ಮಂಗಳೂರಿನಲ್ಲಿ ಮೂರು ದಿನಗಳ ಬೈಬಲ್ ಪ್ರದರ್ಶನಕ್ಕೆ ಚಾಲನೆ
Team Udayavani, Jan 27, 2023, 6:30 AM IST
ಮಂಗಳೂರು: ಮಂಗಳೂರು ಧರ್ಮಕ್ಷೇತ್ರದ ಬೈಬಲ್, ಸುವಾರ್ತ ಪ್ರಸಾರ, ಸಾಮಾಜಿಕ ಸಂಪರ್ಕ ಮತ್ತು ಕಿರುಕ್ರೆçಸ್ತ ಸಮುದಾಯದ ಆಯೋಗಗಳ ಸಹಭಾಗಿತ್ವದಲ್ಲಿ ಸಂತ ಅಂತೋನಿ ಆಶ್ರಮ, ಸಂತ ಜೋಸೆಫ್ ಸೆಮಿನರಿ, ಕಾಸ್ಸಿಯಾ, ಜಪ್ಪು ಮತ್ತು ವೆಲೆನ್ಸಿಯಾ ಚರ್ಚ್‌ಗಳು ಜಂಟಿಯಾಗಿ ನಗರದ ಜಪ್ಪು ಸಂತ ಅಂತೋನಿ ಆಶ್ರಮದಲ್ಲಿ ಮೂರು ದಿನಗಳವರೆಗೆ ಬೈಬಲ್ ಪ್ರದರ್ಶನಕ್ಕೆ ಗುರುವಾರ ಚಾಲನೆ ನೀಡಲಾಯಿತು.
ಮಂಗಳೂರು ಧರ್ಮಪ್ರಾಂತ್ಯದ ನಿವೃತ್ತ ಧರ್ಮಗುರು ಮತ್ತು ಇಂಗ್ಲಿಷ್ ಹೊಸ ಒಡಂಬಡಿಕೆಯನ್ನು ಕೊಂಕಣಿ ಭಾಷೆಗೆ ಭಾಷಾಂತರಿಸಿ ವಂ| ಡಾ| ವಿಲಿಯಂ ಬಬೋìಜಾ ಮಾತನಾಡಿ, “ಬೈಬಲ್ ಆಲಿಸಿ, ಬೈಬಲ್ ಓದಿ, ಬೈಬಲ್ ಅಧ್ಯಯನ ಮಾಡಿ, ಬೈಬಲ್‌ನಲ್ಲಿ ಪ್ರಾರ್ಥಿಸಿ ಮತ್ತು ಬೈಬಲ್ ಅನ್ನೇ ಜೀವಿಸಿ.’ ಸುಮಾರು 40 ವರ್ಷಗಳ ಹಿಂದೆ ಮಂಗಳೂರು ಬಂದರಿಗೆ ಬಂದ ಲೋಗೋಸ್ ಶಿಪ್‌ನಲ್ಲಿ ಸೆಟ್ ಮಾಡಿದ ಬೈಬಲ್ ಲೈಬ್ರೆರಿಯಲ್ಲಿ ಕೇಳಿದ ಈ ಸುಂದರವಾದ ಪದಗಳು ನೆನಪಿಗೆ ಬರುತ್ತವೆ. ಈ ಮಾತು ನಮ್ಮ ಜೀವನವನ್ನು ಸಮೃದ್ಧಗೊಳಿಸುತ್ತದೆ ಎಂದು ಹೇಳಿದರು.
ಸಹಾಯಕ ನಿರ್ದೇಶಕ ವಂ| ಲ್ಯಾರಿ ಪಿಂಟೋ ಮಾತನಾಡಿ, ಕಥೊಲಿಕ ಕ್ರೆçಸ್ತರ ಪೂಜಾವಿಧಿಯ ಕ್ಯಾಲೆಂಡರ್‌ನ ಮೂರನೇ ರವಿವಾರ-ಈ ವರ್ಷ ಜ.22 ರಂದು ಸಾರ್ವತ್ರಿಕವಾಗಿ ಆಚರಿಸಲಾದ ಬೈಬಲ್ ಭಾನುವಾರದ ಪ್ರಯುಕ್ತ ಹಾಗೂ ಸಂತ ಆಂತೋನಿ ಆಶ್ರಮದ 125 ನೇ ವಾರ್ಷಿಕೋತ್ಸವದ ಸ್ಮರಣಾರ್ಥವಾಗಿ ಈ ಪ್ರದರ್ಶನ ಆಯೋಜಿಸಲಾಗಿದೆ ಎಂದರು.
ವಂ| ಜೆ.ಬಿ. ಕ್ರಾಸ್ತ ಸ್ವಾಗತಿಸಿದರು. ಬೈಬಲ್ ಅನ್ನು ಕೊಂಕಣಿಗೆ ಭಾಷಾಂತರಿಸಲು ಶ್ರಮಿಸಿದ ವಂ| ಡಾ| ವಿಲಿಯಂ ಬಬೊìಜಾ ಅವರನ್ನು ಅಭಿನಂದಿಸಿ ಗೌರವಿಸಲಾಯಿತು.
ಬೆ„ಬಲ್ ಗ್ರಂಥವನ್ನು ವಿಶೇಷ ಗೌರವದೊಂದಿಗೆ ಪ್ರಾರ್ಥನಾ ಮಂದಿರದಿಂದ ಪ್ರದರ್ಶನ ಸಭಾಂಗಣದವರೆಗೆ ಮೆರವಣಿಗೆಯಲ್ಲಿ ತರಲಾಯಿತು. ವಂ| ಡಾ| ರೊನಾಲ್ಡ್ ಸೆರಾವೊ, ವಂ| ಡಾ| ವಿಲಿಯಂ ಬಬೋìಜಾ ಮತ್ತು ವಂ| ಜೆ.ಬಿ. ಕ್ರಾಸ್ತಾ ಅವರು ಬೈಬಲ್‌ಗೆ ಹಾರಾರ್ಪಣೆಗೈದು, ಧೂಪ ಹಾಕಿ ಗೌರವಿಸಿದರು. ಪ್ರದರ್ಶನದ ಆವರಣವನ್ನು ಪವಿತ್ರಜಲದಿಂದ ಆಶೀರ್ವದಿಸಿದರು. ಈ ಸಂದರ್ಭ ಪ್ರಾರ್ಥನೆಯ ಮೂಲಕ ಬೈಬಲ್‌ನ ಒಂದು ಭಾಗವನ್ನು ಓದಲಾಯಿತು.
ವಂ| ರೂಪೇಶ್, ಸ್ವಯಂಸೇವಕರಲ್ಲಿ ಒಬ್ಬರಾದ ಟ್ರೆಸ್ಸಿ ಡಿಸೋಜಾ ಅವರು ಮಾತನಾಡಿದರು.
ಜ.28ರವರೆಗೆ ಪ್ರದರ್ಶನ
ಪ್ರದರ್ಶನದಲ್ಲಿ ಬೈಬಲ್ ವ್ಯಾಖ್ಯಾನಗಳು, ಕೈಬರಹದ ಬೈಬಲ್‌ಗಳು, ದೊಡ್ಡಗಾತ್ರದ ಬೈಬಲ್, ಬೈಬಲ್ ಕಲೆ, ಬೈಬಲ್ ಚಿತ್ರಗಳು, ಪ್ರತಿಮಾಶಾಸ್ತ್ರ, ಭಾರತೀಯ ಕಲೆ ಮತ್ತು ಬೈಬಲ್ ಇತಿಹಾಸಗಳ ಪ್ರದರ್ಶನ ಸೇರಿದಂತೆ ಪ್ರಾದೇಶಿಕ ಮತ್ತು ಸ್ಥಳೀಯ ಭಾಷೆಗಳನ್ನು ಒಳಗೊಂಡ ಬೈಬಲ್ ಪ್ರತಿಗಳ ವಿಭಿನ್ನ ಅನುವಾದಗಳನ್ನು ಪ್ರದರ್ಶಿಸಲಾಯಿತು. ಪದ್ಯಗಳು, ಬೈಬಲ್ ವರ್ಣಚಿತ್ರಗಳು ಮತ್ತು ಪ್ರಮುಖ ಬೈಬಲ್ ಘಟನೆಗಳ ಪ್ರದರ್ಶನ ಇತ್ತು.
ಪ್ರದರ್ಶನವು ಜ.28ರವರೆಗೆ ಬೆಳಗ್ಗೆ 9 ರಿಂದ ಸಂಜೆ 7 ರವರೆಗೆ ಸಾರ್ವಜನಿಕರಿಗೆ ತೆರೆದಿರುತ್ತದೆ. ಪ್ರತಿದಿನ ಸಂಜೆ 4.30ರಿಂದ 7ರವರೆಗೆ ಬೈಬಲ್ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಜ.28ರಂದು ಸಂಜೆ 6 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ.
ಸಂತ ಅಂತೋನಿ ದತ್ತಿ ಸಂಸ್ಥೆಗಳ ಸಂಚಾಲಕ ಹಾಗೂ ವಸ್ತು ಪ್ರದರ್ಶನದ ಸಂಚಾಲಕ ವಂ| ಜೆ.ಬಿ.ಕ್ರಾಸ್ತಾ, ಜಪ್ಪುವಿನ ಸೇಂಟ್ ಜೋಸೆಫ್ ಸೆಮಿನರಿಯ ರೆಕ್ಟರ್ ವಂ| ಡಾ| ರೊನಾಲ್ಡ್ ಸೆರಾವೊ, ಸಣ್ಣ ಕ್ರೆçಸ್ತ ಸಮುದಾಯದ ಸಂಚಾಲಕ ವಂ| ಜೋಕಿಮ್ ಫೆನಾಂìಡಿಸ್, ಕೆನರಾ ಕಮ್ಯುನಿಕೇಷನ್ ಸೆಂಟರ್ ನಿರ್ದೇಶಕ ವಂ| ಅನಿಲ್ ಫೆನಾಂìಡಿಸ್, ಧರ್ಮಕ್ಷೆತ್ರದ ಸುವಾರ್ತ ಪ್ರಸಾರ ಆಯೋಗದ ಕಾರ್ಯದರ್ಶಿ ಮತ್ತು ಕಾರ್ಯಕ್ರಮದ ಸಂಯೋಜಕ ವಂ| ರೂಪೇಶ್ ತಾವ್ರೊ, ´ೋರ್‌ವಿಂಡ್ಸ್ ಜಾಹಿರಾತು ಸಂಸ್ಥೆಯ ನಿರ್ದೇಶಕ ಏಲಿಯಾಸ್ ಫೆನಾಂìಡಿಸ್, ಸಂತ ಅಂತೋನಿ ಆಶ್ರಮದ ಸಹಾಯಕ ನಿರ್ದೇಶಕ ವಂ| ಲ್ಯಾರಿ ಪಿಂಟೊ, ಮತ್ತು ಆರ್ಸುಲಾಯ್ನ ಸಿ| ಡೋರೀನ್ ಹಾಗೂ ಅನೇಕ ಧಾರ್ಮಿಕ ಸಹೋದರಿಯರು, ಯುವಜನರು ಮತ್ತು ಸಂತ ಅಂತೋನಿ ಆಶ್ರಮದ ನಿವಾಸಿಗಳು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ
ಕೋಳಿ ಅಂಕಕ್ಕೆ ಪೊಲೀಸ್ ದಾಳಿ: ಗುರಿಕಾರರಿಂದ ವ್ಯಾಘ್ರ ಚಾಮುಂಡಿ ದೈವಕ್ಕೆ ಮೊರೆ
National Mourning: ಮಂಗಳೂರಿನ ಬೀಚ್ ಉತ್ಸವ ಮುಂದೂಡಿಕೆ
Clown Kohli: ವಿರಾಟ್ ಕೊಹ್ಲಿಗೆ ಅವಮಾನ ಮಾಡಿದ ಆಸೀಸ್ ಮಾಧ್ಯಮಗಳು!
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.