“ಬಿಸುಪರ್ಬ’ಆಚರಣೆ,ರತ್ಮವರ್ಮ ಹೆಗ್ಗಡೆ ಪ್ರಶಸ್ತಿ ಪ್ರದಾನ
Team Udayavani, Apr 15, 2019, 6:31 AM IST
ಮಹಾನಗರ: ಬಿಸು ಪರ್ಬಕ್ಕೆ ತುಳುನಾಡಿನಲ್ಲಿ ವಿಶೇಷ ಮಹತ್ವವಿದೆ. ಜೋಡಿ ದೀಪ,ತರಕಾರಿ,ಫಲ ವಸ್ತುಗಳನ್ನಿಟ್ಟು ಹೊಸ ವರ್ಷವನ್ನು ಬರಮಾಡಿಕೊಳ್ಳುವುದೇ ಬಿಸು ಪರ್ಬ ಎಂದು ಶ್ರೀ ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರ ಪಿ. ರಮಾನಾಥ ಹೆಗ್ಡೆ ಹೇಳಿದರು.
ತುಳುಕೂಟ-ಕುಡ್ಲ ಮಂಗಳೂರು ವತಿಯಿಂದ ನಗರದ ಶ್ರೀ ಮಂಗಳಾದೇವಿ ದೇವಸ್ಥಾನದ ಸಭಾಂಗಣದಲ್ಲಿ ರವಿವಾರ ನಡೆದ ಬಿಸುಪರ್ಬ-ರತ್ಮವರ್ಮ ಹೆಗ್ಗಡೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರೋಟರಿ ಜಿಲ್ಲೆ 3181ರ ಗವರ್ನರ್ ಪಿ. ರೋಹಿನಾಥ್ ಮಾತನಾಡಿ, ಭಾಷೆಯು ಸರಳವಾದಷ್ಟು ಜನರ ಮನಸ್ಸಿಗೆ ಹತ್ತಿರವಾಗುತ್ತದೆ. ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಅಂಕಗಳಿಸುವ ಉದ್ದೇಶದಿಂದ ಸಂಸ್ಕೃತಿ ಭಾಷೆಯನ್ನು ಕಲಿಯುತ್ತಾರೆ. ಆದರೆ, ಉತ್ಛರಣೆ ತುಂಬಾ ಕಷ್ಟ. ಸಮಾಜದಲ್ಲಿ ಒಬ್ಬೊಬ್ಬರಿಗೆ ಒಂದೊಂದು ವಿಚಾರದಲ್ಲಿ ನಂಬಿಕೆ ಇದೆ. ವ್ಯಕ್ತಿಯು ತನ್ನಲ್ಲಿ ನಕಾರಾತ್ಮಕ ನಂಬಿಕೆಯನ್ನು ಬೆಳೆಸಿಕೊಳ್ಳಬಾರದು ಎಂದರು.
ಮನುಷ್ಯ ನಡೆಯು ಸಕಾರಾತ್ಮಕ ವಾಗಿದ್ದರೆ ತನ್ನ ಜೀವನದುದ್ದಕ್ಕೂ ಸುಖ, ಸಂತೋಷದಿಂದಿರುತ್ತಾನೆ ಎಂದು ಹೇಳಿದರು.
ಸಮಾಜದಲ್ಲಿ ಭಾವೈಕ್ಯತೆಯಿಂದ ಹಬ್ಬವನ್ನು ಆಚರಿಸಿದಾಗ ಅದಕ್ಕೆ ಮತ್ತಷ್ಟು ಮಹತ್ವ ಬರುತ್ತದೆ. ತುಳುನಾಡಿನ ಸಂಸ್ಕೃತಿ ಆಚರಣೆ ವಿಚಾರದಲ್ಲಿ ಇಂದಿನ ಯುವ ಪೀಳಿಗೆಯಲ್ಲಿ ಆಸಕ್ತಿ ಕಡಿಮೆಯಾಗಿದೆ ಎಂದು ಹೇಳಿದರು.
ತುಳುಕೂಟದ ಅಧ್ಯಕ್ಷ ಬಿ. ದಾಮೋದರ ನಿಸರ್ಗ, ಸಹಕಾರಿ ಮೂರ್ತೆದಾರರ ಮಹಾಮಂಡಲ ಉಡುಪಿ ಇದರ ಅಧ್ಯಕ್ಷ ಸದಾನಂದ ಪಿ.ಕೆ., ವಿಟuಲ್ ಫೌಂಡೇಶನ್ ಅಧ್ಯಕ್ಷ ರಾಕೇಶ್ ವಿಟuಲ್ ಶೆಟ್ಟಿ ಮೊದಲಾ ದವರು ಉಪಸ್ಥಿತರಿದ್ದರು.ಉಳ್ಳಾಲ ನೃತ್ಯ ಸೌರಭ ನಾಟ್ಯಾಲಯದ ನೃತ್ಯ ನಿರ್ದೇಶಕ ವಿದ್ವಾನ್ ಪ್ರಮೋದ್ ಉಳ್ಳಾಲ ಇವರ ಶಿಷ್ಯವೃಂದದ “ಪತ್ತಬತಾರ’ ಎಂಬ ನೃತ್ಯ ರೂಪಕ ನಡೆಯಿತು.
ಪ್ರಶಸ್ತಿ ಪ್ರದಾನ
ತುಳುಕೂಟ ಕುಡ್ಲ ಆಯೋಜಿಸುವ ನಾಟಕ ಕೃತಿ ಸ್ಪರ್ಧೆಯ 43ನೇ ವರ್ಷದ ಶ್ರೀ ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ಪ್ರಶಸ್ತಿ ಪ್ರದಾನ ನಡೆಯಿತು. ಕಾರ್ಕಳ ಪೆರ್ವಾಜೆ ಪಿ. ಸುಂದರ ಶೆಟ್ಟಿಗಾರ್ ಅವರ ಅಮೆರಿಕದ ಚಂದ್ರೆ ಕೃತಿ ಪ್ರಥಮ ಪ್ರಶಸ್ತಿ, ಉಜೊಡಿ ಗೋರಿಗುಡ್ಡೆ ಇಂದುಶೇಖರ ಶೆಟ್ಟಿ ಅವರ ದೇವೆರುಲ್ಲೆರಾ ಕೃತಿ ದ್ವಿತೀಯ ಪ್ರಶಸ್ತಿ, ಧರ್ಮಸ್ಥಳ ಚಂದ್ರಹಾಸ ಚಾರ್ಮಾಡಿ ಅವರ ಎನ್ನಿಲೆಕ ಮಾಂತಲಿಪ್ಪುಜಿ ಕೃತಿ ತೃತಿಯ ಪ್ರಶಸ್ತಿ ಗಳಿಸಿದ್ದು, ಕೃತಿಕಾರರನ್ನು ಗೌರವಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.