![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Jul 31, 2017, 8:55 AM IST
ಪುತ್ತೂರು (ನಿಡ³ಳ್ಳಿ): ಕೊಡಗು ಕಾಸರಗೋಡು ಹಾಗೂ ದ.ಕ. ಜಿಲ್ಲೆಯಲ್ಲಿನ ಭಾಲಾವಲೀಕಾರ್ ರಾಜಾಪುರ ಸಾರಸ್ವತ ಸಮಾಜದ ಜನಗಣತಿ ಮಾಹಿತಿ ಬಿಡುಗಡೆ ಸಮಾರಂಭವು ಕೇಂದ್ರೀಯ ಸಮಿತಿಯ ಸಂಚಾಲ ಕರಾದ ಎಸ್.ಆರ್. ಸತೀಶ್ಚಂದ್ರ ಅವರ ಅಧ್ಯಕ್ಷತೆಯಲ್ಲಿ ಪುತ್ತೂರು ದರ್ಬೆ ಶ್ರೀ ಸಚ್ಚಿದಾನಂದ ಸರಸ್ವತಿ ಸೇವಾ ಸದನದಲ್ಲಿ ಜು. 30ರಂದು ನಡೆಯಿತು.
ಬಂಟಕಲ್ಲು ರಾಜಾಪುರ ಸಾರಸ್ವತ ಸಂಘದ ನಿಕಟಪೂರ್ವ ಅಧ್ಯಕ್ಷ ಉಪೆಂದ್ರ ನಾಯಕ್ ಜನಗಣತಿ ಅಂಕಿ ಅಂಶಗಳನ್ನು ಬಿಡುಗಡೆಗೊಳಿಸಿ ಮಾತ ನಾಡಿ, ಉದಾಸೀನ ಪ್ರವೃತ್ತಿ ಬಿಟ್ಟು ನಮ್ಮತನವನ್ನು ಉಳಿಸಿ ಸಂವಹನವಾಗಿ ಸ್ವ ಭಾಷೆಯನ್ನೇ ಬಳಸಿ ಸಮಾಜದ ಅಭಿವೃದ್ಧಿಗೆ ನಾವೆಲ್ಲರೂ ಕಾರಣ ಕರ್ತರಾಗಬೇಕು ಎಂದರು.
ದ್ವಾದಶ ಉದ್ದೇಶಗಳು
ಸಮಿತಿಯನ್ನು ಆರ್ಥಿಕವಾಗಿ ಬಲ ಪಡಿಸುವುದು, ಕುಂಟಿಕಾನ ರಾಮ ಚಂದ್ರ ನಾಯಕ್ ಅವರ ಜನ್ಮಶತಾಬ್ದದ ಬಗ್ಗೆ ಸಾರಸ್ವತ ಸಮ್ಮೇಳನ ನಡೆಸುವುದು, “ವಿದ್ಯಾನಿಧಿ’ ವಿದ್ಯಾರ್ಥಿವೇತನದ ಬಗ್ಗೆ, ಸಾರಸ್ವತ ಸಂಪರ್ಕವಾಣಿ ಹಾಗೂ ಜನಗಣತಿಯ ಕೈಪಿಡಿ ರಚನೆ, ಜನಗಣತಿಯ ಖರ್ಚುವೆಚ್ಚ ಹಾಗೂ ಇನ್ನಿತರ ವಿಚಾರಗಳ ಬಗ್ಗೆ ಆರೋಗ್ಯಕರ ಚರ್ಚೆ-ವಿಮರ್ಶೆ ನಡೆದು ನಿರ್ಣಯಗಳನ್ನು ಕೈಗೊಳ್ಳಲಾಯಿತು. ವಿರಾಜಪೇಟೆ, ಸುಳ್ಯ, ಪುತ್ತೂರು, ಬೆಳ್ತಂಗಡಿ, ವಿಟ್ಲ, ಮೋಂತಿಮಾರು, ಪೈವಳಿಕೆ ಸಂಘಗಳ ಪದಾಧಿಕಾರಿಗಳು, ಪ್ರತಿನಿಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕೇಂದ್ರೀಯ ಸಮಿತಿಯ ಅಧ್ಯಕ್ಷರಾದ ಸುನಿಲ್ ಬೋರ್ಕರ್ ಮುಂಡಕೊಚ್ಚಿ ಸ್ವಾಗ ತಿಸಿ, ಗಣತಿಯ ವ್ಯವಸ್ಥಾಪಕ ಬಾಲಕೃಷ್ಣ ನಾಯಕ್ ತೆಂಕಿಲ ಅವರು ವಂದಿಸಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಹರಿಪ್ರಸಾದ ಪುಂಡಿಕಾಯಿ ಅವರು ಕಾರ್ಯಕ್ರಮ ನಿರೂಪಿಸಿದರು.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.