ಅಪಾಯದಲ್ಲಿ ಎತ್ತಿನಹಳ್ಳ ಸೇತುವೆ

ಅಲ್ಲಲ್ಲಿ ಬಿರುಕು, ರಂಧ್ರಗಳು; ಮೇಲೆದ್ದ ಕಬ್ಬಿಣ ಸರಳು

Team Udayavani, Oct 31, 2019, 4:30 AM IST

e-27

ಸುಬ್ರಹ್ಮಣ್ಯ: ಇದು ಯಾವುದೋ ಗ್ರಾಮೀಣ ಭಾಗದ ಸೇತುವೆಯಲ್ಲ. ಕರಾವಳಿಯನ್ನು ರಾಜಧಾನಿ ಬೆಂಗಳೂರಿ ನೊಂದಿಗೆ ಜೋಡಿಸುವ ರಾಷ್ಟ್ರೀಯ ಹೆದ್ದಾರಿ 75ರ ಎತ್ತಿನಹಳ್ಳದಲ್ಲಿ 90 ವರ್ಷಗಳ ಹಿಂದೆ ಬ್ರಿಟಿಷರು ನಿರ್ಮಿಸಿರುವಂಥದ್ದು. ಶಿಥಿಲ ಸೇತುವೆಯ ಮೇಲೆ ಅಲ್ಲಲ್ಲಿ ಕಬ್ಬಿಣದ ಸರಳು ಗಳು ಮೇಲೆದ್ದು ಬಂದಿರುವುದಲ್ಲದೆ ಬಿರುಕು ಬಿಟ್ಟಿದ್ದು ಕುಸಿಯುವ ಭೀತಿ ಎದುರಾಗಿದೆ.

ಒಂದು ವೇಳೆ ಇದು ಕುಸಿದಲ್ಲಿ ರಾಜಧಾನಿ ಮತ್ತು ಕರಾವಳಿ ನಡುವೆ ಸಂಪರ್ಕ ಸಾಧಿಸುವ ಪ್ರಮುಖ ಮಾರ್ಗವೊಂದು ಬಂದ್‌ ಆಗಲಿದೆ. ಮಾರನಹಳ್ಳಿ-ಸಕಲೇಶಪುರ ನಡುವಿನ 18 ಕಿ.ಮೀ. ವ್ಯಾಪ್ತಿಯ ರಸ್ತೆ ಸಂಪೂರ್ಣ ಹದ ಗೆಟ್ಟಿದೆ. ನಡುವೆ ಇರುವ ಎತ್ತಿನಹೊಳೆ ಯೋಜನಾ ವ್ಯಾಪ್ತಿಯಲ್ಲಿ ಈ ಸೇತುವೆ ಇದೆ. ಸೇತುವೆ ಸ್ತಂಭಗಳು ದುರ್ಬಲವಾಗಿವೆ. ಸೇತುವೆಯ ಮಧ್ಯದಲ್ಲಿ ಡಾಮರು ಎದ್ದು ಹೋಗಿದೆಯಲ್ಲದೆ ಕಬ್ಬಿಣದ ಸರಳುಗಳು ಮೇಲೆದ್ದು ಬಂದಿವೆ. ಹಾದು ಹೋಗುವ ವಾಹನಗಳ ಚಕ್ರಗಳು ಪಂಕ್ಚರ್‌ ಆಗುತ್ತವೆ. ಅಲ್ಲಲ್ಲಿ ರಂಧ್ರಗಳು ಸೃಷ್ಟಿಯಾಗಿದ್ದು ದಿನೇದಿನೆ ವಿಸ್ತರಿಸುತ್ತಿವೆ. ದೊಡ್ಡ ರಂಧ್ರಗಳ ಮೂಲಕ ತಳಭಾಗ ಕಾಣಿಸುತ್ತಿದೆ. ವಾಹನ ಗಳು ಸಂಚರಿಸುವಾಗ ಸೇತುವೆಗೆ ನಡುಕ ಬರುತ್ತದೆ.

ಹಾಸನದಿಂದ ಸಕಲೇಶಪುರದ ಮಾರನ ಹಳ್ಳಿ ತನಕ ಹೊಸ ಹೆದ್ದಾರಿ ವಿಸ್ತರಣೆ ಆಗಬೇಕಾಗಿದೆ. ಹಾಸನ-ಸಕಲೇಶಪುರ- ಮಾರನ ಹಳ್ಳಿ ನಡುವಣ 55 ಕಿ.ಮೀ. ಹೆದ್ದಾರಿ ಕಾಮಗಾರಿ ಯನ್ನು ಇಸೊಲಕ್ಸ್‌ ಕೊರ್ಸನ್‌ ಕಂಪೆನಿ ವಹಿಸಿಕೊಂಡಿತ್ತು. ಸಕಲೇಶಪುರ ಹಂತದ ಕಾಮಗಾರಿಗೆ ನೀಡಲಾಗಿದ್ದ 574 ಕೋಟಿ ರೂ.ಗುತ್ತಿಗೆಯನ್ನು ರಾ.ಹೆ. ಪ್ರಾಧಿ ಕಾರ ಅನಂತರ 701 ಕೋಟಿ ರೂ.ಗೆ

ಪರಿಷ್ಕರಣೆ ಮಾಡಿತ್ತು. ಗುಂಡ್ಯ – ಬಂಟ್ವಾಳ ಹಂತದ ಕಾಮಗಾರಿಯನ್ನು 870 ಕೋಟಿ ರೂ. ವೆಚ್ಚಕ್ಕೆ ಎಲ್‌ ಆ್ಯಂಡ್‌ ಟಿ ಕಂಪೆನಿಗೆ ವಹಿಸ ಲಾಗಿತ್ತು. 2016ರಲ್ಲಿ ಆರಂಭವಾದ ಕಾಮ ಗಾರಿ 2019 ಮಾರ್ಚ್‌ ಅಂತ್ಯಕ್ಕೆ ಪೂರ್ಣ ಗೊಳ್ಳಬೇಕಿತ್ತು. ಹಣಕಾಸಿನ ಕೊರತೆಯಿಂದ ಅರ್ಧಕ್ಕೆ ನಿಂತಿವೆ.

ಜನಪ್ರತಿನಿಧಿಗಳೇ ಇತ್ತ ಗಮನಿಸಿ
ಕರಾವಳಿಯಿಂದ ರಾಜಧಾನಿಗೆ ಮುಖ್ಯ ಸಂಪರ್ಕ ಕೊಂಡಿ ಶಿರಾಡಿ ಘಾಟಿ ರಸ್ತೆ. ಉದ್ಯೋಗ, ವ್ಯಾಪಾರ ವಹಿವಾಟುಗಳಲ್ಲಿ ಈ ರಸ್ತೆ ಪ್ರಧಾನ ಪಾತ್ರ ವಹಿಸುತ್ತದೆ. ಸೇತುವೆ ಕುಸಿದು ಸಂಚಾರ ಸ್ಥಗಿತಗೊಂಡಲ್ಲಿ ಕರಾ ವಳಿಯ ಆರ್ಥಿಕ, ಸಾಮಾಜಿಕ,ಶೈಕ್ಷಣಿಕ, ವಾಣಿಜ್ಯ ಹೀಗೆ ಎಲ್ಲ ರಂಗಗಳ ಮೇಲೆ ಭಾರೀ ಪರಿಣಾಮ ತಟ್ಟಲಿದೆ. ಹಾಗಾಗುವ ಮೊದಲು ಜನಪ್ರತಿನಿಧಿಗಳು ಇತ್ತ ಗಮನ ಹರಿಸಬೇಕಾಗಿದೆ. ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಇಟೆಲಿ ಪ್ರವಾಸ ದಲ್ಲಿರುವುದಾಗಿ ಆಪ್ತ ಮೂಲಗಳು ತಿಳಿಸಿದ್ದು ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ. ದ.ಕ. ಸಂಸದ ನಳಿನ್‌ ಕೂಡ ಸಂಪರ್ಕಕ್ಕೆ ಲಭ್ಯವಾಗಿಲ್ಲ.

ಪ್ರಧಾನಿ ಗಮನಕ್ಕೆ ತರಲು ಸಿದ್ಧತೆ
ಪ್ರಮುಖ ಹೆದ್ದಾರಿಯ ಅವ್ಯವಸ್ಥೆಯಿಂದ ಬೇಸತ್ತಿ ರುವ ಬೆಂಗಳೂರಿನ ಖಾಸಗಿ ಸಂಸ್ಥೆಯ ಉದ್ಯೋಗಿ ವಿದ್ಯಾ ಆಚಾರ್ಯ ಅವರು ಹೊಂಡಗುಂಡಿಯ ರಸ್ತೆ ಹಾಗೂ ಶಿಥಿಲ ಸೇತುವೆಯ ಛಾಯಾಚಿತ್ರ ತೆಗೆದು ಪ್ರಧಾನಿ ಮೋದಿಯವರಿಗೆ ಕಳುಹಿಸಲು ಸಿದ್ಧತೆ ನಡೆಸುತ್ತಿದ್ದಾರೆ.

ಎತ್ತಿನಹಳ್ಳ ಸೇತುವೆ ಶಿಥಿಲವಾದ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವಿಭಾಗದ ಅಧಿಕಾರಿಗಳ ಗಮನಕ್ಕೆ ತರುವೆ. ತತ್‌ಕ್ಷಣ ಸೇತುವೆ ಪರಿಶೀಲಿಸಿ ವರದಿ ಸಲ್ಲಿಸಲು ಸೂಚಿಸುವೆ.
ಆರ್‌. ಗಿರೀಶ್‌, ಹಾಸನ ಜಿಲ್ಲಾಧಿಕಾರಿ

– ಬಾಲಕೃಷ್ಣ ಭೀಮಗುಳಿ

ಟಾಪ್ ನ್ಯೂಸ್

Parliament: ಸಂಸದರ ತಳ್ಳಾಟ: ಇಂದು ಸಂಸತ್‌ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?

Parliament: ಸಂಸದರ ತಳ್ಳಾಟ: ಇಂದು ಸಂಸತ್‌ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?

Former Supreme Court Judge ವಿ.ಸುಬ್ರಹ್ಮಣಿಯನ್‌ ಎನ್‌ಎಚ್‌ಆರ್‌ಸಿ ಮುಖ್ಯಸ್ಥ

Former Supreme Court Judge ವಿ.ಸುಬ್ರಹ್ಮಣಿಯನ್‌ ಎನ್‌ಎಚ್‌ಆರ್‌ಸಿ ಮುಖ್ಯಸ್ಥ

Shatrughan Sinha ಪುತ್ರಿ ವಿವಾಹ ಬಗ್ಗೆ ವಿಶ್ವಾಸ್‌ ವಿವಾದಾಸ್ಪದ ಹೇಳಿಕೆ

Shatrughan Sinha ಪುತ್ರಿ ವಿವಾಹ ಬಗ್ಗೆ ವಿಶ್ವಾಸ್‌ ವಿವಾದಾಸ್ಪದ ಹೇಳಿಕೆ

Maharashtra: ನಿಗದಿತ ಮಾರ್ಗ ಬಿಟ್ಟು ಬೇರೆಡೆ ಸಾಗಿದ ವಂದೇ ಭಾರತ್‌ ರೈಲು!

Maharashtra: ನಿಗದಿತ ಮಾರ್ಗ ಬಿಟ್ಟು ಬೇರೆಡೆ ಸಾಗಿದ ವಂದೇ ಭಾರತ್‌ ರೈಲು!

ಸಿರಿಯಾ ಮಾಜಿ ಅಧ್ಯಕ್ಷ ಅಸಾದ್‌ಗೆ ವಿಚ್ಛೇದನ ಕೊಡಲು ಪತ್ನಿ ಚಿಂತನೆ?

Syria ಮಾಜಿ ಅಧ್ಯಕ್ಷ ಅಸಾದ್‌ಗೆ ವಿಚ್ಛೇದನ ಕೊಡಲು ಪತ್ನಿ ಚಿಂತನೆ?

PM Modi: ಒಂದೂವರೆ ವರ್ಷದಲ್ಲಿ 10 ಲಕ್ಷ ಸರಕಾರಿ ಉದ್ಯೋಗ

PM Modi: ಒಂದೂವರೆ ವರ್ಷದಲ್ಲಿ 10 ಲಕ್ಷ ಸರಕಾರಿ ಉದ್ಯೋಗ

Allu Arjun ಮನೆಗೆ ದಾಳಿ: ಕಾಂಗ್ರೆಸ್‌ ಕೈವಾಡ?

Allu Arjun ಮನೆಗೆ ದಾಳಿ: ಕಾಂಗ್ರೆಸ್‌ ಕೈವಾಡ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-traa

Udupi- Mangaluru; ವರ್ಷಾಂತ್ಯಕ್ಕೆ ಹೆಚ್ಚಿದ ಪ್ರವಾಸಿಗರು: ಟ್ರಾಫಿಕ್‌ ಜಾಮ್‌

1-subb

Eshwara Khandre; ಕುಕ್ಕೆ, ಧರ್ಮಸ್ಥಳದಲ್ಲಿ: ಕಸ್ತೂರಿ ರಂಗನ್‌ ವರದಿ ಸಂಪೂರ್ಣ ತಿರಸ್ಕಾರ

1-KDP

Dakshina Kannada; ಜಿಲ್ಲಾ ಕೆಡಿಪಿ ಸಭೆ: ಕರಾವಳಿ ನಿರ್ಲಕ್ಷ್ಯ ಆರೋಪಿಸಿ ಬಿಜೆಪಿ ಸಭಾತ್ಯಾಗ

1-dhanjay

Ullal; ಲೋಕಾಯುಕ್ತ ಅಧಿಕಾರಿ ಹೆಸರಲ್ಲಿ ವಂಚನೆ ಯತ್ನ: ಬಂಧನ

police

Bajpe; ದನಗಳನ್ನು ಕಳವು ಮಾಡಿ ವ*ಧೆ: ಇಬ್ಬರ ಬಂಧನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Parliament: ಸಂಸದರ ತಳ್ಳಾಟ: ಇಂದು ಸಂಸತ್‌ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?

Parliament: ಸಂಸದರ ತಳ್ಳಾಟ: ಇಂದು ಸಂಸತ್‌ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?

Former Supreme Court Judge ವಿ.ಸುಬ್ರಹ್ಮಣಿಯನ್‌ ಎನ್‌ಎಚ್‌ಆರ್‌ಸಿ ಮುಖ್ಯಸ್ಥ

Former Supreme Court Judge ವಿ.ಸುಬ್ರಹ್ಮಣಿಯನ್‌ ಎನ್‌ಎಚ್‌ಆರ್‌ಸಿ ಮುಖ್ಯಸ್ಥ

Shatrughan Sinha ಪುತ್ರಿ ವಿವಾಹ ಬಗ್ಗೆ ವಿಶ್ವಾಸ್‌ ವಿವಾದಾಸ್ಪದ ಹೇಳಿಕೆ

Shatrughan Sinha ಪುತ್ರಿ ವಿವಾಹ ಬಗ್ಗೆ ವಿಶ್ವಾಸ್‌ ವಿವಾದಾಸ್ಪದ ಹೇಳಿಕೆ

Maharashtra: ನಿಗದಿತ ಮಾರ್ಗ ಬಿಟ್ಟು ಬೇರೆಡೆ ಸಾಗಿದ ವಂದೇ ಭಾರತ್‌ ರೈಲು!

Maharashtra: ನಿಗದಿತ ಮಾರ್ಗ ಬಿಟ್ಟು ಬೇರೆಡೆ ಸಾಗಿದ ವಂದೇ ಭಾರತ್‌ ರೈಲು!

ಸಿರಿಯಾ ಮಾಜಿ ಅಧ್ಯಕ್ಷ ಅಸಾದ್‌ಗೆ ವಿಚ್ಛೇದನ ಕೊಡಲು ಪತ್ನಿ ಚಿಂತನೆ?

Syria ಮಾಜಿ ಅಧ್ಯಕ್ಷ ಅಸಾದ್‌ಗೆ ವಿಚ್ಛೇದನ ಕೊಡಲು ಪತ್ನಿ ಚಿಂತನೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.