ಕಟೀಲು ಬ್ರಹ್ಮಕಲಶೋತ್ಸವ: ಧಾರಾಶುದ್ಧಿ -ಯಜುರ್ವೇದ ಪಾರಾಯಣ
Team Udayavani, Jan 26, 2020, 4:58 AM IST
ಕಟೀಲು: ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಬ್ರಹ್ಮಕಲಶೋತ್ಸವದ 4ನೇ ದಿನವಾದ ಶನಿವಾರ ಬೆಳಗ್ಗೆ 5ರಿಂದ ಧಾರಾಶುದ್ಧಿ – ಯಜುರ್ವೇದ ಪಾರಾಯಣ, ಅಂಭೃಣೀಸೂಕ್ತ ಹೋಮ, ಲಕ್ಷ್ಮೀ ಹೃದಯ ಹೋಮ, ಗಣಪತಿ ಬಿಂಬಶುದ್ಧಿ, 108 ತೆಂಗಿನಕಾಯಿ ಗಣಪತಿ ಹೋಮ, ಗಣಪತಿ ಪ್ರಾಯಶ್ಚಿತ್ತ, ಬ್ರಹ್ಮರ ಸನ್ನಿಧಿಯಲ್ಲಿ ಕಲಶಾಭಿಷೇಕ ಜರಗಿತು. ಬೆಳಗ್ಗೆ ಭ್ರಾಮರೀವನದಲ್ಲಿ ಚಂದ್ರಯಾಗ, ಸಹಸ್ರಚಂಡಿಕಾಸಪ್ತಶತೀಪಾರಾಯಣ, ಕೋಟಿ ಜಪಯಜ್ಞ, ನವಗ್ರಹವನ, ನಕ್ಷ ತ್ರವನ, ರಾಶಿವನದಲ್ಲಿ ಆಯಾ ವೃಕ್ಷಗಳನ್ನು ಸ್ಥಾಪಿಸಲಾಯಿತು.
ರಾಶಿವನ ಸ್ಥಾಪನೆ
ಭ್ರಾಮರೀವನದಲ್ಲಿ ನವಗ್ರಹ, ನಕ್ಷತ್ರ, ರಾಶಿವನದಲ್ಲಿ ಆಯಾಯ ಗಿಡಗಳನ್ನು ನೆಡಲಾಗುತ್ತಿದೆ. ಅನಂತರ ಆಸಕ್ತ ಭಕ್ತರಿಗೆ ಸಸಿಗಳನ್ನೇ ಪ್ರಸಾದ ರೂಪವಾಗಿ ನೀಡಲಾಗುತ್ತಿದೆ. ಶುಕ್ರವಾರದಂದು ಆದಿತ್ಯಹೋಮ ಮಾಡಿ, ರವಿಗ್ರಹಕ್ಕೆ ಎಕ್ಕ, ಸಿಂಹ ರಾಶಿಗೆ ಪಾತಲ, ಮಖ ನಕ್ಷತ್ರಕ್ಕೆ ಗೋಳಿ, ಹುಬ್ಬಕ್ಕೆ ಪಾಲಶ, ಉತ್ತರಕ್ಕೆ ಕಿರೊಳಿ ಹೀಗೆ ಒಂದು ಗ್ರಹ, ಒಂದು ರಾಶಿ ಹಾಗೂ ಮೂರು ನಕ್ಷತ್ರಗಳಿಗೆ ಸಂಬಂಧಿಸಿ ಗಿಡಗಳನ್ನು ಶನಿವಾರ ಬೆಳಗ್ಗೆ ನೆಡಲಾಯಿತು.
ಮೊಕ್ತೇಸರರಾದ ಸನತ್ ಕುಮಾರ್ ಶೆಟ್ಟಿ, ವಾಸುದೇವ ಆಸ್ರಣ್ಣ, ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ಉಮಾನಾಥ ಕೋಟ್ಯಾನ್ ಮೊದಲಾದವರು ಗಿಡಗಳನ್ನು ನೆಟ್ಟರು. ಅನಂತರ ಮಾಣಿಲ ಸ್ವಾಮೀಜಿ ಅವರು ಶಾಸಕ ಉಮಾನಾಥ ಕೊಟ್ಯಾನ್ ಸಹಿತ ಕೆಲವು ಭಕ್ತರಿಗೆ ಗಿಡಗಳನ್ನು ಪ್ರಸಾದ ರೂಪವಾಗಿ ನೀಡಿದರು.
ಸಂಜೆ 5 ರಿಂದ ಭೂವರಾಹ ಹೋಮ, ಸ್ವಯಂವರ ಪಾರ್ವತಿ ಪೂಜೆ ಹಾಗೂ ಹೋಮ, ಉತ್ಸವಬಲಿ, ರಕ್ತೇಶ್ವರೀ ಸನ್ನಿ ಧಿಯಲ್ಲಿ ವಾಸ್ತುಪೂಜೆ, ಕೋಟಿಜಪಯಜ್ಞ, ಸಹಸ್ರಚಂಡಿಕಾಸಪ್ತಶತೀಪಾರಾಯಣ ನಡೆಯಿತು. ಬ್ರಹ್ಮಕಲಶೋತ್ಸವದ ನಾಲ್ಕನೇ ದಿನ ದಂದು ಸಹಸ್ರಾರು ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿದ್ದು ಸುಮಾರು 40 ಸಾವಿರಕ್ಕೂ ಅಧಿಕ ಭಕ್ತರು ಅನ್ನಪೂರ್ಣದಲ್ಲಿ ಭೋಜನ ಪ್ರಸಾ ದವನ್ನು ಸ್ವೀಕರಿಸಿದ್ದಾರೆ.
ಭಕ್ತರಿಗೆ ಶ್ರೀ ದೇವಿಯ ದರ್ಶನಕ್ಕಾಗಿ ಸ್ವಯಂಸೇವಕರಿಂದ ಉತ್ತಮವಾಗಿ ವ್ಯವಸ್ಥೆ ಮಾಡಲಾಗಿದ್ದು ದೇವಸ್ಥಾನದ ಒಳಗೆ ಹಾಗೂ ಹೊರಗೆ ಹೋಗಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.
ಹೊರೆಕಾಣಿಕೆ ಉಗ್ರಾಣ ಭರ್ತಿ
ಶನಿವಾರ ಸುಳ್ಯ, ಪುತ್ತೂರು, ಬೆಂಗಳೂರಿ ನಿಂದ ಒಂದು ಲಾರಿಯಷ್ಟು ದವಸ ಧಾನ್ಯ ಗಳು ಬಂದಿದ್ದು ಬಹುತೇಕ ಉಗ್ರಾಣ ಹೊರೆಕಾಣಿಕೆಯಿಂದ ಭರ್ತಿಯಾಗಿದೆ. ಹೊರೆಕಾಣಿಕೆ ತಂದ ಭಕ್ತರಿಗೆ ಅನುಗ್ರಹ ಪತ್ರ ಹಾಗೂ ಪ್ರಸಾದ ಲಡ್ಡು ನೀಡಲು ಪ್ರತ್ಯೇಕ ಕೌಂಟರ್ ಮಾಡಲಾಗಿದೆ. ದೇವಸ್ಥಾನಕ್ಕೆ ಬಜಪೆ ಕಡೆಯಿಂದ ಬರುವ ಭಕ್ತರು ನಂದಿನಿ ನದಿಯ ಸೇತುವೆಯ ಬಳಿಯಲ್ಲಿ ಬಸ್‌ನಿಲ್ದಾಣಕ್ಕೆ ವ್ಯವಸ್ಥೆ ಮಾಡಲಾಗಿದೆ. ವಾಹನದಲ್ಲಿ ಬರುವ ಭಕ್ತರಿಗೆ ಮಾಂಜ, ಕಟೀಲು ಗ್ರಾ. ಪಂ. ಬಳಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಇದೆ. ಕಿನ್ನಿಗೋಳಿ ಕಡೆಯಿಂದ ಬರುವ ಭಕ್ತರಿಗೆ ಗಿಡಿಗೆರೆ ದೈವಸ್ಥಾನದ ಬಳಿಯಲ್ಲಿ ಪಾರ್ಕಿಂಗ್ ಹಾಗೂ ಬಸ್‌ನಿಲ್ದಾಣ ಮಾಡಲಾಗಿದೆ.
ಬಿಗಿಭದ್ರತೆ
ಭದ್ರತೆಯ ದೃಷ್ಟಿಯಿಂದ ದೇವಸ್ಥಾನ ಹಾಗೂ ಅನ್ನಛತ್ರ, ಪಾಕಶಾಲೆ, ಪಾರ್ಕಿಂಗ್, ಸಭಾ ಮಂಟಪ, ರಥ ಬೀದಿಯಲ್ಲಿ 500ಕ್ಕೂ ಹೆಚ್ಚು ಸಿಸಿ ಕೆಮರಾ ಅಳವಡಿಸಲಾಗಿದೆ.
ಇಂದಿನ ಕಾರ್ಯಕ್ರಮಗಳು
ಕಟೀಲು: ಇಲ್ಲಿನ ಬ್ರಹ್ಮಕಲಶೋತ್ಸವದ ಐದನೇ ದಿನವಾದ ರವಿವಾರದಂದು ಕ್ಷೇತ್ರದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ. ಬೆಳಗ್ಗೆ 5ರಿಂದ ಧಾರಾಶುದ್ಧಿ-ಸಾಮವೇದ ಮತ್ತು ಅಥರ್ವವೇದ ಪಾರಾಯಣ, ಅವಗಾಹ ಮತ್ತು ಸೇಕ ಶುದ್ಧಿ, ರುದ್ರಯಾಗ, ಶಾಸ್ತ್ರಬಿಂಬಶುದ್ಧಿ, ಮನ್ಯುಸೂಕ್ತಹೋಮ, ಪಂಚದುರ್ಗಾ ಹೋಮಗಳು, ರಾತ್ರಿಸೂಕ್ತ ಹೋಮ, ಒಳಗಿನ ನಾಗ ಸನ್ನಿಧಿಯಲ್ಲಿ ಆಶ್ಲೇಷಾ ಬಲಿ ನಡೆಯಲಿವೆ.
ಬೆಳಗ್ಗೆ ಭ್ರಾಮರೀವನದಲ್ಲಿ ಅಂಗಾರಕಯಾಗ, ಸಹಸ್ರಚಂಡಿಕಾಸಪ್ತಶತೀ ಪಾರಾಯಣ, ಕೋಟಿ ಜಪಯಜ್ಞ, ನವಗ್ರಹವನ, ನಕ್ಷತ್ರವನ, ರಾಶಿವನದಲ್ಲಿ ಆಯಾ ವೃಕ್ಷಗಳ ಸ್ಥಾಪನೆ ನಡೆಯಲಿದೆ. ಸಂಜೆ 5 ರಿಂದ ವನದುರ್ಗಾಪೂಜೆ ಮತ್ತು ಹೋಮ, ದುರ್ಗಾ ಮಾರ್ಕಂಡೇಯ ಪ್ರೋಕ್ತಪ್ರಾಯಶ್ಚಿತ್ತ ಹೋಮಗಳು, ಉತ್ಸವ ಬಲಿ, ಭ್ರಾಮರೀ ವನದಲ್ಲಿ ಕೋಟಿ ಜಪಯಜ್ಞ, ಸಹಸ್ರಚಂಡಿಕಾಸಪ್ತಶತೀ ಪಾರಾಯಣ ಜರಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
C.T. Ravi; ಅವಾಚ್ಯ ಶಬ್ದಗಳಿಂದ ನಿಂದಿಸಿದ ದಾಖಲೆ ಇಲ್ಲ: ಮಹತ್ವ ಪಡೆದ ಸಭಾಪತಿ ಹೇಳಿಕೆ
TuluMovie; ತೆರೆಗೆ ಬರಲು ಸಿದ್ದವಾಯ್ತು ಮಿಡಲ್ ಕ್ಲಾಸ್ ಫ್ಯಾಮಿಲಿ: ರಿಲೀಸ್ ದಿನಾಂಕ ಬಂತು
BJP ಪೂರ್ವಾಂಚಲಿಗಳನ್ನು ರೋಹಿಂಗ್ಯಾಗಳೆಂದು ಮತಗಳನ್ನು ಅಳಿಸುತ್ತಿದೆ: ಕೇಜ್ರಿವಾಲ್ ಆರೋಪ
Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ
Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.