ಹೊಸಬೆಟ್ಟು ರೇಚಕ ಸ್ಥಾವರ ಸ್ಥಗಿತ, ಬಿಜೆಪಿ ಪ್ರತಿಭಟನೆ
Team Udayavani, Dec 9, 2017, 10:14 AM IST
ಸುರತ್ಕಲ್ : ಹೊಸಬೆಟ್ಟು ರೇಚಕ ಸ್ಥಾವರದ ಮೂರು ಪಂಪ್‌ಗಳು ಕೆಟ್ಟಿದ್ದು, ಒಳಚರಂಡಿ ವ್ಯವಸ್ಥೆ ಸಂಪೂರ್ಣ ಹದೆಗೆಟ್ಟಿದೆ. ಪರಿಣಾಮ ಸ್ಥಳೀಯ ಹತ್ತಕ್ಕೂ ಹೆಚ್ಚಿನ ಬಾವಿಗಳ ನೀರು ಮಲಿನವಾಗಿದ್ದು, ಇದಕ್ಕೆ ಕಾಂಗ್ರೆಸ್‌ನ ಆಡಳಿತವೇ ಕಾರಣ ಎಂದು ಮಹಾನಗರ ಪಾಲಿಕೆಯ ವಿಪಕ್ಷ ನಾಯಕ ಗಣೇಶ್ ಹೊಸಬೆಟ್ಟು ಆರೋಪಿಸಿದರು. ಬಿಜೆಪಿ ಮತ್ತು ವಿಪಕ್ಷ ಪಾಲಿಕೆ ಸದಸ್ಯರು ಹೊಸಬೆಟ್ಟು ರೇಚಕ ಸ್ಥಾವರದ ಮುಂಭಾಗ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಕಳೆದ ಕೆಲವು ತಿಂಗಳಿನಿಂದ ರೇಚಕ ಸ್ಥಾವರದ ದುಃಸ್ಥಿತಿ ವಿರುದ್ಧ ಪಾಲಿಕೆ ಅಧಿಕಾರಿಗಳ ಗಮನ ಸೆಳೆಯಲಾಗಿದೆ. ನಾಲ್ಕು ತಿಂಗಳ ಹಿಂದೆ ಪಾಲಿಕೆ ಸಭೆಯಲ್ಲಿ ಇಲ್ಲಿನ ತುಕ್ಕು ಹಿಡಿದ ಪೈಪಿನ ಪ್ರದರ್ಶನ ಮಾಡಿ ಮೇಯರ್ ಹಾಗೂ ಅಧಿಕಾರಿಗಳ ಗಮನ ಸೆಳೆದಿದ್ದೆ. ಬಳಿಕ ಮೇಯರ್ ಮತ್ತು ಅಧಿಕಾರಿಗಳು ವೀಕ್ಷಿಸಿದರೂ ಫಲಿತಾಂಶ ಶೂನ್ಯ. ನ.28ರ ಸಭೆಯಲ್ಲೂ ಒಳಚರಂಡಿ ಸಮಸ್ಯೆ, ಪಂಪ್ ಹಾಳಾದ
ಕುರಿತು ಗಮನ ಸೆಳೆದಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಬಾವಿ ನೀರು ಮಲಿನಗೊಂಡಿದ್ದು, ಇದಕ್ಕೆ ಅಧಿಕಾರಿಗಳು ನೇರ ಜವಾಬ್ದಾರರು ಎಂದರು.
ಸಾರ್ವಜನಿಕರ ಆರೋಗ್ಯದ ನಿರ್ಲಕ್ಷ್ಯ
ಮಂಗಳೂರು ಉತ್ತರ ಬಿಜೆಪಿ ಮಂಡಲ ಅಧ್ಯಕ್ಷ ಡಾ| ಭರತ್ ಶೆಟ್ಟಿ ವೈ. ಮಾತನಾಡಿ, ಕಾಂಗ್ರೆಸ್ ಸಾರ್ವಜನಿಕರ ಆರೋಗ್ಯದ ಬಗ್ಗೆ ಗಂಭೀರವಾಗಿಲ್ಲ ಎಂಬುದಕ್ಕೆ ಇದು ಸ್ಪಷ್ಟ ನಿದರ್ಶನ. ಇದೇ ಒಳಚರಂಡಿ ವ್ಯವಸ್ಥೆ ಶಾಸಕರ ಮನೆ ಬಳಿ ಆಗಿದ್ದರೆ ತತ್‌ಕ್ಷಣ ದುರಸ್ತಿ ಮಾಡಲಾಗುತ್ತಿತ್ತು. ಇಲ್ಲಿನ ರೇಚಕ ಸ್ಥಾವರದ ಸ್ಥಿತಿ ಕುರಿತು ಪಾಲಿಕೆ ಆಡಳಿತಕ್ಕೆ ತಿಳಿಸಿದ್ದರೂ ದುರಸ್ತಿ ಆಗಿಲ್ಲ. ವೆಟ್‌ವೆಲ್ ಕೆಲಸ ಮಾಡದಿದ್ದರೆ ನೇರವಾಗಿ ತೋಡಿನ ಮೂಲಕ ಹರಿದು ಪರಿಸರ ಮಾಲಿನ್ಯಕ್ಕೆ ಪಾಲಿಕೆ ಆಡಳಿತ ನೇರ ಕಾರಣವಾದೀತು ಎಂದರು.
ರಜನಿ ದುಗ್ಗಣ್ಣ, ಪ್ರೇಮಾನಂದ ಶೆಟ್ಟಿ, ವಿಟ್ಠಲ ಸಾಲ್ಯಾನ್, ರೂಪಾ ಡಿ.ಬಂಗೇರ, ರಾಜೇಂದ್ರ, ಗುಣಶೇಖರ ಶೆಟ್ಟಿ, ಸುಮಿತ್ರಾ ಕರಿಯ, ರಘುವೀರ್ ಪಣಂಬೂರು, ರಣ್‌ದೀಪ್ ಕಾಂಚನ್, ಮಧುಕಿರಣ್, ಅಶೋಕ್ ಕೃಷ್ಣಾಪುರ, ವರುಣ್ ಚೌಟ, ವಸಂತ್, ಜಯರಾಮ್ ಉಪಸ್ಥಿತರಿದ್ದರು.
ಕಳಪೆ ಕಾಮಗಾರಿಗೆ ಸಾಕ್ಷಿ
ಕೇವಲ ಹೊಸಬೆಟ್ಟು ರೇಚಕ ಸ್ಥಾವರದ ಪಂಪ್ ಜತೆಗೆ ಶಾರ್ಟ್ ಸರ್ಕ್ನೂಟ್ ಮೂಲಕ ವಿದ್ಯುತ್ ವ್ಯವಸ್ಥೆ ಸಂಪೂರ್ಣ ಹಾಳಾಗಿದ್ದು, ದುರಸ್ತಿಗೆ ಲಕ್ಷಾಂತರ ರೂಪಾಯಿ ಬೇಕಾಗಿದೆ. ಜತೆಗೆ ಕುಳಾಯಿ, ಹೊಸಬೆಟ್ಟು ರೇಚಕ ಸ್ಥಾವರಗಳ ಪಂಪ್‌ಗ್ಳೂ ಕೆಟ್ಟು ನಿಂತಿದ್ದು, ಒಳಚರಂಡಿ ಸಂಸ್ಕರಣ ಘಟಕಕ್ಕೆ ತಲುಪದೆ ಮಧ್ಯೆಯೇ ಮಳೆ ನೀರು ಹರಿಯುವ ತೋಡು ಪಾಲಾಗಿ ಬಾವಿ ನೀರು ಕಲುಷಿತವಾಗುತ್ತಿದೆ. ಇದು ಜನರ ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀರುತ್ತದೆ. ಕೇವಲ ಎರಡು ವರ್ಷಗಳ ಹಿಂದೆ ಈ ರೇಚಕ ಸ್ಥಾವರ ನಿರ್ಮಾಣವಾಗಿದ್ದು, ಈಗ ಕೆಟ್ಟು ಹೋಗಿರುವುದು ಕಳಪೆ ಕಾಮಗಾರಿಗೆ ಸಾಕ್ಷಿಯಾಗಿದೆ.
– ಗಣೇಶ್ ಹೊಸಬೆಟ್ಟು, ಮಹಾನಗರ ಪಾಲಿಕೆಯ ವಿಪಕ್ಷ ನಾಯಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru ಕಂಬಳ ಸಮಯ ನಿರ್ವಹಣೆಗೆ 2 ದಿನ ಪ್ರತ್ಯೇಕ ಸ್ಪರ್ಧೆ!
Temperature: ಕರಾವಳಿಯಲ್ಲಿ ಹೆಚ್ಚಿದ ಚಳಿಯ ತೀವ್ರತೆ: ಗ್ರಾಮೀಣ ಭಾಗದಲ್ಲಿ ಹೆಚ್ಚು ಕಚಗುಳಿ
ವಿದ್ಯುತ್ ದರ ಏರಿಕೆಯ ಸುಳಿವು ನೀಡಿದ ಮೆಸ್ಕಾಂ;ಯೂನಿಟ್‌ಗೆ 0.70 ರೂ. ದರ ಏರಿಕೆ ಪ್ರಸ್ತಾವನೆ
Kambala ಜ. 11: ಉಳ್ಳಾಲ ನರಿಂಗಾನ ಕಂಬಳ್ಳೋತ್ಸವ
Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!
MUST WATCH
ಹೊಸ ಸೇರ್ಪಡೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Sullia: ಮಗುವಿಗೆ ಸುಟ್ಟು ಗಾಯ ಮಾಡಿದ್ದ ತಾಯಿ; ಆರೋಪ ಸಾಬೀತು; ಶಿಕ್ಷೆ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.