Mangaluru ಭಗವಂತನನ್ನು ತಲುಪುವ ಸುಲಭ ಮಾರ್ಗ ಭಜನೆ: ಸ್ವಾಮಿ ಜಿತಕಾಮಾನಂದಜಿ
Team Udayavani, Jan 2, 2024, 11:59 PM IST
ಮಂಗಳೂರು: ಸರಳ ಸಾಹಿತ್ಯದ ಮೂಲಕ ದೇವರನ್ನು ಒಲಿಸಲು ಭಜನೆ ಉಪಯುಕ್ತ. ಭಗವಂತನನ್ನು ತಲುಪುವ ಸುಲಭ ಮಾರ್ಗ ಅದು. ಭಜನೆ ಇದ್ದಲ್ಲಿ ವಿಭಜನೆ ಇಲ್ಲ ಎಂಬ ಮಾತಿದೆ. ಸಮಾಜವನ್ನು ಒಗ್ಗೂಡಿಸಲು, ಆಧ್ಯಾತ್ಮಿಕ ಜಾಗೃತಿಗೆ ಭಜನೆ ಸಹಕಾರಿ ಎಂದು ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಹೇಳಿದರು.
ಮಂಗಳಾದೇವಿ ವೃತ್ತದಿಂದ ರಾಮ ಕೃಷ್ಣ ಮಠದ ತನಕ ಸೋಮವಾರ ಸಂಜೆ ಮಕ್ಕಳ ಕುಣಿತ ಭಜನೆಯ ಶೋಭಾ ಯಾತ್ರೆಯ ಬಳಿಕ ಮಠದಲ್ಲಿ ಜರಗಿದ “ಭಜನ್ ಸಂಧ್ಯಾ’ ಉದ್ಘಾಟನೆ ಸಮಾ ರಂಭದಲ್ಲಿ ಅವರು ಮಾತನಾಡಿ, ಸ್ವಾಮಿ ವಿವೇಕಾನಂದರು ಭಜನೆಯನ್ನು ಬಹಳ ಇಷ್ಟಪಡುತ್ತಿದ್ದರು, ಅಷ್ಟೇ ಅಲ್ಲ ಸ್ವತಃ ಸುಶ್ರಾವ್ಯವಾಗಿ ಹಾಡುತ್ತಿದ್ದರು ಎಂದರು.
ರಾಮಕೃಷ್ಣ ಮಠವು ಪ್ರತೀ ತಿಂಗಳ ಒಂದನೇ ಹಾಗೂ ಎರಡನೇ ರವಿವಾರ ಮಂಗಳೂರಿನ ವಿವಿಧ ಭಜನೆ ತಂಡಗಳನ್ನು ಮಠಕ್ಕೆ ಆಹ್ವಾನಿಸಿ “ಭಜನ್ ಸಂಧ್ಯಾ’ ಎಂಬ ವಿನೂತನ ಕಾರ್ಯ ಕ್ರಮವನ್ನು ನಡೆಸುತ್ತಿದೆ. ಇದು ಪರಿಸರ ದಲ್ಲಿ ಆಧ್ಯಾತ್ಮಿಕ ಜಾಗೃತಿ ಮೂಡಿಸುವ ಯತ್ನದ ಭಾಗವಾಗಿದೆ ಎಂದರು.
ಗಾಯಕ ವಿದ್ಯಾಭೂಷಣ ಅವರು “ಭಜನ್ ಸಂಧ್ಯಾ’ ನಡೆಸಿಕೊಟ್ಟರು. ಮುಖ್ಯ ಅತಿಥಿಗಳಾಗಿ ನಿಟ್ಟೆ ಡೀಮ್ಡ್
ವಿ.ವಿ. ಕುಲಾಧಿಪತಿ ಎನ್. ವಿನಯಹೆಗ್ಡೆ, ಕಟೀಲು ಕ್ಷೇತ್ರದ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ,
ಎಸ್.ಸಿ.ಎಸ್. ಆಸ್ಪತ್ರೆಯ ಚೇರ್ಮನ್ ಡಾ| ಜೀವರಾಜ್ ಸೊರಕೆ ಭಾಗವಹಿಸಿದ್ದರು. ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ಎಂಆರ್‌ಪಿಎಲ್ ನಿರ್ದೇಶಕ ಬಿ.ಎಚ್.ವಿ. ಪ್ರಸಾದ್, ಡಾ| ಗಣೇಶ್, ಮುಖಂಡರಾದ ಸಂಜಯ ಪ್ರಭು, ಸುನಿಲ್ ಆಚಾರ್ ಉಪಸ್ಥಿತರಿದ್ದರು.
ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ| ಗಣೇಶ್ ಕಾರ್ಣಿಕ್ ಸ್ವಾಗತಿಸಿ, ರಂಜನ್ ಬೆಳ್ಳರ್ಪಾಡಿ ವಂದಿಸಿದರು. ಅರುಣ್ ಉಳ್ಳಾಳ ನಿರೂಪಿಸಿದರು.ಆಕರ್ಷಕ ಕುಣಿತ ಭಜನೆ ಮಂಗಳಾದೇವಿ ವೃತ್ತದಿಂದ ಮಂಗಳೂರು ರಾಮಕೃಷ್ಣ ಮಠದ ತನಕ ಸೋಮವಾರ ಸಂಜೆ ಜರಗಿದ ಮಕ್ಕಳಆಕರ್ಷಕ ಕುಣಿತ ಭಜನೆಯ ಶೋಭಾಯಾತ್ರೆ ಪರಿಸರದಲ್ಲಿ ವಿಶಿಷ್ಟ ಆಧ್ಯಾತ್ಮಿಕಪರಿಸರವನ್ನು ನಿರ್ಮಿಸಿತು. 400ಕ್ಕೂ ಅಧಿಕ ಮಕ್ಕಳ ಸಹಿತ 800 ಮಂದಿ ಕುಣಿತ ಭಜನೆಯಲ್ಲಿ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್ ಬಾಟಲಿ ಸದ್ದು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.