ಬ್ರಹ್ಮ ನಗರ ಕಾಲನಿಗೆ ಡೆಂಗ್ಯೂ ಜ್ವರದ ಬಾಧೆ!


Team Udayavani, Jul 4, 2018, 11:45 AM IST

4-july-5.jpg

ನಗರ : ರಾಜ್ಯದ ಎರಡನೇ ಅತಿ ದೊಡ್ಡ ಬಸ್‌ ನಿಲ್ದಾಣದ ಅಂಚಿನಲ್ಲೇ ಇರುವ ಬ್ರಹ್ಮನಗರ ಕಾಲನಿಯಲ್ಲಿ ಜ್ವರ ತಾಂಡವವಾಡುತ್ತಿದೆ. ಅದರಲ್ಲಿ ಡೆಂಗ್ಯೂ ಪ್ರಕರಣವೇ ಹೆಚ್ಚು. ತಾಲೂಕಿನ ಎಲ್ಲೆಡೆ ಫಾಗಿಂಗ್‌ ನಡೆಸಲಾಗಿದೆ ಎನ್ನುವ ಆರೋಗ್ಯ ಇಲಾಖೆ, ನಗರಸಭೆ, ಬ್ರಹ್ಮನಗರ ಕಾಲನಿಗೆ ಬಂದೇ ಇಲ್ಲ. ಶುಚಿತ್ವ ಅಂತೂ ದೂರದ ಮಾತು. ಕಾಲನಿ ಹಿಂಬದಿಯಲ್ಲಿ ತ್ಯಾಜ್ಯದ ರಾಶಿ ಹರಡಿಕೊಂಡಿದ್ದು, ಕೋಳಿ- ನಾಯಿ ಇದನ್ನೇ ಆಹಾರ ಆಗಿಸಿಕೊಂಡಿವೆ. ಇವಿಷ್ಟೇ ಸಾಕು, ಕಾಲನಿ ತುಂಬಾ ಜ್ವರ ಹರಡಲು.

ಸ್ವಾತಂತ್ರ್ಯ ಪೂರ್ವದಲ್ಲಿ ಗಾಂಧೀಜಿ ಪುತ್ತೂರಿಗೆ ಭೇಟಿ ಕೊಟ್ಟಿದ್ದರು. ನೇರವಾಗಿ ರಾಗಿದಕುಮೇರಿ ಕಾಲನಿಗೆ ಭೇಟಿ ನೀಡಿ, ಜತೆಗಿದ್ದ ಶಿವರಾಮ ಕಾರಂತ, ಕಾರ್ನಾಡು ಸದಾಶಿವ ರಾಯರನ್ನು ತರಾಟೆಗೆ ಎತ್ತಿಕೊಂಡಿದ್ದರು. ಕಾಲನಿ ವಾಸಿಗಳನ್ನು ಉಪೇಕ್ಷಿಸಲಾಗಿದೆ ಎಂಬುದೇ ಅವರ ಕೋಪಕ್ಕೆ ಕಾರಣವಾಗಿತ್ತು. ಅಲ್ಲಿನ ಜನರು ತೋಡಿನಲ್ಲಿ ಹರಿದು ಹೋಗುತ್ತಿದ್ದ ನೀರನ್ನೇ ಕುಡಿಯಲು ಬಳಸಿಕೊಳ್ಳುತ್ತಿದ್ದರು. ಇದನ್ನು ಕಂಡು ಕನಿಕರ ಪಟ್ಟು, ರಾಗಿದಕುಮೇರಿ ಬಳಿ ಬಾವಿ ತೋಡಲು ಸೂಚನೆ ನೀಡಿದ್ದರು. ಬಳಿಕ ಪುತ್ತೂರು ಪೇಟೆಗೆ ಆಗಮಿಸಿ, ಅಶ್ವತ್ಥ ಕಟ್ಟೆಯ ಬಳಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ್ದರು. ಇದೇ ಅಶ್ವತ್ಥಕಟ್ಟೆಯ ಹಿಂಬದಿ ಬ್ರಹ್ಮನಗರ ಕಾಲನಿ ಇದೆ. ಆಗಿನ ಸ್ಥಿತಿ ಬಿಡಿ, ಈಗಲೂ ಪರಿಸ್ಥಿತಿ ಸುಧಾರಿಸಿಲ್ಲ ಎನ್ನುವುದು ವಾಸ್ತವ.

25 ಜನರಿಗೆ ಜ್ವರ
ತಾಲೂಕಿನಾದ್ಯಂತ ಈ ವರ್ಷ ಡೆಂಗ್ಯೂ ಸೇರಿದಂತೆ ಜ್ವರ ಪ್ರಕರಣಗಳು ಪತ್ತೆಯಾಗಿದ್ದವು. ಆದರೆ ಜೋರಾಗಿ ಮಳೆ ಸುರಿಯುತ್ತಿದ್ದಂತೆ ಜ್ವರ ನಿಯಂತ್ರಣಕ್ಕೆ ಬಂದಿದೆ ಎನ್ನುತ್ತಾರೆ ಅಧಿಕಾರಿಗಳು. ಆದರೆ ಈ ಮಾತು, ಬ್ರಹ್ಮನಗರ ಕಾಲನಿಗೆ ಅನ್ವಯಿಸುವುದಿಲ್ಲ. ಈಗಲೂ ಜ್ವರ ಪ್ರಕರಣಗಳು ಕಂಡುಬರುತ್ತಿವೆ. ಕಾಲನಿಯಲ್ಲಿ ಒಟ್ಟು 45ರಿಂದ 50ರಷ್ಟು ಮನೆಗಳಿವೆ. 250ರಷ್ಟು ಜನರು ವಾಸಿಸುತ್ತಿದ್ದಾರೆ. ಇದರಲ್ಲಿ 25ಕ್ಕೂ ಅಧಿಕ ಮಂದಿ ಜ್ವರದಿಂದ ಹಾಸಿಗೆ ಹಿಡಿದಿದ್ದಾರೆ.

ಸ್ಥಳೀಯರೊಬ್ಬರು ನೀಡಿದ ಮಾಹಿತಿಯಂತೆ- ವಿಜಯ್‌, ಜಗದೀಶ್‌, ಪುಷ್ಪಾ, ಸೌಮ್ಯಾ, ಪುನೀತ್‌, ನಿತೇಶ್‌, ಯೋಗೀಶ್‌, ಸಂಪತ್‌, ಚಂದು, ಯಶೋದಾ, ಚಂದ್ರ ಬಿ., ಪೊನ್ನಮ್ಮ ಮೊದಲಾದವರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ವಾಮನ, ಚಂದ್ರ, ಹರ್ಷಿತ್‌, ಮನೋಹರ, ಪ್ರಕಾಶ, ಸುಧಾಕರ ಮೊದಲಾದವರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಇದರಲ್ಲಿ ಕೆಲವರು ಡಿಸ್ಚಾರ್ಜ್‌ ಆಗಿದ್ದು, ಮನೆಯಲ್ಲಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ.

ಅಧಿಕಾರಿಗಳ ಭೇಟಿ
ಶನಿವಾರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬಂದಿ ಆಗಮಿಸಿ, ರಕ್ತದ ಮಾದರಿ ಪಡೆದುಕೊಂಡಿದ್ದಾರೆ. ಸೋಮವಾರ ಮತ್ತೆ ಬರುತ್ತೇವೆ ಎಂದು ಹೇಳಿದ್ದರು. ಆದರೆ ಸೋಮವಾರ ಬಿಡಿ ಮಂಗಳ ವಾರವೂ ಬರಲಿಲ್ಲ. ಫಾಗಿಂಗ್‌ ಮಾಡಿಯೇ ಇಲ್ಲ. ಈ ಕಾಲನಿಯಲ್ಲಿ 25ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಕೆಲಸ ಆಗಬೇಕಿದೆ.

ಮಲೇರಿಯಾ
ಹಿಂದಿನ ವರ್ಷ ಬ್ರಹ್ಮನಗರ ಕಾಲನಿಯನ್ನು ಮಲೇರಿಯಾ ಜ್ವರ ಆವರಿಸಿಕೊಂಡಿತ್ತು. ಹಲವು ಮಂದಿ ಮಲೇರಿಯಾ ಜ್ವರದಿಂದ ಬಳಲುತ್ತಿದ್ದರು ಎನ್ನುವುದನ್ನು ಕಾಲನಿ ನಿವಾಸಿಗಳು ನೆನಪು ಮಾಡಿಕೊಳ್ಳುತ್ತಿದ್ದಾರೆ. ಈ ವರ್ಷ ಡೆಂಗ್ಯೂ ಜ್ವರ ಆವರಿಸಿಕೊಂಡಿದೆ.

ಸ್ವಚ್ಛತೆಗೆ ಗಮನ
ಬ್ರಹ್ಮನಗರ ಕಾಲನಿಯಲ್ಲಿ ಜ್ವರ ಪ್ರಕರಣ ಇದೆ ಎಂಬ ಮಾಹಿತಿ ಬಂದಿದೆ. ಡೆಂಗ್ಯೂ ಪ್ರಕರಣ ಕಡಿಮೆ ಆಗಿದೆ. ಇದೀಗವಷ್ಟೇ ಮಾಹಿತಿ ಬಂದಿದ್ದು, ಫಾಗಿಂಗ್‌ ನಡೆಸಲಾಗುವುದು. ಇಲ್ಲಿನ ಪರಿಸರವನ್ನು ಸ್ವತ್ಛವಾಗಿ ಇಟ್ಟುಕೊಳ್ಳಬೇಕು. ನಗರಸಭೆ ಇದರ ಬಗ್ಗೆ ಗಮನ ಹರಿಸಬೇಕಾಗಿದ್ದು, ಅವರ ಗಮನಕ್ಕೆ ತರಲಾಗುವುದು.
-ಡಾ| ಅಶೋಕ್‌ ಕುಮಾರ್‌ ರೈ, ತಾಲೂಕು ಆರೋಗ್ಯಾಧಿಕಾರಿ

ಹಲವರಿಗೆ ಜ್ವರ
ಐದು ದಿನಗಳಿಂದ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದೆ. ಡೆಂಗ್ಯೂ ಜ್ವರ ಎಂದು ವೈದ್ಯರು ತಿಳಿಸಿದ್ದಾರೆ. ರಕ್ತದ ಕಣ ಕಡಿಮೆ ಆಗಿದೆ. ಈಗಷ್ಟೇ ಆಸ್ಪತ್ರೆಯಿಂದ ಆಗಮಿಸಿದ್ದೇನೆ. ಮತ್ತೆ ಆಸ್ಪತ್ರೆಗೆ ತೆರಳಿ, ಚಿಕಿತ್ಸೆ ಪಡೆಯಬೇಕಿದೆ. ಕಾಲನಿಯ ಹಲವು ಮಂದಿ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದಾರೆ.
– ರಮೇಶ್‌,
ಬ್ರಹ್ಮನಗರ ಕಾಲನಿ ನಿವಾಸಿ

ಗಣೇಶ್‌ ಎನ್‌. ಕಲ್ಲರ್ಪೆ 

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.