ಕನ್ನಡ ಹುಡುಗನಿಗೆ ಮಲಯಾಳ ಚಿತ್ರದಿಂದ ಆಫರ್‌!


Team Udayavani, Apr 1, 2018, 11:16 AM IST

1April-6.jpg

ಮಹಾನಗರ: ಈಗಾಗಲೇ ಹಲವಾರು ಸೌಂದರ್ಯ ಸ್ಪರ್ಧೆಗಳಲ್ಲಿ ಪ್ರಶಸ್ತಿಗಳನ್ನು ಪಡೆದುಕೊಂಡು ಯಶಸ್ವಿಯಾಗಿರುವ ಮಂಗಳೂರಿನವಿದ್ಯಾರ್ಥಿಯೊಬ್ಬನಿಗೆ ಇದೀಗ ಎರಡು ಮಲಯಾಳ ಚಿತ್ರಗಳಿಂದ ಆಫರ್‌ ಬಂದಿದೆ. ಬೆಂಗಳೂರಿನಲ್ಲಿ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ಈ ಹುಡುಗನ ಪ್ರತಿಭೆಯನ್ನು ಗಮನಿಸಿ ಚಿತ್ರ ತಂಡ ಆಫರ್‌ ನೀಡಿದೆ!

ನಗರದ ಶ್ರೀದೇವಿ ಕಾಲೇಜಿನ ವಿದ್ಯಾರ್ಥಿ ಸೌರಭ್‌ ಶೆಟ್ಟಿ ಅವರೇ ಈ ಆಫರ್‌ ಪಡೆದ ಪ್ರತಿಭೆ. ಅವರು ವಿದ್ಯಾರ್ಥಿಯಾಗಿರುವ ಕಾರಣ ಅವರ ರಜೆಗಳು ಖಚಿತವಾಗದ ಹಿನ್ನೆಲೆಯಲ್ಲಿ ಚಿತ್ರದ ಶೂಟಿಂಗ್‌ ಸಮಯ ಇನ್ನೂ ನಿಗದಿಯಾಗಿಲ್ಲ. ಹೀಗಾಗಿ ರಜೆಗಳು ಖಚಿತವಾದ ಬಳಿಕವೇ ತನ್ನ ಆಫರ್‌ ಸ್ವೀಕರಿಸುವುದಾಗಿ ಸೌರಭ್‌ ಹೇಳುತ್ತಾರೆ.

ಮಲಯಾಳದ ಅರ್ಜುನ ಹಾಗೂ ಬಿಲಾಲ್‌-2 ಚಿತ್ರಗಳಿಂದ ಆಫರ್‌ ಬಂದಿದೆ. ಅರ್ಜುನ ಚಿತ್ರದಲ್ಲಿ ಅವರೇ ಮುಖ್ಯ ಪಾತ್ರದಲ್ಲಿ ನಟಿಸಲಿದ್ದು, ಅದರ ಚಿತ್ರೀಕರಣ ಆರಂಭಕ್ಕೆ ಇನ್ನೂ ಸಮಯವಿದೆ. ಆದರೆ ಬಿಲಾಲ್‌-2 ಚಿತ್ರದಲ್ಲಿ ಖ್ಯಾತ ನಟ ಮಮ್ಮುಟ್ಟಿ ಅವರ ಪುತ್ರ ದುಲ್ಹಾರ್‌ ಸಲ್ಮಾನ್‌ ಅವರು ನಾಯಕನಾಗಿ ನಟಿಸುತ್ತಿದ್ದು, ನಾಯಕನ ಸಹೋದರನ ಪಾತ್ರದಲ್ಲಿ ಸೌರಭ್‌ ನಟಿಸಲಿದ್ದಾರೆ. ಬಿಲಾಲ್‌-2 ಚಿತ್ರದ ಚಿತ್ರೀಕರಣ ಈಗಾಗಲೇ ಆರಂಭಗೊಂಡಿದ್ದು, ಇವರ ಚಿತ್ರೀಕರಣಕ್ಕೆ ಕನಿಷ್ಠ 4 ವಾರಗಳ ರಜೆ ಬೇಕಾಗಲಿವೆ.

ಸೌಂದರ್ಯ ಸ್ಪರ್ಧೆಯಲ್ಲಿ ರನ್ನರಪ್‌
ಬೆಂಗಳೂರಿನಲ್ಲಿ ನಡೆದ ಮಿಸ್ಟರ್‌ ಇಂಡಿಯಾ ಸೌಂದರ್ಯ ಸ್ಪರ್ಧೆಯಲ್ಲಿ ಸೌರಭ್‌ ಶೆಟ್ಟಿ ಅವರು ಪ್ರಥಮ ರನ್ನರಪ್‌ ಪ್ರಶಸ್ತಿ ಪಡೆದುಕೊಂಡಿದ್ದರು. ಇದರ ನಿರ್ವಹಣೆಯಿಂದಲೇ ಅವರಿಗೆ ಈ ಆಫರ್‌ಗಳು ಬಂದಿರುತ್ತದೆ. 4 ವರ್ಷಗಳಿಂದ ಫ್ಯಾಶನ್‌ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಅವರು, ಫ್ಯಾಶನ್‌ ಬ್ಲಾಗ್‌ ವೊಂದನ್ನೂ ನಡೆಸುತ್ತಿದ್ದಾರೆ. ಜತೆಗೆ ನೈಕ್‌, ಜ್ಯಾಕ್‌ ಆ್ಯಂಡ್‌ ಜೀನ್ಸ್‌, ಬ್ಲೂ ಸೈಂಟ್‌ ಮೊದಲಾದ ಪ್ರತಿಷ್ಠಿತ ಬ್ರ್ಯಾಂಡ್ ಗಳಿಗೆ ವಾಕ್‌  ‍‍ರ‍್ಯಾಂಪ್ ನ್ನೂ ನಡೆಸಿದ್ದಾರೆ.

ನಗರದ ವಿಶ್ವನಾಥ ಶೆಟ್ಟಿ ಹಾಗೂ ಸುಮಿತ್ರಾ ಶೆಟ್ಟಿ ದಂಪತಿಯ ಪುತ್ರ ಸೌರಭ್‌ ಶೆಟ್ಟಿ ಅವರು, ತನ್ನ ತಂದೆ ತಾಯಿಯರ ಪ್ರೋತ್ಸಾಹದ ಜತೆಗೆ ಸಹೋದರ ಸಂಮ್ರಿತ್‌ ಶೆಟ್ಟಿ, ಚಿಕ್ಕಪ್ಪ ಬಾಲಚಂದ್ರ ಶೆಟ್ಟಿ ಹಾಗೂ ಚಿಕ್ಕಮ್ಮ ಇಂದ್ರಾ ಶೆಟ್ಟಿ ಅವರ ಪ್ರೋತ್ಸಾಹದಿಂದಲೇ ಇಷ್ಟೆಲ್ಲ ಸಾಧನೆ ಸಾಧ್ಯವಾಯಿತು ಎಂದು ವಿವರಿಸುತ್ತಾರೆ. 

ವಿನ್ನರ್‌ಗೆ ಕನ್ನಡದಲ್ಲಿ ಆಫ‌ರ್‌
ಮಿಸ್ಟರ್‌ ಇಂಡಿಯಾ ಸೌಂದರ್ಯ ಸ್ಪರ್ಧೆಯಲ್ಲಿ ವಿನ್ನರ್‌ ಆಗಿರುವ ಮೂಡಬಿದಿರೆ ತೋಡಾರ್‌ ಮೂಲದ ದೀಪಕ್‌ ಶೆಟ್ಟಿ ಅವರಿಗೆ ಕನ್ನಡದ ವಿಕ್ರಮ್‌ ರಾಥೋಡ್‌ ಎಂಬ ಚಿತ್ರದಿಂದ ಆಫರ್‌ ಬಂದಿದೆ. ದೀಪಕ್‌ ಶೆಟ್ಟಿ ಅವರ ದುಬಾೖನಲ್ಲಿ ಪ್ರೊಜೆಕ್ಟ್ ಎಂಜಿನಿಯರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ದೀಪಕ್‌ ಅವರು ವಿದೇಶದಲ್ಲೂ ನಡೆದ ಹಲವು ಸ್ಪರ್ಧೆಗಳನ್ನು ಬಹುಮಾನಗಳನ್ನು ಪಡೆದುಕೊಂಡಿದ್ದರು.

ಟಾಪ್ ನ್ಯೂಸ್

BBK11: ಬಿಗ್‌ ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್ ಸ್ಪರ್ಧಿ; ಅಬ್ಬರಿಸುತ್ತಲೇ ದೊಡ್ಮನೆಗೆ ಎಂಟ್ರಿ

BBK11: ಬಿಗ್‌ ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್ ಸ್ಪರ್ಧಿ; ಅಬ್ಬರಿಸುತ್ತಲೇ ದೊಡ್ಮನೆಗೆ ಎಂಟ್ರಿ

Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ

Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

101

Daali Dhananjay: ಸರಳವಾಗಿ ನೆರವೇರಿತು ಡಾಲಿ – ಧನ್ಯತಾ ನಿಶ್ಚಿತಾರ್ಥ

No support for liquor bandh: Tourism Hotel Owners Association

Liquor: ಮದ್ಯ ಬಂದ್‌ ಗೆ ಬೆಂಬಲವಿಲ್ಲ: ಪ್ರವಾಸೋದ್ಯಮ ಹೋಟೆಲ್ ಮಾಲೀಕರ ಸಂಘ

: ಸಿಎಂ ಸಿದ್ದರಾಮಯ್ಯ

Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ

Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು

Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ

Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ

3

Mangaluru: ಅನಧಿಕೃತ ಫ್ಲೆಕ್ಸ್‌ , ಬ್ಯಾನರ್‌ ತೆರವು ಆರಂಭ

BBK11: ಬಿಗ್‌ ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್ ಸ್ಪರ್ಧಿ; ಅಬ್ಬರಿಸುತ್ತಲೇ ದೊಡ್ಮನೆಗೆ ಎಂಟ್ರಿ

BBK11: ಬಿಗ್‌ ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್ ಸ್ಪರ್ಧಿ; ಅಬ್ಬರಿಸುತ್ತಲೇ ದೊಡ್ಮನೆಗೆ ಎಂಟ್ರಿ

2

Thekkatte: ಕುಂಭಾಶಿಯಲ್ಲಿ ಸಿದ್ಧವಾಗಿದೆ ನಂದಿ ದೇಗುಲದ ಬ್ರಹ್ಮರಥ

4(1)

Lupus Nephritis: ಲೂಪಸ್‌ ನೆಫ್ರೈಟಿಸ್‌ ರೋಗಿಗಳಿಗೆ ಒಂದು ಮಾರ್ಗದರ್ಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.