ಬೆಂಜನಪದವು: ಎಸ್‌ಡಿಪಿಐ ಮುಖಂಡನ ಹತ್ಯೆ
Team Udayavani, Jun 22, 2017, 11:48 AM IST
ಬಂಟ್ವಾಳ: ಎಸ್‌ಡಿಪಿಐ ಅಮ್ಮುಂಜೆ ವಲಯ ಅಧ್ಯಕ್ಷ, ಕಲಾಯಿ ನಿವಾಸಿ, ವೃತ್ತಿಯಲ್ಲಿ ರಿಕ್ಷಾ ಚಾಲಕರಾಗಿರುವ ಮಹಮ್ಮದ್ ಅಶ್ರಫ್ (30) ಅವರನ್ನು ದುಷ್ಕರ್ಮಿಗಳು ತಲವಾರಿನಿಂದ ಕಡಿದು ಹತ್ಯೆಗೈದಿದ್ದಾರೆ. ಬೆಂಜನಪದವು ಕರಾವಳಿ ಸೈಟ್ ರಾಮನಗರ ಸಮೀಪ ಬುಧವಾರ ಬೆಳಗ್ಗೆ 11.30ರ ಸುಮಾರಿಗೆ ಕೃತ್ಯ ನಡೆದಿದೆ.
ಮಹಮ್ಮದ್ ಅಶ್ರಫ್ ಅವರು ತನ್ನ ರಿಕ್ಷಾ ದಲ್ಲಿ ಕುಳಿತಿದ್ದ ವೇಳೆ ಎರಡು ಬೈಕುಗಳಲ್ಲಿ ಬಂದ ದುಷ್ಕರ್ಮಿಗಳು ಅವರ ಮೇಲೆ ಏಕಾ ಏಕಿ ತಲವಾರಿನಿಂದ ಕೊಚ್ಚಿ ಹತ್ಯೆಗೈದು ಪರಾರಿಯಾದರು. ಮೃತರ ಸಂಬಂಧಿ ಇಮಿ¤ಯಾಜ್ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
ಮೃತರು ತಂದೆ ಶೇಕಬ್ಬ, ತಾಯಿ, ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಶೇಕಬ್ಬ ಅವರ 6 ಮಂದಿ ಗಂಡು ಮಕ್ಕಳಲ್ಲಿ ಅಶ್ರಫ್ ಎರಡನೆಯವರಾಗಿದ್ದಾರೆ.
ನಾಲ್ವರ ಕೃತ್ಯ
ಅಶ್ರಫ್ ಅವರು ಎಂದಿನಂತೆ ಸ್ಥಳೀಯ ಬೀಡಿ ಗುತ್ತಿಗೆ ದಾರ ಶೀನಪ್ಪ ಪೂಜಾರಿ ಅವರ ಜತೆಗೆ ಕಳ್ಳಿಗೆ ಗ್ರಾಮದ ವಿವಿಧ ಕಡೆಗಳಿಗೆ ತೆರಳಿ ಬೀಡಿ ಸಂಗ್ರಹ ಮಾಡಿಕೊಂಡು ಬಂದು ಗುತ್ತಿಗೆ ದಾರರನ್ನು ಬೆಂಜನಪದವು ರಾಮನಗರ ಸೈಟ್ ಬೀಡಿ ಬ್ರಾಂಚಿನಲ್ಲಿ ಇಳಿಸಿ ಸ್ವಲ್ಪ ಮುಂದೆ ರಿಕ್ಷಾ ನಿಲ್ಲಿಸಿ ಕುಳಿತಿದ್ದಾಗ ಎರಡು ಬೈಕ್‌ಗಳಲ್ಲಿ ಬಂದಿದ್ದ ನಾಲ್ವರು ದುಷ್ಕರ್ಮಿಗಳು ತಲವಾರಿನಿಂದ ಯದ್ವಾತದ್ವ ಕಡಿದರು. ಅಶ್ರಫ್ ಅವರ ಬೊಬ್ಬೆ ಕೇಳಿದ ಶೀನಪ್ಪ ಪೂಜಾರಿ, ಇಮಿ¤ಯಾಜ್ ಮತ್ತು ಇಕ್ಬಾಲ್ ಅವರು ಓಡಿ ಬಂದಾಗ ಆರೋಪಿ ಗಳು ಪರಾರಿಯಾದರು. ತತ್‌ಕ್ಷಣ ಗಾಯಾಳು ವನ್ನು ಆಸ್ಪತ್ರೆಗೆ ಸಾಗಿಸಿದರೂ ಅದಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು.
ಘಟನಾ ಸ್ಥಳದಲ್ಲಿ ರಕ್ತದ ಕೋಡಿ ಹರಿ ದಿದೆ. ಸ್ಥಳದಲ್ಲಿ ಒಂದು ಹೆಲ್ಮೆಟ್, ಒಂದು ತಲ ವಾರು ದೊರೆತಿದ್ದು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬೆಳಗ್ಗೆ ಶ್ರಮದಾನ ಮಾಡಿದ್ದರು
ಎಸ್‌ಡಿಪಿಐ ಅಮ್ಮುಂಜೆ ವಲಯ ಅಧ್ಯಕ್ಷ ರಾಗಿರುವ ಅಶ್ರಫ್ ಸಂಘಟನೆಯ ಸಂಸ್ಥಾಪನ ದಿನಾಚರಣೆಯ ಅಂಗವಾಗಿ ಕಲಾಯಿಯಲ್ಲಿ ಬೆಳಗ್ಗೆ ಧ್ವಜಾರೋಹಣ ಮಾಡಿ ಸ್ಥಳೀಯ ರಸ್ತೆಯ ಹೊಂಡಗಳನ್ನು ಮುಚ್ಚುವ ಶ್ರಮದಾನದ ಕೆಲಸ ನಿರ್ವಹಿಸಿ ಬಳಿಕ ಶೀನಪ್ಪ ಪೂಜಾರಿ ಜತೆಗೆ ಬೀಡಿ ಸಂಗ್ರಹಕ್ಕೆ ತೆರಳಿದ್ದರು.
ಜೂ. 22ರಂದು ಸಂಘಟನೆಯ ಕಚೇರಿ ಯನ್ನು ಅಮ್ಮುಂಜೆಯಲ್ಲಿ ತೆರೆಯುವ ಸಿದ್ಧತೆ ನಡೆದಿದ್ದು ಅದಕ್ಕೆ ಬೇಕಾದ ಪೈಂಟ್ ಡಬ್ಬಿಯು ರಿಕ್ಷಾದಲ್ಲಿತ್ತು. ಘಟನೆಯ ಸಂದರ್ಭ ಪೈಂಟ್ ಡಬ್ಬವನ್ನು ತೆಗೆದುಕೊಂಡು ಹೋಗಲೆಂದು ಇಮಿ¤ಯಾಜ್ ಮತ್ತು ಇಕ್ಬಾಲ್ ಬರುತ್ತಿದ್ದು, ಬೊಬ್ಬೆ ಕೇಳಿದ್ದರಿಂದ ಸ್ಥಳಕ್ಕೆ ಓಡಿಬಂದಿದ್ದರು ಎನ್ನಲಾಗಿದೆ.
ಅಘೋಷಿತ ಬಂದ್
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪರಿಸರ ದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಬಿ.ಸಿ. ರೋಡ್, ಕೈಕಂಬ, ಫರಂಗಿಪೇಟೆ, ಮೆಲ್ಕಾರು ಮೊದಲಾದೆಡೆ ಅಘೋಷಿತ ಬಂದ್ ವಾತಾವರಣ ಸೃಷ್ಟಿಯಾಯಿತು. ಹೆಚ್ಚು ವರಿ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ಬಿಗು ಪಹರೆ ಹಾಕ ಲಾಗಿದೆ. ಪೊಲೀಸರು ಸೂಕ್ಷ್ಮ ಪ್ರದೇಶಗಳಲ್ಲಿ ಗಸ್ತು ನಡೆಸುತ್ತಿದ್ದಾರೆ.
ಶಾಂತಿ ಸುವ್ಯವಸ್ಥೆ ಉದ್ದೇಶದಿಂದ ಕಲ್ಲಡ್ಕದಲ್ಲಿ ಪೊಲೀಸರು ಎಲ್ಲ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವಂತೆ ಸೂಚಿಸಿ ಜನಸಂಚಾರ ನಿಯಂತ್ರಿ ಸುವ ಕ್ರಮವನ್ನು ಕೈಗೊಂಡರು. ಸೂಕ್ಷ್ಮ ಪ್ರದೇಶ ಗಳಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋ ಜಿಸಲಾಗಿದೆ. ಫರಂಗಿಪೇಟೆ ಮತ್ತು ಕೈಕಂಬ ಹೆದ್ದಾರಿಯಲ್ಲಿ ಜನರು ಗುಂಪು ಸೇರುತ್ತಿದ್ದಂತೆ ಸ್ಥಳಕ್ಕೆ ಹೆಚ್ಚಿನ ಪೊಲೀಸ್ ಪಡೆಗಳು ಧಾವಿಸಿ ಜನರನ್ನು ಚದುರಿಸಿದರು.
ಸಂಚಾರ ಅಬಾಧಿತ
ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಯಲ್ಲಿ ವಾಹನ ಸಂಚಾರ ಅಬಾಧಿತ ವಾಗಿದ್ದು ಯಾವುದೇ ಅಹಿತಕರ ಘಟನೆ ನಡೆಯ ದಂತೆ ಪೊಲೀಸ್ ನಿಯೋಜಿಸಲಾಗಿದೆ. ಸರಕಾರಿ ಮತ್ತು ಖಾಸಗಿ ಬಸ್ ಸಂಚಾರ ಎಂದಿ ನಂತಿದೆ. ಹೆದ್ದಾರಿಯಲ್ಲಿ ಪೊಲೀಸ್ ಗಸ್ತು ವಾಹನ ಗಳು ನಿರಂತರ ಓಡಾಟ ನಡೆಸುತ್ತಿವೆ. ಬಾಡಿಗೆ ಆಟೋ ರಿಕ್ಷಾಗಳ ಚಾಲಕರೂ ಮನೆಗೆ ಮರಳಿದ್ದು ಬೆರಳೆಣಿಕೆಯ ರಿಕ್ಷಾಗಳಷ್ಟೇ ಸಂಚರಿಸುತ್ತಿದ್ದವು.
ಹತ್ಯೆಯ ಬಳಿಕ ಬೆಂಜನಪದವು ಪ್ರದೇಶದಲ್ಲಿ ಹಲವು ಮನೆಗಳಿಗೆ ಕಲ್ಲೆಸೆಯಲಾಗಿದೆ ಎಂಬ ಗಾಳಿಸುದ್ದಿ ಹಬ್ಬಿದ್ದು, ಪೊಲೀಸರು ಅದನ್ನು ಅಲ್ಲಗಳೆದಿದ್ದಾರೆ.
ವಿದ್ಯಾರ್ಥಿಗಳು ಮನೆಗೆ
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಮುಂಜಾಗ್ರತಾ ಕ್ರಮವಾಗಿ ಶಾಲಾ ಕಾಲೇಜುಗಳ ಮುಖ್ಯಸ್ಥರು ತರಗತಿ ಮೊಟಕುಗೊಳಿಸಿ ಮಕ್ಕಳನ್ನು ಮನೆಗೆ ತೆರಳುವಂತೆ ಸೂಚಿಸಿದರು.
ನಿಷೇಧಾಜ್ಞೆ ವಿಸ್ತರಣೆ
ಈಗಾಗಲೇ ನಾಲ್ಕು ತಾಲೂಕುಗಳಲ್ಲಿ ಜಾರಿ ಯಲ್ಲಿರುವ ನಿಷೇಧಾಜ್ಞೆ ಯನ್ನು ಮುನ್ನೆಚ್ಚರಿಕೆ ಕ್ರಮವಾಗಿ ಜೂ. 27ರ ತನಕ ವಿಸ್ತರಿಸಲಾಗಿದೆ ಎಂದು ಪೊಲೀಸರು ಈ ಪರಿಸರದಲ್ಲಿ ಮೈಕ್ ಮೂಲಕ ಘೋಷಿಸಿದ್ದಾರೆ.
ಹೆಚ್ಚುವರಿ ಭದ್ರತೆ: ಕಲ್ಲಡ್ಕಕ್ಕೆ ಅಣ್ಣಾಮಲೈ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾ ಡುವ ಹಿನ್ನೆ°ಲೆಯಲ್ಲಿ ಹೆಚ್ಚುವರಿ ಭದ್ರತೆ ಒದಗಿ ಸುವುದಕ್ಕೆ ದಕ್ಷ ಐಪಿಎಸ್ ಅಧಿಕಾರಿ ಹಾಗೂ ಚಿಕ್ಕಮಗಳೂರು ಎಸ್‌ಪಿ ಆಗಿರುವ ಅಣ್ಣಾಮಲೈ ಅವರನ್ನು ಬುಧವಾರ ಜಿಲ್ಲೆಗೆ ಕರೆಯಿಸಿಕೊಳ್ಳಲಾಗಿದೆ.
ಈ ವಿಷಯವನ್ನು “ಉದಯವಾಣಿ’ಗೆ ಖುದ್ದು ಖಚಿತಪಡಿಸಿರುವ ಅಣ್ಣಾಮಲೈ ಅವರು “ಹೌದು, ನಾನು ಈಗ ಬಂಟ್ವಾಳ ತಾಲೂಕಿಗೆ ಆಗಮಿಸಿದ್ದು, ಸೂಕ್ಷ್ಮ ಪ್ರದೇಶವಾದ ಕಲ್ಲಡ್ಕದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವುದಕ್ಕೆ ಇಲ್ಲಿರುವ ಪೊಲೀಸ್ ಅಧಿಕಾರಿಗಳಿಗೆ ನೆರವಾಗುತ್ತಿದ್ದೇನೆ. ನನ್ನ ಜತೆಗೆ ಚಿಕ್ಕಮಗಳೂರು ಜಿಲ್ಲೆಯಿಂದ ಹೆಚ್ಚುವರಿ ಭದ್ರತೆ ಒದಗಿಸುವುದಕ್ಕೆ ವಿಶೇಷ ಪೊಲೀಸರ ತಂಡವನ್ನು ಕೂಡ ಕರೆತರಲಾಗಿದೆ. ಆದರೆ ಎಷ್ಟು ದಿನ ಬಂದೋಬಸ್ತ್ ಕೈಗೊಳ್ಳಲು ಜಿಲ್ಲೆಯಲ್ಲಿ ಇರುತ್ತೇವೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ’ ಎಂದು ತಿಳಿಸಿದ್ದಾರೆ.
“ದಕ್ಷಿಣ ಕನ್ನಡ ಜಿಲ್ಲೆಗೆ ಈಗಾಗಲೇ ಹೊಸ ಪೊಲೀಸ್ ವರಿಷ್ಠಾಧಿಕಾರಿಗಳ ನೇಮಕವಾಗಿದೆ. ಅವರಿಗೆ ನಮ್ಮ ತಂಡವು ಎಲ್ಲ ರೀತಿಯ ಸಹಕಾರವನ್ನು ನೀಡಲಿದ್ದು, ಕಾನೂನು ಸುವ್ಯವಸ್ಥೆ ಹದಗೆಡದಂತೆ ನಾವೆಲ್ಲ ಎಚ್ಚರ ವಹಿಸುತ್ತಿದ್ದೇವೆ’ ಎಂದು ಅಣ್ಣಾಮಲೈ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bantwala: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಟೆಂಪೋ ಟ್ರಾವೆಲ್
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
Mangaluru: ಆನ್‌ಲೈನ್ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ
Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್ ಅಧ್ಯಕ್ಷನ ಬಂಧನ
Surathkal: ತಡಂಬೈಲ್‌ನಲ್ಲಿ ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ
MUST WATCH
ಹೊಸ ಸೇರ್ಪಡೆ
Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ
Bantwala: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಟೆಂಪೋ ಟ್ರಾವೆಲ್
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.