ಮಾಲಿನ್ಯ ತಡೆಗೆ ಜೈವಿಕ ಇಂಧನ ಬಸ್ ಅಗತ್ಯ
Team Udayavani, Mar 18, 2018, 4:03 PM IST
ಅರಬ್ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಇಂಧನ ಸಮಸ್ಯೆ ಕಾಡುತ್ತಿದೆ. ದಿನದಿಂದ ದಿನಕ್ಕೆ ಪೆಟ್ರೋಲ್ ಡಿಸೇಲ್ ಬೆಲೆ ಏರುತ್ತಿದೆ. ತೀರ ಬಡವರ್ಗದ ಜನರು ಸ್ವಂತ ವಾಹನ ಓಡಿಸುವುದು ದುಸ್ತರ ಎಂಬಂತಾಗಿದೆ. ಇಷ್ಟು ಮಾತ್ರವಲ್ಲದೆ ಮೀತಿಮೀರಿದ ವಾಹನಗಳ ಹೊಗೆಯಿಂದ ಪರಿಸರ ಮಾಲಿನ್ಯವಾಗುತ್ತಿದೆ. ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ಸೂಕ್ತ ಮಾರ್ಗ ಕಂಡು ಕೊಳ್ಳುವುದು ಸದ್ಯ ನಮ್ಮೆಲ್ಲರ ಮುಂದಿರುವ ಸವಾಲು.
ವರ್ಷಗಳ ಹಿಂದೆ ಕೊಲ್ಕತ್ತಾದಲ್ಲಿ ದೇಶದ ಮೊದಲ ಬಯೋ-ಗ್ಯಾಸ್ ಬಸ್‌ನ್ನು ಬಿಡುಗಡೆ ಮಾಡಲಾಯಿತು. 54 ಸೀಟುಗಳಿರುವ ಈ ಬಸ್ 1 ಕೆಜಿ ಬಯೋ ಗ್ಯಾಸ್‌ನಿಂದ 6 ಕಿಲೋ ಮೀಟರ್ ಓಡುತ್ತದೆ. ಇದಕ್ಕೆ ಕೇವಲ 20 ರೂ. ಖರ್ಚು ತಗಲುತ್ತದೆ ಎಂದರೆ ಅಚ್ಚರಿಯಾಗುತ್ತದೆ. ಅಲ್ಲದೆ ಆ ಬಸ್‌ನಲ್ಲಿ 80 ಕೆಜಿ ಸಾಮರ್ಥ್ಯದ ಟ್ಯಾಂಕ್ ಇರುತ್ತದೆ. ಒಂದು ಟ್ಯಾಂಕ್ ಬಯೋಗ್ಯಾಸ್‌ನಿಂದ 480 ಕಿ.ಮೀ. ವರೆಗೆ ಸಾಗಬಹುದು. ಇದರಿಂದ ಇಂಧನ ಕೊರತೆ ಹಾಗೂ ಪರಿಸರ ಮಾಲಿನ್ಯವನ್ನು ತಡೆಯಬಹುದು. ಈ ಯೋಜನೆಯನ್ನು ಮಂಗಳೂರಿನಲ್ಲೂ ಜಾರಿಗೆ ತರುವ ಬಗ್ಗೆ ಚಿಂತನೆ ನಡೆಸಬಹುದು.
ಪರಿಸರ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಕೆಲವು ಸಮಯದ ಹಿಂದೆ ಬೆಂಗಳೂರು ಕೆಎಸ್‌ಆರ್ ಟಿಸಿಯಲ್ಲೂ ಬಯೋ ಡಿಸೇಲ್ ಮೂಲಕ ಓಡಾಡುವ 25 ಬಸ್‌ಗಳನ್ನು ಪ್ರಾಯೋಗಿಕವಾಗಿ ಓಡಿಸಲಾಗಿತ್ತು. ಹೆಚ್ಚುತ್ತಿರುವ ಪರಿಸರ ಮಾಲಿನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಬಯೋ ಗ್ಯಾಸ್ ಬಸ್, ಬಯೋ ಡೀಸೆಲ್ ಬಸ್‌ಗಳನ್ನು ನಗರದಲ್ಲಿ ಹಾಕಬಹುದು.
ಪ್ರಜ್ಞಾ ಶೆಟ್ಟಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.