ಫ‌ಲ್ಗುಣಿ ಹಿನ್ನೀರಿನಲ್ಲಿ ದೋಣಿ ವಿಹಾರ ಯೋಜನೆ ನನೆಗುದಿಗೆ

Team Udayavani, Nov 22, 2018, 11:24 AM IST

22-november-6.gif

ಪಣಂಬೂರು: ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಸಲುವಾಗಿ ಕೂಳೂರಿನ ಫಲ್ಗುಣಿ ಹಿನ್ನೀರಿನಲ್ಲಿ ದೋಣಿ ವಿಹಾರ ಯೋಜನೆ ನನೆಗುದಿಗೆ ಬಿದ್ದಿದೆ. ಮೂಡಬಿದಿರೆ, ಕಾರ್ಕಳ, ಕೂಳೂರು ಸಹಿತ ವಿವಿಧೆಡೆ ದೋಣಿ ವಿಹಾರಕ್ಕೆ ಕಳೆದ ವರ್ಷ ಪ್ರವಾಸೋದ್ಯಮ ಇಲಾಖೆ ಯೋಜನೆ ರೂಪಿಸಿತ್ತು. ಅದರಂತೆ ಮೂಡಬಿದಿರೆಯ ಕೆರೆಯಲ್ಲಿ ಪ್ರಾಯೋಗಿಕವಾಗಿ ದೋಣಿಗಳನ್ನು ಇಳಿಸಲಾಗಿತ್ತು. ಕೂಳೂರು ಹಿನ್ನೀರಿನಲ್ಲಿ ತಲಾ 13 ಲಕ್ಷ ರೂ.ಗೆ ಎರಡು ದೋಣಿಗಳನ್ನು ಪ್ರವಾಸಿಗರ ವಾಯುವಿಹಾರಕ್ಕೆ ನೀಡಲು ಸರಕಾರ ನಿರ್ಧರಿಸಿದ್ದರೂ ಯೋಜನೆ ಮಾತ್ರ ಕಡತ ದಲ್ಲಿಯೇ ಉಳಿದಿದೆ.

ಸುಂದರ ನೈಸರ್ಗಿಕ ತಾಣ
ಕೂಳೂರಿನಿಂದ ತಣ್ಣೀರುಬಾವಿವರೆಗಿನ ಪ್ರದೇಶದ ಸಂಚಾರ ಎಂಥವರಿಗೂ ಮನಸ್ಸಿಗೆ ಮುದನೀಡಬಲ್ಲುದು. ಒಂದೆಡೆ ತಂಪಾಗಿ ಹರಿಯುತ್ತಿರುವ ಫ‌ಲ್ಗುಣಿ ನದಿ, ಇನ್ನೊಂದೆಡೆ ಬೃಹತ್‌ ಕಂಪೆನಿಗಳು, ಕುರುಚಲು ಗಿಡಗಳ ನಡುವೆ ಸ್ವತ್ಛಂದವಾಗಿ ವಿಹರಿಸುತ್ತಿರುವ ನವಿಲುಗಳು, ಸ್ವಲ್ಪವೇ ಅಂತರದಲ್ಲಿ ಸಮುದ್ರ ಹಾಗೂ ನದಿಯ ಸಂಗಮ ಪ್ರದೇಶ. ಇದರ ನಡುವೆ ಜುಳುಜುಳು ಎಂದು ಪ್ರಶಾಂತವಾಗಿ ಹರಿವ ನೀರ ಮೇಲೆ ವಾಯು ವಿಹಾರ ನಡೆಸಲು ಎಂತಹವರಿಗೂ ಮನಸಾಗದಿರದು. ಮಕ್ಕಳಿಂದ ಹಿಡಿದು ಹಿರಿಯರವರೆಗೂ ದೋಣಿವಿಹಾರವೆಂದರೆ ಆಸಕ್ತಿ ಕೆರಳುತ್ತದೆ. ದೋಣಿ ವಿಹಾರ ಮಾಡುತ್ತಲೇ ಸೂರ್ಯಾಸ್ತಮಾನ ನೋಡುತ್ತಾ, ಮುಸ್ಸಂಜೆಯ ಸವಿಯನ್ನು ಅನುಭವಿಸಬಹುದಾಗಿದೆ. 

ಪಣಂಬೂರು ಬೀಚ್‌ ಜಾಗತಿಕವಾಗಿ ಪ್ರಸಿದ್ಧಿಗೊಂಡಿದೆ. ಮಂಗಳೂರು ಬಂದರಿನಿಂದ ಸುಲ್ತಾನ್‌ ಬತ್ತೇರಿವರೆಗೆ ದೋಣಿ ವಿಹಾರವೂ ಖಾಸಗಿ ಒಡೆತನದ ದೋಣಿ ನಿಯಮಿತವಾಗಿ ನಡೆಸುತ್ತಿದೆ. ಇದೀಗ ಇದಕ್ಕೆ ಪೂರಕವಾಗಿ ಕೂಳೂರು ಹಿನ್ನೀರಿನಲ್ಲಿಯೂ ದೋಣಿ ವಿಹಾರ ಕೈಗೊಂಡಲ್ಲಿ ಯಶಸ್ವಿಯಾಗುವುದರಲ್ಲಿ ಸಂಶಯವಿಲ್ಲ. ಪ್ರವಾಸಿಗಳ ಆಗಮನ ಹೆಚ್ಚಾಗುವುದರಿಂದ ಪ್ರವಾಸಿ ತಾಣದ ಸುತ್ತಮುತ್ತ ವ್ಯಾಪಾರ ವಹಿವಾಟು ವೃದ್ಧಿಗೊಂಡು ಆದಾಯವೂ ಹೆಚ್ಚುತ್ತದೆ.

ಅಭಿವೃದ್ಧಿಗೆ ಹಿನ್ನಡೆ
ಸ್ಥಳೀಯ ಹಿನ್ನೀರಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಹಿನ್ನಡೆ ಉಂಟಾಗಿದೆ. ಹೊಸ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಇದುವರೆಗೆ ಹಿಂದಿನ ಸರಕಾರದ ಯೋಜನೆ ಜಾರಿಗೊಳಿಸಿಲ್ಲ. ರಾಜ್ಯದ ಪಣಂಬೂರು ಬೀಚ್‌, ತಣ್ಣೀರು ಬಾವಿ ಬೀಚ್‌, ಪಿಲಿಕುಳ ಮತ್ತಿತರ ಪ್ರದೇಶಗಳು ಈಗಾಗಲೇ ಪ್ರವಾಸೋದ್ಯಮದ ಭೂಪಟದಲ್ಲಿ ಗುರುತಿಸಿಕೊಂಡಿದ್ದು, ಸಮೀಪವೇ ಇರುವ ಫ‌ಲ್ಗುಣಿ ವಾಯು ವಿಹಾರ ಅಭಿವೃದ್ಧಿ ಯೋಜನೆ ಹಾಗೆಯೇ ಉಳಿದಿರುವುದು ಪ್ರವಾಸಿಗರು ಅಮೂಲ್ಯ ನೈಸರ್ಗಿಕ ತಾಣದ ವಿಹಾರ ಅನುಭವವೊಂದನ್ನು ಕಳೆದುಕೊಳ್ಳುವಂತಾಗಿದೆ.

ಅಧಿಕಾರಿಗಳೊಂದಿಗೆ ಚರ್ಚಿಸುವೆ
ಸುರತ್ಕಲ್‌ ಸಮುದ್ರ ತೀರ, ನದಿಗಳ ಸಹಿತ ಪ್ರಾಕೃತಿಕ ಕೊಡುಗೆ ಅಪಾರವಿದ್ದು, ಸದ್ಬಳಕೆ ಮಾಡಿಕೊಳ್ಳಬೇಕಿದೆ. ಆದರೆ ಸರಕಾರ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಿಲ್ಲ. ಅನುದಾನವೂ ಸಾಕಷ್ಟು ಬರುತ್ತಿಲ್ಲ. ಕ್ಷೇತ್ರದ ಅಭಿವೃದ್ಧಿಗೆ ನಾನು ಬದ್ಧನಿದ್ದೇನೆ. ಕೂಳೂರು ಫ‌ಲ್ಗುಣಿ ನದಿಯಲ್ಲಿ ಪ್ರವಾಸೋದ್ಯಮಕ್ಕೆ ಒತ್ತು ನೀಡಿ ದೋಣಿ ವಿಹಾರದ ಪ್ರಸ್ತಾವವಾಗಿದ್ದರೆ ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ. ಅನುದಾನ ಬಿಡುಗಡೆಯಾಗಿರುವ ಬಗ್ಗೆ ಪಡೆದುಕೊಳ್ಳುತ್ತೇನೆ.
 - ಡಾ| ವೈ. ಭರತ್‌ ಶೆಟ್ಟಿ , ಶಾಸಕ

ಟಾಪ್ ನ್ಯೂಸ್

Wadi: ನಿರ್ಜನ ಪ್ರದೇಶದಲ್ಲಿ ಎಸೆದ ನವಜಾತ ಶಿಶುವನ್ನು ಬದುಕಿಸಲು ಪೊಲೀಸರ ಪರದಾಟ

Wadi: ನಿರ್ಜನ ಪ್ರದೇಶದಲ್ಲಿ ಎಸೆದ ನವಜಾತ ಶಿಶುವನ್ನು ಬದುಕಿಸಲು ಪೊಲೀಸರ ಪರದಾಟ

Digital arrest: ವೃದ್ಧೆಗೆ ಡಿಜಿಟಲ್‌ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್‌ ವಂಚಕ

Digital arrest: ವೃದ್ಧೆಗೆ ಡಿಜಿಟಲ್‌ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್‌ ವಂಚಕ

Bhairathi Ranagal Trailer: ʼರೋಣಪುರʼದ ರಣ ಬೇಟೆಗಾರ ಈ ʼಭೈರತಿ ರಣಗಲ್ʼ; ಟ್ರೇಲರ್‌ ಔಟ್

Bhairathi Ranagal Trailer: ʼರೋಣಪುರʼದ ರಣ ಬೇಟೆಗಾರ ಈ ʼಭೈರತಿ ರಣಗಲ್ʼ; ಟ್ರೇಲರ್‌ ಔಟ್

ADGP V/s HDK: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಎಫ್‌ ಐಆರ್‌ ದಾಖಲು-HDK ಎ1

ADGP V/s HDK: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಎಫ್‌ ಐಆರ್‌ ದಾಖಲು-HDK ಎ1

Belagavi: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಮುಗಿದ ಅಧ್ಯಾಯ: ಸಚಿವ ಎಚ್.ಕೆ. ಪಾಟೀಲ್

Belagavi: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಮುಗಿದ ಅಧ್ಯಾಯ: ಸಚಿವ ಎಚ್.ಕೆ. ಪಾಟೀಲ್

MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್

MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್

Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

4(1)

Mudbidri: ರಸ್ತೆಯಲ್ಲೆಲ್ಲ ಹೊಂಡಗಳು ಸಾರ್‌ ಹೊಂಡಗಳು!

Anthamthana Kannada Movie: ಶೂಟಿಂಗ್‌ನತ್ತ ಅಣ್ತಮ್ತನ

Anthamthana Kannada Movie: ಶೂಟಿಂಗ್‌ನತ್ತ ಅಣ್ತಮ್ತನ

45 Movie: ಕರಾಟೆ ಗೊತ್ತುಂಟು, ಹತ್ತಿರ ಬಂದ್ರೆ ಜಾಗ್ರತೆ!

45 Movie: ಕರಾಟೆ ಗೊತ್ತುಂಟು, ಹತ್ತಿರ ಬಂದ್ರೆ ಜಾಗ್ರತೆ!

Wadi: ನಿರ್ಜನ ಪ್ರದೇಶದಲ್ಲಿ ಎಸೆದ ನವಜಾತ ಶಿಶುವನ್ನು ಬದುಕಿಸಲು ಪೊಲೀಸರ ಪರದಾಟ

Wadi: ನಿರ್ಜನ ಪ್ರದೇಶದಲ್ಲಿ ಎಸೆದ ನವಜಾತ ಶಿಶುವನ್ನು ಬದುಕಿಸಲು ಪೊಲೀಸರ ಪರದಾಟ

3

Mangaluru: ಬೇಕು ಇಂದೋರ್‌ ಮಾದರಿ;ದೇಶದ ನಂ.1 ಸ್ವಚ್ಛ ನಗರ ಇಲ್ಲಿಗೆ ಹೇಗೆ ಅನ್ವಯವಾಗುತ್ತದೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.