ಬಿಜೈ: ಮಕ್ಕಳಿಬ್ಬರಿಗೆ ಎಚ್1ಎನ್1 ಸೋಂಕು
Team Udayavani, Mar 28, 2019, 6:15 AM IST
ಮಂಗಳೂರು: ನಗರದ ಬಿಜೈ ಪ್ಲೇ ಸ್ಕೂಲ್ ಒಂದರ ಇಬ್ಬರು ಮಕ್ಕಳಲ್ಲಿ ಎಚ್1ಎನ್1 ಸೋಂಕು ದೃಢಪಟ್ಟಿದ್ದು, ಇದೀಗ ಈರ್ವರೂ ಗುಣಮುಖರಾಗಿದ್ದಾರೆ.
ಪ್ಲೇ ಸ್ಕೂಲ್‌ನ ಒಂಬತ್ತು ಮಕ್ಕಳು, ಸಂಸ್ಥೆಯ ಮುಖ್ಯಸ್ಥೆ ಸಹಿತ 12 ಮಂದಿಯಲ್ಲಿ ಕಳೆದ ಮೂರು ದಿನಗಳ ಹಿಂದೆ ಶೀತ ಜ್ವರ ಕಾಣಿಸಿಕೊಂಡಿತ್ತು. ವಿಷಯ ತಿಳಿದು ಮಂಗಳವಾರ ಎಲ್ಲರಿಗೂ ರಕ್ತ ಪರೀಕ್ಷೆ ನಡೆಸಲಾಗಿದ್ದು, ಇಬ್ಬರು ಮಕ್ಕಳಲ್ಲಿ ಎಚ್1ಎನ್1 ಸೋಂಕು ದೃಢಪಟ್ಟಿತ್ತು. ಎಲ್ಲರಿಗೂ ಎಚ್1ಎನ್1ಗೆ ನೀಡಲಾಗುವ ವಿಶೇಷ ಮಾತ್ರೆ ನೀಡಲಾಗಿದೆ. ಸೋಂಕಿತ ಮಕ್ಕಳೂ ಆರೋಗ್ಯವಾಗಿದ್ದು, ಯಾವುದೇ ಸಮಸ್ಯೆ ಇಲ್ಲ ಎಂದು ಮಂಗಳೂರು ತಾಲೂಕು ವೈದ್ಯಾಧಿಕಾರಿ ಡಾ| ನವೀನ್ ತಿಳಿಸಿದ್ದಾರೆ.
ಮುನ್ನೆಚ್ಚರಿಕೆ ಕ್ರಮವಾಗಿ ಪ್ಲೇ ಸ್ಕೂಲ್‌ಗೆ 10 ದಿನ ರಜೆ ನೀಡಲಾಗಿದೆ. ಶೀತಜ್ವರ ಇರುವವರು ಆದಷ್ಟು ಮನೆಯೊಳಗೇ ವಿಶ್ರಾಂತಿ ಪಡೆಯುವಂತೆ; ಜ್ವರ ಹೆಚ್ಚಾದರೆ ತತ್‌ಕ್ಷಣ ವೈದ್ಯರನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ.
ಆತಂಕ ಮೂಡಿಸಿದ್ದ ಜ್ವರ
ದ.ಕ. ಜಿಲ್ಲೆಯಲ್ಲಿ ಎಚ್1ಎನ್1 ಸೋಂಕಿನಿಂದ ಕಳೆದ ಅಕ್ಟೋಬರ್ – ನವೆಂಬರ್‌ನಲ್ಲಿ 6 ಮಂದಿ ಸಾವನ್ನಪ್ಪುವ ಮೂಲಕ ಜ್ವರ ಆತಂಕ ಸೃಷ್ಟಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.