ಬೆಂಗರೆ: ಮೂರು ಸರಕು ನೌಕೆಗಳು ಬೆಂಕಿಗಾಹುತಿ
Team Udayavani, Oct 28, 2022, 8:00 PM IST
ಮಂಗಳೂರು: ಸರಕು ಸಾಗಾಟದ 3 ನೌಕೆಗಳು (ಮಂಜಿ) ಬೆಂಕಿಗಾಹುತಿಯಾದ ಘಟನೆ ಶುಕ್ರವಾರ ಸಂಜೆ ಕಸಬಾ ಬೆಂಗರೆಯಲ್ಲಿ ನಡೆದಿದೆ.
ಲಕ್ಷದ್ವೀಪಕ್ಕೆ ಸರಕುಗಳನ್ನು ಸಾಗಾಟ ಮಾಡುತ್ತಿದ್ದ ಈ ನೌಕೆಗಳನ್ನು ದುರಸ್ತಿ ಕಾರಣಕ್ಕೆ ಎರಡು ವರ್ಷಗಳಿಂದ ನೀರಿನಿಂದ ಮೇಲಕ್ಕೆತ್ತಿ ಇಡಲಾಗಿತ್ತು. ಶನಿವಾರ ಸಂಜೆ 5ರ ಸುಮಾರಿಗೆ ಬೆಂಕಿ ತಗಲಿದೆ. ಭಾರೀ ಪ್ರಮಾಣದ ಬೆಂಕಿಯನ್ನು ನಂದಿಸಲು ಮಂಗಳೂರು ಅಗ್ನಿ ಶಾಮಕ ದಳ ಹಾಗೂ ಎಂಆರ್ಪಿಎಲ್ನ ಅಗ್ನಿಶಾಮಕ ದಳದವರು ತಡರಾತ್ರಿವರೆಗೂ ಶ್ರಮಿಸಿದರು.
ಎಂಎಸ್ವಿ ನಜತ್, ಎಂಎಸ್ವಿ ಅಲ್ ಜಝೀರಾ, ಎಂಎಸ್ವಿ ಅಲಿ ಮದತ್ ಎಂಬ ಈ ಸರಕು ನೌಕೆಗಳು ಲಕ್ಷದ್ವೀಪದ ಉದ್ಯಮಿಗಳಿಗೆ ಸೇರಿದ್ದಾಗಿದ್ದು ಇದರಲ್ಲಿ ಒಂದು ನೌಕೆಯನ್ನು ದುರಸ್ತಿಪಡಿಸಿ ಮತ್ತೆ ಸರಕು ಸಾಗಾಟಕ್ಕೆ ಸಿದ್ಧಗೊಳಿಸಲಾಗಿತ್ತು ಎಂದು ತಿಳಿದು ಬಂದಿದೆ.
ಯಾರೋ ಉರಿಸಿದ ರಾಕೆಟ್ ಪಟಾಕಿ ಬಿದ್ದು ಬೆಂಕಿ ತಗಲಿರುವುದಾಗಿ ಸ್ಥಳೀಯರು ಹೇಳುತ್ತಾರೆ, ಆದರೆ ಪೊಲೀಸರು ಇದನ್ನು ದೃಢಪಡಿಸಿಲ್ಲ.
ಮಂಜಿ ನೌಕೆಗಳು ದೊಡ್ಡ ಗಾತ್ರ ದವುಗಳಾಗಿದ್ದು ಸಾಮಾನ್ಯವಾಗಿ ಲಕ್ಷದ್ವೀಪ ಹಾಗೂ ಮಂಗಳೂರು ಮಧ್ಯೆ ಸರಕು ಸಾಗಾಟಕ್ಕೆ ಬಳಕೆ ಯಾಗು ತ್ತವೆ. ಇವು ಮಂಗಳೂರು ಹಳೆ ಬಂದರಿಗೆ ಬಂದು ಅಲ್ಲಿಂದ ಸರಕು ಕೊಂಡೊಯ್ಯುತ್ತವೆ. ಸದ್ಯ ದುರಸ್ತಿಗಾಗಿ ಬೆಂಗರೆಯ ತೀರಕ್ಕೆ ತರಲಾಗಿದೆ.
ಬೆಂಕಿ ನಿಯಂತ್ರಣಕ್ಕೆ ಹರಸಾಹಸ
ಬೆಂಕಿ ಅವಘಡದಿಂದ ಒಂದು ಮನೆ ಹಾಗೂ ಮೀನು ದಾಸ್ತಾನು ಇಡುವ ಶೆಡ್ಗೂ ಹಾನಿಯಾಗಿದೆ. ಬೆಂಕಿ ನಂದಿಸುವ ಕಾರ್ಯದಲ್ಲಿ ಸ್ಥಳೀಯರು ಕೂಡ ಕೈ ಜೋಡಿಸಿದ್ದರು. ಪಕ್ಕದ ನದಿಗೆ ಪಂಪ್ ಅಳವಡಿಸಿ ನೀರು ಹಾಯಿಸಲಾಯಿತು. ಆದರೆ ಗಾಳಿಯ ತೀವ್ರತೆ ಇದ್ದುದರಿಂದ ಬೆಂಕಿ ನಿಯಂತ್ರಿಸಲು ಹರಸಾಹಸ ಪಡು ವಂತಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!
ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್ಗಳಲ್ಲಿ 31 ಬಾರಿ ಕಪಾಳ ಮೋಕ್ಷ
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.