ಹಳೆ ಬಂದರು: ಲಂಗರು ಹಾಕಿದ್ದ ಬೋಟ್ ಅವಘಡ
Team Udayavani, May 7, 2019, 6:00 AM IST
ಮಂಗಳೂರು: ನಗರದ ಹಳೆ ಬಂದರು ದಕ್ಕೆಯಲ್ಲಿ ಹಗ್ಗ ಕಟ್ಟಿ ಲಂಗರು ಹಾಕಿದ್ದ “ಪ್ರಾವಿಡೆನ್ಸ್’ ಹೆಸರಿನ ಮೀನುಗಾರಿಕಾ ದೋಣಿ (ಟ್ರಾಲ್ ಬೋಟ್) ಸೋಮವಾರ ಮುಂಜಾನೆ ಹಗ್ಗ ತುಂಡಾಗಿ ಸುಮಾರು 400 ಮೀ. ದೂರ ನದಿ ನೀರಿನಲ್ಲಿ ಚಲಿಸಿ ಅಳಿವೆ ಬಾಗಿಲಿನ ಬಳಿ ದಡಕ್ಕೆ ಅಪ್ಪಳಿಸಿ ಕಲ್ಲಿನ ಮೇಲೆ ಬಿದ್ದು ಹಾನಿಗೀಡಾಗಿದೆ.
ಬಜಾಲ್ನ ರೋನಿ ಮತ್ತು ಮೌರಿಸ್ ಡಿ’ಸೋಜಾ ಅವರ ಮಾಲಕತ್ವದ ಈ ಬೋಟ್ ಸಹಿತ ಹಲವಾರು ಬೋಟ್ಗಳು ಸುಮಾರು ಎರಡು ತಿಂಗಳಿಂದ ಹೊಗೆ ಬಜಾರ್ನ ಹೊಸ ದಕ್ಕೆಯಲ್ಲಿ ಲಂಗರು ಹಾಕಿದ್ದವು. “ಪ್ರಾವಿಡೆನ್ಸ್’ ಬೋಟ್ ಸಹಿತ ನಾಲ್ಕು ಬೋಟ್ಗಳನ್ನು ಒಂದೇ ಹಗ್ಗದಿಂದ ಕಟ್ಟಿದ್ದು, ಸೋಮವಾರ ಮುಂಜಾನೆ ವೇಳೆಗೆ ಬಲವಾದ ಗಾಳಿ ಬೀಸಿದ ಪರಿಣಾಮವಾಗಿ ಸೃಷ್ಟಿಯಾದ ಅಲೆಗಳ ರಭಸಕ್ಕೆ ಹಗ್ಗ ತುಂಡಾಗಿ ಫಲ್ಗುಣಿ ನದಿಯಲ್ಲಿ ತೇಲುತ್ತಾ ಮುಂದೆ ಸಾಗಿದ್ದವು. ಪ್ರಾವಿಡೆನ್ಸ್ ಬೋಟ್ ಹೊರತಾಗಿ ಉಳಿದ ಮೂರನ್ನು ರಕ್ಷಿಸುವಲ್ಲಿ ಮೀನುಗಾರರು ಯಶಸ್ವಿಯಾಗಿದ್ದರು.
ಬೇರೆ ಬೋಟ್ಗಳ ಸಹಾಯದಿಂದ ಅದನ್ನು ನೀರಿಗೆ ಇಳಿಸಿ ದಕ್ಕೆಗೆ ಎಳೆದು ತರಲು ದಿನವಿಡೀ ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ ಎಂದು ಪ್ರಾವಿಡೆನ್ಸ್ ಬೋಟ್ನ ಮಾಲಕ ಮೌರಿಸ್ ಡಿ’ಸೋಜಾ ತಿಳಿಸಿದ್ದಾರೆ.
ನಷ್ಟ ಅಂದಾಜಿಸಿಲ್ಲ
ಹಾನಿಯ ಪ್ರಮಾಣ ಎಷ್ಟೆಂದು ಅಂದಾಜಿಸಿಲ್ಲ. ಅದನ್ನು ದಕ್ಕೆಗೆ ತಂದು ಪರಿಶೀಲಿಸಿದ ಬಳಿಕವೇ ನಷ್ಟದ ಪ್ರಮಾಣವನ್ನು ಲೆಕ್ಕ ಹಾಕಲಾಗುವುದು ಎಂದವರು ವಿವರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.