ಉಳ್ಳಾಲ: ಕೋಟೆಕಾರು ಪಟ್ಟಣ ಪಂಚಾಯತ್ ನಲ್ಲಿ ಅಧಿಕಾರ ಉಳಿಸಿಕೊಂಡ ಬಿಜೆಪಿ
Team Udayavani, Dec 30, 2021, 10:06 AM IST
ಉಳ್ಳಾಲ: ಕೋಟೆಕಾರು ಪಟ್ಟಣ ಪಂಚಾಯತ್‍ನ ಮತ ಎಣಿಕೆ ಮಂಗಳೂರು ತಾಲೂಕು ಪಂಚಾಯತ್ ನಲ್ಲಿ ಗುರುವಾರ ನಡೆದಿದ್ದು, 17 ಸ್ಥಾನಗಳಲ್ಲಿ ಬಿಜೆಪಿ 11 ಸ್ಥಾನಗಳನ್ನು ಪಡೆದು ಸ್ಪಷ್ಟ ಬಹುಮತದೊಂದಿಗೆ ಪಟ್ಟಣ ಪಂಚಾಯತ್ ಅಧಿಕಾರ ಉಳಿಸಿಕೊಂಡಿದೆ.
ಕಳೆದ ಬಾರಿ 11 ಸ್ಥಾನಗಳನ್ನು ಪಡೆದಿದ್ದ ಬಿಜೆಪಿ ಈ ಬಾರಿ 11 ಸ್ಥಾನಗಳನ್ನು ಪಡೆದರೆ ಕಳೆದ ಬಾರಿ 4 ಸ್ಥಾನಗಳನ್ನು ಪಡೆದಿದ್ದ ಕಾಂಗ್ರೆಸ್ 4 ಸ್ಥಾನಗಳನ್ನು ಉಳಿಸಿಕೊಂಡಿದೆ. ಒಂದು ಸ್ಥಾನ ಪಡೆದಿದ್ದ ಎಸ್‍ಡಿಪಿಐ ಒಂದೇ ಸ್ಥಾನವನ್ನು ಉಳುಸಿ ಕೊಂಡಿದೆ. ಪಕ್ಷೇತರ ಅಭ್ಯರ್ಥಿ ಒಂದು ಸ್ಥಾನವನ್ನು ಪಡೆದುಕೊಂಡರೆ, ಕಳೆದ ಬಾರಿ ಒಂದು ಸ್ಥಾನ ಪಡೆದಿದ್ದ ಸಿಪಿಐಎಂ ಈ ಬಾರಿ ಶೂನ್ಯ ಸಂಪಾದನೆ ಮಾಡಿದೆ.
ಇದನ್ನೂ ಓದಿ:ಬಿಡದಿ ಪುರಸಭೆಯಲ್ಲಿ ಜೆಡಿಎಸ್ ಗೆ ಅಧಿಕಾರ: ಎಲ್ಲಾ ವಾರ್ಡುಗಳಲ್ಲಿ ಠೇವಣಿ ಕಳೆದುಕೊಂಡ ಬಿಜೆಪಿ
ಬಿಜೆಪಿ ಮತ್ತು ಕಾಂಗ್ರೆಸ್ ಎಲ್ಲಾ 17 ಸ್ಥಾನಗಳಲ್ಲಿ ಸ್ಪರ್ಧೆಯಲ್ಲಿದ್ದರೆ, ಎಸ್‍ಡಿಪಿಐ 6 ಸ್ಥಾನಗಳಲ್ಲಿ ಮೂರು ಸ್ಥಾನಗಳಲ್ಲಿ ಪಕ್ಷೇತರರು, ಸಿಪಿಐ ಎಂ 2 ಸ್ಥಾನಗಳಲ್ಲಿ ಸ್ಪರ್ಧೆಯಲ್ಲಿದ್ದರು.
ಮೂರು ಮತಗಳ ಅಂತರದಲ್ಲಿ ಸೋತ ಕಾಂಗ್ರೆಸ್ ಅಭ್ಯರ್ಥಿ: ವಾರ್ಡ್ 13 ಪನೀರ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಫೀಯಾ ಅವತು ಎಸ್ ಡಿಪಿಐಯ ಸೆಲಿಮಾಬಿ ಹಸೀನಾ ಶಮೀರ್ ಅವರ ಎದುರು ಮೂರು ಮತಗಳ ಅಂತರದಲ್ಲಿ ಸೋಲಿ ಅನುಭವಿಸಿದರು. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಫೀಯಾ 226 ಮತಗಳನ್ನು ಪಡೆದರೆ ವಿಜೇತ ಎಸ್ ಡಿಪಿಐ ಅಭ್ಯರ್ಥಿ ಸೆಲಿಮಾಬಿ ಹಸೀನಾ 229 ಅಲ್ಪಮತಗಳ ಜಯಗಳಿಸಿದರು.
ಇದನ್ನೂ ಓದಿ:ಸ್ಥಳೀಯ ಸಂಸ್ಥೆ ಚುನಾವಣೆ: ಕಾಪು ಪುರಸಭೆ ಬಿಜೆಪಿ ತೆಕ್ಕೆಗೆ
ವಿಜೇತರ ವಿವರ
ವಾರ್ಡ್ 1: ಅಡ್ಕ ಕಾಳಿಕಾಂಬ
ರಾಘವ ಗಟ್ಟಿ (ಬಿಜೆಪಿ)
ವಾರ್ಡ್ 2: ಕನೀರುತೊಟ,
ಭವಾನಿ ದೇವದಾಸ್ (ಬಿಜೆಪಿ)
ವಾರ್ಡ್ 3: ಮಾಡೂರು
ಸುಜಿತ್ ಮಾಡೂರು(ಬಿಜೆಪಿ)
ವಾರ್ಡ್ 4; ಬಲ್ಯ
ಕಿರಣ್ ಕುಮಾರ್ (ಬಿಜೆಪಿ)
ವಾರ್ಡ್ 5: ಬಗಂಬಿಲ ಸೈಟ್
ಪ್ರವೀಣ್ ಬಗಂಬಿಲ (ಬಿಜೆಪಿ)
ವಾರ್ಡ್ 6: ವೈದ್ಯನಾಥನಗರ ಬಗಂಬಿಲ
ದಿವ್ಯಾ ಸತೀಶ್ (ಬಿಜೆಪಿ)
ವಾರ್ಡ್ 7: ಸುಳ್ಳಂಜೀರು, ಸಂಕೊಳಿಗೆ
ಉದಯ ಕುಮಾರ್ ಶೆಟ್ಟಿ (ಬಿಜೆಪಿ)
ವಾರ್ಡ್ 8: ತಾರಿಪಡ್ಪು
ಇಸಾಕ್ (ಕಾಂಗ್ರೆಸ್)
ವಾರ್ಡ್ 9: ಶಾರದಾನಗರ
ಅನಿತಾ ನಾರಾಯಣ (ಬಿಜೆಪಿ)
ವಾರ್ಡ್ 10: ಕುಶಾಲ್‍ನಗರ
ಧೀರಾಜ್ ಕುಶಾಲ್‍ನಗರ(ಬಿಜೆಪಿ)
ವಾರ್ಡ್ 11 : ಮಡ್ಯಾರ್
ಹರೀಶ್ ರಾವ್ (ಪಕ್ಷೇತರ)
ವಾರ್ಡ್ 12: ಜಲಾಲ್ ಭಾಗ್
ಆಯೇಷಾ ಜಲಾಲ್ ಭಾಗ್ (ಕಾಂಗ್ರೆಸ್)
ವಾರ್ಡ್ 13: ಪನೀರ್
ಸೆಲಿಮಾಬಿ ಹಸೀನಾ ಶಮೀರ್ (ಎಸ್ ಡಿಪಿ ಐ)
ವಾರ್ಡ್ 14: ಮಿತ್ರನಗರ
ಜಗದೀಶ ಕೊಂಡಾಣ (ಬಿಜೆಪಿ)
ವಾರ್ಡ್ 15: ಕೊಂಡಾಣ
ನವೀನ್ ಕೊಂಡಾಣ (ಬಿಜೆಪಿ)
ವಾರ್ಡ್ 16: ಅಜ್ಜಿನಡ್ಕ
ಅಹ್ಮದ್ ಬಾವ ಕೋಟೆಕಾರು (ಕಾಂಗ್ರೆಸ್))
ವಾರ್ಡ್ 17: ಕೋಮರಂಗಳ
ಜುಬೈದಾ (ಕಾಂಗ್ರೆಸ್)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.