ಶಾರ್ಟ್ ಸರ್ಕ್ಯೂಟ್: ಮನೆ ಬೆಂಕಿಗಾಹುತಿ

Uppinangady: ಬಸ್‌ ನಿಲ್ದಾಣದಲ್ಲಿ ಕಳವು

Uppinangady: ಬಸ್‌ ನಿಲ್ದಾಣದಲ್ಲಿ ಕಳವು

Punjalkatte: ವಿದ್ಯುತ್‌ ಶಾಕ್‌ನಿಂದ ಕೂಲಿ ಕಾರ್ಮಿಕ ಸಾವು

Punjalkatte: ವಿದ್ಯುತ್‌ ಶಾಕ್‌ನಿಂದ ಕೂಲಿ ಕಾರ್ಮಿಕ ಸಾವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ

Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ

Bengaluru: ಎಂಬಿಎ ವಿದ್ಯಾರ್ಥಿ 3ನೇ ಮಹಡಿಯಿಂದ ಬಿದ್ದು ಸಾವು

Bengaluru: ಎಂಬಿಎ ವಿದ್ಯಾರ್ಥಿ 3ನೇ ಮಹಡಿಯಿಂದ ಬಿದ್ದು ಸಾವು

Fraud Case: 3.25 ಕೋಟಿ ವಂಚನೆ ಕೇಸ್‌; ಐಶ್ವರ್ಯ ದಂಪತಿ ಮತ್ತೆ ಸೆರೆ

Fraud Case: 3.25 ಕೋಟಿ ವಂಚನೆ ಕೇಸ್‌; ಐಶ್ವರ್ಯ ದಂಪತಿ ಮತ್ತೆ ಸೆರೆ

Gas cylinder leakage: ಮನೆ ಛಿದ್ರ ಛಿದ್ರ, ಇಬ್ಬರಿಗೆ ಗಾಯ

Gas cylinder leakage: ಮನೆ ಛಿದ್ರ ಛಿದ್ರ, ಇಬ್ಬರಿಗೆ ಗಾಯ

Atul Subhash Case: ಪತ್ನಿ ಮೇಲಿನ ಕೇಸ್‌ ರದ್ದತಿಗೆ ನಿರಾಕರಣೆ

Atul Subhash Case: ಪತ್ನಿ ಮೇಲಿನ ಕೇಸ್‌ ರದ್ದತಿಗೆ ನಿರಾಕರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.