ಕೃಷಿ ವಿಜ್ಞಾನದಲ್ಲಿ ಸಾಧನೆಗೈದ ಭಾಗ್ಯಶ್ರೀ
5 ಚಿನ್ನದ ಪದಕ ಪಡೆದ ಗ್ರಾಮೀಣ ಪ್ರದೇಶದ ಪ್ರತಿಭೆ
Team Udayavani, Apr 13, 2019, 6:00 AM IST
ಸುಳ್ಯಪದವು: ಸಾಧನೆಗೆ ಅಸಾಧ್ಯವಾಗುವುದು ಯಾವುದೂ ಇಲ್ಲ. ಸಾಧಿಸುವ ಛಲ ಇದ್ದರೆ ಏನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಒಂದು ಉದಾಹರಣೆ ಕನ್ನಡ ಮಾಧ್ಯಮದಲ್ಲಿ ಕಲಿತು ಚಿನ್ನದ ಪದಕ ಗಳಿಸಿದ ಗ್ರಾಮೀಣ ಪ್ರದೇಶದ ಪ್ರತಿಭೆ ಭಾಗ್ಯಶ್ರೀ ಕೆ.ಎಚ್.
ಕನ್ನಡ ಮಾಧ್ಯಮದಲ್ಲಿ ಎಸೆಸೆಲ್ಸಿ ಶಿಕ್ಷಣ ಪಡೆದ ಈ ವಿದ್ಯಾರ್ಥಿನಿಯ ಸಾಧನೆ ಶಿಕ್ಷಣಕ್ಕೆ ಮಾಧ್ಯಮ ಮುಖ್ಯವಲ್ಲ ಎಂದು ಸಾಧಿಸಿ ತೋರಿಸಿದ್ದಾಳೆ ಈ ಚಿನ್ನದ ಹುಡುಗಿ. ಕೇರಳ-ಕರ್ನಾಟಕ ಗಡಿಭಾಗದಲ್ಲಿರುವ ಪುತ್ತೂರು ತಾಲೂಕಿನ ಪಡುವನ್ನೂರು ಗ್ರಾಮದ ಸುಳ್ಯಪದವು ಶಬರಿನಗರದ ಕೇಶವ ಗೌಡ ಮತ್ತು ರತ್ನಾ ಕೆ. ಅವರ ಪುತ್ರಿ. ಬಾಲ್ಯದಿಂದಲೇ ಪಠ್ಯದ ಜತೆ ಪಠ್ಯೇತರ ಚಟುವಟಿಕೆಯಲ್ಲಿ ಹೆಚ್ಚು ಆಸಕ್ತಿ ವಹಿಸಿ ಪ್ರಾಥಮಿಕ ಶಿಕ್ಷಣವನ್ನು ಸುಳ್ಯಪದವು ಬಾಲಸುಬ್ರಹ್ಮಣ್ಯ ಹಿ.ಪ್ರಾ. ಶಾಲೆಯಲ್ಲಿ ಪೂರೈಸಿದ್ದರು.
ಟ್ಯೂಷನ್ ಪಡೆದಿಲ್ಲ
ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಸಾಧನೆಯನ್ನು ಮಾಡಿ ಎಲ್ಲರ ಮೆಚ್ಚುಗೆ ಪಾತ್ರರಾದರು. ಸರ್ವೋದಯ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ ಪಡೆದು ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ. 96.43 ಅಂಕ ಪಡೆದು ತಾಲೂಕಿಗೆ ಕನ್ನಡ ಮಾಧ್ಯಮದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡರು. ಪಿಯುಸಿ ಶಿಕ್ಷಣವನ್ನು ಪುತ್ತೂರು ಅಂಬಿಕಾ ವಿದ್ಯಾಲಯದಲ್ಲಿ ವಿಜ್ಞಾನ ವಿಷಯದಲ್ಲಿ ಶಿಕ್ಷಣ ಪಡೆದು ಶೇ. 96.33 ಅಂಕ ಪಡೆದುಕೊಂಡರು. ಗ್ರಾಮೀಣ ಪ್ರದೇಶದಿಂದ ನಗರ ಪ್ರದೇಶಕ್ಕೆ ದಿನಾಲೂ ಬಂದು ಹೋಗಿ ಯಾವುದೇ ಟ್ಯೂಶನ್ ಪಡೆಯದೇ ಅತೀ ಹೆಚ್ಚು ಅಂಕ ಪಡೆದಿರುವುದು ಆವರ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ.
ಬ್ಯಾಂಕ್‌ನಲ್ಲಿ ಉದ್ಯೋಗ
ಸಿಇಟಿ ಪರೀಕ್ಷೆಯಲ್ಲಿ ಹಾಸನದ ಕೃಷಿ ವಿದ್ಯಾಲಯಲ್ಲಿ ಸೀಟು ಪಡೆದು 4 ವರ್ಷದ ಸೆಮಿಸ್ಟರ್‌ನಲ್ಲಿ ಉತ್ತಮ ಅಂಕ ಪಡೆದುಕೊಂಡರು. ಮಾ. 25ರಂದು ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರ ಮತ್ತು ಕೃಷಿ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಐದು ಚಿನ್ನದ ಪದಕವನ್ನು ಪಡೆದುಕೊಂಡು ವಿಶೇಷ ಸಾಧನೆ ಮಾಡಿ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡರು. ಪರಿಶ್ರಮಕ್ಕೆ ತಕ್ಕ ಪ್ರತಿಫಲದಂತೆ ಬ್ಯಾಂಕ್ ಆಫ್ ಬರೋಡಾದಲ್ಲಿ ಉದ್ಯೋಗ ಪಡೆದುಕೊಂಡರು. ಅತೀ ಚಿಕ್ಕ ಪ್ರಾಯದಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿನಿ ಒಬ್ಬರು ಇಂತಂಹ ಸಾಧನೆ ಮಾಡಿದ್ದು ವಿಶಿಷ್ಟವೆನಿಸಿದೆ.
ಒತ್ತಡವಿಲ್ಲದ ಶಿಕ್ಷಣ
ಭಾಗ್ಯಶ್ರೀ ಪ್ರತಿಭೆಯನ್ನು ಎಳವೆಯಲ್ಲೇ ಗುರುತಿಸಿದ್ದೆವು. ಎಲ್ಲರಂತೆ ಶಿಕ್ಷಣವನ್ನು ಪಡೆದಿದ್ದಳು. ಯಾವುದೇ ಒತ್ತಡ ಹಾಕಲಿಲ್ಲ. ಪ್ರೋತ್ಸಾಹ, ಕಾಲೇಜಿನಲ್ಲಿ ಉತ್ತಮ ಶಿಕ್ಷಣ ಸಿಕ್ಕಿ, ಸಾಧನೆ ಮಾಡಿದ್ದು ಸಂತೋಷವಾಗಿದೆ.
ಕೇಶವ ಗೌಡ, ರತ್ನಾ ಕೆ. ಭಾಗ್ಯಶ್ರೀ ತಂದೆ, ತಾಯಿ
ರೈತರ ಸೇವೆಗೆ ಸಿದ್ಧ
ಪ್ರಾಥಮಿಕ ಶಿಕ್ಷಣ ಪಡೆಯುತ್ತಿರುವಾಗ ಮನೆ ಕಷ್ಟವನ್ನು ನೆನೆಸಿ ಏನಾದರೂ ಸಾಧನೆ ಮಾಡುವ ಛಲ ಇಟ್ಟುಕೊಂಡು ಎಸೆಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದುಕೊಂಡಿರುವುದರಿಂದ ಒಂದು ಗುರಿಯನ್ನು ಇಟ್ಟುಕೊಂಡು ಅಭ್ಯಾಸವನ್ನು ಮುಂದುವರಿಸಿದೆ. ಮನೆಯಲ್ಲಿ ಒಳ್ಳೆಯ ಬೆಂಬಲ, ಶಿಕ್ಷಕ ಮತ್ತು ಉಪನ್ಯಾಸಕರ ಪ್ರೋತ್ಸಾಹದಿಂದ ಗುರಿಯನ್ನು ತಲುಪಿದ್ದೇನೆ. ಕೃಷಿಯಲ್ಲಿ ಹೆಚ್ಚು ಅಸಕ್ತಿ ವಹಿಸಿ ರೈತರ ಸೇವೆಯನ್ನು ಮಾಡಲು ಸಿದ್ಧನಾಗಿದ್ದೇನೆ.
ಭಾಗ್ಯಶ್ರೀ ಕೆ.ಎಚ್. ಚಿನ್ನದ ಪದಕ ವಿಜೇತೆ
ಮಾಧವ ನಾಯಕ್ ಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!
SPB: ಎಸ್‌ಪಿಬಿ ಸ್ಮಾರಕ ನಿರ್ಮಾಣಕ್ಕಾಗಿ ಡಿ.8ರಂದು ಸಂಗೀತ ಕಛೇರಿ
Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.