BJP Protest: ಸಿದ್ದರಾಮಯ್ಯರದ್ದು ಲೂಟಿಕೋರ ಸರಕಾರ: ನಳಿನ್ ಕುಮಾರ್ ಕಟೀಲು
Team Udayavani, Jun 29, 2024, 12:58 AM IST
ಮಂಗಳೂರು: ಸಿದ್ದರಾಮಯ್ಯ ಅವರದು ಲೂಟಿಕೋರ ಸರಕಾರ. ಒಂದು ವರ್ಷದಲ್ಲಿ ಕಾಂಗ್ರೆಸ್ ಸರಕಾರ ವಾಲ್ಮೀಕಿ ಸಮುದಾಯ ಹಾಗೂ ಜನರ ಹಣ ಲೂಟಿ ಮಾಡಿದೆ. ಎಂದು ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ವಾಗ್ಧಾಳಿ ನಡೆಸಿದರು.
ವಾಲ್ಮೀಕಿ ನಿಗಮದ 187 ಕೋ.ರೂ. ಅನ್ನು ಅಕ್ರಮವಾಗಿ ವರ್ಗಾಯಿ ಸಲಾಗಿದೆ ಎಂದು ಆರೋಪಿಸಿ ದ.ಕ. ಜಿಲ್ಲಾ ಬಿಜೆಪಿಯಿಂದ ಕ್ಲಾಕ್‌ಟವರ್ ಬಳಿ ನಡೆದ ಪ್ರತಿಭಟನೆ ಹಾಗೂ ಡಿಸಿ ಕಚೇರಿಗೆ ಮುತ್ತಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಿದ್ದರಾಮಯ್ಯ ಸರಕಾರ ಶೇ.80 ಕಮಿಷನ್ ಸರಕಾರ ಎಂದು ಟೀಕಿಸಿದರು.
ಬೆಲೆ ಏರಿಕೆಯೇ ಕಾಂಗ್ರೆಸ್ ಸರ ಕಾರದ ಸಾಧನೆ ಯಾಗಿದ್ದು, ಈಗ ವಾಲ್ಮೀಕಿನಿಗಮದ ಹಣವನ್ನು ಪೂರ್ಣ ನುಂಗಿ
ನೀರು ಕುಡಿದಿದೆ. ಸರಕಾರದ ವಿರುದ್ಧ ಒಂದರ ಮೇಲೊಂದರಂತೆ ಪ್ರಕರಣ ಗಳು ಅಂಟಿಕೊಳ್ಳುತ್ತಿದ್ದು,ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾ ಮಯ್ಯ ರಾಜೀನಾಮೆ ನೀಡಬೇಕು ಎಂದು ಶಾಸಕ ವೇದವ್ಯಾಸ್ ಕಾಮತ್ ಆಗ್ರಹಿಸಿದ್ದಾರೆ.
ಇಲಾಖೆಯಲ್ಲಿ ಇಷ್ಟೊಂದು ದೊಡ್ಡ ಭ್ರಷ್ಟಾಚಾರ ನಡೆದು ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಸಿಎಂ ಏನೂ ಆಗಿಲ್ಲ ಎನ್ನುವಂತೆ ವರ್ತಿಸುತ್ತಿರುವುದು ನಾಚಿಕೆಗೇಡು. ಬಡ ಜನರಿಗೆ 2 ಸಾವಿರ ರೂ. ನೀಡಿ ಅವರಿಂದ 10 ಸಾವಿರ ರೂ. ದೋಚುತ್ತಿದ್ದಾರೆ ಎಂದರು.
ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರಕಾರ ಹೈಕಮಾಂಡ್‌ನ ಎಟಿಎಂ ಎಂದು ಹೇಳಿದರು.
ಇದು ಗೋಲ್ ಮಾಲ್ ಸರಕಾರ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಟೀಕಿಸಿದರು.ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಎಸ್‌ಟಿ ಮೋರ್ಚಾದ ಅಧ್ಯಕ್ಷ ಹರೀಶ್ ಬಿಜತ್ರೆ, ಎಸ್‌ಸಿ ಮೋರ್ಚಾದ ಅಧ್ಯಕ್ಷ ಜಗನ್ನಾಥ್ ಬೆಳ್ವಾಯಿ, ಉಪಮೇಯರ್ ಸುನೀತಾ, ಪ್ರಮುಖರಾದ ಮೋನಪ್ಪ ಭಂಡಾರಿ, ಹರಿಕೃಷ್ಣ ಬಂಟ್ವಾಳ್, ಸಂತೋಷ್ ಕುಮಾರ್ ಶೆಟ್ಟಿ ಬೋಳಿಯಾರ್, ರವೀಂದ್ರ ಶೆಟ್ಟಿ, ಯತೀಶ್, ಕಿಶೋರ್ ಕೊಟ್ಯಾಡಿ, ನಿತಿನ್ ಕುಮಾರ್, ಸುಲೋಚನ ಭಟ್, ದಿನೇಶ್ ಅಮೂrರು ಮತ್ತಿತರರು ಭಾಗವಹಿಸಿದ್ದರು.
ತಾಕತ್ತಿದ್ದರೆ ವಕ್ಫ್ ಬೋರ್ಡ್ ಹಣ ವರ್ಗಾಯಿಸಲಿ
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, ವಾಲ್ಮೀಕಿ ನಿಗಮದ ಹಣವನ್ನು ಬೇನಾಮಿಗೆ ವರ್ಗಾಯಿಸಲಾಗಿದೆ. ಸಿದ್ದರಾಮಯ್ಯಗೆ ತಾಕತ್ತಿದ್ದರೆ ವಕ್ಫ್ ಬೋರ್ಡ್ ಹಾಗೂ ಕುರುಬ ನಿಗಮದ ಹಣ ವರ್ಗಾಯಿಸಲಿ ಎಂದು ಸವಾಲು ಹಾಕಿದರು. ಸಮಾನ ನ್ಯಾಯ ಕೊಡುವುದಾಗಿ ಸಿಎಂ ಬಿಟ್ಟಿ ಭಾಗ್ಯಕ್ಕೆ ಎಸ್ಸಿ ನಿಗಮದ ಹಣ ವರ್ಗಾಯಿಸಲಾಗಿದೆ. ಈಗ ಎಸ್ಟಿ ನಿಗಮದ ಹಣ ವರ್ಗಾಯಿಸಿದ್ದು, ವಾಪಸ್ ತರಬೇಕು ಎಂದು ಆಗ್ರಹಿಸಿದರು.
ಮಾತಿನ ಚಕಮಕಿ; ವಾಗ್ವಾದ
ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಮುಂದಾದ ಬಿಜೆಪಿ ಕಾರ್ಯಕರ್ತೆಯರನ್ನು ತಡೆದು ವಶಕ್ಕೆ ಪಡೆಯುವ ವೇಳೆ ಪೊಲೀಸ್ ಮಹಿಳಾ ಸಿಬಂದಿ ಸೀರೆ ಎಳೆದಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತೆಯರು ಆಕ್ರೋಶ ವ್ಯಕ್ತಪಡಿಸಿದರು. ಕಾರ್ಪೊರೇಟರ್ ರೂಪಶ್ರೀ ಪೂಜಾರಿ, ಪೂರ್ಣಿಮಾ ಹಾಗೂ ಇತರ ಕಾರ್ಯಕರ್ತೆಯರು ರಸ್ತೆಯಲ್ಲಿ ಕುಳಿತು ಪೊಲೀಸರ ವಿರುದ್ಧ ಅಸಮಾಧಾನ ಹೊರಹಾಕಿದರು. ಬಳಿಕ ಹಿರಿಯ ಮಹಿಳಾ ಅಧಿಕಾರಿಗಳು ಅವರ ಮನವೊಲಿಕೆ ಮಾಡಿದರು.
ಮುತ್ತಿಗೆಗೆ ಯತ್ನ; ಪೊಲೀಸ್ ವಶಕ್ಕೆ
ಕ್ಲಾಕ್ ಟವರ್ ಬಳಿ ಪ್ರತಿಭಟನೆ ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಪ್ರತಿಭಟನಕಾರರು ಮುಂದಾದರು. ಕ್ಲಾಕ್
ಟವರ್ ನಿಂದ ಮೆರವಣಿಗೆ ಆರಂಭಿ ಸಿದ ವೇಳೆಯೇ ಪೊಲೀಸರು ಎರಡೂ ಕಡೆ ಬ್ಯಾರಿಕೇಡ್‌ಗಳನ್ನು ಇಟ್ಟು ಪ್ರತಿಭಟನೆ ನಿರತರನ್ನು ತಡೆದರು. ಆದರೆ ಬ್ಯಾರಿಕೇಡ್ ತಳ್ಳಿ ಮುನ್ನುಗಿದರು. ಈ ವೇಳೆ ನಾಯ ಕರು ಹಾಗೂ ಕಾರ್ಯಕರ್ತರನ್ನು ಪೊಲೀ ಸರು ವಶಕ್ಕೆ ಪಡೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
New Products KMF: ಮಾರುಕಟ್ಟೆಗೆ ಬಂತು “ನಂದಿನಿ’ ಇಡ್ಲಿ, ದೋಸೆ ಹಿಟ್ಟು
GST: ಖರೀದಿ, ಮಾರಾಟ ದರದ ವ್ಯತ್ಯಾಸಕ್ಕಷ್ಟೇ 18% ಜಿಎಸ್‌ಟಿ
Pro Kabaddi League-11: ಇಂದು ಎಲಿಮಿನೇಟರ್ ಸ್ಪರ್ಧೆ ಸೋತವರು ಮನೆಗೆ, ಗೆದ್ದವರು ಸೆಮಿಗೆ
ICC : 904 ರೇಟಿಂಗ್ ಅಂಕ ನೂತನ ಎತ್ತರಕ್ಕೆ ಜಸ್‌ಪ್ರೀತ್ ಬುಮ್ರಾ
Vijay Hazare Trophy: ಇಂದು ರಾಜ್ಯಕ್ಕೆ ಪಂಜಾಬ್ ಎದುರಾಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.