ಕಿಡ್ನಿ ವಿಫಲ ವ್ಯಕ್ತಿಗೆ ಬಿರುವೆರ್ ಕುಡ್ಲ ನೆರವು
Team Udayavani, May 4, 2018, 10:18 AM IST
ಉರ್ವಸ್ಟೋರ್: ನಗರದ ನಿವಾಸಿ ಬಸ್ ಚಾಲಕ ಸದಾಶಿವ ಪೂಜಾರಿ (65) ಕಿಡ್ನಿ ವಿಫಲ ಹಾಗೂ ಪಿಸ್ತುಲ ಕಾಯಿಲೆಯಿಂದ ಬಳಲುತ್ತಿದ್ದು ಫ್ರೆಂಡ್ಸ್ ಬಲ್ಲಾಳ್‌ಬಾಗ್ ಬಿರುವೆರ್ ಕುಡ್ಲದ ವತಿಯಿಂದ ಗುರುವಾರ ಚಿಕಿತ್ಸೆಗಾಗಿ 50 ಸಾವಿರ ರೂ. ನೆರವು ಒದಗಿಸಲಾಯಿತು. ಬೋಳ ಶ್ರೀನಿವಾಸ ಕಾಮತ್ ಕಾರ್ಕಳ, ವಾಸುದೇವ ಕಾಮತ್ ಮಂಗಳೂರು, ಆರ್‌ಜೆ ರಶ್ಮಿ ಜಂಟಿಯಾಗಿ ನೆರವಿನ ಚೆಕ್ ವಿತರಿಸಿದರು.
ಈ ಸಂದರ್ಭ ಆರ್‌ಜೆ ರಶ್ಮಿ ಮಾತನಾಡಿ, ಬಿರುವೆರ್ ಕುಡ್ಲ ಕಳೆದ ಮೂರು ವರ್ಷ ದಿಂದ ಬಡವರ ಕಣ್ಣೀರು ಒರೆಸುವ ಕೆಲಸ ಮಾಡುತ್ತಿರುವುದು ಇತರ ಸಂಘ ಸಂಸ್ಥೆಗಳಿಗೆ ಮಾದರಿ ಎಂದು ಹಾರೈಸಿದರು.
70 ಲಕ್ಷ ರೂ. ಧನ ಸಹಾಯ
ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ್ ಪೂಜಾರಿ ಬಲ್ಲಾಳ್‌ಬಾಗ್ ಮಾತನಾಡಿ, ಹಲವು ಕುಟುಂಬಗಳು ಸಹಾಯ ಹಸ್ತ ಕೋರಿ ನಿತ್ಯ ಬರುತ್ತಿದ್ದಾರೆ. ಸಂಘದ ಸದಸ್ಯರು, ದಾನಿಗಳಿಂದ ಸಂಗ್ರಹಿಸಿದ ನಿಧಿಯಿಂದ ಪ್ರತೀ ತಿಂಗಳು ಬಡವರಿಗೆ ನೆರವಾಗುತ್ತಿದ್ದು, ಕಳೆದ ಮೂರು ವರ್ಷಗಳಿಂದ ಸುಮಾರು 70 ಲಕ್ಷ ರೂ. ಮಿಕ್ಕಿ ಧನ ಸಹಾಯ ಮಾಡಲಾಗಿದೆ ಎಂದರು.
ಧನ ಸಹಾಯ ಪಡೆದ ಸದಾಶಿವ ಪೂಜಾರಿ ಅವರು ಬಿರುವೆರ್ ಕುಡ್ಲ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು.ಉದ್ಯಮಿ ರವೀಂದ್ರ ನಿಕ್ಕಮ್, ಉದಯ ಪೂಜಾರಿ ಬಲ್ಲಾಳ್‌ಬಾಗ್, ಪ್ರಮೋದ್ ಬಲ್ಲಾಳ್‌ಬಾಗ್, ಲತೇಶ್ ಬಲ್ಲಾಳ್ ಬಾಗ್, ಮನೀಶ್ ಚಿಲಿಂಬಿ, ಕೀರ್ತನ್ ಯೆಯ್ನಾಡಿ, ವಿನೀತ್ ಜಿ. ಬಂಗೇರ, ಲಿಖಿತ್ ಆರ್. ಕೋಟ್ಯಾನ್, ದೀಕ್ಷಿತ್ ಕೋಟ್ಯಾನ್, ಸೂರಜ್ ಕದ್ರಿ, ಚೇತನ್ ರಾಜ್ ಗೌಡ, ಲೋಕೇಶ್ ಶೆಟ್ಟಿ, ರಘುರಾಂ ಶೆಟ್ಟಿ, ತುಕಾರಾಂ ಶೆಟ್ಟಿ, ಸುಧಾಕರ ಶೆಟ್ಟಿ, ಶೇಷ ಪ್ರಸಾದ್, ನಿತೀಶ್ ಶೆಟ್ಟಿ, ರೋಹಿದಾಸ್, ರೋಶನ್ ಮಿನೇಜಸ್, ಮಹೇಶ್ ಅಮೀನ್, ಸುನೀಲ್ ಶೆಟ್ಟಿ ವೇರ್ ಹೌಸ್, ಉದ್ಯಮಿ ಸದಾನಂದ ಪೂಜಾರಿ, ಮಹೇಶ್ ಶೆಟ್ಟಿ ಚಾರ್ವಾಕ ಮುಂಬಯಿ, ವೆಂಕಟೇಶ್ ಭಂಡಾರಿ ಮುಂಬಯಿ, ರಿನೀತ್ ಅಶೋಕನಗರ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Revenue Officers: ನಿಮಗೆ ಸಲಾಂ ಹೊಡೀಬೇಕಾ?: ತಹಶೀಲ್ದಾರ್‌ಗೆ ಕಂದಾಯ ಸಚಿವ ತರಾಟೆ
Congress Government: ಈ ಸರ್ಕಾರದಲ್ಲಿ ಸಹಿ ಮಾತ್ರವಲ್ಲ, ಕ್ಷಣವೂ ಮಾರಾಟಕ್ಕಿದೆ: ಎಚ್‌ಡಿಕೆ
Cyber Crime : ರೂಪ ಬದಲಾಯಿತು ಗಾಳ ದೊಡ್ಡದಾಯಿತು
ಬಿಜೆಪಿ ಸಭೆಯಲ್ಲಿ ಭಿನ್ನರ ವಿರುದ್ಧ ಕಿಡಿ; ಯತ್ನಾಳ್ ಬಣದ ವಿರುದ್ಧ ಮಾಜಿ ಶಾಸಕರು ಅಸಮಾಧಾನ
Naxal Surrender: ನಕ್ಸಲ್ ಶರಣಾಗತಿ ಪೂರ್ವಯೋಜಿತ ಸ್ಟೇಜ್ ಶೋ ಅಲ್ಲವೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.