ಬಾಟಲಿ ನೀರು ಮಾರಿ ಸಹಾಯಧನ ಸಂಗ್ರಹ
ರಾಜಕೇಸರಿ ತಂಡದ ವಿನೂತನ ಪ್ರಯತ್ನ
Team Udayavani, May 13, 2019, 6:00 AM IST
ಬೆಳ್ತಂಗಡಿ: ಬೆಳ್ತಂಗಡಿಯ ಮುಂಡಾಜೆ ಬಳಿಯ ಶ್ರುತಿ ಶೆಟ್ಟಿ ಅವರು ಟ್ರಂಬೊಸೈಟೋಪೇನಿಯಾ ಎಂಬ ಕಾಯಿಲೆಯಿಂದ ಬಳಲುತ್ತಿದ್ದು, ಅವರ ಕುಟುಂಬಕ್ಕೆ ನೆರವಾಗಲು ರಾಜಕೇಸರಿ ತಂಡ ವಿನೂತನ ಪ್ರಯತ್ನ ನಡೆಸಿದೆ.
ಬಡ ಕುಟುಂಬಕ್ಕೆ ಕೈಲಾದ ಸಹಾಯ ಮಾಡುವ ದೃಷ್ಟಿಯಿಂದ ರವಿವಾರ ಬೆಳಿಗ್ಗೆ 9ರಿಂದ ಸಂಜೆ 5ರ ವರೆಗೆ ರಾಜಕೇಸರಿಯ ಸಂಸ್ಥಾಪಕರಾದ ದೀಪಕ್ ಜಿ. ನೇತೃತ್ವದಲ್ಲಿ ಸುಮಾರು 22 ಮಂದಿ ಸದಸ್ಯರು ಜತೆಗೂಡಿ ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಬಾಟಲಿ ನೀರು ಮಾರಿ ಅದರಿಂದ ಬಂದ ಲಾಭದ ಹಣವನ್ನು ಕುಟುಂಬಕ್ಕೆ ನೀಡುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಬೆಳಗ್ಗೆ ಕಾರ್ಯಕ್ರಮಕ್ಕೆ ಶುಭಕೋರಿ ಕಳುಹಿಸಿದ್ದರು. 50 ಸಾವಿರ ರೂ. ಗುರಿಯೊಂದಿಗೆ ಸುಮಾರು 22 ಮಂದಿ ತಂಡವು 10 ರೂ. ಬೆಲೆಯ 3,000 ಸಾವಿರ ಬಿಸ್ಲೇರಿ ನೀರಿನ ಬಾಟಲ್ ಮಾರಾಟ ಮಾಡಿದ್ದಾರೆ. ಅದರಿಂದ ಬಂದ ಲಾಭಾಂಶದ 15 ಸಾವಿರ ರೂ. ಹಣ ಶ್ರುತಿ ಶೆಟ್ಟಿ ಚಿಕಿತ್ಸೆಗೆ ವಿನಿಯೋಗವಾಗಲಿದೆ.
ಪ್ರಯಾಣಿಕರೂ ಇದಕ್ಕೆ ಸಹಕರಿಸಿದ್ದು, ಹೆಚ್ಚಿನವರು ಹೆಚ್ಚಿನ ದರ ನೀಡಿ ಬಾಟಲಿ ಖರೀದಿಸಿ ಯುವಕರ ಕೆಲಸಕ್ಕೆ ಕೈಜೋಡಿಸಿದ್ದಾರೆ.
ಮಾದರಿ ಸಂಘಟನೆ
ಇಷ್ಟು ಮಾತ್ರವಲ್ಲದೆ ಉಭಯ ಜಿಲ್ಲೆಗಳಲ್ಲಿ ಮೆಡಿಕಲ್ ಕ್ಯಾಂಪ್, ಶಿಕ್ಷಣಕ್ಕೆ ಸಹಾಯಧನ, ಬಡವರಿಗೆ ಮನೆಕಟ್ಟಲು ನೆರವಾಗುವುದು ಸಹಿತ ಸಂಘದ ಸದಸ್ಯರು ತಿಂಗಳ ಒಂದು ವಾರದ ಸಂಬಳವನ್ನು ಬಡವರ ಸೇವೆಗಾಗಿ ಮೀಸಲಿರಿಸುವ ಮೂಲಕ ಸಮಾಜಕ್ಕೆ ಮಾದರಿ ಸಂಘಟನೆಯಾಗಿದೆ. ಈಗಾಗಲೇ ದ.ಕ. ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ತನ್ನ ಶಾಖೆ ಹೊಂದಿದ್ದು, ಸಾವಿರಾರು ಯುವಕರು ಕೈಜೋಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.