“ಸಿಬಂದಿ ಸಹಕಾರದಿಂದ ಚುನಾವಣೆ ಯಶಸ್ವಿ’
ಬೆಳ್ತಂಗಡಿ: ಮತಗಟ್ಟೆ ಸಿಬಂದಿಗೆ ತರಬೇತಿ
Team Udayavani, Apr 10, 2019, 6:00 AM IST
ಸಹಾಯಕ ಚುನಾವಣಾಧಿಕಾರಿ ಎಚ್.ಆರ್. ನಾಯಕ್ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಬೆಳ್ತಂಗಡಿ: ತರಬೇತಿಯಲ್ಲಿ ಪಾಲ್ಗೊಂಡ ಸಿಬಂದಿ ಮಾಹಿತಿ ಗ್ರಹಿಸುವುದರೊಂದಿಗೆ ಸಂಶಯವಿಲ್ಲದೆ ಕೆಲಸ ನಿರ್ವಹಿಸಿದಾಗ ಚುನಾವಣೆ ಯಶಸ್ವಿಯಾಗಲು ಸಾಧ್ಯ ಎಂದು ಸಹಾಯಕ ಚುನಾವಣಾಧಿಕಾರಿ ಎಚ್.ಆರ್. ನಾಯಕ್ ಹೇಳಿದರು.
ಲೋಕಸಭಾ ಚುನಾವಣೆ ಪ್ರಯುಕ್ತ ಮತಗಟ್ಟೆಯಲ್ಲಿ ಕಾರ್ಯ ನಿರ್ವಹಿಸುವ ಸಿಬಂದಿಗೆ ಕೇಂದ್ರ ಚುನಾವಣ ಆಯೋಗ ದಿಂದ ಮಂಗಳವಾರ ಉಜಿರೆ ಎಸ್. ಡಿ.ಎಂ. ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಂಡ ಎರಡನೇ ಹಂತದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಸಿಬಂದಿ ನಿರ್ವಹಿಸಬೇಕಾದ ಅಂಚೆ ಮತಪತ್ರ, ಮತದಾನದ ಅಂಕಿಅಂಶ, ಅಣಕು ಮತದಾನ, ಮತ ದಾಖಲೆ ಲೆಕ್ಕಪತ್ರದ ಮುಖ್ಯ ಅಂಶವನ್ನು ತಿಳಿಸಲಾಯಿತು.
ತಹಶೀಲ್ದಾರ್ ಗಣಪತಿ ಶಾಸ್ತ್ರಿ ಮಾತನಾಡಿ, ಚುನಾ ವಣೆಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬಂದಿ ತರಬೇತಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಮಯಕ್ಕೆ ಮುಂಚಿತವಾಗಿ ಮತಗಟ್ಟೆಯಲ್ಲಿ ಹಾಜರಿರಬೇಕು ಎಂದರು.
ಸಂಪನ್ಮೂಲ ವ್ಯಕ್ತಿಗಳಾದ ಶಿಕ್ಷಕ ಧರಣೇಂದ್ರ ಕೆ. ಜೈನ್ ಅವರು ಮತದಾನ ಪ್ರಕ್ರಿಯೆಗಳ ಅಧ್ಯಕ್ಷ ಅಧಿಕಾರಿ, ಪ್ರಥಮ ಮತಗಟ್ಟೆ ಅಧಿಕಾರಿಗಳ ಕರ್ತವ್ಯ, ಜವಾಬ್ದಾರಿ, ಪಾಲಿಸಬೇಕಾದ ನಿಯಮ ಗಳ ಕುರಿತು ಮಾಹಿತಿ ನೀಡಿದರು. ಅಜಿತ್ ಕುಮಾರ್ ಕೊಕ್ರಡಿ, ಮತ ದಾನ ಪೂರ್ವ ಕೈಗೊಳ್ಳಬೇಕಾದ ಕ್ರಮ ಗಳು, ಅಣಕು ಮತದಾನ, ಗಣಪತಿ ಭಟ್ ಕುಳಮರ್ವ ಅವರು ಅಂಚೆ ಮತಪತ್ರ, ಟೆಂಡರ್ಡ್ ಮತ,
ಇಡಿಸಿ ಪತ್ರ ವಿತರಣೆ
ಮತದಾನಕ್ಕೆ ನೇಮಕಗೊಂಡ ಅಧಿಕಾರಿಗಳು ಮತವನ್ನು ಚಲಾಯಿಸಲು, ಕೇಂದ್ರ ಚುನಾವಣ ಆಯೋಗದಿಂದ ನಿರ್ಧರಿಸಿದಂತೆ ಆಯಾ ಮತಗಟ್ಟೆಯಲ್ಲಿ ಮತ ಚಲಾಯಿಸಲು ಅವಕಾಶ ನೀಡುವ ಚುನಾವಣ ಕರ್ತವ್ಯ ಪ್ರಮಾಣ ಪತ್ರವನ್ನು ಸಹಾಯಕ ಚುನಾವಣಾಧಿಕಾರಿ ಎಚ್.ಆರ್. ನಾಯಕ್ ಮತಗಟ್ಟೆ ಅಧಿಕಾರಿಗಳಿಗೆ ಸಾಂಕೇತಿಕವಾಗಿ ವಿತರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.