ರಾತೋರಾತ್ರಿ ಅರ್ಧ ಮುಳುಗಿದ ದೇವಸ್ಥಾನ, ಮನೆ


Team Udayavani, Jun 23, 2018, 4:40 AM IST

flood-23-6.jpg

ಬಜಪೆ: ಇಲ್ಲಿನ ದೊಡ್ಡಿಕಟ್ಟದ ಶ್ರೀ ಸ್ವಯಂ ಭೂಲಿಂಗೇಶ್ವರ ದೇವಸ್ಥಾನದ ಬಳಿ MSEZ ಆವರಣ ಗೋಡೆ ಬಳಿ ತೋಡಿಗೆ ಅಡ್ಡವಾಗಿ ಮಣ್ಣು ಹಾಕಿ ನಿರ್ಮಿಸಿದ್ದ ಕಟ್ಟೆ ಮತ್ತು ರಸ್ತೆ ನೀರಿನ ಒತ್ತಡಕ್ಕೆ ಒಡೆದುಹೋದ ಘಟನೆ ಗುರುವಾರ ರಾತ್ರಿ ಸಂಭವಿಸಿದೆ. ಹಠಾತ್‌ ಪ್ರವಾಹದಿಂದ ಸಮೀಪದ ಶ್ರೀ ಸ್ವಯಂ ಭೂಲಿಂಗೇಶ್ವರ ದೇವಸ್ಥಾನ, ಮನೆ ಮಧ್ಯರಾತ್ರಿ ಅರ್ಧಮುಳುಗಿದ್ದು, ಮನೆ ಮಂದಿ ಅಪಾಯದಿಂದ ಪಾರಾಗಿದ್ದಾರೆ. ಜಮೀನು, ಕೃಷಿ ಹಾಗೂ ಸೊತ್ತುಗಳಿಗೆ ಅಪಾರ ಹಾನಿ ಉಂಟಾಗಿದೆ. ಪೆರ್ಮುದೆಯ ಮೆನ್ಗಲ್‌ ಪದವಿನಿಂದ ಹರಿಯುವ ದೊಡ್ಡ ತೋಡಿಗೆ ದೊಡ್ಡಿಕಟ್ಟದಲ್ಲಿ MSEZ ವ್ಯಾಪ್ತಿಯ ಒಳಗೆ ಗುಡ್ಡಗಳ ನಡುವೆ ಮಣ್ಣು ತುಂಬಿಸಿ ಅಣೆಕಟ್ಟೆ ನಿರ್ಮಿಸಲಾಗಿತ್ತು. ಹೆಚ್ಚಿನ ನೀರು ಹೊರಕ್ಕೆ ಹರಿಯಲು ಪೈಪು ಅಳವಡಿಸಲಾಗಿತ್ತಾದರೂ ಅವುಗಳಲ್ಲಿ ಹೂಳು ತುಂಬಿತ್ತು. ಇದರಿಂದಾಗಿ ಈ ಬಾರಿ ನೀರು ಸುಮಾರು 40 ಅಡಿಗಳಷ್ಟು ಸಂಗ್ರಹಗೊಂಡಿತ್ತು. ಅಪಾಯ ಇದೆ ಎಂದು MSEZ ಎಂಜಿನಿಯರ್‌ ಗೆ ಸ್ಥಳೀಯರು ಮುನ್ಸೂಚನೆ ನೀಡಿದ್ದರಾದರೂ ಅವರು ಆ ಬಗ್ಗೆ ಗಮನ ಹರಿಸಿರಲಿಲ್ಲ.


1 ಗಂಟೆ ಭೀತಿಯ ವಾತಾವರಣ

ಸುಮಾರು ಒಂದು ತಾಸು ನಾವು ತೀರಾ ಹೆದರಿದ್ದೆವು. ಮರ ಬಿದ್ದು 4-5 ವಿದ್ಯುತ್‌ ಕಂಬಗಳು ಬಿದ್ದಿದ್ದು, ವಿದ್ಯುತ್‌ ಇರಲಿಲ್ಲ. ಮೊಬೈಲ್‌ ಫೋನ್‌ ನೀರಲ್ಲಿ ಎಲ್ಲೋ ಹೋಗಿತ್ತು. ಎಲ್ಲೆಡೆಯಿಂದ ನೀರು ನುಗ್ಗಿದ್ದರಿಂದ ಏನೂ ಮಾಡಲಾರದ ಸ್ಥಿತಿ ಇತ್ತು. ಸುಮಾರು ಅರ್ಧ ಗಂಟೆಯ ಬಳಿಕ ನೀರು ಇಳಿಯಲಾರಂಭಿಸಿತು. ನಾವು ಮಂಚದ ಮೇಲೆ ನಿಂತಿದ್ದರೂ ಎದೆಮಟ್ಟ ನೀರು ಬಂದಿತ್ತು. ಬದುಕಿದ್ದೇ ಹೆಚ್ಚು ಎಂದು ಹಾನಿಗೀಡಾದ ಮನೆಯ ಮಾಲಕ ಮಾಧವ ಅಮೀನ್‌ ವಿವರಿಸಿದರು.

ನೀರು ನುಗ್ಗುವ ರಭಸಕ್ಕೆ ಹಲವು ಮರಗಳು ಧರಾಶಾಯಿಯಾಗಿದ್ದವು. ಅಡಿಕೆ ಮರ ಮನೆಗೆ ನುಗ್ಗುವ ಮಟ್ಟಕ್ಕೆ ಬಂದಿತ್ತು. ಮನೆಯ ಹೊರಾಂಗಣದಲ್ಲಿದ್ದ ಸೋಪಾ ಛಾವಣಿಗೆ ಸಿಲುಕಿದೆ. ಕುರ್ಚಿ, ಮೇಜು ಇನ್ನೂ ಪತ್ತೆಯಾಗಿಲ್ಲ. ದೈವಸ್ಥಾನದ ಕಾಣಿಕೆ ಡಬ್ಬಿ, ಕುರ್ಚಿ, ಮೇಜುಗಳು ಕೊಚ್ಚಿ ಹೋಗಿವೆ. ಬೈಕ್‌, ಸ್ಕೂಟರ್‌ಗಳು ಕೊಚ್ಚಿ ಹೋಗಿವೆ. ಜೀಪಿಗೆ ಮಣ್ಣು ತುಂಬಿದೆ. ಪಂಪ್‌ ಸೆಟ್‌ ಸ್ವಿಚ್‌ಬೋರ್ಡ್‌ ಅಷ್ಟೇ ಕಾಣಿಸುತ್ತಿದೆ.


ಜನಪ್ರತಿನಿಧಿ, ಅಧಿಕಾರಿಗಳ ಭೇಟಿ

ಸ್ಥಳಕ್ಕೆ ಶಾಸಕ ಉಮಾನಾಥ ಕೋಟ್ಯಾನ್‌ ಭೇಟಿ ನೀಡಿ ಪರಿಶೀಲಿಸಿದ್ದಾರೆ. MSEZ ಅಧಿಕಾರಿಗಳೊಂದಿಗೆ ಮಾತನಾಡಿ, ಮನೆ ಹಾಗೂ ದೇವಸ್ಥಾನಕ್ಕೆ ಸೂಕ್ತ ನಷ್ಟ ಪರಿಹಾರ ನೀಡುವಂತೆ ಸೂಚನೆ ನೀಡಿದ್ದಾರೆ. ಘಟನೆಯ ಬಗ್ಗೆ ಡಿಸಿಗೆ ವರದಿ ಸಲ್ಲಿಸಲಾಗುವುದು. ಈ ಸಮಸ್ಯೆಗೆ ಕಾರಣರಾದವರ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ವೈಶಾಲಿ ಹೇಳಿದ್ದಾರೆ. ಸ್ಥಳಕ್ಕೆ ಅಭಯಚಂದ್ರ, ಐವನ್‌ ಡಿ’ಸೋಜಾ, ತಹಶೀಲ್ದಾರರು, ಬಜಪೆ ಪೊಲೀಸ್‌ ಅಧಿಕಾರಿಗಳು, ಮೆಸ್ಕಾಂ ಅಧಿಕಾರಿಗಳು ಭೇಟಿ ನೀಡಿದ್ದಾರೆ.

ಭೂಕಂಪ, ಸುನಾಮಿ ಅನುಭವ
ಗುರುವಾರ ರಾತ್ರಿ ಸುಮಾರು 11.45ಕ್ಕೆ ಭೂಕಂಪವಾದ ಹಾಗೆ ಭಾರೀ ಸದ್ದು ಕೇಳಿಸಿತು. ನಾಯಿಗಳು ಒಮ್ಮೆಲೆ ಬೊಗಳಲಾರಂಭಿಸಿದವು. ಕಿಟಕಿಯ ಬಾಗಿಲು ತೆರೆದು ನೋಡಿದಾಗ ಸುನಾಮಿ ರೀತಿಯಲ್ಲಿ ನೀರು ಜಗಲಿ ಏರಿಯಾಗಿತ್ತು. ಕಟ್ಟೆ ಒಡೆದಿದೆ ಎಂದು ತತ್‌ ಕ್ಷಣ ಊಹಿಸಿದೆ. ಮಂಚದ ಮೇಲೆ ನಿಲ್ಲು ಎಂದು ಪತ್ನಿಗೆ ಸೂಚಿಸಿದೆ. ಮನೆ ಬಾಗಿಲು ನೀರಿನ ರಭಸಕ್ಕೆ ಒಡೆದು ಅಡುಗೆ ಮನೆಯ ಗ್ಯಾಸ್‌ ಸಿಲಿಂಡರ್‌, ರೆಫ್ರಿಜರೇಟರ್‌ ಎಲ್ಲವೂ ನೀರಿನೊಂದಿಗೆ ಮುಂದಿನ ಕೋಣೆಗೆ ಬಂದವು. ಮನೆ ಸಾಮಗ್ರಿ ಚೆಲ್ಲಾಪಿಲ್ಲಿಯಾಗಿ ತೇಲಿ ಹೋದವು. ನಾಲ್ಕೂ ಕಡೆಗಳಿಂದ ನೀರು ಒಳ ನುಗ್ಗಿತ್ತು.


ಮದುಮಗ ಸುನಿಲ್‌ ಬದುಕಿಸಿದ

ಮಾಹಿತಿ ತಿಳಿದ ಸಮೀಪದ ಮನೆಯ ಮದುಮಗ (ಗುರುವಾರ ಮದುವೆ ನಡೆದಿತ್ತು) ಸುನಿಲ್‌ ಸುವರ್ಣ ಕತ್ತಲಲ್ಲಿಯೇ ಧಾವಿಸಿ ಅರ್ಧ ಒಡೆದಿದ್ದ ಬಾಗಿಲನ್ನು ತೆರೆದು ಮಾಧವ ಅಮೀನ್‌ ಮತ್ತು ಸುಭಾಷಿಣಿಯವರನ್ನು ಪಾರು ಮಾಡಿದರು. ಅವರೊಂದಿಗೆ ಸ್ಥಳೀಯರಾದ ಗೋಪಾಲ ಸುವರ್ಣ, ಸುಧೀರ್‌ ಸಹಾಯ ಮಾಡಿದರು. 

ನಾಯಿ ಸಹಿತ ಗೂಡು ನಾಪತ್ತೆ
ಮನೆ ಎದುರು ನಾಯಿಗೆ ನಿರ್ಮಿಸಿದ್ದ ಗೂಡಿನೊಂದಿಗೆ ಎರಡು ನಾಯಿಗಳು ಕೂಡ ನಾಪತ್ತೆಯಾಗಿವೆ. ಒಟ್ಟು ಮೂರು ನಾಯಿಗಳಿದ್ದು, ಒಂದು ನಾಯಿ ಮಾತ್ರ ಅಲ್ಲಿಂದ ತಪ್ಪಿಸಿಕೊಂಡಿದೆ. 


ಒಂದೇ ಕರೆಗೆ ಫೋನ್‌ ಬಂದ್‌

ಸುನಾಮಿಯಂತೆ ನೀರು ನುಗ್ಗಿದಾಗ ಮನೆಯಲ್ಲಿದ್ದ ವಸ್ತುಗಳೆಲ್ಲ ಕೊಚ್ಚಿಕೊಂಡು ಹೋದವು. ಪತ್ನಿಯ ಫೋನ್‌ ಕೂಡ ನೀರಲ್ಲಿ ಬಿದ್ದಿತ್ತು. ಕೂಡಲೇ ಅದನ್ನು ತೆಗೆದು ಬೆಂಗಳೂರಿನಲ್ಲಿದ್ದ ಮಗನಿಗೆ ಮಾಹಿತಿ ನೀಡಿದೆವು. ಅಷ್ಟರಲ್ಲಿ ಅದೂ ಬಂದ್‌ ಆಯಿತು. ಇದರಿಂದಾಗಿ ಹೊರ ಜಗತ್ತಿನ ಸಂಪರ್ಕವೇ ಕಡಿದು ಹೋಯಿತು. ಮಗ ಬಳಿಕ ಸುನಿಲ್‌ ನನ್ನು ಸಂಪರ್ಕಿಸಿ ಕೂಡಲೇ ಧಾವಿಸುವಂತೆ ವಿನಂತಿಸಿದ. ಆ ಬಳಿಕ ಸುನಿಲ್‌ ಬಂದು ಬಾಗಿಲು ಒಡೆದ ಎಂದು ಮಾಧವ ತಿಳಿಸಿದರು.

ಗದ್ದೆಯಲ್ಲಿ ಹುದುಗಿದ ವಸ್ತುಗಳು
ಮೇಲಿನಿಂದ ಬಂದ ನೀರು ಮನೆ, ದೇವಸ್ಥಾನಕ್ಕೆ ನುಗ್ಗಿದ ಬಳಿಕ ಆವರಣ ಗೋಡೆಯನ್ನು ಭೇದಿಸಿ ಕೆಳಗಿನ ಸಾಲಿನಲ್ಲಿರುವ ಬೈಲು ಗದ್ದೆಗಳಿಗೆ ನುಗ್ಗಿದೆ. ಮನೆಯಲ್ಲಿದ್ದ ವಸ್ತುಗಳೆಲ್ಲ ಗದ್ದೆಗೆ ಹೋಗಿ ಕೆಸರಿನಲ್ಲಿ ಹೂತು ಹೋಗಿವೆ. ಅವುಗಳ ಹುಡುಕಾಟ ಇನ್ನಷ್ಟೇ ಆಗಬೇಕಿದೆ.

ಸೂಕ್ತ ಪರಿಹಾರದ ಭರವಸೆ
ದೊಡ್ಡಿಕಟ್ಟದಲ್ಲಿ ಸಂಭವಿಸಿರುವ ಅನಾಹುತದ ಕುರಿತಂತೆ ಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಲಾಗಿದೆ. ಘಟನೆಯಿಂದ ಹಾನಿ ಸಂಭವಿಸಿದ ಕಡೆಗೆ ಸೂಕ್ತ ಪರಿಹಾರ ನೀಡಲಾಗುವುದು. ಈ ಬಗ್ಗೆ ಪೂರಕ ಕ್ರಮಗಳನ್ನು ಸಂಸ್ಥೆಯ ವತಿಯಿಂದ ಶೀಘ್ರದಲ್ಲಿ ಕೈಗೊಳ್ಳಲಾಗುವುದು. ಅಲ್ಲಿನ ಮನೆ, ದೇವಸ್ಥಾನ ಈ ಮೊದಲು ಹೇಗಿತ್ತೋ ಅದೇರೀತಿ ಮರುವ್ಯವಸ್ಥೆ ಮಾಡಿಕೊಡಲಾಗುವುದು ಎಂದು MSEZನ‌ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಟಾಪ್ ನ್ಯೂಸ್

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

vikr

Naxal: ಸರ್ಕಾರಿ ಬಸ್‌ ಅಡ್ಡ ಹಾಕಿ ಬೆಂಕಿ ಹಚ್ಚಿ ಕರಪತ್ರ ಹಂಚಿದ್ದ ವಿಕ್ರಂಗೌಡ ಮತ್ತು ತಂಡ!

Bar-Associatin

Wine Merchants: ನಾಳೆಯ ಮದ್ಯ ಮಾರಾಟ ಬಂದ್‌ ನಿರ್ಧಾರ ವಾಪಸ್‌ ಪಡೆದ ಅಸೋಸಿಯೇಷನ್‌

vital

Vitla: ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು

IFFI Goa 2024: ಕೋಟ ಫ್ಯಾಕ್ಟರಿಯಿಂದ ಬೊಮಾನ್‌ ಇರಾನಿವರೆಗೆ

IFFI Goa 2024: ಕೋಟ ಫ್ಯಾಕ್ಟರಿಯಿಂದ ಬೊಮಾನ್‌ ಇರಾನಿವರೆಗೆ

Naxal: ನ.17 ಈದು ಎನ್‌ಕೌಂಟರ್- ನ.18 ಕಬ್ಬಿನಾಲೆ ಶೂಟೌಟ್:‌ 21 ವರ್ಷದ ಹಿಂದೆ ನಡೆದಿದ್ದೇನು?

Naxal: ನ.17 ಈದು ಎನ್‌ಕೌಂಟರ್- ನ.18 ಕಬ್ಬಿನಾಲೆ ಶೂಟೌಟ್:‌ 21 ವರ್ಷದ ಹಿಂದೆ ನಡೆದಿದ್ದೇನು?

Maharastra: ಚುನಾವಣೆಗೂ ಮೊದಲೇ ಬಿಜೆಪಿ ನಾಯಕನ ವಿರುದ್ಧ ಹಣ ಹಂಚಿದ ಆರೋಪ

Maharastra: ಚುನಾವಣೆಗೂ ಮೊದಲೇ ಬಿಜೆಪಿ ನಾಯಕನ ವಿರುದ್ಧ ಹಣ ಹಂಚಿದ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10

Gujjar Kere: ಕೆರೆ ಪರಿಸರದ ರಕ್ಷಣೆಗೆ ಆದ್ಯತೆ ಅಗತ್ಯ; ತಹಶೀಲ್ದಾರ್‌ಗೆ ಮರು ಮನವಿ

9

Mangaluru: ಬೊಂದೇಲ್‌-ಕಾವೂರು ರಸ್ತೆಯಲ್ಲಿಲ್ಲ ಫುಟ್‌ಪಾತ್‌

5

Ullal: ನ್ಯೂಪಡ್ಪುವಿನಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಉದ್ಘಾಟನೆ

4

Mangaluru: ಪಿಲಿಕುಳದಲ್ಲಿ ಚಿಟ್ಟೆಪಾರ್ಕ್‌; ಪ್ರವಾಸಿಗರಿಗೆ ಹೊಸ ಆಕರ್ಷಣೆ

9-mng

Mangaluru: ಕಾರು ಢಿಕ್ಕಿಯಾಗಿ ಮಹಿಳೆ ಸಾವು

MUST WATCH

udayavani youtube

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

ಹೊಸ ಸೇರ್ಪಡೆ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Mahaveera Hanuma: ಆಲ್ಬಂನಲ್ಲಿ ಹನುಮ ಗಾನ

Mahaveera Hanuma: ಆಲ್ಬಂನಲ್ಲಿ ಹನುಮ ಗಾನ

Tribanadhari Barbarik: ತ್ರಿಬಾಣಧಾರಿ ಬಾರ್ಬರಿಕದಲ್ಲಿ ವಸಿಷ್ಠ

Tribanadhari Barbarik: ತ್ರಿಬಾಣಧಾರಿ ಬಾರ್ಬರಿಕದಲ್ಲಿ ವಸಿಷ್ಠ

vikr

Naxal: ಸರ್ಕಾರಿ ಬಸ್‌ ಅಡ್ಡ ಹಾಕಿ ಬೆಂಕಿ ಹಚ್ಚಿ ಕರಪತ್ರ ಹಂಚಿದ್ದ ವಿಕ್ರಂಗೌಡ ಮತ್ತು ತಂಡ!

Bar-Associatin

Wine Merchants: ನಾಳೆಯ ಮದ್ಯ ಮಾರಾಟ ಬಂದ್‌ ನಿರ್ಧಾರ ವಾಪಸ್‌ ಪಡೆದ ಅಸೋಸಿಯೇಷನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.