ಬಲಿಷ್ಠ ಬೂತ್ ಸಂಘಟನೆಯಿಂದ ಬಿಜೆಪಿ ಸದೃಢ: ಪ್ರಭು
ಕರಿಂಕ: ಬಿಜೆಪಿ ಬೂತ್ ಸಮಿತಿ ಪದಾಧಿಕಾರಿಗಳ ಆಯ್ಕೆ
Team Udayavani, Sep 26, 2019, 5:13 AM IST
ವಿಟ್ಲ: ಪಕ್ಷದ ತತ್ವ ಸಿದ್ಧಾಂತವನ್ನು ಪಾಲಿಸಿಕೊಂಡು ಬೂತ್ ಮಟ್ಟದಲ್ಲಿ ಪಕ್ಷವನ್ನು ಇನ್ನಷ್ಟು ಬಲಪಡಿಸಿ ಸಂಘಟನೆ ಯನ್ನು ಮನೆ ಮನೆಗೆ ಮುಟ್ಟಿಸುವ ಜವಾಬ್ದಾರಿ ಬೂತ್ ಪ್ರಮುಖ್ ಸಂಘಟಕರದ್ದಾಗಿದೆ. ಇದರಿಂದ ಪಕ್ಷ ಸದೃಢ ವಾಗುವುದು ಎಂದು ತಾ.ಪಂ. ಸದಸ್ಯ ಪ್ರಭಾಕರ ಪ್ರಭು ಅವರು ಹೇಳಿದರು.
ಸೆ.23ರಂದು ಬಿಜೆಪಿ ಬಂಟ್ವಾಳದ ವತಿಯಿಂದ ಅನಂತಾಡಿ ಗ್ರಾ.ಪಂ. ವ್ಯಾಪ್ತಿಯ ಕರಿಂಕ ಜೋಗೊಟ್ಟು ಮನೆ ಯಲ್ಲಿ ಬೂತ್ ನಂ. 208ಗೆ ನೂತನ ಬೂತ್ ಸಮಿತಿ ಪದಾಧಿಕಾರಿಗಳ ನೂತನ ಆಯ್ಕೆ ಪ್ರಕ್ರಿಯೆಯನ್ನು ಅವರು ಮತ್ತು ಉಳಿ ಗ್ರಾ.ಪಂ. ಸದಸ್ಯ ಚಿದಾನಂದ ರೈ ನೆರವೇರಿಸಿ ಬಳಿಕ ಮಾತನಾಡಿದರು.
ಪ್ರಾಮಾಣಿಕ ಸೇವೆ
ಬೂತ್ ಮಟ್ಟದ ಕಾರ್ಯಕರ್ತನೂ ಪ್ರಾಮಾಣಿಕ ಸೇವೆಯಿಂದ ಬಹು ಎತ್ತರಕ್ಕೆ ಬೆಳೆಯಲು ಸಾಧ್ಯ ಎಂಬುವುದಕ್ಕೆ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಆಯ್ಕೆಗೊಂಡ ಸಂಸದ ನಳಿನ್‌ಕುಮಾರ್ ಕಟೀಲು ಮಾದರಿ ಯಾಗಿದ್ದಾರೆ ಎಂದರು.
ಬೂತ್‌ನ ನೂತನ ಅಧ್ಯಕ್ಷರಾಗಿ ನಾಗೇಶ್ ಭಂಡಾರಿ ಕರಿಂಕ ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಕಿರಣ್ ಪೂಜಾರಿ ಗೋಳಿಕಟ್ಟೆ, ಕಾರ್ಯದರ್ಶಿಗಳಾಗಿ ಶಿವ ಕುಮಾರ್ ಮಣಿಯಾಣಿ ದೇವಿನಗರ, ಕೇಶವ ಆಚಾರ್ಯ ಸಂಕೇಶ ಆಯ್ಕೆ ಯಾದರು. ಸಮಿತಿ ಸದಸ್ಯರಾಗಿ ಸುರೇಶ್ ವಿ.ಎಂ., ಕೃಷ್ಣಪ್ಪ ಗೌಡ, ಬಾಲಕೃಷ್ಣ ಪೂಜಾರಿ, ಆನಂದ ಭಂಡಾರಿ, ವೆಂಕಟೇಶ ಕೋಟ್ಯಾನ್, ಉಮೇಶ್ ನಿಡ್ಯಾರ, ಸಂಕಪ್ಪ ಕೂಡು ರಸ್ತೆ, ಪ್ರಖ್ಯಾತ್ ಹೆಗ್ಡೆ, ವಸಂತಿ, ಗೀತಾ ಚಂದ್ರಶೇಖರ, ಸುಜಾತಾ ಬಾಕಿಲ, ಸಂಧ್ಯಾ ಆಚಾರ್ಯ, ಶಶಿಕಲಾ, ಧನಂಜಯ ಗೌಡ, ಹರೀಶ್ ಗೌಡ ಪುಳಿತ್ತಡಿ, ಮೋಹನ್ ಗೋಳಿಕಟ್ಟೆ, ಜನಾರ್ದನ ಆಚಾರ್ಯ ಸಂಕೇಶ, ಅಶೋಕ ಜಿ., ಕಿರಣ್ ಭಂಡಾರಿ, ಚಂದ್ರಿಕಾ ಭಂಡಾರಿ, ರವೀಶ್ ಸಂಕೇಶ, ರವಿ ದೇವಿನಗರ, ಚಂದ್ರಶೇಖರ್ ಬಾಬನಕಟ್ಟೆ ಅವರನ್ನು ಆಯ್ಕೆ ಮಾಡಲಾಯಿತು.
ಉಳಿ ಗ್ರಾ.ಪಂ. ಸದಸ್ಯ ಚಿದಾನಂದ ಶೆಟ್ಟಿ, ಅನಂತಾಡಿ ಪಂ. ಅಧ್ಯಕ್ಷ ಸನತ್ ಕುಮಾರ್ ರೈ ಶುಭ ಹಾರೈಸಿದರು. ರೈತಮೋರ್ಚಾ ಬಂಟ್ವಾಳ ತಾ| ಅಧ್ಯಕ್ಷ ತನಿಯಪ್ಪ ಗೌಡ, ಗ್ರಾ.ಪಂ. ಉಪಾಧ್ಯಕ್ಷೆ ಕವಿತಾ ಉಮೇಶ್, ಗ್ರಾ.ಪಂ. ಸದಸ್ಯೆ ವಸಂತಿ ನಾಯ್ಕ, ಪಕ್ಷದ ಪ್ರಮುಖರಾದ ಚಂದ್ರಶೇಖರ ಕರ್ಕೇರ, ಅಪ್ಪಯ ಪಾಟಾಳಿ ಉಪಸ್ಥಿತರಿದ್ದರು.
ನಾಗೇಶ್ ಭಂಡಾರಿ ಸ್ವಾಗತಿಸಿ, ಜಯರಾಮ ಆಚಾರ್ಯ ವಂದಿಸಿದರು.
ಪಕ್ಷಕ್ಕಾಗಿ ಸೇವೆ
ಕ್ಷೇತ್ರದ ಅಭಿವೃದ್ಧಿ ಯೋಜನೆಯಲ್ಲಿ ವಿವಿಧ ಇಲಾಖೆಗಳಿಂದ ಬಿಡುಗಡೆಯಾದ ವಿವಿಧ ಅನುದಾನವನ್ನು ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಅವರು ಯಾವುದೇ ತಾರತಮ್ಯವಿಲ್ಲದೆ ಪ್ರತೀ ಗ್ರಾಮ ಮತ್ತು ಬೂತ್‌ಗಳಿಗೆ ತನ್ನ ಇತಿಮಿತಿಯಲ್ಲಿ ಹಂಚಿಕೆ ಮಾಡಿರುತ್ತಾರೆ. ಕಾರ್ಯಕರ್ತರು ಯಾವುದೇ ಗೊಂದಲ ಮಾಡದೆ ಪಕ್ಷಕ್ಕಾಗಿ ಸೇವೆ ಮಾಡುವುದರ ಮೂಲಕ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಆಶಯವನ್ನು ಸಾಕಾರಗೊಳಿಸೋಣ.
-ಪ್ರಭಾಕರ ಪ್ರಭು, ತಾ.ಪಂ. ಸದಸ್ಯರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bareilly Court: ಪ್ಯಾಲೆಸ್ತೀನ್ ಪರ ಘೋಷಣೆ: ಸಂಸದ ಒವೈಸಿಗೆ ಸಮನ್ಸ್
Sajipamunnur: ಅಪಘಾತದ ವೇಳೆ ಗೋಮಾಂಸ ಸಾಗಾಟ ಪತ್ತೆ; ಪ್ರಕರಣ ದಾಖಲು
Davangere:ಡಾ| ಬಿ.ಆರ್. ಅಂಬೇಡ್ಕರ್ ಅವಹೇಳನ; ಶಾ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ
ಸರಣಿ ರಜೆ-ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ
ಸಿ.ಟಿ.ರವಿ ಆ ಪದ ಬಳಸಿಲ್ಲವಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ: ಸಚಿವೆ ಲಕ್ಷ್ಮೀ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.