ಬಿಜೆಪಿಗೆ ಅಚ್ಚರಿ; ಕಾಂಗ್ರೆಸ್‌ಗೆ ಅಂತರದ ಆಘಾತ


Team Udayavani, May 25, 2019, 6:00 AM IST

w-18

ಮಂಗಳೂರು: ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಈ ಬಾರಿಯ ಗೆಲುವಿನ ಅಂತರವು ಬಿಜೆಪಿಗೆ ಅಚ್ಚರಿ ತಂದಿದ್ದರೆ, ಕಾಂಗ್ರೆಸ್‌ಗೆ ಆಘಾತ ಮೂಡಿಸಿದೆ. ಬಿಜೆಪಿ ಅಭ್ಯರ್ಥಿ ನಳಿನ್‌ ಅವರು ಕಾಂಗ್ರೆಸ್‌ ಅಭ್ಯರ್ಥಿ ಮಿಥುನ್‌ ರೈ ವಿರುದ್ಧ ಪಡೆದಿರುವ 2,72,621 ಮತಗಳ ಅಂತರದ ಜಯವು ಬಿಜೆಪಿ ಮಾತ್ರವಲ್ಲ, ರಾಜಕೀಯ ವಿಶ್ಲೇಷಕರ ವಿಶ್ಲೇಷಣೆಗೂ ಮೀರಿದ ಫಲಿತಾಂಶ ಎನ್ನಬಹುದು.

ನಳಿನ್‌ ಇಷ್ಟು ಅಂತರದ ಜಯ ಗಳಿಸಬಹುದು ಎಂಬುದನ್ನು ಬಿಜೆಪಿಯೇ ನಿರೀಕ್ಷಿಸಿರಲಿಲ್ಲ. ಅದು 2 ಲಕ್ಷದೊಳಗೆ ಇರಬಹುದು ಎಂಬುದು ಪಕ್ಷದ ಆಂತರಿಕ ಸಮೀಕ್ಷೆಯಾಗಿತ್ತು. ಬಿಜೆಪಿ ನಾಯಕರು ಪ್ರಚಾರ ಸಭೆಗಳಲ್ಲಿ, ಪತ್ರಿಕಾಗೋಷ್ಠಿಗಳಲ್ಲಿ ಈ ಬಾರಿ ನಳಿನ್‌ ಸುಮಾರು 2 ಲಕ್ಷ ಮತಗಳ ಅಂತರದಿಂದ ಜಯ ಗಳಿಸುತ್ತಾರೆ ಎಂದು ಹೇಳು ತ್ತಿದ್ದರೂ ಆಂತರಿಕ ವಲಯದಲ್ಲಿ ಒಂದರಿಂದ ಒಂದೂವರೆ ಲಕ್ಷ ಮತಗಳ ಒಳಗಿರಬಹುದು ಎನ್ನುವ ಅಭಿಪ್ರಾಯವಿತ್ತು.

ಕ್ಷೇತ್ರದಲ್ಲಿ ಹೆಚ್ಚಿದ ಮತದಾನ ಮತ್ತು ಟ್ರೆಂಡ್‌ಗಳನ್ನು ಆಧರಿಸಿ ವಿಶ್ಲೇಷಣೆಗಳು ನಡೆದಿದ್ದವು. ಸುಳ್ಯ ಮತ್ತು ಪುತ್ತೂರು ಈ ಬಾರಿಯೂ ಬಿಜೆಪಿಗೆ ಅತ್ಯಧಿಕ ಮುನ್ನಡೆ ಒದಗಿಸಬಹುದು ಎಂದು ಬಿಜೆಪಿ ಲೆಕ್ಕಾಚಾರ ಹಾಕಿತ್ತು. ಈ ನಿರೀಕ್ಷೆ ನಿಜವಾಗಿ, ಸುಳ್ಯ ಅತ್ಯಧಿಕ 47,159 ಮತಗಳ ಮುನ್ನಡೆ ನೀಡಿದೆ.

ಬೆಳ್ತಂಗಡಿಯಲ್ಲಿ 44,760, ಮಂ. ಉತ್ತರದಲ್ಲಿ 46,088 ಮತಗಳ ಮುನ್ನಡೆ ಲಭಿಸಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಂ. ದಕ್ಷಿಣದಲ್ಲಿ ಕಾಂಗ್ರೆಸ್‌ ವಿರುದ್ಧ 16,075 ಅಂತರದಿಂದ ಜಯ ಗಳಿಸಿದ್ದ ಬಿಜೆಪಿ ಈ ಬಾರಿ 20,000 ಮುನ್ನಡೆ ಒದಗಿಸುವ ಗುರಿ ಹೊಂದಿತ್ತು. ಆದರೆ ಮುನ್ನಡೆ ಪ್ರಮಾಣ ದ್ವಿಗುಣಗೊಂಡಿದ್ದು 32,835 ಆಗಿದೆ. ಬಂಟ್ವಾಳದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಜಯದ ಅಂತರ 15,971 ಆಗಿತ್ತು. ಆದರೆ ಈ ಬಾರಿ ಇಲ್ಲೂ ಬಿಜೆಪಿಯ ಮುನ್ನಡೆ ಎರಡು ಪಟ್ಟು ಆಗಿದ್ದು, ಲೀಡ್‌ 32,063 ಮತಗಳು. ಮೂಡುಬಿದಿರೆಯಲ್ಲೂ ಏರಿಕೆಯಾಗಿದ್ದು, 37,255 ಮತಗಳ ಲೀಡ್‌ ದೊರಕಿದೆ.

ಕಾಂಗ್ರೆಸ್‌ಗೆ ಆಘಾತ
ಕ್ಷೇತ್ರವನ್ನು ಕೈವಶ ಮಾಡಿಕೊಳ್ಳಲು ತಂತ್ರಗಳನ್ನು ರೂಪಿಸಿದ್ದ ಕಾಂಗ್ರೆಸ್‌ಗೆ ಫಲಿತಾಂಶ ಆಘಾತ ತಂದಿದೆ. ಬಿಜೆಪಿಗೆ ಮುನ್ನಡೆ ಒದಗಿಸುತ್ತಿರುವ ಪುತ್ತೂರು, ಸುಳ್ಯಗಳನ್ನು ಅದು ಹೆಚ್ಚು ಕೇಂದ್ರೀಕರಿಸಿತ್ತು. ಒಕ್ಕಲಿಗ ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ಡಿಕೆಶಿ ಮತ್ತು ಸಿಎಂಕುಮಾರಸ್ವಾಮಿ ಅವರನ್ನು ಕರೆಸಿತ್ತು.

ಬಿಜೆಪಿ ಅಭ್ಯರ್ಥಿ ವಿರುದ್ಧ ವ್ಯಕ್ತವಾಗುತ್ತಿದ್ದ ಅಸಮಾಧಾನ ತನ್ನ ಮತಗಳಾಗಿ ಪರಿವರ್ತನೆಯಾಗು ತ್ತವೆ ಎಂಬ ಲೆಕ್ಕಾಚಾರವೂ ಕಾಂಗ್ರೆಸ್‌ನಲ್ಲಿತ್ತು. ಸುಳ್ಯ, ಪುತ್ತೂರು ಭಾಗಗಳಲ್ಲಿ ಹೆಚ್ಚಿನ ಮತ ಗಳಿಸಿ ಬಿಜೆಪಿ ಲೀಡ್‌ ಕಡಿಮೆ ಮಾಡುವುದು ಮತ್ತು ಮಂಗಳೂರು, ಮಂ. ದಕ್ಷಿಣ ಮತ್ತು ಉತ್ತರಗಳಲ್ಲಿ ಇದನ್ನು ಸರಿದೂಗಿಸಿ ಮುನ್ನಡೆಯುವುದು ಅದರ ತಂತ್ರವಾಗಿತ್ತು. ಆದರೆ ಸುಳ್ಯ,ಪುತ್ತೂರು ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಗಣನೀಯವಾಗಿ ವೃದ್ಧಿಸುವುದರ ಜತೆಗೆ ಇತರ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ಗೆ ನಿರೀಕ್ಷಿತ ಮತ ಬಂದಿಲ್ಲ. ಹೆಚ್ಚು ನಿರೀಕ್ಷೆ ಇದ್ದ ಮಂಗಳೂರು ಕ್ಷೇತ್ರದಲ್ಲೂ ಮುನ್ನಡೆಯಲ್ಲಿ ಇಳಿಕೆ ಆಗಿದೆ.

ಟಾಪ್ ನ್ಯೂಸ್

Congress; Dinner meeting does not need political significance: Satish Jarkiholi

Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್‌ ಜಾರಕಿಹೊಳಿ

prahlad jo shi

Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು‌ ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ

ಈಶ್ವರಪ್ಪ

Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ

Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು

Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು

Rohit Sharma; ಮುಗಿಯಿತಾ ರೋಹಿತ್‌ ಕ್ರಿಕೆಟ್‌ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?

Rohit Sharma; ಮುಗಿಯಿತಾ ರೋಹಿತ್‌ ಕ್ರಿಕೆಟ್‌ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್‌ ಪರದಾಟ

Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್‌ ಪರದಾಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7

Mangaluru: ಪಿಎಂ ಸ್ವನಿಧಿ ಯೋಜನೆ; ನಗರದಲ್ಲಿ 17.87 ಕೋ.ರೂ. ಸಾಲ ವಿತರಣೆ

6

Mangaluru: ಇ ರಿಕ್ಷಾಗಳಿಗೆ ಮಹಿಳಾ ಸಾರಥಿ ಪ್ರಯೋಗ ವಿಫ‌ಲ

5

Mangaluru: ಮುಂದಿನ ವರ್ಷ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ; ಮುಲ್ಲೈ ಮುಗಿಲನ್‌

4

Mangaluru: ಮತ್ತೆ ಫ್ಲೆಕ್ಸ್‌ , ಬ್ಯಾನರ್‌ಗಳ ಉಪಟಳ

1

Ullal: ಸೋಮೇಶ್ವರ ಬೀಚ್‌; ಮೂಲಸೌಕರ್ಯ ಕಣ್ಮರೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

9-ckm

Chikkamagaluru: ರಾಜ್ಯ ಹೆದ್ದಾರಿ ರಸ್ತೆಯಲ್ಲಿ ರೌಂಡ್ಸ್ ಹಾಕಿದ ಒಂಟಿಸಲಗ

Congress; Dinner meeting does not need political significance: Satish Jarkiholi

Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್‌ ಜಾರಕಿಹೊಳಿ

8

Udupi: ಬೀದಿ ನಾಯಿಗಳಿಗೆ 29.13 ಲಕ್ಷ ರೂ. ವೆಚ್ಚ!

prahlad jo shi

Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು‌ ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ

7

Mangaluru: ಪಿಎಂ ಸ್ವನಿಧಿ ಯೋಜನೆ; ನಗರದಲ್ಲಿ 17.87 ಕೋ.ರೂ. ಸಾಲ ವಿತರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.