ಮಂಗಳೂರು: ಬಾಲಮಂದಿರದ ಬಾಲಕ ನಾಪತ್ತೆ
Team Udayavani, Feb 24, 2023, 4:40 AM IST
ಮಂಗಳೂರು: ನಗರದ ಬಾಲ ಮಂದಿರಕ್ಕೆ ದಾಖಲಾಗಿದ್ದ ಬಾಗಲಕೋಟೆ ಮೂಲದ ಬಸವರಾಜ್ (17) ಚಿಕಿತ್ಸೆಗೆ ವೆನ್ಲಾಕ್ ಆಸ್ಪತ್ರೆಗೆ ಸೇರಿದ್ದ ವೇಳೆ ಅಲ್ಲಿಂದ ನಾಪತ್ತೆಯಾಗಿದ್ದಾನೆ.
ಬೋಂದೆಲ್ ಕೃಷ್ಣನಗರ ಬಾಲ ಮಂದಿರಕ್ಕೆ ಫೆ. 21ರಂದು ದಾಖಲಾ ಗಿದ್ದು, ಅಂದು ರಾತ್ರಿ 7 ಗಂಟೆ ವೇಳೆೆ ಸೋಪು ತಿಂದು ಅಸ್ವಸ್ಥನಾಗಿದ್ದ. ತತ್‌ಕ್ಷಣ ಆತನನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು ಪರೀಕ್ಷಿಸಿ ಆರೋಗ್ಯದ ಮೇಲೆ ನಿಗಾ ಇರಿಸಲು 2-3 ದಿನ ಒಳರೋಗಿಯಾಗಿ ದಾಖಲಿಸಿದ್ದರು. ಫೆ. 21ರಂದು ರಾತ್ರಿ 7.15ರ ವೇಳೆಗೆ ಕೈ ತೊಳೆಯಲಿದೆ ಎಂದು ಹೇಳಿ ಹೊರಗಡೆ ಬಂದ ಆತ, ಅಲ್ಲಿಂದ ತಪ್ಪಿಸಿಕೊಂಡಿದ್ದಾನೆ. ಆಸ್ಪತ್ರೆಯ ಕಾವಲುಗಾರರನ್ನು ವಿಚಾರಿಸಿ ಸುತ್ತಮುತ್ತ ಹುಡುಕಿದರೂ ಪತ್ತೆಯಾಗಿಲ್ಲ. ಅಲ್ಲಿಂದ ಮನೆಗೂ ಹೋಗದೆ ನಾಪತ್ತೆಯಾಗಿದ್ದಾನೆ. ಈ ಕುರಿತು ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಮಾರು 5 ಅಡಿ ಎತ್ತರ, ಎಣ್ಣೆ ಕಪ್ಪು ಮೈಬಣ್ಣ, ನೀಲಿ ಬಣ್ಣದ ಉದ್ದ ಕೈ ಟಿ-ಶರ್ಟ್, ಕಪ್ಪು ಪ್ಯಾಂಟ್ ಧರಿಸಿದ್ದು, ಕನ್ನಡ ಭಾಷೆ ಬಲ್ಲವನಾಗಿದ್ದಾನೆ. ಈತನ ಬಗ್ಗೆ ಮಾಹಿತಿ ಇದ್ದಲ್ಲಿ ಪಾಂಡೇಶ್ವರ ಠಾಣೆ ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Temperature: ಕರಾವಳಿಯಲ್ಲಿ ಹೆಚ್ಚಿದ ಚಳಿಯ ತೀವ್ರತೆ: ಗ್ರಾಮೀಣ ಭಾಗದಲ್ಲಿ ಹೆಚ್ಚು ಕಚಗುಳಿ
ವಿದ್ಯುತ್ ದರ ಏರಿಕೆಯ ಸುಳಿವು ನೀಡಿದ ಮೆಸ್ಕಾಂ;ಯೂನಿಟ್‌ಗೆ 0.70 ರೂ. ದರ ಏರಿಕೆ ಪ್ರಸ್ತಾವನೆ
Kambala ಜ. 11: ಉಳ್ಳಾಲ ನರಿಂಗಾನ ಕಂಬಳ್ಳೋತ್ಸವ
Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!
Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?
MUST WATCH
ಹೊಸ ಸೇರ್ಪಡೆ
Nuclear Power Plant: ಇನ್ನೊಂದು ಅಣುಸ್ಥಾವರ ಮೂರು ಜಿಲ್ಲೆಗಳಲ್ಲಿ ಪರಿಶೀಲನೆ
Demand: ಕೊರೆವ ಚಳಿಯಲ್ಲೂ ಮುಂದುವರಿದ ‘ಆಶಾ’ ಕಾರ್ಯಕರ್ತೆಯರ ಮುಷ್ಕರ
ಎಂಟು ಅಧಿಕಾರಿಗಳಿಗೆ ಸೇರಿದ 38 ಸ್ಥಳಗಳ ಮೇಲೆ ಲೋಕಾಯುಕ್ತ ದಾಳಿ: 21 ಕೋಟಿ ರೂ. ಆಸ್ತಿ ಪತ್ತೆ
Puttur: ಮಹಿಳೆಯ ಮಾನಭಂಗ ಯತ್ನ ಪ್ರಕರಣ; ಆರೋಪಿ ಖುಲಾಸೆ
Vijay Hazare Trophy: ಏಕದಿನ ಪ್ರಸಿದ್ಧ್ ಕೃಷ್ಣ ,ಪಡಿಕ್ಕಲ್ ಆಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.