ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ ಬೆಥನಿ ವಿದ್ಯಾಸಂಸ್ಥೆಗಳು


Team Udayavani, Jun 8, 2018, 2:35 AM IST

bethany-institute-600.jpg

ನೆಲ್ಯಾಡಿ: ಬೆಳೆಯುತ್ತಿರುವ ಪಟ್ಟಣ ನೆಲ್ಯಾಡಿಯಲ್ಲಿ ಬಡ ವಿದ್ಯಾರ್ಥಿಗಳಿಗೆ ಆಂಗ್ಲ ಮಾಧ್ಯಮ ಶಿಕ್ಷಣ ಲಭಿಸಬೇಕೆಂಬ ಉದ್ದೇಶದಿಂದ 29 ವರ್ಷಗಳ ಹಿಂದೆಯೇ ಬೆಥನಿ ಧರ್ಮ ಸೇವಾ ಸಂಘದ ವತಿಯಿಂದ ಜ್ಞಾನೋದಯ ಬೆಥನಿ ಆಂಗ್ಲ ಮಾಧ್ಯಮ ಶಾಲೆ ಸ್ಥಾಪಿತವಾಯಿತು. ಈ ವಿದ್ಯಾ ಸಂಸ್ಥೆ ಈಗ ರಾಜ್ಯಮಟ್ಟದಲ್ಲಿ ರಾರಾಜಿಸುತ್ತಿದೆ.

ಜ್ಞಾನೋದಯ ಬೆಥನಿ ಪೂರ್ವ ಪ್ರಾಥಮಿಕ ಶಾಲೆ, ಜ್ಞಾನೋದಯ ಬೆಥನಿ ಆಂಗ್ಲಮಾಧ್ಯಮ ಪ್ರಾಥಮಿಕ ಶಾಲೆ, ಜ್ಞಾನೋದಯ ಬೆಥನಿ ಪ್ರೌಢಶಾಲೆ, ಜ್ಞಾನೋದಯ ಬೆಥನಿ ಪದವಿ ಪೂರ್ವ ಕಾಲೇಜು, ಸಾಪಿಯೇನ್‌ಶಿಯಾ ಬೆಥನಿ ಪದವಿ ಕಾಲೇಜು, ಬೆಥನಿ ಕೈಗಾರಿಕಾ ತರಬೇತಿ ಸಂಸ್ಥೆ – ಇವುಗಳ ಸಮೂಹವೇ ಬೆಥನಿ ವಿದ್ಯಾ ಸಂಸ್ಥೆಗಳು. ಬೆಥನಿ ಆಶ್ರಮದ ಧರ್ಮಗುರುಗಳ ಸಾರಥ್ಯದಲ್ಲಿ ನಿರಂತರ ಪ್ರಗತಿಯ ಪಥದಲ್ಲಿ ವಿದ್ಯಾಸಂಸ್ಥೆ ಸಾಗುತ್ತಿದೆ. ವಿದ್ಯಾರ್ಥಿಗಳ ಶೈಕ್ಷಣಿಕ, ಬೌದ್ಧಿಕ, ಶಾರೀರಿಕ, ಸಾಂಸ್ಕೃತಿಕ, ನೈತಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ಪೂರಕ ವ್ಯವಸ್ಥೆಗಳು ಇಲ್ಲಿವೆ.

ಪೂರ್ವ ಪ್ರಾಥಮಿಕ ಶಾಲೆ
ಎಳೆಯ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ 1988ರಲ್ಲಿ ಸ್ಥಾಪನೆಗೊಂಡಿದ್ದು, ಸದ್ಯ 400ಕ್ಕೂ ಅಧಿಕ ವಿದ್ಯಾರ್ಥಿಗಳು ಇಲ್ಲಿದ್ದಾರೆ. ಸೌಕರ್ಯ, ಸವಲತ್ತುಗಳು, ವರ್ಣರಂಜಿತ ಚಿತ್ರಗಳಿಂದ ಕೂಡಿದ ತರಗತಿಗಳು ವಿದ್ಯಾರ್ಥಿಗಳನ್ನು ಈ ವಿಭಾಗಕ್ಕೆ ಆಕರ್ಷಿಸುತ್ತಿವೆ.

ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲಾ ವಿಭಾಗ
ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳು ಆಧುನಿಕ ಜಗ‌ತ್ತಿನ ಅಗತ್ಯಕ್ಕೆ ಅನುಸಾರ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ದೆಸೆಯಲ್ಲಿ ಕಾರ್ಯೋನ್ಮುಖವಾಗಿವೆ. 1995ರಲ್ಲಿ ಪ್ರಾಥಮಿಕ ಶಾಲೆ ಪ್ರೌಢಶಾಲೆಯಾಗಿ ಭಡ್ತಿಗೊಂಡಿತು. 1998ರಿಂದ ಎಸೆಸೆಲ್ಸಿಯಲ್ಲಿ ಸತತವಾಗಿ ಶೇ. 100 ಫ‌ಲಿತಾಂಶ ದಾಖಲಿಸುತ್ತಿದೆ. ಪ್ರತಿಭಾ ಕಾರಂಜಿಯಲ್ಲಿ ಕ್ಲಸ್ಟರ್‌, ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಹಲವು ಪ್ರಶಸ್ತಿಗಳೊಂದಿಗೆ ಸಮಗ್ರ ಚಾಂಪಿಯನ್‌ ಪ್ರಶಸ್ತಿಯನ್ನು ನಿರಂತರವಾಗಿ ಗಳಿಸುತ್ತಿದೆ. ಕ್ರೀಡಾಕೂಟಗಳಲ್ಲೂ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಸಾಧನೆ ಮಾಡುತ್ತಿದ್ದಾರೆ.

ಪದವಿಪೂರ್ವ ವಿಭಾಗ
2005ರಲ್ಲಿ ಪದವಿಪೂರ್ವ ಕಾಲೇಜು ವಿಭಾಗದಲ್ಲಿ ಪಿಸಿಎಂಬಿ, ಪಿಸಿಎಂಎಸ್‌, ಪಿಸಿಎಂಸಿ, 2012ರಲ್ಲಿ ವಾಣಿಜ್ಯ ವಿಭಾಗದಲ್ಲಿ ಇಬಿಎಸಿ, ಇಬಿಎಎಸ್‌ ವಿಭಾಗಗಳು ಆರಂಭಗೊಂಡು ಶೇ. 100 ಫಲಿತಾಂಶವನ್ನು ದಾಖಲಿಸುತ್ತಿವೆ. ನೀಟ್‌ ಸ್ಪರ್ಧಾತ್ಮಕ ಪರೀಕ್ಷೆಗೆ ವಿದ್ಯಾರ್ಥಿಗಳಿಗೆ ತರಗತಿಗಳನ್ನು ನಡೆಸಿ ಸಿದ್ಧಗೊಳಿಸಲಾಗುತ್ತಿದೆ.

ಸಪಿಯೆನ್‌ಶಿಯಾ ಬೆಥನಿ ಪ್ರಥಮ ದರ್ಜೆ ಕಾಲೇಜು
ಎಂಟು ವರ್ಷಗಳಿಂದ ಉತ್ತಮ ಫಲಿತಾಂಶ ಪಡೆಯುತ್ತಿರುವ ಸಫಿಯನ್ಸಿಯಾ ಬೆಥನಿ ಪ್ರಥಮ ದರ್ಜೆ ಕಾಲೇಜು ಗ್ರಾಮೀಣ ವಿದ್ಯಾರ್ಥಿಗಳಿಗೆ ಆಶಾಕಿರಣವಾಗಿದೆ. ವಿದ್ಯಾರ್ಥಿಗಳ ಅಗತ್ಯವನ್ನು ಮನಗಂಡು ಆಡಳಿತ ಮಂಡಳಿ ವಿವಿಧ ಸಂಯೋಜನೆಗಳನ್ನು ಪರಿಚಯಿಸಿದೆ.

ಬೆಥನಿ ಐಟಿಐ
ವೃತ್ತಿಪರ ಶಿಕ್ಷಣದ ನೆಲೆಯಲ್ಲಿ 1995ರಲ್ಲಿ ಬೆಥನಿ ಧರ್ಮಸೇವಾ ಸಂಘದ ವತಿಯಿಂದ ಬೆಥನಿ ಕೈಗಾರಿಕಾ ತರಬೇತಿ ಸಂಸ್ಥೆ ಆರಂಭವಾಗಿದೆ. ಇಲ್ಲಿ ಕಲಿತ ವಿದ್ಯಾಥಿಗಳು ದೇಶ ವಿದೇಶಗಳಲ್ಲಿ ಪ್ರತಿಷ್ಠಿತ ಕಂಪೆನಿಗಳಲ್ಲಿ ಉದ್ಯೋಗ ಸಂಪಾದಿಸಿ ತಮ್ಮ ಬದುಕನ್ನು ಉಜ್ವಲಗೊಳಿಸುತ್ತಿದ್ದಾರೆ.

ಬೆಥನಿ ವಿದ್ಯಾ ಸಂಸ್ಥೆಗಳ ವಿಶೇಷತೆ
ಜಾತಿ, ಮತ, ಭಾಷೆ, ಬಡವ, ಬಲ್ಲಿದ ಎಂಬ ಭೇದವಿಲ್ಲದೆ ಸಮಾಜದ ಎಲ್ಲ ವಿದ್ಯಾರ್ಥಿಗಳು ಇಲ್ಲಿ ಜ್ಞಾನಾರ್ಜನೆ ಮಾಡುತ್ತಿದ್ದಾರೆ. ಎಲ್ಲ ವಿದ್ಯಾ ಸಂಸ್ಥೆಗಳು ಒಡಗೂಡಿ ರಾಷ್ಟ್ರೀಯ, ಧಾರ್ಮಿಕ ಮತ್ತು ಸ್ಥಳೀಯ ಹಬ್ಬಗಳನ್ನು ಆಚರಿಸಿ ವಿದ್ಯಾರ್ಥಿಗಳಲ್ಲಿ ಒಗ್ಗಟ್ಟು, ಸಾಮರಸ್ಯದ ಭಾವನೆಯನ್ನು ಮೂಡಿಸುತ್ತಿವೆ. ರಾಷ್ಟ್ರ ಮಟ್ಟದ ವಾಲಿಬಾಲ್‌ ಪಂದ್ಯಾಟ, ಪ್ರತಿ ವರ್ಷ ಅ. 2ರಂದು ‘ಕ್ಲೀನ್‌ ನೆಲ್ಯಾಡಿ’ ಕಾರ್ಯಕ್ರಮ ಆಯೋಜಿಸಿ, ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.

ವಿಶೇಷತೆಗಳು
ನುರಿತ ಉಪನ್ಯಾಸಕ ವರ್ಗ, ನೀಟ್‌ ತರಗತಿಗಳು, ವ್ಯಕ್ತಿತ್ವ ವಿಕಸನ ತರಬೇತಿಗಳು, ಸುಸಜ್ಜಿತ ವಿಜ್ಞಾನ, ಕಂಪ್ಯೂಟರ್‌ ಲ್ಯಾಬ್‌ ವ್ಯವಸ್ಥೆ, ಶೇ. 95ಕ್ಕೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳು, ವಿದ್ಯಾರ್ಥಿ – ವಿದ್ಯಾರ್ಥಿನಿಯರಿಗೆ ಪ್ರತ್ಯೇಕವಾದ ಉತ್ತಮ ಹಾಸ್ಟೆಲ್‌ ವ್ಯವಸ್ಥೆ, ವಿಶೇಷ ಕ್ರೀಡಾ ತರಬೇತಿ, ಸಂಗೀತ, ಸ್ಕೌಟ್‌, ಯೋಗ, ಕರಾಟೆ, ನೃತ್ಯ ಇತರ ಸಾಂಸ್ಕೃತಿಕ ಕಲೆಗಳಿಗೆ ಉತ್ತಮ ತರಬೇತಿ ಮತ್ತು ತರಗತಿಗಳು, ಶಾಲಾ ವಾಹನ ವ್ಯವಸ್ಥೆ, ಸುಸಜ್ಜಿತ ಆಟದ ಮೈದಾನ, ಕಾನ್ಫರೆನ್ಸ್‌ ಹಾಲ್‌, ಬ್ಯಾಂಕಿಂಗ್‌, ಐ.ಎ.ಎಸ್‌., ಕೆ.ಎ.ಎಸ್‌., ಇಂಗ್ಲಿಷ್‌ ಗ್ರಾಮರ್‌ ಸಂಬಂಧಿಸಿದ ವಿಶೇಷ ತರಗತಿಗಳು, ಕಡಿಮೆ ಕರ್ಚಿನಲ್ಲಿ ವಾಹನ ಚಾಲನ ತರಬೇತಿ, ಉದ್ಯೋಗಕ್ಕಾಗಿ ಸಂದರ್ಶನಕ್ಕೆ ಅವಕಾಶ, ಕಾರ್ಖಾನೆ ಸಂದರ್ಶನ.

ಟಾಪ್ ನ್ಯೂಸ್

Vijayendra (2)

BJP; ಬೇಗುದಿಗೆ ವರಿಷ್ಠರ ಸೂತ್ರ : ರಾಜ್ಯಾಧ್ಯಕ್ಷ ವಿಜಯೇಂದ್ರ ಬದಲಾವಣೆ ಇಲ್ಲ

Thavar chand gehlot

Karnataka Govt; ರಾಜ್ಯಪಾಲ ಅರ್ಕಾವತಿ ಬಾಣ :ಕಾಳಗ ಈಗ ಮತ್ತೊಂದು ಸುತ್ತಿಗೆ!

MDNL

Kasaragodu: ಎಂಡಿಎಂಎ ಬೆಂಗಳೂರಿನಿಂದ ಪೂರೈಕೆ: ಎಸ್‌ಪಿ ಶಿಲ್ಪಾ

1-qwewqwqe

World Book of Records; ಪ್ರಜಾಪ್ರಭುತ್ವ ಮಾನವ ಸರಪಳಿಗೆ ವಿಶ್ವದಾಖಲೆ ಗರಿ

20

J. B. Shruti Sagar: ಏಕಾಗ್ರತೆಗೆ ಭಂಗ ತರುವ ಏನನ್ನೂ  ಬಳಸಿದರೂ ಸಾಧನೆಗೆ ತೊಡಕೇ

BSYadiyurappa

Inquiry: ಗಂಗೇನಹಳ್ಳಿ ಡಿನೋಟಿಫಿಕೇಶನ್‌ ಪ್ರಕರಣ: ಲೋಕಾಯುಕ್ತದಿಂದ ಬಿಎಸ್‌ವೈ ವಿಚಾರಣೆ

CM-Mysore

Press Day: ಸುಳ್ಳು ಸುದ್ದಿಯಿಂದ ಸಮಾಜದ ನೆಮ್ಮದಿ ಹಾಳು: ಸಿಎಂ ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Aranthodu: ವಿದ್ಯಾರ್ಥಿಯ ಮರ್ಮಾಂಗ ಹಿಡಿದೆಳೆದು ಹಲ್ಲೆ

Aranthodu: ವಿದ್ಯಾರ್ಥಿಯ ಮರ್ಮಾಂಗ ಹಿಡಿದೆಳೆದು ಹಲ್ಲೆ

Fraud: ಕ್ರೆಡಿಟ್‌ ಕಾರ್ಡ್‌ ಆ್ಯಕ್ಟಿವೇಶನ್‌ ಹೆಸರಲ್ಲಿ ವಂಚನೆ

Fraud: ಕ್ರೆಡಿಟ್‌ ಕಾರ್ಡ್‌ ಆ್ಯಕ್ಟಿವೇಶನ್‌ ಹೆಸರಲ್ಲಿ ವಂಚನೆ

Kumapala

Legislative Council: ಅಭ್ಯರ್ಥಿ ಆಯ್ಕೆ ಬಗ್ಗೆ ರಾಜ್ಯ ನಾಯಕರಿಂದ ಅಭಿಪ್ರಾಯ ಸಂಗ್ರಹ: ಕುಂಪಲ

subharamaya-Swamiji

Thirupathi: ಲಡ್ಡು ಪ್ರಸಾದಕ್ಕೆ ಕಲಬೆರಕೆ ಪದಾರ್ಥಗಳ ಬಳಕೆ: ಸುಬ್ರಹ್ಮಣ್ಯ ಸ್ವಾಮೀಜಿ ಕಳವಳ

24

Belthangady: ಎಂಟು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Aranthodu: ವಿದ್ಯಾರ್ಥಿಯ ಮರ್ಮಾಂಗ ಹಿಡಿದೆಳೆದು ಹಲ್ಲೆ

Aranthodu: ವಿದ್ಯಾರ್ಥಿಯ ಮರ್ಮಾಂಗ ಹಿಡಿದೆಳೆದು ಹಲ್ಲೆ

Iceland: 8 ವರ್ಷ ಬಳಿಕ ಐಸ್‌ಲ್ಯಾಂಡ್‌ಗೆ ಹಿಮಕರಡಿ ಭೇಟಿ; ಗುಂಡಿಕ್ಕಿ ಹತ್ಯೆ

Iceland: 8 ವರ್ಷ ಬಳಿಕ ಐಸ್‌ಲ್ಯಾಂಡ್‌ಗೆ ಹಿಮಕರಡಿ ಭೇಟಿ; ಗುಂಡಿಕ್ಕಿ ಹತ್ಯೆ

IPL 2025: ಡೆಲ್ಲಿ ತಂಡದಲ್ಲೇ ಉಳಿಯಲಿದ್ದಾರೆ ಪಂತ್‌

IPL 2025: ಡೆಲ್ಲಿ ತಂಡದಲ್ಲೇ ಉಳಿಯಲಿದ್ದಾರೆ ಪಂತ್‌

Vijayendra (2)

BJP; ಬೇಗುದಿಗೆ ವರಿಷ್ಠರ ಸೂತ್ರ : ರಾಜ್ಯಾಧ್ಯಕ್ಷ ವಿಜಯೇಂದ್ರ ಬದಲಾವಣೆ ಇಲ್ಲ

Thavar chand gehlot

Karnataka Govt; ರಾಜ್ಯಪಾಲ ಅರ್ಕಾವತಿ ಬಾಣ :ಕಾಳಗ ಈಗ ಮತ್ತೊಂದು ಸುತ್ತಿಗೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.