ಭರತನಾಟ್ಯ ಪ್ರದರ್ಶನಗಳು ನಿರಂತರವಾಗಿರಲಿ

Team Udayavani, Apr 19, 2018, 3:52 PM IST

19-April-17.jpg

ನೃತ್ಯದ ಬಗೆಗಿನ ಒಲವಿನಿಂದಾಗಿ ಎಳವೆಯಲ್ಲೇ ನೃತ್ಯಭ್ಯಾಸದಲ್ಲಿ ತೊಡಗಿದವರು ಬೆಂಜನಪದವಿನ ಸುಮನಾ ಸುರೇಶ್‌ ಕಾರಂತ್‌. ಬಳಿಕ ವಿವಿಧೆಡೆ ನೃತ್ಯ ಕಾರ್ಯಕ್ರಮಗಳನ್ನು ನೀಡಿ ಹಲವು ಪ್ರಶಸ್ತಿ, ಪುರಸ್ಕಾರಗಳಿಗೂ ಪಾತ್ರರಾಗಿದ್ದಾರೆ. ಬಂಟ್ವಾಳ, ಕುಳಾಯಿ ಮೊದಲಾದೆಡೆ ಶ್ರೀ ದುರ್ಗಾ ನೃತ್ಯಾಂಜಲಿ ನೃತ್ಯ ಕೇಂದ್ರದ ಮೂಲಕ ಕಳೆದ ಹತ್ತು ವರ್ಷಗಳಿಂದ ನೂರಾರು ಮಕ್ಕಳಿಗೆ ನೃತ್ಯವನ್ನು ಕಲಿಸುತ್ತಿದ್ದಾರೆ.

ಶಾಸ್ತ್ರೀಯ ಮತ್ತು ಪಾಶ್ಚಾತ್ಯ ಕಲಾ ಪ್ರಕಾರಗಳ ಮಿಶ್ರಣ ಬೇಕೆ?
ಖಂಡಿತವಾಗಿಯೂ ಬೇಡ. ಜಗತ್ತಿನ ವಿವಿಧ ಮೂಲೆಗಳ ಜನರು ನಮ್ಮ ನೃತ್ಯ ಶೈಲಿಯತ್ತ ಮಾರು ಹೋಗುತ್ತಿದ್ದಾರೆ. ನಾವು ನಮ್ಮ ಸಂಸ್ಕೃತಿ, ಆಚಾರ ವಿಚಾರಗಳನ್ನು ಬದಿಗೊತ್ತಿ ಪಾಶ್ಚಾತ್ಯ ಕಲಾ ಪ್ರಕಾರಗಳನ್ನು ನಮ್ಮ ನೃತ್ಯದೊಂದಿಗೆ ಅಳವಡಿಸಿಕೊಳ್ಳುವುದು ಸರಿಯಲ್ಲ. ಶಾಸ್ತ್ರೀಯ ನೃತ್ಯಗಳನ್ನು ಅಭ್ಯಾಸ ಮಾಡಿ ಬೇರೆಯಾಗಿ ಪಾಶ್ಚತ್ಯ ಕಲೆಯನ್ನು ಕಲಿಯುವುದಕ್ಕೆ ಅಭ್ಯಂತರವಿಲ್ಲ.

ಶಾಸ್ತ್ರೀಯ ನಾಟ್ಯ ಶೈಲಿ ಪರಿಣಾಮಕಾರಿಯಾಗಲು ಏನು ಮಾಡಬೇಕು?
ಭರತನಾಟ್ಯ ಕಲಿತ ವ್ಯಕ್ತಿ ಕಲಿತದ್ದನ್ನು ಅಲ್ಲಿಯೇ ಬಿಡಬಾರದು. ನಿರಂತರವಾಗಿ ಪ್ರದರ್ಶನಗಳನ್ನು ನೀಡಬೇಕು. ಅದರೊಂದಿಗೆ ಇತರರಿಗೂ ನೃತ್ಯ ಕಲಿಸಿಕೊಡುವ ಪ್ರಯತ್ನ ಮಾಡಬೇಕು. ಇದರೊಂದಿಗೆ ನೃತ್ಯ ಶಿಕ್ಷಕರು ಮನೆ ಮನೆಗಳಿಗೆ ಭೇಟಿ ನೀಡಿ ಶಾಸ್ತ್ರೀಯ ನೃತ್ಯ ಪ್ರಕಾರಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು.

ನಾಟ್ಯದ ಬೆಳವಣಿಗೆಗೆ ಕಲಾವಿದನ ಕೊಡುಗೆ ಹೇಗಿರಬೇಕು?
ನೃತ್ಯವನ್ನು ಶ್ರದ್ಧೆಯಿಂದ ಕಲಿತ ಬಳಿಕ ಹೆಚ್ಚು ಪ್ರದರ್ಶನಗಳನ್ನು ನೀಡಬೇಕಾದ ಜವಾಬ್ದಾರಿ ಕಲಾವಿದನ ಮೇಲಿರುತ್ತ ದೆ. ಅವನು ಉತ್ತಮ ನೃತ್ಯ ಪ್ರದರ್ಶನಗಳನ್ನು ನೀಡುತ್ತಾ ಇನ್ನೂ ಹಲವು ಜನರಿಗೆ ನೃತ್ಯ ಅಭ್ಯಾಸ ಮಾಡಲು ಪ್ರೋತ್ಸಾಹ ನೀಡಿದರೆ ಮಾತ್ರ ನೃತ್ಯದ ಬೆಳವಣಿಗೆಯಾಗಲು ಸಾಧ್ಯ.

ಭರತನಾಟ್ಯದ ಬಗ್ಗೆ ಜನರ ಆಸಕ್ತಿ ಈಗ ಹೇಗಿದೆ?
ಪ್ರಸ್ತುತ ಶಾಸ್ತ್ರೀಯ ನೃತ್ಯಗಳ ಮೇಲಿನ ಪ್ರೀತಿ ಹೆಚ್ಚಾಗುತ್ತಿದೆ. ಹೀಗಾಗಿ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮನೆಗಳಲ್ಲಿ ನೃತ್ಯಾಭ್ಯಾಸ ಮಾಡುವ ಮಕ್ಕಳಿದ್ದಾರೆ ಎಂಬುದು ಖುಷಿಯ ವಿಚಾರ. ಕೆಲವು ಕಡೆ ನೃತ್ಯ ಅಭ್ಯಾಸ ಮಾಡಲು ಆಸಕ್ತಿ ಇರುವ ಮಕ್ಕಳಿರುತ್ತಾರೆ. ಅವರಿಗೆ ಹಣ ಪಾವತಿ ಮಾಡಲು ಕಷ್ಟವಾಗುತ್ತದೆ. ಅಂತಹ ಸಮಯದಲ್ಲಿ ನೃತ್ಯ ಗುರುಗಳು ಅವರ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ.

ಶಾಸ್ತ್ರೀಯ ನೃತ್ಯ ಬೆಳವಣಿಗೆಗೆ ಮಂಗಳೂರಿನ ಕೊಡುಗೆ ಏನು?
ಮಂಗಳೂರಿನ ಜನರು ಕಲೆ, ಸಂಸ್ಕೃತಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಕಾರ್ಯಕ್ರಮ ಆಯೋಜನೆಯಾದಾಗ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಪ್ರೋತ್ಸಾಹ ನೀಡುತ್ತಾರೆ. ನಗರದ ಪುರಭವನ ಕಲಾವಿದರಿಗೆ ಒಂದು ಉತ್ತಮ ವೇದಿಕೆಯನ್ನು ಒದಗಿಸುತ್ತಿದೆ. ಇದನ್ನು ಬಳಸಿಕೊಂಡು ಖ್ಯಾತಿಗಳಿಸಿದ ಅನೇಕ ಕಲಾವಿದರಿದ್ದಾರೆ.

ಭರತನಾಟ್ಯ ಕಲಿಯಲು ಬರುವವರಿಗೆ ನಿಮ್ಮ ಕಿವಿ ಮಾತು?
ಹೆತ್ತವರ ಒತ್ತಾಯದ ಮೇರೆಗೆ ನೃತ್ಯ ಕಲಿಯಲು ಬರುವುದು ಬೇಡ. ಒಂದು ನಿರ್ದಿಷ್ಟ ಗುರಿಯೊಂದಿಗೆ ನೃತ್ಯ ಅಭ್ಯಾಸ ಮಾಡಲು ಬರಬೇಕು. ಬಳಿಕ ಶ್ರದ್ಧೆಯಿಂದ ಕಲಿತು ನಮ್ಮ ಸಂಸ್ಕೃತಿಯನ್ನು ಬೆಳೆಸುವ ಕೆಲಸ ಮಾಡಬೇಕು.

ಪ್ರಜ್ಞಾ ಶೆಟ್ಟಿ

ಟಾಪ್ ನ್ಯೂಸ್

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

Shimoga; Deport Zameer Ahmed: ​​MLA Channabasappa

Shimoga; ಜಮೀರ್‌ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ

Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ

ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ

ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

7-r-ashok

Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್‌. ಅಶೋಕ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.