ಅಂತರಂಗ ಶುದ್ಧಿಗೆ ಭಜನೆ ಪೂರಕ: ಕಳಂಚೇರಿ ಶ್ರೀ
Team Udayavani, Sep 12, 2017, 8:50 AM IST
ಬೆಳ್ತಂಗಡಿ: ಆಧ್ಯಾತ್ಮಿಕ ನೆಲೆಗಟ್ಟಿನಲ್ಲಿ ಮಾತ್ರ ಮನುಷ್ಯನಿಗೆ ಸುಸಂಸ್ಕೃತ ಸಮಾಜ ನಿರ್ಮಿಸಲು ಸಾಧ್ಯ. ಜಗತ್ತು ಕೇವಲ ಬಾಹ್ಯನೋಟಕ್ಕೆ ಬೆಲೆ ಕಟ್ಟುತ್ತದೆ. ಆಂತರಂಗಿಕವಾಗಿ ಜೀವನವನ್ನು ಪರಿ ಶುದ್ಧಗೊಳಿಸುವ ಕಾರ್ಯ ದೇವನಾಮ ಸಂಕೀರ್ತನೆಯಿಂದ ಸಾಧ್ಯ ಎಂದು ವಿರಾಜಪೇಟೆಯ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ನುಡಿದರು.
ಅವರು ಸೋಮವಾರ ಧರ್ಮಸ್ಥಳದ ಮಹೋತ್ಸವ ಸಭಾಂಗಣಲ್ಲಿ 19ನೇ ವರ್ಷದ ಭಜನ ತರಬೇತಿ ಕಮ್ಮಟವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಭಜನೆಗೆ ಭಕ್ತಿ ಮಾರ್ಗವೇ ಶ್ರೇಷ್ಠವಾಗಿದ್ದು ಪರಿ ಶುದ್ಧ ಭಾವದಿಂದ ಭಜನೆ ಮಾಡಿದರೆ ಆಧ್ಯಾ ತ್ಮಿಕ ಚೈತನ್ಯ ಜಾಗೃತವಾಗಿ ಪರಿಶುದ್ಧ ಜೀವನ ಸಾಧ್ಯ ವಾಗುತ್ತದೆ. ನಾಸ್ತಿಕರನ್ನು ಆಸ್ತಿಕರಾಗಿ ಪರಿವರ್ತಿಸುವ ಶಕ್ತಿ ಭಜನೆಗಿದೆ. ಭಜನೆಯಿಂದ ದ್ವೇಷ, ಕ್ಲೇಶಗಳು ದೂರವಾಗಿ, ಅಂತರಂಗ ಪರಿಶುದ್ಧವಾಗಿ ಭಗವಂತನ ಸಾûಾತ್ಕಾರವಾಗುತ್ತದೆ. ಆತ್ಮ ತೃಪ್ತಿಯೊಂದಿಗೆ ಜೀವನದಲ್ಲಿ ಯಶಸ್ಸು ಸಿಗುತ್ತದೆ ಎಂದರು.
ಸದೃಢ ಸಮಾಜ ನಿರ್ಮಾಣ
ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ ಮಾತನಾಡಿ, ಸಮರ್ಥ ನಾಯಕರು ಹಳ್ಳಿ ಹಳ್ಳಿಗಳಲ್ಲಿ ಇರಬೇಕೆಂದು ಭಜನ ಕಮ್ಮಟ ನಡೆಸಲಾಗುತ್ತಿದೆ. ಭಜನೆಯಿಂದ ಮಾನವೀಯ ಮೌಲ್ಯಗಳು ಉದ್ದೀಪನಗೊಂಡು, ಪ್ರೀತಿ-ವಿಶ್ವಾಸದ ಸಾಮರಸ್ಯದ ಬದುಕಿನೊಂದಿಗೆ ದುಶ್ಚಟ ಮುಕ್ತ ಸದೃಢ ಸಮಾಜ ನಿರ್ಮಾಣವಾಗುತ್ತದೆ ಎಂದರು.
ಹೇಮಾವತಿ ವೀ. ಹೆಗ್ಗಡೆ ಮಾತನಾಡಿ, ಶ್ರದ್ಧೆಯಿದ್ದರೆ ಎಲ್ಲವೂ ಸಾಧ್ಯ. ನಮ್ಮ ದೈನಂದಿನ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡುವುದೇ ದೇವರ ಪೂಜೆ. ಸಿಕ್ಕಿದ ಅವಕಾಶದ ಸದುಪಯೋಗ ಮಾಡಿ ಸಾಧ್ಯವಾದಷ್ಟು ಪರೋಪಕಾರ ಮಾಡಬೇಕು ಎಂದು ಹೇಳಿದರು.
ಗ್ರಾಮಸ್ವಾಸ್ಥ éವೇ ಉದ್ದೇಶ
ಅಧ್ಯಕ್ಷತೆ ವಹಿಸಿದ್ದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ, ಗ್ರಾಮಸ್ವಾಸ್ಥ éವೇ ಭಜನ ಕಮ್ಮಟದ ಪ್ರಮುಖ ಉದ್ದೇಶ. ಜಾತಿ ಮತ ಭೇದ ವಿಲ್ಲದೆ ಎಲ್ಲರೂ ಪ್ರೀತಿ-ವಿಶ್ವಾಸದಿಂದ ಭಜನ ಮಂದಿರ ದಲ್ಲಿ ಸೇರಿ ಭಜನೆ ಮಾಡುವ ಮೂಲಕ ಊರಿನ ಸ್ವಾಸ್ಥ é ಕಾಪಾಡ ಬೇಕು. ದೇವರ ಅನುಗ್ರಹ ಪ್ರಾಪ್ತಿಗೆ ಭಜನೆ ಸರಳ ಮಾಧ್ಯಮವಾಗಿದೆ. ಭಜನೆ ಮೂಲಕ ಸತ್ಯ, ಸದಾಚಾರಗಳೊಂದಿಗೆ ಸಂಸ್ಕಾರ ಯುತ ಜೀವನ ನಡೆಸ ಬೇಕು. ಭಜನ ಮಂಡಳಿ ಗಳ ಮೂಲಕ ಊರಿನಲ್ಲಿ ಸಾಮರಸ್ಯ, ಸಂಘಟನೆ ಮತ್ತು ನಾಯಕತ್ವ ಬೆಳೆಯಬೇಕು ಎಂದರು.
ಧರ್ಮಸ್ಥಳದ ಡಿ. ಹಷೇìಂದ್ರ ಕುಮಾರ್ ಉಪಸ್ಥಿತರಿದ್ದರು. ಭಜನ ಕಮ್ಮಟದ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್ ಸ್ವಾಗತಿಸಿದರು. ಕಾರ್ಯದರ್ಶಿ ಮಮತಾ ರಾವ್ ವಂದಿಸಿದರು. ಶ್ರೀನಿವಾಸ ರಾವ್ ನಿರ್ವಹಿಸಿದರು.
ಶಂಕರ್ ಶ್ಯಾನುಭಾಗ್ ಬೆಂಗಳೂರು, ಬಿ.ಕೆ. ಸುಮಿತ್ರಾ ಬೆಂಗಳೂರು, ರಾಮಕೃಷ್ಣ ಕಾಟುಕುಕ್ಕೆ ಕಾಸರಗೋಡು, ಉಷಾ ಹೆಬ್ಟಾರ್ ಮಣಿಪಾಲ, ಮನೋರಮಾ ತೋಳ್ಪಾಡಿತ್ತಾಯ ಧರ್ಮಸ್ಥಳ, ದೇವದಾಸ ಪ್ರಭು ಬಂಟ್ವಾಳ, ಮೋಹನದಾಸ ಶೆಣೆೈ ಮಂಗಳೂರು, ಮಂಗಲದಾಸ್ ಗುಲ್ವಾಡಿ ಮಂಗಳೂರು, ಈರಪ್ಪ ಕೆ. ಪತ್ತಾರ್ ಬೈಲಹೊಂಗಲ, ರಮೇಶ್ ಕಲ್ಮಾಡಿ, ಶಂಕರ್ ಉಡುಪಿ ಸಂಪನ್ಮೂಲ ವ್ಯಕ್ತಿಗಳಾಗಿ ತರಬೇತಿ ನೀಡಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.