ಪಂಜ-ಕರಿಕ್ಕಳದ ಕಡಿದಾದ ರಸ್ತೆಗಳಲ್ಲಿ ಕಣ್ಮನ ಸೆಳೆದ ಬೈಕ್ ರೇಸ್
Team Udayavani, Dec 1, 2019, 9:35 PM IST
ಸುಳ್ಯ: ಬೊಳುವಾರಿನ ಏಸ್ ಮೋಟಾರ್ಸ್ ಪ್ರಸ್ತುತ ಪಡಿಸುವ ಎಮ್‌ಆರ್‌ಎಫ್ ಮೊಗ್ರಿಪ್ ಇಂಡಿಯನ್ ನ್ಯಾಶನಲ್ ರಾಲಿಯಲ್ಲಿ ಚಾಂಪಿಯನ್‌ಶಿಪ್‌ನ ಐದನೇ ಸುತ್ತಿನ ರಾಲಿ ಡಿ.1ರಂದು ಪಂಜದ ಕರಿಕ್ಕಳದ ಹೊರ ವಲಯದ ಕಡಿದಾದ ರಸ್ತೆಗಳಲ್ಲಿ ಬೈಕ್ ಸವಾರರು ಸಂಚರಿಸುವ ಮೂಲಕ ಸಾಹಸ ಮೆರೆದರು.
ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಬಳಿಯಿಂದ ಪ್ರಾರಂಭಗೊಂಡ ಬೈಕ್ ರಾಲಿಯು ಮಂಚಿಕಟ್ಟೆ, ಪಂಜದ ಬೈಲು, ರಬ್ಬರ್ ತೋಟ, ಕರಿಕ್ಕಳ ಜಂಕ್ಷನ್, ಪಂಬೆತ್ತಾಡಿ, ಜಾಕೆ, ಚೀಮುಳ್ಳು, ಜಳಕದಹೊಳೆ, ಪಳಂಗಾಯ, ವಾಟೆಕಜೆ, ಕೂತುRಂಜ, ಅಜ್ಜಿಹಿತ್ಲು, ಗಣಪತಿ ಕಟ್ಟೆ, ಅಡ್ಡತೋಡು ಮೂಲಕ ಸಾಗಿ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಳದ ಮುಂಭಾಗಕ್ಕೆ ತಲುಪಿತು.
ಡೀ ಮಂಗಳೂರು-2019ಲ್ಲಿ ಅಕ್ರಾಸ್ ಇಂಡಿಯಾದಲ್ಲಿ ಭಾಗವಹಿಸಿದ 2 ಮಹಿಳಾ ಸ್ಪರ್ಧಿಗಳು ಸೇರಿದಂತೆ 65 ಮಂದಿ ಭಾಗವಹಿಸಿದರು. ಟಿವಿಎಸ್ ರೇಸಿಂಗ್‌ನ ಹಾಲಿ ಚಾಂಪಿಯನ್ ಮತ್ತು ಚಾಂಪಿಯನ್‌ಶಿಪ್ ನಾಯಕ ರಾಜೇಂದ್ರ ಆರ್.ಇ, ಇಶಾನ್ ಚಂದ್ರ, ಅದ್ನಾನ್ ಅಹಮದ್, ಟಿವಿಎಸ್ ರೇಸಿಂಗ್‌ನ ಲೇಡೀಸ್ ಕ್ಲಾಸ್ ಚಾಂಪಿಯನ್‌ಶಿಪ್ ನಾಯಕಿ ಐಶ್ವರ್ಯಾ ಪಿಸ್ಸೆ, ಟಿವಿಎಸ್ ರೇಸಿಂಗ್ ಸವಾರರಾದ ಸೈಯದ್ ಆಸಿಫ್ ಅಲಿ, ಶಮೀಮ್ ಖಾನ್ ಮತ್ತು ಪಿಂಕೇಶ್ ಠಕ್ಕರ್, ಟಿವಿಎಸ್ ಎನೊràರ್ಕ್ 125 ಸಿಸಿ ಸವಾರಿ ಮತ್ತು ರಾಯಲ್ ಎನ್‌ಫೀಲ್ಡ್ ಚಾಂಪಿಯನ್‌ಶಿಪ್ ನಾಯಕ ಸುಹೇಲ್ ಅಹ್ಮದ್ ಮೊದಲಾದ ಸ್ಪರ್ಧಿಗಳು ಪಾಲ್ಗೊಂಡರು. ಈ ಸಾಹಸಮಯ ದೃಶ್ಯವನ್ನು ನೂರಾರು ಮಂದಿ ಕಣ್ತುಂಬಿಸಿಕೊಂಡರು. ಸ್ಥಳೀಯ ಶಿವಾಜಿ ಯುವಕ ಮಂಡಲ ಕೂತುRಂಜ ಸಹಕಾರ ನೀಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kokkada: ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ
Puttur: ಸ್ಕೂಲ್ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್
Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು
Shishila:ಮಕ್ಕಳನ್ನು ಶಾಲೆಗೆ ಕಳುಹಿಸುವ ವೇಳೆ ಕಾಡಾನೆ ದಾಳಿ;ಸೊಂಡಿಲಿನಿಂದ ಬೈಕ್ ಕೆಡವಿದ ಆನೆ
Vitla: ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ; 2 ದಿನಗಳ ಹಿಂದೆ ಮೃತಪಟ್ಟಿರುವುದಾಗಿ ಶಂಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.