ದಕ್ಷಿಣ ಕನ್ನಡಕ್ಕೆ ಬಿಜೆಪಿ ಸರಕಾರದ ಕೊಡುಗೆಗಳು
Team Udayavani, Jul 27, 2019, 5:02 AM IST
ಮಂಗಳೂರು: ಬಿ.ಎಸ್. ಯಡಿಯೂರಪ್ಪ ಅವರು 2008ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಹಲವಾರು ಕೊಡುಗೆಗಳನ್ನು ನೀಡಿದ್ದಾರೆ.
ಮಂಗಳೂರು ಪಾಲಿಕೆಗೆ ವಿಶೇಷ ಅನುದಾನ
ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮಹಾನಗರಪಾಲಿಕೆಗಳು ಮತ್ತು ನಗರಾಡಳಿತ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ಮೂಲಸೌಕರ್ಯಗಳನ್ನು ಅಭಿವೃದ್ಧಿಗೊಳಿಸಲು ಮುಖ್ಯಮಂತ್ರಿಯವರ ವಿಶೇಷ ಅನುದಾನ ಯೋಜನೆಯನ್ನು ಜಾರಿಗೆ ತಂದಿದ್ದರು. ಇದರಂತೆ ಮಂಗಳೂರು ಮಹಾನಗರ ಪಾಲಿಕೆಗೆ ಇತರ ಅನುದಾನಗಳ ಹೊರತಾಗಿ ಎರಡು ವರ್ಷಗಳಲ್ಲಿ 200 ಕೋ.ರೂ. ವಿಶೇಷ ಅನುದಾನ ಬಿಡುಗಡೆಯಾಗಿತ್ತು.
ನಗರಸಭೆ, ಪುರಸಭೆಗಳಿಗೆ ವಿಶೇಷ ಅನುದಾನ
ಮಹಾನಗರ ಪಾಲಿಕೆಗಳಿಗೆ ವಿಶೇಷ ಅನುದಾನ ಜತೆಗೆ ಜಿಲ್ಲೆಯ ನಗರಸಭೆ, ಪುರಸಭೆಗಳಿಗೂ ವಿಶೇಷ ಅನುದಾನ ಬಿಡುಗಡೆ ಮಾಡಲಾಗಿತ್ತು.
ಮಂಗಳೂರು ನಗರಕ್ಕೆ ಪೊಲೀಸ್ ಕಮಿಷನರೆಟ್ ಕಚೇರಿ
ಮಂಗಳೂರಿಗೆ ಪೊಲೀಸ್ ಕಮಿಷನರೆಟ್ ಕಚೇರಿ ಕೂಡ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಮಂಜೂರು ಆಗಿತ್ತು. ಗೃಹ ಸಚಿವರಾಗಿದ್ದ ಡಾ| ವಿ.ಎಸ್. ಆಚಾರ್ಯ ಅವರು ಕಮಿಷನರೆಟ್ ಕಚೇರಿಯನ್ನು ಉದ್ಘಾಟಿಸಿದ್ದರು. ಮಂಗಳೂರು ಮಹಾನಗರದಲ್ಲಿ ಕಾನೂನು ಸುವ್ಯವಸ್ಥೆ ಪಾಲನೆಯಲ್ಲಿ ಇದು ಮಹತ್ವದ ಕೊಡುಗೆಯಾಗಿದೆ.
ಮಂಗಳೂರು ಮಿನಿವಿಧಾನಸೌಧ
ತಾಲೂಕು ಮಟ್ಟದಲ್ಲಿ ಎಲ್ಲ ಸರಕಾರಿ ಕಚೇರಿಗಳು ಒಂದೇ ಕಡೆ ಸಾರ್ವಜನಿಕರಿಗೆ ಲಭ್ಯವಾಗಬೇಕು ಎಂಬ ಪರಿಕಲ್ಪನೆಯಲ್ಲಿ ರೂಪುಗೊಂಡಿದ್ದ ಮಿನಿ ವಿಧಾನಸೌಧ ಯೋಜನೆಯಲ್ಲಿ ಮಂಗಳೂರು ತಾಲೂಕಿಗೂ ಮಿನಿ ವಿಧಾನಸೌಧ ಮಂಜೂರು ಮಾಡಲಾಗಿತ್ತು.
ನೂತನ ವೆಂಟೆಡ್‌ಡ್ಯಾಂ ಮಂಜೂರು
ಮಂಗಳೂರು ನಗರಕ್ಕೆ ಕುಡಿಯುವ ನೀರು ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ತುಂಬೆಯಲ್ಲಿ ನೂತನ ವೆಂಟೆಡ್ ಡ್ಯಾಂ ನಿರ್ಮಿಸಬೇಕು ಎಂಬ ಬೇಡಿಕೆ ಅನ್ವಯ ನೂತನ ವೆಂಟೆಡ್ ಡ್ಯಾಂ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಮಂಜೂರುಗೊಂಡು ಅನುದಾನ ಬಿಡುಗಡೆಯಾಗಿತ್ತು. ಅನಂತರ ಯೋಜನೆ ಪರಿಷ್ಕೃತಗೊಂಡು ಇದರ ಯೋಜನಾ ವೆಚ್ಚ ದಲ್ಲಿ ಏರಿಕೆಯಾಗಿತ್ತು.
ಪಿಲಿಕುಳ ತ್ರಿಡಿ ತಾರಾಲಯ ಮಂಜೂರು, ಅನುದಾನ
ಮಂಗಳೂರು ಹೊರವಲಯದ ಪಿಲಿಕುಳದಲ್ಲಿ ಏಷ್ಯಾದಲ್ಲೇ ಅತ್ಯಾಧುನಿಕ ತ್ರಿಡಿ ತಾರಾಲಯ ಯೋಜನೆ ಬಿ.ಎಸ್. ಯಡಿಯೂರಪ್ಪ ಅವರ ಅಧಿಕಾರ ಅವಧಿಯಲ್ಲಿ ಮಂಜೂರುಗೊಂಡು ಅನುದಾನ ಬಿಡುಗಡೆಯಾಗಿತ್ತು. ಇತರ ಜತೆಗೆ ಜಿಲ್ಲೆಯ ನಗರಸಭೆ, ಪುರಸಭೆಗಳಿಗೂ ವಿಶೇಷ ಅನುದಾನ ಬಿಡುಗಡೆಯಾಗಿತ್ತು. ಇದಲ್ಲದೆ ಇನ್ನೂ ಹಲವು ಯೋಜನೆಗಳು ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದ ಕೊಡುಗೆಗಳಾಗಿವೆ.
• ಮಂಗಳಾ ಕಾರ್ನಿಶ್ ವರ್ತುಲ ರಸ್ತೆ ಯೋಜನೆ: ಸಾಧ್ಯತಾ ಅಧ್ಯಯನ ವರದಿಗೆ ಸೂಚನೆ
• ರಥಬೀದಿಯಲ್ಲಿ ಸೀನಿಯರ್ ಗ್ರೇಡ್ ಸರಕಾರಿ ಕಾಲೇಜು ಸ್ಥಾಪನೆ
• ವೆನ್ಲಾಕ್ ಸರಕಾರಿ ಆಸ್ಪತ್ರೆಯಲ್ಲಿ ಇನ್ಪೋಸಿಸ್ ಸಹಭಾಗಿತ್ವದೊಂದಿಗೆ ಅತ್ಯಾಧುನಿಕ ಮಕ್ಕಳ ಚಿಕಿತ್ಸಾ ಘಟಕ ಸ್ಥಾಪನೆ
• ಮಂಗಳಾ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣ ಯೋಜನೆ ಮಂಜೂರು
• ಮಣ್ಣಗುಡ್ಡೆ-ಲೋವರ್ ಕಾರ್‌ಸ್ಟ್ರೀಟ್ ಮಾದರಿ ರಸ್ತೆ ಯೋಜನೆ ಮಂಜೂರು, ಅನುದಾನ ಬಿಡುಗಡೆ
• ಸುಲ್ತಾನ್‌ಬತ್ತೇರಿ ತಣ್ಣೀರುಬಾವಿ ತೂಗು ಸೇತುವೆ ನಿರ್ಮಾಣ ಯೋಜನೆ ಮಂಜೂರು.
• ಬಲ್ಮಠದಲ್ಲಿ ಸರಕಾರಿ ಮಹಿಳಾ ಕಾಲೇಜು ಉನ್ನತೀಕರಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ
Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ
ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.