ಅಲೆಗಳ ಅಬ್ಬರಕ್ಕೆ ಸಿಲುಕಿ ದಂಡೆಗೆ ಅಪ್ಪಳಿಸಿದ ದೋಣಿ ಜಖಂ
Team Udayavani, May 7, 2019, 3:00 AM IST
ಮಂಗಳೂರು: ನಗರದ ಹಳೇ ಬಂದರು ದಕ್ಕೆಯಲ್ಲಿ ಹಗ್ಗ ಕಟ್ಟಿ ಲಂಗರು ಹಾಕಿದ್ದ ಪ್ರಾವಿಡೆನ್ಸ್’ ಹೆಸರಿನ ಮೀನುಗಾರಿಕಾ ದೋಣಿ (ಟ್ರಾಲ್ ಬೋಟ್) ಸೋಮವಾರ ಮುಂಜಾನೆ ಹಗ್ಗ ತುಂಡಾಗಿ ಸುಮಾರು 400 ಮೀ. ದೂರ ನದಿ ನೀರಿನಲ್ಲಿ ಚಲಿಸಿ ಅಳಿವೆ ಬಾಗಿಲಿನ ಬಳಿ ದಡಕ್ಕೆ ಅಪ್ಪಳಿಸಿ ಕಲ್ಲಿನ ಮೇಲೆ ಬಿದ್ದು ಹಾನಿಗೀಡಾಗಿದೆ.
ಬಜಾಲ್‌ನ ರೋನಿ ಮತ್ತು ಮೌರಿಸ್ ಡಿ’ಸೋಜಾ ಅವರ ಮಾಲೀಕತ್ವದ ಈ ಬೋಟ್ ಸಹಿತ ಹಲವು ಬೋಟ್‌ಗಳು 2 ತಿಂಗಳಿಂದ ಹೊಗೆ ಬಜಾರ್‌ನ ಹೊಸ ದಕ್ಕೆಯಲ್ಲಿ ಲಂಗರು ಹಾಕಿದ್ದವು. ಪ್ರಾವಿಡೆನ್ಸ್’ ಬೋಟ್ ಸಹಿತ ನಾಲ್ಕು ಬೋಟ್‌ಗಳನ್ನು ಒಂದೇ ಹಗ್ಗದಿಂದ ಕಟ್ಟಿದ್ದು, ಸೋಮವಾರ ಮುಂಜಾನೆ ವೇಳೆಗೆ ಬಲವಾದ ಗಾಳಿ ಬೀಸಿದ ಪರಿಣಾಮ ಸೃಷ್ಟಿಯಾದ ಅಲೆಗಳ ರಭಸಕ್ಕೆ ಹಗ್ಗ ತುಂಡಾಗಿ ಫಲ್ಗುಣಿ ನದಿಯಲ್ಲಿ ತೇಲುತ್ತಾ ಮುಂದೆ ಸಾಗಿದ್ದವು.
ಪ್ರಾವಿಡೆನ್ಸ್ ಬೋಟ್ ಹೊರತಾಗಿ ಉಳಿದ ಮೂರನ್ನು ರಕ್ಷಿಸುವಲ್ಲಿ ಮೀನುಗಾರರು ಯಶಸ್ವಿಯಾಗಿದ್ದರು. ಬೇರೆ ಬೋಟ್‌ಗಳ ಸಹಾಯದಿಂದ ಅದನ್ನು ನೀರಿಗೆ ಇಳಿಸಿ ದಕ್ಕೆಗೆ ಎಳೆದು ತರಲು ದಿನವಿಡೀ ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ ಎಂದು ಪ್ರಾವಿಡೆನ್ಸ್ ಬೋಟ್‌ನ ಮಾಲಿಕ ಮೌರಿಸ್ ಡಿ’ಸೋಜಾ ತಿಳಿಸಿದ್ದಾರೆ. ಹಾನಿಯ ಪ್ರಮಾಣ ಎಷ್ಟೆಂದು ಅಂದಾಜಿಸಿಲ್ಲ. ಅದನ್ನು ಧಕ್ಕೆಗೆ ತಂದು ಪರಿಶೀಲಿಸಿದ ಬಳಿಕವೇ ನಷ್ಟದ ಪ್ರಮಾಣವನ್ನು ಲೆಕ್ಕ ಹಾಕಲಾಗುವುದು ಎಂದವರು ವಿವರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಅನಧಿಕೃತ ಫ್ಲೆಕ್ಸ್ , ಬ್ಯಾನರ್ ತೆರವು ಆರಂಭ
Ullala: ಉಚ್ಚಿಲದ ರೆಸಾರ್ಟ್ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
MUST WATCH
ಹೊಸ ಸೇರ್ಪಡೆ
Middle class; ಮಧ್ಯಮ ವರ್ಗದವರಿಗೆ ಪರಿಹಾರ: ಎಕ್ಸ್ ಬಳಕೆದಾರಗೆ ನಿರ್ಮಲಾ ಪ್ರತಿಕ್ರಿಯೆ
ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?
Big Boss ಸ್ಪರ್ಧಿಯಾಗಿದ್ದ ನಟ-ಗಾಯಕ ಮಾದಕ ವಸ್ತು ಸಹಿತ ಬಂಧನ
Pushpa 2 trailer: ಪೈಸಾ ವಸೂಲ್ ಅವತಾರದಲ್ಲಿ ʼಪುಷ್ಪರಾಜ್ʼ; ಅಲ್ಲು ಭರ್ಜರಿ ಆ್ಯಕ್ಷನ್
Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.