ಬೋಳಂತಕೋಡಿ ಕನ್ನಡ ಪ್ರಶಸ್ತಿ-2017
Team Udayavani, Nov 23, 2017, 3:04 PM IST
ನಗರ : ಮಾಧ್ಯಮಗಳ ಮೂಲಕ ಜಗತ್ತನ್ನು ನೋಡುವಾಗ ಎಲ್ಲವೂ ಹಾಳಾಗುತ್ತಿದೆ. ಒಳ್ಳೆಯತನವೆಲ್ಲ ನಾಶವಾಗುತ್ತಿದೆ ಎಂಬ ಭಾವನೆ ಬರುವುದು ಸಹಜ. ಇದೇ ಜಗತ್ತಲ್ಲ. ಇದರಾಚೆಗೂ ಬಹುದೊಡ್ಡ ಜಗತ್ತಿದೆ ಎಂದು ಹಿರಿಯ ಹಾಸ್ಯ ಸಾಹಿತಿ ಕು.ಗೋ. (ಹೆರ್ಗ ಗೋಪಾಲ ಭಟ್) ಅವರು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್‌ನ ಪುತ್ತೂರು ತಾಲೂಕು ಘಟಕ, ಜ್ಞಾನಗಂಗಾ ಪುಸ್ತಕ ಮಳಿಗೆ ಪುತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಟೌನ್ ಕೋ ಆಪರೇಟಿವ್ ಬ್ಯಾಂಕ್ ಸಭಾಂಗಣದಲ್ಲಿ ಮಂಗಳವಾರ ಆರಂಭಗೊಂಡ 7 ದಿನಗಳ ಸಾಹಿತ್ಯ ಸೌರಭ- ಪುಸ್ತಕ ಹಬ್ಬದಲ್ಲಿ ಉದ್ಘಾಟನ ಸಮಾರಂಭದಲ್ಲಿ ಬೋಳಂತಕೋಡಿ ಅಭಿಮಾನಿ ಬಳಗ ಕೊಡ ಮಾಡುವ ಬೋಳಂತಕೋಡಿ ಕನ್ನಡ ಪ್ರಶಸ್ತಿ- 2017ನ್ನು ಸ್ವೀಕರಿಸಿ ಮಾತನಾಡಿದರು. ಸಾಹಿತಿ ಮತ್ತು ವಿಮರ್ಶಕ ಬೆಳಗೋಡು ರಮೇಶ್ ಭಟ್ ಅವರು ಕು.ಗೋ. ಅವರ ಬಗ್ಗೆ ಅಭಿನಂದನ ನುಡಿಗಳನ್ನಾಡಿದರು.
ಉದ್ಘಾಟನೆ
ಸಾಹಿತ್ಯ ಸೌರಭ-ಪುಸ್ತಕ ಹಬ್ಬ ಕಾರ್ಯಕ್ರಮವನ್ನು ಪುತ್ತೂರು ರಾಜೇಶ್ ಪವರ್ ಪ್ರಸ್‌ನ ಮಾಲಕರಾದ ಎಂ.ಎಸ್. ರಘುನಾಥ ರಾವ್ ಅವರು ಉದ್ಘಾಟಿಸಿದರು. ಪುತ್ತೂರು ಕರ್ನಾಟಕ ಸಂಘದ ಅಧ್ಯಕ್ಷರಾಗಿ ಎರಡು ದಶಕಗಳ ಕಾಲ ಸೇವೆ ಸಲ್ಲಿಸಿ ನೂರಾರು ಪುಸ್ತಕಗಳನ್ನು ಪ್ರಕಾಶಿಸಿದ ಬೋಳಂತಕೋಡಿ ಈಶ್ವರ ಭಟ್ ಅವರ ಜತೆಗಿನ ಒಡನಾಟವನ್ನು ಹಿರಿಯ ಸಾಹಿತಿ, ವಿಶ್ರಾಂತ ಪ್ರಾಧ್ಯಾಪಕ, ಅಂಕಣಕಾರ ಪ್ರೊ| ವಿ.ಬಿ. ಅರ್ತಿಕಜೆ ನೆನಪಿಸಿಕೊಂಡರು.
ಅಪೂರ್ವ ಕೊಲ್ಯ ಅವರು ಬರೆದ ಚಿತ್ತ ಚೋರ ಕವನ ಸಂಕಲನವನ್ನು ಬಿಡುಗಡೆ ಮಾಡಲಾಯಿತು. ಉಪನ್ಯಾಸಕಿ ಡಾ| ಶೋಭಿತಾ ಸತೀಶ್ ಅವರು ಕೃತಿ ಪರಿಚಯ ಮಾಡಿದರು. ತಾ| ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಐತ್ತಪ್ಪ ನಾಯ್ಕ ಉಪಸ್ಥಿತರಿದ್ದರು. ನ್ಯಾಯವಾದಿ ಕೆ.ಆರ್. ಆಚಾರ್ಯ ಪ್ರಸ್ತಾವಿಸಿದರು. ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ, ಉಪನ್ಯಾಸಕ ಡಾ| ಶ್ರೀಧರ್ ಎಚ್.ಜಿ. ಕಾರ್ಯಕ್ರಮ ನಿರೂಪಿಸಿದರು.
ಜ್ಞಾನ ಗಂಗಾ ಪುಸ್ತಕ ಮಳಿಗೆಯ ಪ್ರಕಾಶ್ ಕೊಡೆಂಕಿರಿ, ಸಾಹಿತ್ಯ ಪರಿಷತ್ ಗೌರವ ಕೋಶಾಧ್ಯಕ್ಷ ಎನ್.ಕೆ. ಜಗನ್ನಿವಾಸ ರಾವ್, ಗೌ.ಕಾರ್ಯದರ್ಶಿ ಸರೋಜಿನಿ ಮೇನಾಲ, ಅಂಕಣಕಾರ, ಪತ್ರಕರ್ತ ನಾ. ಕಾರಂತ ಪೆರಾಜೆ ಮೊದಲಾದವರು ಉಪಸ್ಥಿತರಿದ್ದರು.
ನಮ್ಮಲ್ಲಿ ಸಜ್ಜನರೂ ಇದ್ದಾರೆ
ದಿನ ನಿತ್ಯದ ಜಾಗತಿಕ ವರ್ತಮಾನಗಳನ್ನು ನೋಡುವಾಗ, ಓದುವಾಗ ಇಡೀ ಜಗತ್ತೇ ಕೆಟ್ಟು ಹೋಗಿದೆ ಎಂದು ಅನಿಸಿ ಬಿಡು
ವುದುಂಟು. ಅಂಥದೊಂದು ಅವಸರದ ನಿರ್ಧಾರಕ್ಕೆ ಬರುವುದು ಸರಿಯಲ್ಲ. ಲೋಕವೇ ಹಾಳಾಗಿ ಬಿಟ್ಟಿದೆ ಎಂಬ ಸಿನಿಕತನ ಬೇಡ. ಜಗತ್ತಿನ ಮೂಲೆ ಮೂಲೆಯಲ್ಲೂ ಒಳ್ಳೆಯ ಕೆಲಸಗಳು ನಡೆಯುತ್ತಲೇ, ಒಳ್ಳೆಯ ಜನರು ಬೇಕಾದಷ್ಟಿದ್ದಾರೆ ಕು.ಗೋ. (ಹೆರ್ಗ ಗೋಪಾಲ ಭಟ್) ಹೇಳಿದರು.
ಸಾಹಿತ್ಯ ಸೌರಭ ಪುಸ್ತಕ ಹಬ್ಬ
ಏಳು ದಿನಗಳ ಕಾಲ ಟೌನ್ ಬ್ಯಾಂಕ್ ಸಭಾಭವನದಲ್ಲಿ ನಡೆಯುವ ಸಾಹಿತ್ಯ ಸೌರಭ ಮತ್ತು ಪುಸ್ತಕ ಹಬ್ಬಕ್ಕೆ ಚಾಲನೆ ನೀಡಲಾಯಿತು. ವೈವಿಧ್ಯಮಯ ಪುಸ್ತಕಗಳ ಅಪೂರ್ವ ಪ್ರದರ್ಶನ, ಮಾರಾಟ ಇರಲಿದೆ. ಪ್ರತಿ ದಿನ ಸಂಜೆ 4.30ರಿಂದ ಪುಸ್ತಕ ಬಿಡುಗಡೆ, ಉಪನ್ಯಾಸ, ಸಾಹಿತಿ ಸಂಸ್ಮರಣೆ, ಯಕ್ಷಗಾನ ತಾಳಮದ್ದಳೆ ಸಹಿತ ನಾನಾ ಸಾಂಸ್ಕೃತಿಕ- ಸಾಹಿತ್ಯಿಕ ಕಾರ್ಯಕ್ರಮ ನಡೆಯಲಿವೆ. ನ. 27ರಂದು ಸಂಜೆ 4.30ಕ್ಕೆ ಸಮಾರೋಪಗೊಳ್ಳಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್ ಮದುವೆ?
ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್ ಪಡೆದು ಸಿನಿಮಾದಲ್ಲಿ ಫೇಮ್ ಆದ ಕಲಾವಿದರು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.