ಚತುರ್ದಿಕ್ಕುಗಳಿಂದಲೂ ಭರದಿಂದ ನಡೆದಿದೆ ನವೀಕರಣ ಸಿದ್ಧತೆ
ಚಂದ್ಕೂರು ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದ ಬ್ರಹ್ಮಕಲಶೋತ್ಸವ
Team Udayavani, May 7, 2019, 6:00 AM IST
ಬೆಳ್ತಂಗಡಿ: ನರಸಿಂಹಗಢದ ದಕ್ಷಿಣ ಬುಡದಲ್ಲಿ ಲಾೖಲ ಹಾಗೂ ನಡ ಗ್ರಾಮಸ್ಥರ ಆರಾಧ್ಯ ನೆಲೆ ಚಂದ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಸಿದ್ಧತೆ ಭರದಿದಂದ ಸಾಗುತ್ತಿದೆ. ನೂರಾರು ಸ್ವಯಂಸೇವಕರು ಪರಿ ಶ್ರಮ, ಸಂಘಟಕರ ಮಾರ್ಗದರ್ಶನ ದಲ್ಲಿ ಹಗಲು ರಾತ್ರಿ ಎನ್ನದೆ ಸೇವಾ ಕಾರ್ಯ ನಡೆಯುತ್ತಿದ್ದು, ದೇವರ ಪುನರ್ ಪ್ರತಿಷ್ಠೆ, ಅಷ್ಟಬಂಧ- ಬ್ರಹ್ಮ ಕಲಶಾ ಭಿಷೇಕಕ್ಕೆ ಚತುರ್ದಿಕ್ಕುಗಳಲ್ಲಿ ಕೆಲಸ ಕಾರ್ಯ ಸಾಗುತ್ತಿದೆ. ಬೆಳ್ತಂಗಡಿಯಿಂದ ಲಾೖಲ ತಿರುವು ಪಡೆಯುತ್ತಿದ್ದಂತೆ ದಾರಿ ಯುದ್ದಕ್ಕೂ ಭಕ್ತರನ್ನು ಸ್ವಾಗತಿಸಲು ಕೇಸರಿ ಪತಾಕೆ ಸಜ್ಜಾಗಿದೆ.
ಹೊರೆಕಾಣಿಕೆ ವಿಶೇಷತೆ
ಮೇ 8ರಂದು ಬೆಳಗ್ಗೆ 9 ಕ್ಕೆ ಕುತ್ಯಾರು ದೇವಸ್ಥಾನದಿಂದ 100 ಜನ ಸ್ವಯಂ ಸೇವಕರ ನೇತೃತ್ವದಲ್ಲಿ ಮೆರವಣಿಗೆ ಹೊರಡಲಿದೆ. 2,000 ಮಂದಿ ಭಾಗವಹಿಸುವ ನಿರೀಕ್ಷೆಯಿದೆ.
6 ಎಕರೆಯಲ್ಲಿ ಪಾರ್ಕಿಂಗ್ ವಾಹನ ನಿಲುಗಡೆಗೆ 6 ಎಕರೆ ಪ್ರದೇಶ ಮೀಸಲಿರಿಸಿದ್ದು, 4 ಎಕರೆ ಪ್ರದೇಶದಲ್ಲಿ ಚತುಶ್ಚಕ್ರ ವಾಹನ, 2 ಎಕರೆ ಪ್ರದೇಶದಲ್ಲಿ ದ್ವಿಚಕ್ರ ವಾಹನ ನಿಲುಗಡೆಗೆ ಸ್ಥಳಾವಕಾಶ ವ್ಯವಸ್ಥೆ ಮಾಡಲಾಗಿದೆ. ಒಟ್ಟು 50 ಮಂದಿ ಸ್ವಯಂಸೇವಕರು ನಿರಂತರ ಕಾರ್ಯನಿರ್ವಹಿಸಲಿದ್ದಾರೆ.
50 ಸಾವಿರ ಚದರಡಿ ಚಪ್ಪರ
ಅಂದಾಜು 50 ಸಾವಿರ ಚದರ ಅಡಿಗೂ ಅಧಿಕ ವಿಸ್ತೀರ್ಣದ ಚಪ್ಪರ ಹಾಕಲಾಗಿದೆ. ಅನ್ನದಾನ, ಸಭಾ ಮಂಟಪ, ದೇವಸ್ಥಾನ ಸುತ್ತಮುತ್ತ, ಹಸುರುವಾಣಿಗೆ, ಕಾರ್ಯಾಲಯಕ್ಕೆ ಚಪ್ಪರ ಸಜ್ಜುಗೊಂಡಿದೆ. 50 ರಿಂದ 70 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆಯಿಂದ ಆಡಳಿತ ಸಮಿತಿ ಭಕ್ತರಿಗೆ ಅನುಕೂಲವಾಗುವ ರೀತಿಯಲ್ಲಿ ವ್ಯವಸ್ಥೆ ಮಾಡಿದೆ.
ಭೋಜನ ವ್ಯವಸ್ಥೆ
ಸತ್ಯನಾರಾಯಣ ಭಟ್ ನೇತೃತ್ವದಲ್ಲಿ 50 ಮಂದಿಯ ಬಾಣಸಿಗರ ತಂಡ ಅಡುಗೆ ತಯಾರಿಯಲ್ಲಿ ತೊಡಗಲಿದೆ. ಭೋಜನಕ್ಕೆ ಸ್ಟೀಲ್ ತಟ್ಟೆ ಉಪಯೋಗಿಸಲಾಗುತ್ತಿದ್ದು, ಬಫೆ, ವಿವಿಐಪಿ, ಕುಳಿತು ಊಟ ಮಾಡುವ ವ್ಯವಸ್ಥೆ ಇರಲಿದೆ. ದಕ್ಷಿಣ ಭಾರತ ಶೈಲಿಯ ಭೋಜನ ಸಿದ್ಧಗೊಳ್ಳಲಿದೆ.
ಪ್ಲಾಸ್ಟಿಕ್‌ಮುಕ್ತ: ಚಿಂತನೆ
ಕುಡಿಯುವ ನೀರಿಗಾಗಿ ಪ್ಲಾಸ್ಟಿಕ್ ನೀರು ಬಳಸದೆ ಪ್ಯೂರಿಫೈಡ್ ನೀರಿನ 4 ಯಂತ್ರಗಳನ್ನು ತರಿಸಲಾಗಿದೆ. ಪ್ಲಾಸ್ಟಿಕ್‌ಮುಕ್ತ ಕಾರ್ಯಕ್ರಮ ಚಿಂತನೆ ಆಯೋಜಕರದಾಗಿದ್ದು, ಇದಕ್ಕಾಗಿ ಸ್ವತ್ಛತೆ ದೃಷ್ಟಿಯಿಂದ ಹಾಳೆ ತಟ್ಟೆಯನ್ನೂ ಬಳಸದೆ ಸ್ವತ್ಛತೆಗೆ ಆದ್ಯತೆ ನೀಡಲಾಗಿದೆ. ಸ್ವಚ್ಛತೆಗಾಗಿ 300 ಮಂದಿ ಸ್ವಯಂಸೇವಕರನ್ನು ನಿಯೋಜಿಸಲಾಗಿರುವುದು ವಿಶೇಷತೆಗಳಲ್ಲೊಂದು.
ದಶದ್ವಾರ
ಲಾೖಲ ಕುತ್ರೊಟ್ಟು ಸಮೀಪ 10 ಲೋಡ್ ಬಿದಿರಿನಿಂದ ಮುಖ್ಯದ್ವಾರವನ್ನು ಅತ್ಯಾಕರ್ಷಕವಾಗಿ ನಿರ್ಮಿಸಲಾಗಿದೆ. ಹೇಮಂತ್ ಅವರ 30 ಮಂದಿ ತಂಡ 10 ದಿನಗಳಿಂದ ದ್ವಾರ ನಿರ್ಮಾಣದಲ್ಲಿ ತೊಡಗಿದ್ದು, ಭವ್ಯವಾಗಿ ಮೂಡಿಬಂದಿದೆ. ಉಳಿದಂತೆ ಲಾೖಲ, ಪುತ್ರಬೈಲು, ಹೊಕ್ಕಿಲ, ಬೆಳ್ತಂಗಡಿ ಚರ್ಚ್, ಮಂಚದ ಪಲ್ಕೆ, ಪಡ್ಲಾಡಿ, ದರ್ಪಿಂಜ, ನಿರ್ಪರಿ, ಗಾಂಧಿನಗರದಲ್ಲಿ ಸಾಂಪ್ರದಾಯಿಕವಾಗಿ ದ್ವಾರಗಳು ನಿರ್ಮಾಣಗೊಂಡು ಸ್ವಾಗತಕ್ಕೆ ಸಜ್ಜಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ
Udupi:ಗೀತಾರ್ಥ ಚಿಂತನೆ 93; ಶ್ರೀಕೃಷ್ಣನಿಗೆ ಶರಣಾದ ಅರ್ಜುನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.