ಬಿಳಿನೆಲೆ ಹೊಸ ಸೇತುವೆ ಸಂಚಾರಕ್ಕೆ ಶೀಘ್ರ ಮುಕ್ತ
Team Udayavani, Feb 13, 2019, 4:37 AM IST
ಕಡಬ: ಧರ್ಮಸ್ಥಳ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬಿಳಿನೆಲೆ-ನೆಟ್ಟಣ ನಡುವೆ ಹಳೆಯ ಮುಳುಗು ಸೇತು ವೆಯ ಪಕ್ಕದಲ್ಲಿ ನೂತನ ಸೇತುವೆ ನಿರ್ಮಾಣ ಕಾರ್ಯ ಮುಗಿದು ಸಂಪರ್ಕ ರಸ್ತೆ ನಿರ್ಮಾಣ ಕಾಮಗಾರಿ ಭರದಿಂದ ಸಾಗು ತ್ತಿದೆ. ನಿರೀಕ್ಷೆಯಂತೆ ನಡೆದರೆ ಇದೇ ತಿಂಗಳ ಕೊನೆಯೊಳಗೆ ನೂತನ ಸೇತುವೆಯಲ್ಲಿ ವಾಹನಗಳು ಸಂಚರಿಸಲಿವೆ.
ಬಿಳಿನೆಲೆ-ನೆಟ್ಟಣದ ನಡುವೆ ಇರುವ ಬಿಳಿನೆಲೆ ಸೇತುವೆಯ ಕಾಮಗಾರಿ ಆರಂಭಗೊಂಡು 2 ವರ್ಷಗಳು ಪೂರ್ತಿ ಯಾಗಿವೆ. 3 ಕೋಟಿ ರೂ. ವೆಚ್ಚದಲ್ಲಿ ಸೇತುವೆ, ಸಂಪರ್ಕ ರಸ್ತೆ ನಿರ್ಮಾಣ ವಾಗುತ್ತಿದೆ. ಆ ಪೈಕಿ 2.75 ಕೋಟಿ ರೂ. ವೆಚ್ಚದಲ್ಲಿ ಸೇತುವೆಯ ಕಾಮಗಾರಿ ನಡೆದಿದ್ದು, ಸಂಪರ್ಕ ರಸ್ತೆಯ ಕಾಮಗಾರಿಗೆ 25 ಲಕ್ಷ ರೂ. ವ್ಯಯ ವಾಗಲಿದೆ.
ಕೈಕಂಬ ಸೇತುವೆ ಬಾಕಿ
ಮುಳುಗು ಸೇತುವೆಗಳಿದ್ದ ಸುಬ್ರಹ್ಮಣ್ಯದ ಕುಮಾರಧಾರಾ, ನೆಟ್ಟಣ, ಮರ್ದಾಳ ಬಳಿಯ ಬಜಕೆರೆ, ಕುಂತೂರು ಸೇತುವೆ, ಕೆಮ್ಮಾರ ಸೇತುವೆಗಳ ಪಕ್ಕ ದಲ್ಲಿಯೇ ಹೊಸ ಸರ್ವಋತು ಸೇತುವೆ ಗಳು ನಿರ್ಮಾಣವಾಗಿ ವಾಹನಗಳು ಸಂಚರಿಸುತ್ತಿವೆ. ಇದೀಗ ಕಡಬ ಬಳಿಯ ಹೊಸಮಠ ಸೇತುವೆ ಹಾಗೂ ಬಿಳಿನೆಲೆ ಸೇತುವೆ ಫೆಬ್ರವರಿ ಮಾಸಾಂತ್ಯದಲ್ಲಿ ವಾಹನ ಸಂಚಾರಕ್ಕೆ ತೆರೆದುಕೊಳ್ಳಲಿದೆ. ಇನ್ನು ಬಾಕಿ ಉಳಿದಿರುವ ಬಿಳಿನೆಲೆ-ಕೈಕಂಬದ ನಡುವಿನ ಸೇತುವೆ ಮಾತ್ರ. ಅಲ್ಲಿಯೂ ನೂತನ ಸೇತುವೆ ನಿರ್ಮಿಸಲು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ (ಕೆಆರ್‌ಡಿಸಿಎಲ್) ಮೂಲಕ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶೀಘ್ರ ಅನುದಾನ ಬಿಡುಗಡೆಯಾಗಲಿದೆ ಎನ್ನುವ ಮಾಹಿತಿ ಇದೆ.
ಮುಳುಗು ಸೇತುವೆಗಳಿಗೆ ಮುಕ್ತಿ
ದಕ್ಷಿಣ ಭಾರತದ ಅತೀ ದೊಡ್ಡ ಯಾತ್ರಾಸ್ಥಳ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನವನ್ನು ಉಪ್ಪಿನಂಗಡಿ – ಕಡಬ ಮೂಲಕ ಸಂಪರ್ಕಿಸುವ ರಾಜ್ಯ ಹೆದ್ದಾರಿ ಯಲ್ಲಿ ಹಳೆಯ ಮುಳುಗು ಸೇತುವೆಗಳೇ ಇದ್ದುದರಿಂದ ಮಳೆಗಾಲದಲ್ಲಿ ನೆರೆ ನೀರು ಉಕ್ಕಿ ಸೇತುವೆಗಳ ಮೇಲೆ ಹರಿದು ವಾಹನ ಸಂಚಾರಕ್ಕೆ ಅಡ್ಡಿಯುಂಟಾ ಗುತ್ತಿದ್ದುದರಿಂದಾಗಿ ಯಾತ್ರಾರ್ಥಿಗಳು ಹಾಗೂ ಸಾರ್ವಜನಿಕರು ತೀವ್ರ ಸಮಸ್ಯೆ ಎದುರಿಸುವಂತಾಗಿತ್ತು. ಇದೀಗ ಹೆಚ್ಚಿನ ಸೇತುವೆಗಳು ಸರ್ವಋತು ಸೇತುವೆಗಳಾಗಿ ನಿರ್ಮಾಣಗೊಂಡಿವೆ.
ಪ್ರಸ್ತಾವನೆ ಸಲ್ಲಿಸಲಾಗಿದೆ
ಸುಳ್ಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬೃಹತ್ ಸೇತುವೆಗಳಾದ ಸುಬ್ರಹ್ಮಣದ ಕುಮಾರಧಾರಾ ಹಾಗೂ ಶಾಂತಿಮೊಗರು ಸೇತುವೆ ನಿರ್ಮಾಣ ಮುಗಿದು ಸಂಚಾರಕ್ಕೆ ಮುಕ್ತವಾಗಿವೆ. ಕಡಬದ ಹೊಸಮಠ ಸೇತುವೆ ಹಾಗೂ ಬಿಳಿನೆಲೆ ಸೇತುವೆಯ ಕಾಮಗಾರಿ ಬಹುತೇಕ ಮುಗಿದಿದೆ. ಫೆಬ್ರವರಿ ಅಂತ್ಯದೊಳಗೆ ಸೇತುವೆಯ ಎಲ್ಲ ಕೆಲಸ ಮುಗಿದು ವಾಹನ ಸಂಚಾರಕ್ಕೆ ಮುಕ್ತಗೊಳ್ಳಲಿದೆ. ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿನ ಮುಳುಗು ಸೇತುವೆಗಳ ಪೈಕಿ ಕೈಕಂಬ ಸೇತುವೆ ಮಾತ್ರ ಬಾಕಿ ಇದ್ದು, ಅಲ್ಲಿ ನೂತನ ಸೇತುವೆ ನಿರ್ಮಿಸಲು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ (ಕೆಆರ್‌ಡಿಸಿಎಲ್) ಮೂಲಕ ಪ್ರಸ್ತಾವನೆ ಸಲ್ಲಿಸಲಾಗಿದೆ.
– ಎಸ್. ಅಂಗಾರ,
ಸುಳ್ಯ ಶಾಸಕರು
ನಾಗರಾಜ್ ಎನ್.ಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Madikeri; ಜಾತ್ರೋತ್ಸವದ ವೇಳೆ ಗುಂಪು ಸಂಘರ್ಷ: ಕಟ್ಟೆಮಾಡು ಗ್ರಾಮದಲ್ಲಿ ನಿಷೇಧಾಜ್ಞೆ
Udupi: ಗೀತಾರ್ಥ ಚಿಂತನೆ-140: ಮಕ್ಕಳಲ್ಲಿ “ಇಗೋ’ ಏರಿಕೆ, ಪಾಲಕರಲ್ಲಿ ಗೌರವ ಇಳಿಕೆ
Kasaragod; ಬಸ್-ಕಾರು ಢಿಕ್ಕಿ: ಇಬ್ಬರ ಸಾವು
South Korea Plane Crash: ಛಿದ್ರಗೊಂಡ ದೇಹಗಳು, ಕೊನೇ ಸಂದೇಶ…
Israel ಪ್ರಧಾನಿ ಬೆಂಜಮಿನ್ ನೆತನ್ಯಾಹುಗೆ ಪ್ರಾಸ್ಟೇಟ್ ಶಸ್ತ್ರಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.